ಬ್ರೇಕಿಂಗ್ ನ್ಯೂಸ್
13-09-23 07:28 pm Mangalore Correspondent ಕರಾವಳಿ
ಮಂಗಳೂರು, ಸೆ.13: ಕೇರಳದಲ್ಲಿ ನಿಫಾ ವೈರಸ್ ಸೋಂಕಿಗೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರಿಂದ ರಾಜ್ಯದ ಗಡಿಜಿಲ್ಲೆಗಳಲ್ಲಿ ಅಲರ್ಟ್ ಇರಲು ರಾಜ್ಯ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಇದರಂತೆ, ಕೇರಳಕ್ಕೆ ಹೊಂದಿಕೊಂಡ ದಕ್ಷಿಣ ಕನ್ನಡ, ಕೊಡಗು, ಮೈಸೂರು ಜಿಲ್ಲೆಗಳ ಗಡಿಭಾಗದಲ್ಲಿ ಹೈಎಲರ್ಟ್ ಇರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕೇರಳದ ಕೋಜಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ಜ್ವರಕ್ಕೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವುದರಿಂದ ಕರ್ನಾಟಕದಲ್ಲಿ ಸೋಂಕು ಹರಡದಂತೆ ಗಡಿಜಿಲ್ಲೆಗಳಲ್ಲಿ ಹೈಅಲರ್ಟ್ ಇರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳಕ್ಕೆ ಹೊಂದಿಕೊಂಡ ತಾಲೂಕಿನ ಸಮುದಾಯ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಇತರ ಸಿಬಂದಿಯನ್ನು ಅಲರ್ಟ್ ಮಾಡಲಾಗಿದೆ. ಅಲ್ಲದೆ, ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಫಾ ವೈರಸ್ ಸೋಂಕು ಪತ್ತೆಯಾದರೆ ಮುಂಜಾಗ್ರತೆ ಕ್ರಮಕ್ಕಾಗಿ ವಿಶೇಷ ವಾರ್ಡ್ ತೆರೆಯಲಾಗಿದೆ.
ಈವರೆಗೆ ದಕ್ಷಿಣ ಕನ್ನಡ ಜಿಲ್ಲೆ ಅಥವಾ ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ನಿಫಾ ವೈರಸ್ ಸೋಂಕು ಪತ್ತೆಯಾಗಿಲ್ಲ. ಆದರೆ ಬಾವಲಿ ಇನ್ನಿತರ ಹಕ್ಕಿ, ಪ್ರಾಣಿಗಳ ಮೂಲಕ ಈ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ. ಜನಸಾಮಾನ್ಯರು ಬಾವಲಿ ಅಥವಾ ಇನ್ನಾವುದೇ ಪ್ರಾಣಿಗಳು ತಿಂದು ಬಿಟ್ಟ ಆಹಾರ ವಸ್ತುಗಳನ್ನು, ಹಣ್ಣುಗಳನ್ನು ತಿನ್ನಬಾರದು. ಬಾವಲಿ, ಬೆಕ್ಕು, ಹಂದಿಗಳ ಮೂಲಕ ಈ ರೋಗ ಹರಡುವುದರಿಂದ ಜನರು ಮುನ್ನೆಚ್ಚರಿಕೆ ವಹಿಸಬೇಕು. ಸೋಂಕಿತ ವ್ಯಕ್ತಿ ಅಥವಾ ಪ್ರಾಣಿಯಿಂದ ಮಲ, ಮೂತ್ರ, ಎಂಜಲಿನಿಂದ ರೋಗ ಹರಡುವ ಸಾಧ್ಯತೆ ಇರುವುದರಿಂದ ಜಾಗ್ರತೆ ಇರಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುದರ್ಶನ್ ತಿಳಿಸಿದ್ದಾರೆ.
ಈ ಹಿಂದೆ 2019-20ರಲ್ಲಿ ಕೇರಳದಲ್ಲಿ ನಿಫಾ ವೈರಸ್ ಜ್ವರ ಪತ್ತೆಯಾಗಿತ್ತು. ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿದಲ್ಲಿ ಅದು ನಿವಾರಣೆಯಾಗುತ್ತದೆ. ಈ ವೈರಸ್ ಹೆಚ್ಚು ಸಮಯ ವಾತಾವರಣದಲ್ಲಿ ಉಳಿಯುವುದಿಲ್ಲ. ದೇಹದ ಒಳಹೊಕ್ಕರೆ ಮಾತ್ರ ಜ್ವರ, ತಲೆನೋವು, ಪ್ರಜ್ಞೆ ತಪ್ಪುವುದು, ಮಾನಸಿಕ ಗೊಂದಲ ರೀತಿಯ ಲಕ್ಷಣ ಕಂಡುಬರುತ್ತದೆ. ಆರಂಭದಲ್ಲಿ ಪತ್ತೆಹಚ್ಚಲು ಸಾಧ್ಯವಾಗದೇ ಇದ್ದರೆ ಮಾರಣಾಂತಿಕ ಆಗಿರುತ್ತದೆ. ಹಾಗಾಗಿ ಜನರು ಜ್ವರ ಇನ್ನಿತರ ರೋಗ ಲಕ್ಷಣ ಇದ್ದಲ್ಲಿ ನೇರವಾಗಿ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ವಹಿಸುವುದು, ಸ್ವಯಂ ವೈದ್ಯರಾಗುವುದರಿಂದ ಅಪಾಯಕ್ಕೆ ದಾರಿಯಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ನವೀನ್ ಕುಮಾರ್ ತಿಳಿಸಿದ್ದಾರೆ.
ಶೇಂದಿಯಲ್ಲೂ ನಿಫಾ ವೈರಸ್ ಸಾಧ್ಯತೆ
ಜ್ವರದ ಲಕ್ಷಣ ಐದು ದಿವಸದ ನಂತರವೂ ಕಡಿಮೆಯಾಗದಿದ್ದಲ್ಲಿ ಮತ್ತು ಲಕ್ಷಣಗಳನ್ನು ಆಧರಿಸಿ ಪುಣೆಯ ವೈರಾಲಜಿ ಕೇಂದ್ರದಲ್ಲಿ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಪ್ರಾಣಿಗಳ ಬಗ್ಗೆ ಜಾಗ್ರತೆ ಇರಬೇಕು, ಅದು ಬಿಟ್ಟರೆ ಜನರು ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಂಕು ಪತ್ತೆಯಾಗಿರುವ ಪ್ರದೇಶದಲ್ಲಿ ಶೇಂದಿಯಿಂದಲೂ ರೋಗ ಹರಡುವ ಸಾಧ್ಯತೆ ಇರುತ್ತದೆ. ಬಾವಲಿಗಳು ಶೇಂದಿ ಬಳಿ ಹೋಗುವುದರಿಂದ ವೈರಸ್ ರವಾನೆಯಾಗುತ್ತದೆ. ಹಾಗಾಗಿ ಶೇಂದಿಯನ್ನು ಕುದಿಸಿ ಕುಡಿಯುವುದು ಒಳ್ಳೆಯದು ಎಂದು ನವೀನ್ ಕುಮಾರ್ ತಿಳಿಸಿದ್ದಾರೆ.
ಬಿಟ್ಟು ಬಿಟ್ಟು ಮಳೆಯಿಂದಾಗಿ ಡೆಂಗ್ಯು
ಸೆಪ್ಟಂಬರ್ ತಿಂಗಳಲ್ಲಿ ಬಿಟ್ಟು ಬಿಟ್ಟು ಮಳೆ ಬರುತ್ತಿರುವುದರಿಂದ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತದೆ. ಈಡಿಸ್ ಸೊಳ್ಳೆಯಿಂದ ಡೆಂಗ್ಯು ರೋಗ ಹರಡುವುದರಿಂದ ಜನರು ನೀರು ಕಟ್ಟಿ ನಿಲ್ಲದಂತೆ ನೋಡಿಕೊಳ್ಳಬೇಕು. ಈ ಬಾರಿ ಜನವರಿಯಿಂದ ಸೆ.13ರ ವರೆಗೆ 198 ಡೆಂಗ್ಯು ಪ್ರಕರಣ ಜಿಲ್ಲೆಯಲ್ಲಿ ವರದಿಯಾಗಿದೆ. ಕಳೆದ ವರ್ಷ ಒಟ್ಟು 388 ಡೆಂಗ್ಯು ಪ್ರಕರಣ ಆಗಿತ್ತು. ಮಾನವ ಕೃತ ಅಪರಾಧಗಳಿಂದಲೇ ಈಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತದೆ. ಅದನ್ನು ನಿಯಂತ್ರಣ ಮಾಡಿದಲ್ಲಿ ತೊಂದರೆ ಎದುರಾಗುವುದಿಲ್ಲ ಎಂದು ನವೀನ್ ಕುಮಾರ್ ತಿಳಿಸಿದ್ದಾರೆ.
Nipah virus effect, high alert in Mangalore, isolation ward at Wenlock hospital prepared says DHO Sudarshan. Two people were killed due to the Nipah virus infection and two others were infected with the virus in Kerala's Kozhikode district, the state government confirmed on Tuesday.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm