ಬ್ರೇಕಿಂಗ್ ನ್ಯೂಸ್
05-10-23 10:25 pm Mangaluru Correspondent ಕರಾವಳಿ
ಮಂಗಳೂರು, ಅ.5: ಮಂಗಳೂರು ನಗರದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಬೆನ್ನು ಬೆನ್ನಿಗೆ ಮೂವರು ಸಿರಿವಂತ ಕೋಟ್ಯಾಧೀಶರು ಆತ್ಮಹತ್ಯೆಗೆ ಶರಣಾಗಿರುವುದು ಭಾರೀ ಶಂಕೆ ಮತ್ತು ಜನರ ಮಧ್ಯೆ ಚರ್ಚೆಗೆ ಕಾರಣವಾಗಿದೆ. ಆ ಮೂವರಿಗೂ ವ್ಯವಹಾರದಲ್ಲಿ ಯಾವುದೇ ನಷ್ಟ ಇರಲಿಲ್ಲ. ಆಗರ್ಭ ಶ್ರೀಮಂತರಾಗಿದ್ದರು. ಸಾಕಷ್ಟು ಆಸ್ತಿ, ಮೂಟೆ ಕಟ್ಟುವಷ್ಟು ಕೋಟಿಗಟ್ಟಲೆ ಹಣವೂ ಇತ್ತು. ಆದರೆ ಆ ಮೂವರೂ ನಿಗೂಢ ರೀತಿಯಲ್ಲಿ ಸಾವಿಗೆ ಶರಣಾಗಿದ್ದು ಇದರ ಹಿಂದೆ ಬೇರೇನೋ ಕತೆ ಇದೆ ಎನ್ನುವ ಮಾತು ಜನರ ಬಾಯಲ್ಲಿ ಕೇಳಿಬರುತ್ತಿದೆ.
ಕಳೆದ ಆಗಸ್ಟ್ 6ರಂದು ಮಂಗಳೂರಿನಲ್ಲಿ ಬಿಲ್ಡರ್ ಆಗಿ ಹೆಸರು ಮಾಡಿದ್ದ ಮೋಹನ್ ಅಮೀನ್ ಎಂಬವರು ದಿಢೀರ್ ಆಗಿ ಕಂಕನಾಡಿಯಲ್ಲಿ ತನ್ನ ಮನೆ ಇದ್ದ ಅಪಾರ್ಟ್ಮೆಂಟ್ ಕಟ್ಟಡದ 17ನೇ ಮಹಡಿಯಿಂದ ಹಾರಿ ಸಾವಿಗೀಡಾಗಿದ್ದರು. ಮಂಗಳೂರಿನಲ್ಲಿ ಕ್ವಾರಿ ಬಿಸಿನೆಸ್ ಜೊತೆಗೆ ಇತ್ತೀಚಿನ ಕೆಲವು ವರ್ಷಗಳಲ್ಲಿ ವ್ಯವಹಾರ ಪಾಲುದಾರಿಕೆಯಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದರು. ಮಂಗಳೂರಿನ ಖ್ಯಾತ ಬಿಲ್ಡರ್ ಗಳ ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿ ಇವರ ಹೂಡಿಕೆಯಿತ್ತು. ಇವರಿಗೆ ಕೋಟ್ಯಂತರ ರೂಪಾಯಿ ಆಗಬೇಕಿದ್ದವರು ಮಂಗಳೂರಿನಲ್ಲಿದ್ದಾರೆ, ಅದರ ಬಗ್ಗೆ ಮೋಹನ್ ಅಮೀನ್ ಅವರ ಕುಟುಂಬಕ್ಕೂ ತಿಳಿದಿರಲಿಕ್ಕಿಲ್ಲ ಎನ್ನುತ್ತಾರೆ, ಆಪ್ತರು.
ಜಿಎಸ್ ಬಿ ಸಿರಿವಂತ ಸಾವಿಗೆ ಶರಣಾಗಿದ್ದೇಕೆ ?
ಸೆ.17ರಂದು ಗೌಡ ಸಾರಸ್ವತ ಸಮುದಾಯದ ಪ್ರಭಾವಿ ಉದ್ಯಮಿಯಾಗಿದ್ದ ಮುಂಡ್ಕೂರು ರಾಮದಾಸ ಕಾಮತ್ ಎಂಬ 75 ವರ್ಷದ ವ್ಯಕ್ತಿ ಮಂಗಳೂರಿನ ರಥಬೀದಿಯ ಅಪಾರ್ಟ್ಮೆಂಟ್ ಒಂದರಲ್ಲಿ ಸಾವಿಗೆ ಶರಣಾಗಿದ್ದಾರೆ. ರಾಮದಾಸ ಕಾಮತ್ ಎಷ್ಟು ಸಿರಿವಂತರಂದ್ರೆ, ಸ್ವತಃ ಅವರೇ ಯಾರಿಗೆಲ್ಲ ಸಾಲ ಕೊಟ್ಟಿದ್ದೇನೆ ಎನ್ನೋ ಲೆಕ್ಕವನ್ನೂ ಇಟ್ಟಿರಲಿಕ್ಕಿಲ್ಲ. ದುಬೈನಲ್ಲಿ ಬಿಸಿನೆಸ್ ಹೊಂದಿದ್ದ ಕಾಮತರು ಬಳಿಕ ಮಂಗಳೂರಿನಲ್ಲಿ ಹಲವು ಕಡೆ ಹೂಡಿಕೆ ಮಾಡಿದ್ದಾರೆ. ಬೋಳಾರದಲ್ಲಿ ಸಿಟಿ ಬೀಚ್, ಬಲ್ಮಠದಲ್ಲಿ ಮಾಯಾ ಇಂಟರ್ನ್ಯಾಶನಲ್ ಹೊಟೇಲ್ ಇರುವ ಕಟ್ಟಡ ಅವರ ಹೆಸರಲ್ಲಿದೆ. ಅವೆರಡನ್ನೂ ಬೇರೆಯವರಿಗೆ ನಡೆಸಲು ಕೊಟ್ಟಿದ್ದಾರೆ. ಇದಲ್ಲದೆ, ಇವರ ಒಬ್ಬ ಪುತ್ರ ದುಬೈನಲ್ಲಿ ಬಿಸಿನೆಸ್ ಹೊಂದಿದ್ದರೆ, ಮತ್ತೊಬ್ಬ ಪುತ್ರ ಅಮೆರಿಕದಲ್ಲಿದ್ದಾರೆ.
ರಥಬೀದಿಯ ವೆಂಕಟರಮಣ ದೇವರಿಗೆ ಇತ್ತೀಚೆಗೆ ಒಂದು ಕೋಟಿ ರೂಪಾಯಿ ಮೌಲ್ಯದ ಬಂಗಾರವನ್ನೂ ಹೊದೆಸಿದ್ದರು. ಇದಲ್ಲದೆ, ದಾನ ಧರ್ಮದಲ್ಲಿ ಎತ್ತಿದ ಕೈ ಎನ್ನುವಂತಿದ್ದರು. ಜಿಎಸ್ ಬಿ ಸಮುದಾಯದಲ್ಲೇ ಹಲವಾರು ಮಂದಿಗೆ ಹಣ ಕೊಟ್ಟಿದ್ದಾರೆ. ಪತ್ನಿಯ ಜೊತೆಗೆ ಅಪಾರ್ಟ್ಮೆಂಟಿನಲ್ಲಿದ್ದ ರಾಮದಾಸ ಕಾಮತ್, ಸೆ.19ರಂದು ಮಟ ಮಟ ಮಧ್ಯಾಹ್ನವೇ ಸಾವಿಗೆ ಶರಣಾಗಿದ್ದಾರೆ. 70 ವರ್ಷ ಮೀರಿದವರು ಯಾವತ್ತೂ ಸಾವಿಗೆ ಶರಣಾಗಲ್ಲ. ಅಂಥ ಸ್ಥಿತಿ ಬರಬೇಕಿದ್ದರೆ, ಯಾರಾದ್ರೂ ಬ್ಲಾಕ್ಮೇಲ್ ಮಾಡಬೇಕಷ್ಟೇ. ಇಲ್ಲಾಂದ್ರೆ ಸಾಯುವ ಸ್ಥಿತಿ ಬರೋದಿಲ್ಲ ಅಂತಾರೆ, ವೈದ್ಯರು. ಬ್ಯಾಂಕ್ ಬ್ಯಾಲೆನ್ಸ್ ನೋಡಿದರೆ, ಅವರ ಖಾತೆಯಲ್ಲಿ 20 ಕೋಟಿಯಷ್ಟು ಮೊತ್ತ ನೆಟ್ ಕ್ಯಾಶ್ ಇದೆಯಂತೆ. ಹಾಗಾದ್ರೆ ರಾಮದಾಸ್ ಕಾಮತ್ ಸಾವಿಗೆ ಶರಣಾಗಿದ್ದು ಯಾಕೆ, ಸಾವಿಗೆ ಶರಣಾಗಲು ಕಾರಣವಾಗಿದ್ದು ಅಂಥ ಒತ್ತಡ ಏನಿತ್ತು ಅನ್ನುವ ಬಗ್ಗೆ ಜಿಎಸ್ ಬಿ ಸಮುದಾಯದಲ್ಲೇ ಅಂತೆ ಕಂತೆಗಳ ಚರ್ಚೆಗಳಿವೆ.
ಮನಸ್ಸು ಕಲಕಿದ ಬಸ್ ಮಾಲಕನ ಅಗಲಿಕೆ
ಮೊನ್ನೆ ಅಕ್ಟೋಬರ್ 1ರಂದು ಯಾರೂ ಊಹಿಸದ ರೀತಿ ಮಹೇಶ್ ಬಸ್ಸಿನ ಧಣಿ ಪ್ರಕಾಶ್ ಶೇಖ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೂ ವ್ಯವಹಾರದಲ್ಲಿ ನಷ್ಟ ಇರಲಿಲ್ಲ. 75ಕ್ಕೂ ಹೆಚ್ಚು ಬಸ್ಸುಗಳನ್ನು ಒಬ್ಬಂಟಿಯಾಗಿಯೇ ನಿರ್ವಹಿಸುತ್ತಿದ್ದ ಪ್ರಕಾಶ್ ವ್ಯವಹಾರದಲ್ಲಿ ಪಕ್ಕಾ ಇದ್ದ ವ್ಯಕ್ತಿ. ಅದೇ ಕಾರಣಕ್ಕೆ ಕಳೆದ 15 ವರ್ಷಗಳಲ್ಲಿ ಮಹೇಶ್ ಬಸ್ಸಿನ ಉದ್ಯಮ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಇತರೇ ಬಸ್ ಮಾಲಕರ ಕಣ್ಣು ಕುಕ್ಕುವಷ್ಟು ಬೆಳೆದಿತ್ತು. ಇತ್ತೀಚೆಗೆ ಎರಡು ವಾರಗಳ ಹಿಂದೆ ಮತ್ತೆ ನಾಲ್ಕು ಹೈಫೈ ಬಸ್ಸುಗಳನ್ನು ಖರೀದಿಸಿ, ಅದನ್ನು ಟೂರಿಸ್ಟ್ ಗೆ ಇಳಿಸಲು ಮುಂದಾಗಿದ್ದರು. ಬಸ್ಸಿನ ಬಗ್ಗೆ ತುಂಬ ಕ್ರೇಜ್ ಇಟ್ಕೊಂಡಿದ್ದ ಪ್ರಕಾಶ್ ದಿಢೀರ್ ಆಗಿ ಸಾವಿನ ದಾರಿ ಹಿಡಿದಿದ್ದಾರೆ. ಹಠಾತ್ ಇಂಥ ನಿರ್ಧಾರಕ್ಕೆ ಬರಬೇಕಿದ್ದರೆ, ಇದರ ಹಿಂದೆ ಬಲವಾದ ಕಾರಣ ಇದ್ದಿರಲೇಬೇಕು. ಹಾಗಾದ್ರೆ ಆ ಕಾರಣ ಯಾವುದು ಅನ್ನೋದ್ರ ಬಗ್ಗೆ ಸಾರ್ವಜನಿಕರು ಚರ್ಚಿಸುತ್ತಿದ್ದಾರೆ.
ಬಿಸಿನೆಸ್ ಹೊಂದಿರುವ ಯಾವುದೇ ವ್ಯಕ್ತಿ ಒಂದೋ ವ್ಯವಹಾರ ನಷ್ಟ, ಸಾಲ, ಅದರಿಂದಾಗುವ ಒತ್ತಡ ತಾಳಿಕೊಳ್ಳಲಾರದೆ ಇನ್ನು ಸಾವೇ ಗತಿಯೆಂದು ದುಡುಕಿನ ನಿರ್ಧಾರಕ್ಕೆ ಬರುತ್ತಾನೆ. ಅದಿಲ್ಲದೇ ಹೋದರೆ, ಆತನಿಗೆ ಬೇರಿನ್ನೇನೋ ಖಾಸಗಿಯಾಗಿ ಹೇಳಿಕೊಳ್ಳಲಾಗದ, ಒತ್ತಡಕ್ಕೆ ಸಿಲುಕಿ ಒದ್ದಾಡುವ ಸ್ಥಿತಿ ಬಂದಿರಬೇಕಷ್ಟೇ. ಮೇಲೆ ತಿಳಿಸಿದ ಈ ಮೂವರೂ ಮಂಗಳೂರಿನಲ್ಲಿ ಪ್ರಭಾವಿಗಳಾಗಿದ್ದವರು, ಬಯಸಿದರೆ ಪೊಲೀಸರನ್ನು ತಮ್ಮ ಮನೆಗೇ ಕರೆಸಿಕೊಂಡು ಸಮಸ್ಯೆ ಹೇಳಿಕೊಳ್ಳುವಷ್ಟು, ತಮಗಾಗದವರನ್ನು ಸೆರೆಮನೆಗೆ ತಳ್ಳುವಷ್ಟು ತಾಕತ್ತು ಹೊಂದಿದ್ದವರು. ಆದರೆ, ಅದ್ಯಾವುದನ್ನೂ ಮಾಡದೇ ನೇರವಾಗಿ ಸಾವಿನ ದಾರಿ ಹಿಡಿದಿದ್ದರ ಹಿಂದೆ ಅದ್ಯಾವ ಒತ್ತಡ ಕೆಲಸ ಮಾಡಿತ್ತು ಅನ್ನುವುದು ತಿಳಿಯಲೇಬೇಕಲ್ಲ.
Three rich personalities from Mangalore commit suicide in a gap of one month, Mundkur Ramdas Kamath, Mahesh Bus owner Prakash and Builder K Mohan Amin. What's the reason for their death even after they had crores of wealth and assets. A detailed report by Headline Karnataka News Portal.
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 11:14 pm
Mangalore Correspondent
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm