ಬ್ರೇಕಿಂಗ್ ನ್ಯೂಸ್
23-10-23 05:38 pm Mangalore Correspondent ಕರಾವಳಿ
ಮಂಗಳೂರು, ಅ.23: ಏಡಿ ಯಾರಿಗೆ ಗೊತ್ತಿಲ್ಲ ಹೇಳಿ. ಹಳ್ಳಿಗಳಲ್ಲಿ ತೋಡಿನಲ್ಲಿ ಸಿಗುವ ಏಡಿ ಬೇರೆ, ಕಡಲಿನಲ್ಲಿ ಸಿಗುವ ಏಡಿಯೇ ಬೇರೆ. ಇವೆರಡೂ ಅಲ್ಲದ ಇನ್ನೊಂದು ಏಡಿ ಇದೆ. ನದಿ ಕಡಲು ಸೇರುವಲ್ಲಿ ಕಲ್ಲು ಬಂಡೆಗಳ ಎಡೆಯಲ್ಲಿ ಬೆಳೆಯುವ ಏಡಿಗಳು ಗಾತ್ರದಲ್ಲೂ ದೊಡ್ಡದು. ರುಚಿಯಲ್ಲೂ ವಿಭಿನ್ನವಾದದ್ದು. ಇಂಥ ಏಡಿಗಳು ಮಂಗಳೂರಿನಿಂದ ಹಿಡಿದು ಕಾರವಾರದ ವರೆಗೂ ಎಲ್ಲ ಕಡೆಯೂ ಕರಾವಳಿಯಲ್ಲಿ ಕಾಣಸಿಗುತ್ತದೆ. ಅವುಗಳನ್ನು ಜತನವಾಗಿ ಹಿಡಿದು ಮಾರುವ ವರ್ಗವೇ ಇದೆ. ಇಂಥ ಏಡಿಗಳೀಗ ವಿಮಾನ ಹತ್ತಿ ಚೀನಾಕ್ಕೂ ತಲುಪಿದೆ ಅನ್ನೋದು ಹೊಸ ಸುದ್ದಿ.
ಸಾಮಾನ್ಯವಾಗಿ ಮಂಗಳೂರಿನ ಮೀನುಗಳಿಗೆ ಗಲ್ಫ್ ರಾಷ್ಟ್ರಗಳಲ್ಲಿ ವಿಶೇಷ ಬೇಡಿಕೆ ಇದೆ. ಆದರೆ ಇಲಿ, ಹಾವುಗಳನ್ನು ತಿನ್ನುವ ಚೀನಾ, ಸಿಂಗಾಪುರ, ಮಲೇಶ್ಯಾದವರಿಗೆ ಮಂಗಳೂರಿನ ಏಡಿಗಳಂದ್ರೆ ವಿಶೇಷ ಪ್ರೀತಿಯಂತೆ. ಹಾಗಾಗಿ, ಒಂದು ಏಡಿಗೆ ಎಷ್ಟು ಹಣ ಬೇಕಾದ್ರೂ ಕೊಟ್ಟು ಖರೀದಿಸುತ್ತಾರಂತೆ. ಚೀನಾ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಇರುವುದನ್ನು ಮನಗಂಡ ಮಂಗಳೂರಿನ ಬಂದರಿನ ಸೋದರರು ಈಗ ಏಡಿಗಳನ್ನು ರಫ್ತು ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.
ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಎಸ್.ಎಂ. ಫಿಶರೀಸ್ ಎನ್ನುವ ಹೆಸರಿನ ಸಂಸ್ಥೆ ಆರಂಭಿಸಿದ ಅಬ್ದುಲ್ ಸಮಾದ್, ಮಹಮ್ಮದ್ ಆಸೀಫ್, ಫಯಾಜ್ ಅಹ್ಮದ್ ಎಂಬ ಸೋದರರು ಈಗ ಜೀವಂತ ಏಡಿಗಳನ್ನು ವಿಮಾನ ಹತ್ತಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನದಿ ಕಡಲು ಸೇರುವಲ್ಲಿ ಸಿಗುವ ದೊಡ್ಡ ಜಾತಿಯ ಏಡಿಗಳನ್ನು ಮಡ್ ಕ್ರಾಬ್ ಎನ್ನುತ್ತಾರೆ. ನಸು ಕೆಂಪು ಇರುವ ರೆಡ್ ಕ್ರಾಬ್ ಅನ್ನುವ ಮತ್ತೊಂದು ಜಾತಿಯ ಏಡಿಗೂ ವಿಶೇಷ ಬೇಡಿಕೆಯಿದೆ. ನಾಡದೋಣಿ ಬಳಸಿ ಈ ಏಡಿಗಳನ್ನು ಹಿಡಿಯುವ ಮೀನುಗಾರರಿಂದ ನೇರವಾಗಿ ಖರೀದಿಸುವ ಈ ಸೋದರರು ಅವುಗಳನ್ನು ಜೋಪಾನವಾಗಿ ಪ್ಯಾಕ್ ಮಾಡಿ, ವಿಮಾನದಲ್ಲಿ ವಿದೇಶಕ್ಕೆ ರವಾನಿಸುತ್ತಾರೆ. ಇಂಥ ಒಂದು ಏಡಿಗೆ ಚೀನಾದಲ್ಲಿ ಒಂದರಿಂದ ಒಂದೂವರೆ ಸಾವಿರ, ಎರಡು ಸಾವಿರ ರೂ. ರೇಟ್ ಇದೆಯಂತೆ.
ಸಾಮಾನ್ಯವಾಗಿ ಏಡಿಗಳನ್ನು ಯಾವುದೇ ಗಾಯ ಮಾಡದೇ ಹಿಡಿದು ಬಿಟ್ಟರೆ, ನೀರಿನಿಂದ ಮೇಲೆ ತೆಗೆದರೂ ಮೂರ್ನಾಲ್ಕು ದಿನ ಯಾವುದೇ ಆಹಾರ, ನೀರು ಇಲ್ಲದೆ ಬದುಕುತ್ತವೆ. ನೀರು ಹಾಕಿಟ್ಟರೆ, ಮತ್ತಷ್ಟು ದಿನ ಬದುಕುಳಿಯುತ್ತವಂತೆ. ಇದೇ ಕಾರಣದಿಂದ ವಿಶೇಷ ರೀತಿಯ ಬಲೆಗಳಿಂದ ಏಡಿಗಳನ್ನು ಹಿಡಿದು ಅವುಗಳ ದವಡೆ ರೀತಿಯ ಕೈಗಳನ್ನು ಕಟ್ಟಿ ಜೋಪಾನವಾಗಿ ಪ್ಯಾಕ್ ಮಾಡುತ್ತಾರೆ.
ಹಿಂದೆಲ್ಲ ಚೆನ್ನೈನ ವ್ಯಕ್ತಿಯೊಬ್ಬರು ಮಂಗಳೂರು, ಕಾರವಾರದಿಂದ ಇಂಥ ಏಡಿಗಳನ್ನು ಕಡಿಮೆ ದರಕ್ಕೆ ಪಡೆದು ಅವನ್ನು ಚೀನಾ, ಸಿಂಗಾಪುರಕ್ಕೆ ಕಳಿಸಿಕೊಡುತ್ತಿದ್ದರು. ಇದರ ಬಗ್ಗೆ ತಿಳಿದ ಫಯಾಜ್ ಸೋದರರು 2008ರಲ್ಲಿ ಸಣ್ಣ ಮಟ್ಟದಲ್ಲಿ ರಫ್ತು ಉದ್ಯಮ ಆರಂಭಿಸಿದ್ದರು. ಈಗ ಎರಡು ದಿನಕ್ಕೊಮ್ಮೆ 300 ಕೇಜಿಯಷ್ಟು ಏಡಿಗಳನ್ನು ವಿದೇಶಕ್ಕೆ ಕಳಿಸಿಕೊಡುತ್ತಿದ್ದಾರೆ. ಕರಾವಳಿ ಉದ್ದಕ್ಕೂ ಮಡ್ ಕ್ರಾಬ್ ಹಿಡಿಯುವ ಮೀನುಗಾರರನ್ನು ತಮ್ಮ ಜೊತೆಗಿರಿಸಿ ಮೀನುಗಳನ್ನು ಉತ್ತಮ ದರಕ್ಕೆ ಖರೀದಿಸಿ ವಿದೇಶಕ್ಕೆ ಸಾಗಿಸುತ್ತಿದ್ದಾರೆ. ಜೀವಂತ ಹಿಡಿದು ಸಾಗಿಸುತ್ತಿರುವುದರಿಂದಲೇ ಇಂಥ ಫ್ರೆಶ್ ಏಡಿಗಳಿಗೆ ವಿಶೇಷ ಬೇಡಿಕೆ.
Mangalore crabs are now in high demand, they have been now exported to China and Malaysia as demand for crabs of Mangalore increase.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm