ರೆಡ್ ಹ್ಯಾಂಡಾಗಿ ಬಲೆಗೆ ಬಿದ್ದ ಕುಂದಾಪುರ ರೆವಿನ್ಯೂ ಇನ್ಸ್ ಪೆಕ್ಟರ್ !

12-11-20 03:49 pm       Udupi Correspondent   ಕರಾವಳಿ

ಲಂಚ ಸ್ವೀಕರಿಸುತ್ತಿದ್ದ ಆರೋಪದಡಿ ​ಕುಂದಾಪುರ ಕಂದಾಯ ನಿರೀಕ್ಷಕರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ, ನವೆಂಬರ್ 12 : ಭೂ ಪರಿವರ್ತನೆಗಾಗಿ ಲಂಚ ಸ್ವೀಕರಿಸುತ್ತಿದ್ದ ಆರೋಪದಡಿ ​ಕುಂದಾಪುರ ಕಂದಾಯ ನಿರೀಕ್ಷಕರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಂದಾಯ ನಿರೀಕ್ಷಕ ಭರತ್ ಶೆಟ್ಟಿ ಬಂಧಿತ ಆರೋಪಿ. ರಾಘವೇಂದ್ರ ಸ್ವಾಮಿ ಎಂಬವರು ನೀಡಿದ  ದೂರಿನಂತೆ ಈ ದಾಳಿ ಮಾಡಲಾಗಿದೆ. ಭೂ ಪರಿವರ್ತನೆಗಾಗಿ ಭರತ್ ಶೆಟ್ಟಿ 5,000 ರೂ. ಬೇಡಿಕೆ ಇಟ್ಟಿದ್ದರೆಂದು ದೂರಲಾಗಿದೆ.

ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಮಂಜುನಾಥ್ ಬಿ  ಕವರಿ, ಇನ್ಸ್ ಪೆಕ್ಟರ್ ಗಳಾದ ಸತೀಶ್ ಬಿ.ಎಸ್. ಹಾಗೂ  ಚಂದ್ರಕಲಾ, ಯತೀನ್ ಕುಮಾರ್, ರವೀಂದ್ರ ಗಾಣಿಗ, ಪ್ರಸನ್ನ  ದೇವಾಡಿಗ, ಅಬ್ದುಲ್ ಜಲಾಲ್, ಲತೀಫ್, ರಾಘವೇಂದ್ರ ಪೂಜಾರಿ ಹೊಸಕೋಟೆ, ಸೂರಜ್ ಕಾಪು ಹಾಗೂ ಪ್ರತಿಮಾ ಪಾಲ್ಗೊಂಡಿದ್ದರು.

Revenue Inspector Caught red-handed by ACB officers in Kundapura while taking bribe. Bharath Shetty was the arrested officer.