ಬ್ರೇಕಿಂಗ್ ನ್ಯೂಸ್
24-11-23 05:20 pm Mangalore Correspondent ಕರಾವಳಿ
ಮಂಗಳೂರು, ನ.24: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಮೊದಲಿನಿಂದಲೂ ಅಪಸ್ವರ ಇದೆ. ಎಮ್ಮೆಕೆರೆಯಲ್ಲಿ ನಿರ್ಮಾಣಗೊಂಡ ಅಂತಾರಾಷ್ಟ್ರೀಯ ಈಜುಕೊಳ ಉದ್ಘಾಟನೆಗೆ ಆಗಮಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತನ್ನ ಭಾಷಣದ ಆರಂಭದಲ್ಲೇ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜನರಿಗೆ ಲಾಭದಾಯಕ ಆಗಬಲ್ಲ ಯಾವುದೇ ಯೋಜನೆ ಮಾಡಿಲ್ಲ. ಬೇರೆ ಕಡೆ ನಾವು ಆದಾಯ ತೆಗೆಯುವ ಯೋಜನೆಗಳನ್ನು ಮಾಡಿದ್ದೇವೆ. ಒಂದು ಸಾವಿರ ಕೋಟಿ ವೆಚ್ಚ ಮಾಡಿದರೂ ಭವಿಷ್ಯದ ಆಸ್ತಿ ಆಗಬಲ್ಲ ಕೆಲಸ ಮಾಡಿಲ್ಲ. ಕನಿಷ್ಠ ಪಕ್ಷ ಪ್ರವಾಸೋದ್ಯಮಕ್ಕಾದ್ರೂ 100 ಕೋಟಿ ಇಡಬೇಕಿತ್ತು. ಆದರೆ ಇಲ್ಲಿ ಅದು ಆಗಿಲ್ಲ, ಪಾಲಿಕೆಗೆ ಲಾಭ ಬರುವ ಯೋಜನೆಯನ್ನೂ ಮಾಡಿಲ್ಲ. ಅದು ಯಾಕೆ ಆಗಿಲ್ವೋ ಗೊತ್ತಿಲ್ಲ, ಈ ಬಗ್ಗೆ ಗಮನ ಹರಿಸೋಣ ಎಂದು ಹೇಳಿದ್ದಾರೆ. \
ಮಂಗಳೂರಿನಲ್ಲಿ ಇನ್ನೂ 24 ಕಾಮಗಾರಿಗಳು ಪ್ರಗತಿಯಲ್ಲಿದೆ. ಮತ್ತೆ ಮೂರು ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಸ್ಮಾರ್ಟ್ ಸಿಟಿ ಎಂಡಿಯವರು ಸಂಸದರ ಗಮನಕ್ಕೆ ತಂದು ಅವುಗಳಿಗೆ ಅನುಮತಿ ಕೊಡಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಎದುರಲ್ಲೇ ಸಚಿವರು ಅಪಸ್ವರ ಎತ್ತಿದ್ದಾರೆ.
ಯಾವುದೇ ರಾಜಕೀಯ ಅಭಿವೃದ್ಧಿ ವಿಚಾರಕ್ಕೆ ಅಡ್ಡಿಯಾಗಬಾರದು. ಕಾಂಗ್ರೆಸ್ ಸರ್ಕಾರ ರಾಜಕೀಯ ಬಿಟ್ಟು ಅನುದಾನ ನೀಡಲಿದೆ. ಈಗಿನ ಶಾಸಕ ವೇದವ್ಯಾಸ ಕಾಮತ್ ಒಳ್ಳೆಯ ಕೆಲಸ ಮಾಡ್ತಾ ಇದಾರೆ. ಇದೇ ರೀತಿಯ ಕೆಲಸ ಮುಂದುವರೆಸಿ ಎನ್ನುತ್ತ ಸಂಸದ ನಳಿನ್ ಕುಮಾರ್ ಬಗ್ಗೆ ಪರೋಕ್ಷ ಅಸಮಾಧಾನ ತೋರಿದರು. ಇದೇ ಸಭೆಯಲ್ಲಿ ಸಚಿವ ಭೈರತಿ ಮಾತಿಗೆ ತಿರುಗೇಟು ನೀಡಿದ ಸಂಸದ ನಳಿನ್ ಕುಮಾರ್, ಸ್ಮಾರ್ಟ್ ಸಿಟಿ ಯೋಜನೆಯ ಪ್ರಥಮ ಹಂತದಲ್ಲಿ ಮಂಗಳೂರು ಇರಲಿಲ್ಲ. ರಾಜ್ಯದ ಏಳು ಜನರಗಳು ಇದ್ದರೂ ಮಂಗಳೂರು ಇರಲಿಲ್ಲ. ಭೈರತಿ ಸುರೇಶ್ ಇಲ್ಲಿ ಆದಾಯ ತರೋ ಯೋಜನೆಗಳಿಲ್ಲ ಅಂತ ಹೇಳಿದ್ರು. ಆಗ ಇಲ್ಲಿ ನಿಮ್ಮದೇ ಕಾಂಗ್ರೆಸ್ ಶಾಸಕ ಜೆ.ಆರ್.ಲೋಬೋ ಇದ್ದರು. ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಬಳಿಕ ಲೋಬೋ ಜೊತೆ ಚರ್ಚೆಯಾಗಿತ್ತು. ಆದರೆ ಆಗ ಹಾಕಿದ ಯೋಜನೆಗಳಲ್ಲಿ ಇದೆಲ್ಲ ಇರಲಿಲ್ಲ. ವೇದವ್ಯಾಸ ಕಾಮತ್ ಬಂದ ಮೇಲೆ ಅಭಿವೃದ್ಧಿ ಕೆಲಸಗಳು ಬದಲಾಗಿವೆ. ಮಾರುಕಟ್ಟೆ ಸೇರಿ ಹಲವು ಕಾಮಗಾರಿ ಸ್ಮಾರ್ಟ್ ಸಿಟಿಯಡಿ ನಡೀತಿದೆ. ಅಭಿವೃದ್ಧಿ ಜೊತೆಗೆ ನೀವು ಹೇಳಿದ ಆದಾಯ ತರೋ ಯೋಜನೆಗಳೂ ಇವೆ. ಮಾರ್ಕೆಟ್, ಪಾರ್ಕಿಂಗ್ ಜಾಗ ಸೇರಿ ಹಲವು ಕೆಲಸ ಆಗ್ತಿದೆ. ಒಮ್ಮೆ ಸಚಿವ ಭೈರತಿ ಸುರೇಶ್ ರವರು ಇದರ ಸಭೆ ನಡೆಸಬೇಕು ಎಂದರು.
ವಾಟರ್ ಫ್ರಂಟ್ ಕಾಮಗಾರಿಗೆ ಕೆಲವು ಖಾಸಗಿ ವ್ಯಕ್ತಿಗಳ ತಡೆ ಇದೆ. ಅದನ್ನು ಮಾನ್ಯ ಸಚಿವರು ಸಭೆ ನಡೆಸಿ ಸರಿಪಡಿಸಬೇಕು. ನಂತೂರು ಫ್ಲೈ ಓವರ್ ಕಾಮಗಾರಿ ಆರು ತಿಂಗಳಿನಿಂದ ಬಾಕಿ ಇದೆ. ಇಲ್ಲಿ ಮರ ಕಡಿದರೆ ಪ್ರತಿಭಟನೆ ಆಗುತ್ತೆ, ಭೂ ಸ್ವಾಧೀನ ಸಮಸ್ಯೆ ಇದೆ. ಒಂದು 28 ಕಿ.ಮೀ ಹೆದ್ದಾರಿ ಅಭಿವೃದ್ಧಿಗೆ 40 ಕಡೆ ಕೇಸ್ ಹಾಕಿದ್ದಾರೆ. ಇದರಿಂದ ಹಲವು ಕಡೆ ರಾಷ್ಟ್ರೀಯ ಹೆದ್ದಾರಿ ಕೆಲಸ ನಿಂತಿದೆ. ಇಲ್ಲಿನ ಜನರು ಅಭಿವೃದ್ಧಿ ಬಗ್ಗೆ ಮಾತನಾಡ್ತಾರೆ, ಆದರೆ ಅಭಿವೃದ್ಧಿ ಮಧ್ಯೆ ಪ್ರತಿಭಟನೆ ಕೂಡ ಆಗುತ್ತೆ ಎಂದು ಅಸಹಾಯಕತೆ ಹೇಳಿಕೊಂಡರು.
Olympic standard swimming pool inaugurated at Yemmekere in Mangalore. A community level international Olympic standard swimming pool worth Rs 24.94 crore was inaugurated by urban development minister Bairathi Suresh at Yemmekere on November 24.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm