ಬ್ರೇಕಿಂಗ್ ನ್ಯೂಸ್
28-11-23 06:09 pm Mangalore Correspondent ಕರಾವಳಿ
ಮಂಗಳೂರು, ನ.27: ಶಿಕ್ಷಕರು ಕೊನೆಗಾಲದಲ್ಲಿ ಪಿಂಚಣಿ ಇದೆಯೆಂದು ಭರವಸೆಯಲ್ಲಿ ಇರುತ್ತಿದ್ದರು. ಆದರೆ ಈಗ ಅಂತಹ ಸನ್ನಿವೇಶ ಇಲ್ಲ. 2006ರಲ್ಲಿ ಜೆಡಿಎಸ್ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಡಿಸಿಎಂ ಆಗಿದ್ದ ಯಡಿಯೂರಪ್ಪ ಸರಕಾರವೇ ಪಿಂಚಣಿ ವ್ಯವಸ್ಥೆಯನ್ನು ತೆಗೆದು ಹಾಕಿದ್ದರು. ಶಿಕ್ಷಕರು ಪಿಂಚಣಿ ಇಲ್ಲದ ದುರವಸ್ಥೆ ಅನುಭವಿಸುತ್ತಿದ್ದರೆ, ಅದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಕಾರಣ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆಕೆ ಮಂಜುನಾಥ್ ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮೂರನೇ ಬಾರಿಗೆ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. 17 ವರ್ಷ ಗಣಿತ ಶಿಕ್ಷಕನಾಗಿ, ಶಿಕ್ಷಕರ ಸಮಸ್ಯೆ ಅರಿತಿದ್ದೇನೆ. ಆಬಳಿಕ ನಿವೃತ್ತಿ ಪಡೆದು ಸಾರ್ವಜನಿಕ ಜೀವನದಲ್ಲಿದ್ದೇನೆ. ಶಿಕ್ಷಕರು ತಮ್ಮದೇ ಸಮುದಾಯದ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಮೊದಲ ಬಾರಿ 2012ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಅಂತರದಿಂದ ಸೋಲು ಅನುಭವಿಸಿದ್ದೆ. ಆಗ ಸದಾನಂದ ಗೌಡ ಸಿಎಂ ಆಗಿದ್ದು, ಸ್ವತಃ ಅಧಿಕಾರ ದುರುಪಯೋಗ ಪಡಿಸಿ ಮತಗಳನ್ನು ಖರೀದಿಸಿದ್ದರು. ಅದರ ಪರಿಣಾಮವಾಗಿ ಮಗಂಳೂರಿನಂಥ ಜಾಗದಲ್ಲಿ ಕೇವಲ 20 ಶೇಕಡಾ ಅಷ್ಟೇ ಓಟಿಂಗ್ ಆಗಿತ್ತು. 2018ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದರಿಂದ ಶಿಕ್ಷಕರಿಗೆ ಆಮಿಷ ತೋರಿಸಿ ಭೋಜೇಗೌಡರನ್ನು ಗೆಲ್ಲಿಸಿದ್ದರು.
ಆದರೆ ಶಿಕ್ಷಕರ ಸಮಸ್ಯೆಯ ಬಗ್ಗೆ ಒಂದು ಬಾರಿಯೂ ದನಿಯೆತ್ತದ ಶಾಸಕನಿದ್ದರೆ ಅದು ಭೋಜೇಗೌಡ. ಶಿಕ್ಷಕರ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸಿ ಆ ಹಣವನ್ನು ಷೇರು ಮಾರುಕಟ್ಟೆಗೆ ಹಾಕಿ, ಜೂಜಿಗಿಟ್ಟವರು ಬಿಜೆಪಿಯವರು. ಷೇರು ಮಾರುಕಟ್ಟೆಗೆ ನಾನು ಕೂಡ 6 ಲಕ್ಷ ರೂಪಾಯಿ ಐದು ವರ್ಷಗಳ ಹಿಂದೆ ಹಾಕಿದ್ದೆ. ಅದೀಗ ಮೈನಸ್ ಆಗಿದ್ದು ಹಾಕಿದ್ದ ಹಣವೂ ಇಲ್ಲದಾಗಿದೆ. ಶಿಕ್ಷಕರ ಹಣವನ್ನು ಈ ರೀತಿ ಷೇರು ಜೂಜಿಗೆ ಹಾಕಿ, ದುಡಿದ ಹಣವನ್ನು ದುರುಪಯೋಗ ಮಾಡಿದ್ದಾರೆ. ಇದೊಂದು ಕೆಟ್ಟ ಪದ್ಧತಿಯಾಗಿದ್ದು, ಕಾಂಗ್ರೆಸ್ ಶಿಕ್ಷಕರ ಕ್ಷೇತ್ರದಲ್ಲಿ ಗೆದ್ದು ಬಂದರೆ ಮರಳಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವ ಕೆಲಸ ಮಾಡುತ್ತೇವೆ ಎಂದರು.
ಶಿಕ್ಷಕರ ಸಮಸ್ಯೆಯನ್ನು ಅತಿ ಹೆಚ್ಚು ಆಲಿಸಿದ್ದು, ಅವರ ಪರವಾಗಿ ಕೆಲಸ ಮಾಡಿದ್ದು ಕಾಂಗ್ರೆಸ್ ಸರಕಾರ ಮಾತ್ರ. ಆದರೆ, ಶಿಕ್ಷಕರು ಕಾಂಗ್ರೆಸಿಗರನ್ನು ಗೆಲ್ಲಿಸಿಲ್ಲ. ಈ ಬಾರಿಯ ಗ್ಯಾರಂಟಿ ಯೋಜನೆ, ಜನಪರ ಆಡಳಿತದಿಂದಾಗಿ ಶಿಕ್ಷಕರು ಸೇರಿದಂತೆ ಜನರು ಕಾಂಗ್ರೆಸ್ ಪರ ಇದ್ದಾರೆ. ಓಟು ಕೊಟ್ಟು ಗೆಲ್ಲಿಸುತ್ತಾರೆಂದು ಭರವಸೆ ಇದೆ. ಈ ಬಾರಿ 18 ಸಾವಿರದಷ್ಟು ಶಿಕ್ಷಕರನ್ನು ಮತ ಪಟ್ಟಿಗೆ ನೋಂದಣಿ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಸಾವಿರ ಮಂದಿ ಇದ್ದಾರೆ ಎಂದರು. ಜೆಆರ್ ಲೋಬೊ, ಪ್ರವೀಣಚಂದ್ರ ಆಳ್ವ ಮತ್ತಿತರರು ಇದ್ದರು.
K K Manjunath in Mangalore, slams BJP and JDS of teachers pension.
29-07-25 01:31 pm
Bangalore Correspondent
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
29-07-25 02:20 pm
Mangalore Correspondent
Dharmasthala Burial Case, 13 Suspected Grave...
28-07-25 10:41 pm
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
Dharmasthala Case, SIT Witness at Netravati R...
28-07-25 03:53 pm
29-07-25 08:54 pm
HK News Desk
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm