ಬ್ರೇಕಿಂಗ್ ನ್ಯೂಸ್
28-11-23 07:08 pm Mangalore Correspondent ಕರಾವಳಿ
ಮಂಗಳೂರು, ನ.28: ನಗರದ ಅತ್ತಾವರದ ಐವರಿ ಟವರ್ ಎನ್ನುವ ಅಪಾರ್ಟ್ಮೆಂಟ್ ಮನೆಯೊಂದರಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿದ್ದು, ಹೊಗೆಯಿಂದ ಉಸಿರು ಕಟ್ಟಿ ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಮನೆಯ ಬಾತ್ ರೂಮಿನಲ್ಲಿ ಅಡಗಿದ್ದ ಝರೀನಾ (67) ಎಂಬ ಮಹಿಳೆ ಸಾವನ್ನಪ್ಪಿದವರು. ಇವರ ಗಂಡ ತೀವ್ರ ಅಸ್ವಸ್ಥರಾಗಿದ್ದು, ಎಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯವರು ಬೆಳಗ್ಗೆ ಏಳುವ ಮೊದಲೇ ಮನೆಯೊಳಗೆ ಹೊಗೆ ಆವರಿಸಿಕೊಂಡಿತ್ತು. ಆನಂತರ ಟೀಪಾಯ್, ಸೋಫಾ ಎಲ್ಲವೂ ಸುಟ್ಟು ಹೋಗಿದ್ದು, ಮನೆಯೊಳಗೆ ದಟ್ಟ ಹೊಗೆ ಆವರಿಸಿಕೊಂಡಿತ್ತು. ಈ ವೇಳೆ ಮನೆಯಲ್ಲಿದ್ದ ಮಕ್ಕಳು, ಮೊಮ್ಮಕ್ಕಳು ಹೊರಗೆ ಬಂದಿದ್ದರೆ, ವೃದ್ಧ ದಂಪತಿ ಕೊಠಡಿಯಲ್ಲಿದ್ದರು.


ಆನಂತರ, ವೃದ್ಧ ಮಹಿಳೆ ಝರೀನಾ ಬಾತ್ ರೂಮಿಗೆ ಹೋಗಿದ್ದರೆ, ಅವರ ಪತಿಯನ್ನು ರಕ್ಷಿಸಿ ಹೊರಗೆ ತರಲಾಗಿತ್ತು. ಅಗ್ನಿಶಾಮಕ ದಳ ಬಂದು ನೀರು ಹಾಯಿಸಿ ವೃದ್ಧೆಯನ್ನು ಹುಡುಕುವಷ್ಟರಲ್ಲಿ ಆಕೆ ಉಸಿರು ಕಟ್ಟಿ ಮೃತಪಟ್ಟಿದ್ದರು. ಶಾರ್ಟ್ ಸರ್ಕಿಟ್ ನಿಂದಾಗಿ ಹೊಗೆ, ಬೆಂಕಿ ಆವರಿಸಿದೆ ಎನ್ನಲಾಗುತ್ತಿದೆ. ಇವರ ಕುಟುಂಬ ಭಟ್ಕಳದವರಾಗಿದ್ದು, ವೃದ್ಧ ದಂಪತಿ ಮಗಳ ಮನೆಯಲ್ಲಿ ನೆಲೆಸಿದ್ದರು. ಅಳಿಯ ಭಟ್ಕಳಕ್ಕೆ ತೆರಳಿದ್ದರೆ, ಮನೆಯಲ್ಲಿ ಮಗಳು ಮತ್ತು ಮೊಮ್ಮಕ್ಕಳು ಹಾಗೂ ದಂಪತಿ ಇದ್ದರು. ಬೆಳಗ್ಗೆ ಏಳುವ ಮೊದಲೇ ಬೆಂಕಿ ಆವರಿಸಿದ್ದು, ಹೇಗೆ ಹತ್ತಿಕೊಂಡಿದೆ ಎಂಬ ಬಗ್ಗೆ ಪಾಂಡೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Sudden fire in the house at falnir in Mangalore, 67 year old woman dies on spot. The incident took place early in the morning. The pandeshwar police are investagitng the case.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 01:31 pm
Bengaluru Staffer
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm