ಬ್ರೇಕಿಂಗ್ ನ್ಯೂಸ್
16-11-20 01:38 pm Mangaluru Correspondent ಕರಾವಳಿ
ಮಂಗಳೂರು, ನ.15: ಕೊರೋನದಿಂದಾಗಿ ಸ್ಥಗಿತವಾಗಿರುವ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಕಾಲೇಜುಗಳ ತರಗತಿಗಳು ನ.17ರಿಂದ ಆರಂಭಗೊಳ್ಳಲಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಿಮ ಪದವಿಯನ್ನು ಮಾತ್ರ ನ.17ರಿಂದ ನಡೆಸಲು ಅನುಮತಿ ನೀಡಲಾಗಿದೆ. ಆದರೆ ಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕೊರೋನಾ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ.
ಸರಕಾರದ ಮಾರ್ಗಸೂಚಿಯಂತೆ ನ.17ರಿಂದ ಸ್ನಾತಕೋತ್ತರ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳಷ್ಟೆ ತರಗತಿಗೆ ಹಾಜರಾಗಬೇಕು. ಆದರೆ, ಹಾಜರಾತಿಗೆ ಪೋಷಕರಿಂದ ಒಪ್ಪಿಗೆ ಪತ್ರ ಮತ್ತು ಕೊರೊನಾ ನೆಗೆಟಿವ್ ಪ್ರಮಾಣ ಪತ್ರವನ್ನೂ ಹೊಂದಿರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಸ್ಟ್ ಮಾಡಿಸಿ ಪ್ರಮಾಣ ಪತ್ರ ಪಡೆಯಬಹುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಹೇಳಿದ್ದಾರೆ.
ತರಗತಿ ಹಾಜರಾಗುವುದು ಕಡ್ಡಾಯವಲ್ಲ !
ಇದೇ ವೇಳೆ, ಮಂಗಳೂರು ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳಿಗೆ ಸರಕಾರದ ಮಾರ್ಗಸೂಚಿ ಪ್ರಕಾರ ತರಗತಿ ಆರಂಭಿಸಲು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪಾಠ ಮುಂದುವರಿಸುವ ಆಯ್ಕೆಯೂ ಇರಲಿದೆ. ತರಗತಿಯಲ್ಲಿ ಪಾಠ ಮಾಡುವುದನ್ನು ಲೈವ್ ಸ್ಕ್ರೀಮಿಂಗ್ ಮಾಡಬೇಕಾಗುತ್ತದೆ. ಆದರೆ, 17ರೊಳಗೆ ಕಾಲೇಜು ಸ್ಯಾನಿಟೈಸೇಶನ್ ಮಾಡಿರಬೇಕು. ಸ್ಯಾನಿಟೈಸರ್ ಜತೆಗೆ ಥರ್ಮಲ್ ಸ್ಕಾನಿಂಗ್ ವ್ಯವಸ್ಥೆ ಮಾಡಿರಬೇಕು. ಈಗ ಅಂತಿಮ ಪದವಿ ತರಗತಿಯನ್ನಷ್ಟೇ ಆರಂಭಿಸಲು ಅನುಮತಿ ನೀಡಲಾಗಿದೆ. ಡಿ.1ರ ಒಳಗೆ ಎಲ್ಲ ತರಗತಿಗಳನ್ನೂ ವ್ಯವಸ್ಥೆಗೊಳಿಸಿ ಇತರೇ ಪದವಿ ತರಗತಿಗಳನ್ನು ಆರಂಭಿಸಬಹುದು. ಹಾಗಂತ, ವಿದ್ಯಾರ್ಥಿಗಳಿಗೆ ಒತ್ತಡ ಹಾಕುವಂತಿಲ್ಲ ಎಂದು ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ
ದ.ಕ. ಜಿಲ್ಲೆಯಲ್ಲಿ 10 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 66 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಎಲ್ಲ ಕಡೆ ಆರ್‌ಟಿಪಿಸಿಆರ್ ತಪಾಸಣೆಗೆ ನಮ್ಮಲ್ಲಿ ವ್ಯವಸ್ಥೆ ಇದೆ. ವಿದ್ಯಾರ್ಥಿಗಳು ತಮ್ಮ ಮನೆ ಸಮೀಪದ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಾಬ್ ನೀಡಿ ತಪಾಸಣೆ ಮಾಡಬಹುದು. ಕೊರೋನ ತಪಾಸಣೆಯ ಫಲಿತಾಂಶ 48 ಗಂಟೆಗಳಲ್ಲಿ ಲಭಿಸುತ್ತದೆ. ಆದರೆ ತುಂಬಾ ಮಂದಿಯ ತಪಾಸಣೆಯ ಸಂದರ್ಭ ಒಂದೆರಡು ದಿನ ವಿಳಂಬವಾಗಬಹುದು. ಆದರೆ ಆ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ. ಎಲ್ಲ ಪದವಿ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಿಗೂ ಈ ಮಾಹಿತಿ ನೀಡಲು ಸೂಚಿಸಲಾಗಿದೆ. ಕಾಲೇಜಿಗಿಂತಲೂ ಮುಖ್ಯವಾಗಿ ಇದೀಗ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಇಲಾಖೆ ಮೊದಲಾದ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಬೇಕಿದೆ. ಇದಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.
ಪಾಳಿಯಲ್ಲಿ ತರಗತಿ ನಡೆಸಲು ಸಲಹೆ
ತರಗತಿಯಲ್ಲಿ 60 ಮಕ್ಕಳಿದ್ದಲ್ಲಿ ಎರಡು ಪಾಳಿಯಲ್ಲಿ ತರಗತಿ ನಡೆಸಬೇಕು. ಕೊರೋನ ಪರೀಕ್ಷೆ ಈಗಾಗಲೇ ಆಗಿದ್ದು, ವರದಿ ನೆಗೆಟಿವ್ ಇರುವ ಮಕ್ಕಳಿಗೆ ನ.17ರಿಂದ ತರಗತಿ ಆರಂಭಗೊಳ್ಳಲಿದೆ. ಆದರೆ ಅಂದೇ ಎಲ್ಲಾ ವಿದ್ಯಾರ್ಥಿಗಳು ಕಾಲೇಜಿಗೆ ಭೌತಿಕವಾಗಿ ಹಾಜರಾಗಲು ಕಡ್ಡಾಯವಿಲ್ಲ. ತಮ್ಮ ಕೊರೋನ ತಪಾಸಣಾ ವರದಿ ಬರುವವರೆಗೆ ವಿದ್ಯಾರ್ಥಿಗಳು ಮನೆಯಲ್ಲಿದ್ದು ಆನ್‌ಲೈನ್ ಪಾಠವನ್ನೂ ಮುಂದುವರಿಸಬಹುದು ಎಂದು ವಿವಿ ಕುಲಪತಿ ಪಿ.ಎಸ್. ಯಡಪಡಿತ್ತಾಯ ತಿಳಿಸಿದ್ದಾರೆ.
Karnataka College Reopening News: Colleges and higher education institutions in Mangalore, Karnataka are all set to reopen from November 17, 2020. Apart from this, all post-matric hostels have also been permitted to reopen in the state.
26-02-25 06:14 pm
Bangalore Correspondent
Minister Ishwara Khandre, Elephant Sanctuary...
25-02-25 10:30 pm
Belagavi Accident, Kumbh Mela: ಬಸ್ ಗೆ ಡಿಕ್ಕಿ...
24-02-25 01:36 pm
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
26-02-25 05:38 pm
HK News Desk
Corruption, Amit Shah, MK Stalin: ಕ್ಷೇತ್ರ ಪುನ...
26-02-25 05:11 pm
CBI raid, Gain Bitcoin: 6,600 ಕೋಟಿ ರೂ. ಕ್ರಿಸ್...
26-02-25 12:47 pm
Vijay Wardhan, UPSC story: Success story 35 ಬ...
24-02-25 10:14 pm
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
26-02-25 03:40 pm
Mangalore Correspondent
Urwa Police, Mangalore, Selfie, Suspend: ಸೈಬರ...
25-02-25 10:58 pm
C-Band Doppler Weather Radar, Mangalore: ಮಂಗಳ...
25-02-25 09:34 pm
Bantwal accident, Mangalore: ಚಾಲಕಿಯ ಧಾವಂತಕ್ಕೆ...
25-02-25 02:34 pm
Puttur doctor, C Section, Mangalore: ಸಿಸೇರಿಯನ...
25-02-25 12:24 pm
26-02-25 01:27 pm
HK News Desk
Urwa Police, Mangalore Crime, online Fraud: ಕ...
25-02-25 08:10 pm
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm