ಬ್ರೇಕಿಂಗ್ ನ್ಯೂಸ್
30-11-23 04:23 pm Mangalore Correspondent ಕರಾವಳಿ
ಮಂಗಳೂರು, ನ.30: ಮಂಗಳೂರು ಸಿಸಿಬಿ ಪೊಲೀಸ್ ವಿಭಾಗದಲ್ಲಿ ಎಸಿಪಿ ಆಗಿದ್ದ ಪಿ.ಎ. ಹೆಗಡೆ ಹೆಚ್ಚುವರಿ ಎಸ್ಪಿ ದರ್ಜೆಗೆ ಭಡ್ತಿ ಪಡೆದಿದ್ದು, ಉಡುಪಿ ಜಿಲ್ಲೆಯ ಎಎಸ್ಪಿ ಆಗಿ ವರ್ಗಾವಣೆಗೊಂಡಿದ್ದಾರೆ.
ಮಂಗಳೂರಿನಲ್ಲಿ ಡಿವೈಎಸ್ಪಿ ದರ್ಜೆಯಲ್ಲಿದ್ದ ಪರಮೇಶ್ವರ ಅನಂತ ಹೆಗಡೆ ಸಿಸಿಬಿ ವಿಭಾಗಕ್ಕೆ ಎಸಿಪಿ ಹುದ್ದೆಯ ಕರ್ತವ್ಯದಲ್ಲಿದ್ದರು. ಈ ಹಿಂದೆ ಮಂಗಳೂರಿನ ಬಂದರು, ಬಂಟ್ವಾಳ ನಗರ ಠಾಣೆಯಲ್ಲಿ ಎಸ್ಐ ಆಗಿದ್ದ ಪಿಎ ಹೆಗಡೆ, ಮೂಲ್ಕಿ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಭಡ್ತಿ ಹೊಂದಿದ್ದರು. 1994ರಲ್ಲಿ ಪಿಎಸ್ಐ ಆಗಿ ಪೊಲೀಸ್ ಇಲಾಖೆ ಸೇರಿದ್ದ ಅವರು 2006ರಲ್ಲಿ ಮಂಗಳೂರಿನಲ್ಲಿ ರೌಡಿ ನಿಗ್ರಹ ಪಡೆಯಲ್ಲೂ ಕರ್ತವ್ಯ ನಿರ್ವಹಿಸಿದ್ದರು.
2015ರಲ್ಲಿ ಡಿವೈಎಸ್ಪಿ ದರ್ಜೆಗೆ ಭಡ್ತಿ ಪಡೆದು ಬೆಂಗಳೂರಿನಲ್ಲಿ ಸಿಐಡಿಯಲ್ಲಿ ಕರ್ತವ್ಯದಲ್ಲಿದ್ದರು. ಅಲ್ಲಿದ್ದಾಗ ಮುಖ್ಯಮಂತ್ರಿ ನಿಧಿಯ ದುರುಪಯೋಗ ಬಗ್ಗೆ ದಾಖಲಾಗಿದ್ದ 14 ಪ್ರಕರಣದಲ್ಲಿ ತನಿಖೆ ನಡೆಸಿ ಎಂಟರಲ್ಲಿ ಚಾರ್ಜ್ ಶೀಟ್ ಹಾಕಿದ್ದರು. ಆಬಳಿಕ ವಿಜಯನಗರ ಉಪ ವಿಭಾಗದ ಎಸಿಪಿ ಆಗಿ ನಿಯೋಜನೆಗೊಂಡಿದ್ದರು. 2020ರಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಣೆಗಾಗಿ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದ ಪಿಎ ಹೆಗಡೆ ಆನಂತರ ಮತ್ತೆ ಮಂಗಳೂರಿಗೆ ಬರಲು ಯಶಸ್ವಿಯಾಗಿದ್ದರು. ಮೊದಲು ಸೆಂಟ್ರಲ್ ಎಸಿಪಿ ಆಗಿದ್ದ ಹೆಗಡೆ, ಕಮಿಷನರ್ ಶಶಿಕುಮಾರ್ ಅವಧಿಯಲ್ಲಿ ಸಿಸಿಬಿ ಎಸಿಪಿಯಾಗಿ ಹೊಸ ಹುದ್ದೆ ಸೃಜಿಸಲ್ಪಟ್ಟು ಅಲ್ಲಿಗೆ ನೇಮಕಗೊಂಡಿದ್ದರು.
Mangalore CCB DYSP Hegde appointed additional superintendent of police of Udupi. Hegde has served in the department as sub-inspector in Bunder, Bantwal town and circle inspector in Mulki. He was chosen for the award for solving the case of kidnap and murder which took place in 2008.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm