ಬ್ರೇಕಿಂಗ್ ನ್ಯೂಸ್
04-12-23 02:39 pm Mangalore Correspondent ಕರಾವಳಿ
ಮಂಗಳೂರು, ಡಿ.3: ನಗರದ ಕದ್ರಿ, ಶಿವಭಾಗ್, ಕೈಬಟ್ಟಲ್ ಪರಿಸರದಲ್ಲಿ ಕಾಡುಕೋಣವೊಂದು ರಾತ್ರಿ ವೇಳೆ ಓಡಾಟ ನಡೆಸಿದ್ದು, ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬಂದಿ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ.
ಭಾನುವಾರ ರಾತ್ರಿ ವೇಳೆ ಕದ್ರಿ ಮತ್ತು ಕೈಬಟ್ಟಲ್ ಪರಿಸರದಲ್ಲಿ ಕಾಡುಕೋಣ ಸಂಚಾರ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಮನೆಯ ಕಾಂಪೌಂಡ್ ಒಳಗಡೆ ಕೋಣ ಬಂದಿದ್ದು ಜನರು ಆತಂಕಗೊಂಡಿದ್ದಾರೆ. ಶಿವಭಾಗ್ ಕಡೆಯಿಂದ ಬಂದಿದ್ದ ಕಾಡು ಕೋಣ ಬಳಿಕ ರಸ್ತೆಯಲ್ಲೇ ಸಾಗಿ ಕೈಬಟ್ಟಲ್ ಮೂಲಕ ತೆರಳಿ ಕಣ್ಮರೆಯಾಗಿದೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದರಂತೆ, ಇಂದು ಬೆಳಗ್ಗೆ ಕದ್ರಿ ಪರಿಸರದಲ್ಲಿ ಅರಣ್ಯ ಸಿಬಂದಿ ಹುಡುಕಾಟ ನಡೆಸಿದ್ದಾರೆ.
ಈ ಬಗ್ಗೆ ಎಸಿಎಫ್ ಶ್ರೀಧರ್ ಅವರಲ್ಲಿ ಕೇಳಿದಾಗ, ಕಾಡುಕೋಣ ಸಂಚಾರ ನಡೆಸಿರುವ ಬಗ್ಗೆ ಮಾಹಿತಿ ಬಂದಿದೆ. ನಿನ್ನೆ ರಾತ್ರಿ ಸ್ಥಳೀಯರು ಫೋನ್ ಮಾಡಿ ತಿಳಿಸಿದ್ದಾರೆ. ಸಿಸಿಟಿವಿಯಲ್ಲಿ ಕಾಡುಕೋಣ ಪತ್ತೆಯಾಗಿದ್ದನ್ನು ಗಮನಿಸಿದ್ದೇವೆ. ನಾವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ, ಪತ್ತೆಯಾಗಿಲ್ಲ. ಇತ್ತೀಚೆಗೆ ಕುಲಶೇಖರ ಪರಿಸರದಲ್ಲಿ ಕಾಡುಕೋಣ ಕಂಡುಬಂದಿತ್ತು. ಅದನ್ನು ರಾತ್ರಿ ವೇಳೆಯೇ ಮರಳಿ ಕಾಡಿಗೆ ಅಟ್ಟುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಮಂಗಳೂರು ನಗರಕ್ಕೆ ಬಂದಿದ್ದ ಕಾಡುಕೋಣವನ್ನು ಹಿಡಿಯುವ ಪ್ರಯತ್ನದಲ್ಲಿ ಅರಿವಳಿಕೆ ಇಂಜೆಕ್ಷನ್ ಕೊಟ್ಟಿದ್ದರಿಂದ ಸತ್ತು ಹೋಗಿತ್ತು. ನೀರುಮಾರ್ಗ, ಬಜ್ಪೆ ಪರಿಸರದ ಕಾಡಿನಲ್ಲಿ ಕಾಡು ಕೋಣ ವಾಸವಿದ್ದು, ಅಲ್ಲಿಂದ ರಾತ್ರಿ ವೇಳೆ ಬಂದಿರಬಹುದು ಅನ್ನುವ ಅಭಿಪ್ರಾಯ ಅರಣ್ಯ ಇಲಾಖೆಯ ಅಧಿಕಾರಿಗಳದ್ದಿದೆ. ಕದ್ರಿ ಪರಿಸರದಲ್ಲಿ ನಿನ್ನೆ ರಾತ್ರಿ ಕೋಣವನ್ನು ಹಲವರು ಕಂಡಿದ್ದಾರೆ. ಕಾಡು ಕೋಣ ಬಂದಿದೆ ಎನ್ನುವ ಸುದ್ದಿ ಕೇಳಿದ ಸ್ಥಳೀಯರು ಆತಂಕಗೊಂಡಿದ್ದಾರೆ.
Mangalore kadu kona found in Kadri area, forest officals in search. Residents in panic after some saw the bison moving around.
31-01-25 10:10 pm
HK News Desk
Sriramulu, BJP, B. Y. Vijayendra: ವಿಜಯೇಂದ್ರ ಸ...
31-01-25 08:03 pm
SC directive for patients, Karnataka Health D...
31-01-25 06:07 pm
Cheque bounce, Snehamahi Krishna: ಮುಡಾ ಹಗರಣ ಹ...
31-01-25 02:02 pm
SR Vishwanath, Sudhakar, Yatnal; ನಿಮ್ಮಂತವರು ಪ...
30-01-25 11:09 pm
31-01-25 09:10 pm
HK News Desk
ಅಮೆರಿಕದಲ್ಲಿ ವಿಮಾನ ದುರಂತ ; ಪ್ರಯಾಣಿಕ ವಿಮಾನಕ್ಕೆ...
31-01-25 12:30 pm
1954ರ ಕುಂಭ ಮೇಳದಲ್ಲಿ ಪ್ರಧಾನಿ ನೆಹರು ಬಂದಿದ್ದಾಗಲೇ...
29-01-25 07:55 pm
Maha Kumbh stampede: ಕುಂಭಮೇಳದಲ್ಲಿ ಕಾಲ್ತುಳಿತ ;...
29-01-25 10:07 am
ಟೊರೇಸ್ ನಕಲಿ ಸ್ಕೀಂ ಹೆಸರಲ್ಲಿ ನೂರಾರು ಕೋಟಿ ವಂಚನೆ...
28-01-25 08:24 pm
31-01-25 11:05 pm
Mangalore Correspondent
Mangalore Prasad attavar, RTI Snehamayi Krish...
31-01-25 10:49 pm
Ullal Panchyath, Mangalore; ಉಳ್ಳಾಲ ನಗರಸಭೆ ಸೀಲ...
31-01-25 09:49 pm
Prasad Attavar, RTI Snehamahi Krishna, Muda c...
31-01-25 03:57 pm
Mangalore Traffic, Thokottu, Kallapu: ತೊಕ್ಕೊಟ...
30-01-25 10:53 pm
31-01-25 10:22 am
HK News Desk
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am
Ankola, Mangalore Car, Cash, Crime: ಅಂಕೋಲಾದಲ್...
29-01-25 04:12 pm
Mangalore News, Crime, Court: 14 ವರ್ಷದ ಬಾಲಕಿಯ...
28-01-25 05:17 pm
Hubballi Murder, Crime: ಹುಬ್ಬಳ್ಳಿಯಲ್ಲಿ ಯುವಕನ...
28-01-25 11:03 am