ಬ್ರೇಕಿಂಗ್ ನ್ಯೂಸ್
18-12-23 10:19 pm Mangalore Correspondent ಕರಾವಳಿ
ಪುತ್ತೂರು, ಡಿ.18: ಪುತ್ತೂರಿನಲ್ಲಿ ಸಂಘ ಪರಿವಾರದ ವಿರುದ್ಧ ಸಿಡಿದು ನಿಂತಿರುವ ಪುತ್ತಿಲ ಪರಿವಾರ ಮತ್ತೊಮ್ಮೆ ಬಿಜೆಪಿಗೆದುರಾಗಿ ತೊಡೆ ತಟ್ಟಿದೆ. ಈ ಬಾರಿಯ ನಗರಸಭೆ ಚುನಾವಣೆಯಲ್ಲೂ ಪುತ್ತಿಲ ಪರಿವಾರದಿಂದ ಅಭ್ಯರ್ಥಿಗಳನ್ನು ಇಳಿಸಲಾಗಿದ್ದು, ಒಂದೋ ಗೆಲುವು, ಇಲ್ಲಾಂದ್ರೆ ಬಿಜೆಪಿಯನ್ನು ಸೋಲಿಸುವುದಂತೂ ಖಚಿತ ಎನ್ನುವ ಉಮೇದಿನಲ್ಲಿ ಕಾರ್ಯಕರ್ತರಿದ್ದಾರೆ.
ಮೊನ್ನೆ ಪುತ್ತಿಲ ಪರಿವಾರದದಿಂದ ಅಭ್ಯರ್ಥಿಗಳು ಕಣಕ್ಕಿಳಿದ ಬೆನ್ನಲ್ಲೇ ಅವರ ನಾಮಪತ್ರ ಹಿಂದಕ್ಕೆ ತೆಗೆಯಲು ಭಾರೀ ಕಸರತ್ತು ನಡೆದಿತ್ತು. ಸಂಸದ ನಳಿನ್ ಕುಮಾರ್ ಆದಿಯಾಗಿ ಬಿಜೆಪಿ ಪ್ರಭಾವಿ ಮುಖಂಡರು ಪುತ್ತಿಲ ಪರಿವಾರದ ಮುಖಂಡರನ್ನು ಮನವೊಲಿಸುವ ಕೆಲಸ ಮಾಡಿದ್ದಾರೆ. ಸೋಮವಾರ ನಾಮಪತ್ರ ಹಿಂತೆಗೆಯಲು ಕಡೆ ದಿನವಾಗಿದ್ದರಿಂದ ಭಾನುವಾರ ನಡುರಾತ್ರಿಯ ವರೆಗೂ ಮಾತುಕತೆಗಳು ನಡೆದಿದ್ದವು. ಆದರೆ ಸಂಧಾನ ಮಾತುಕತೆಗಳೆಲ್ಲ ಮುರಿದು ಬಿದ್ದಿದ್ದು ನಾಮಪತ್ರ ಹಿಂತೆಗೆಯುವ ಯತ್ನ ಕೈಗೂಡಲಿಲ್ಲ.
ಇದಲ್ಲದೆ, ವಿಧಾನಸಭೆ ಚುನಾವಣೆಯಲ್ಲಿ ಅರುಣ್ ಪುತ್ತಿಲ ಸ್ಪರ್ಧೆಗೆ ಸಿಕ್ಕಿದ್ದ ಬ್ಯಾಟ್ ಚಿಹ್ನೆಯೇ ಮತ್ತೆ ಪುತ್ತಿಲ ಪರಿವಾರದ ಅಭ್ಯರ್ಥಿಗಳಿಗೂ ಸಿಕ್ಕಿದೆ. ಇದು ಪರಿವಾರದ ಕಾರ್ಯಕರ್ತರಿಗೆ ಸಿಕ್ಕ ಮಹತ್ವದ ಗೆಲುವು ಎನ್ನಲಾಗುತ್ತಿದ್ದು ಮತ್ತೊಮ್ಮೆ ಕಾರ್ಯಕರ್ತರು ಬ್ಯಾಟ್ ಹಿಡಿದು ಫೀಲ್ಡಿಗಿಳಿದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಇವೆರಡು ನಗರಸಭೆ ಕ್ಷೇತ್ರಗಳಲ್ಲೂ ಪುತ್ತಿಲ ಪರವಾಗಿ ಬಿಜೆಪಿ ಮತ್ತು ಕಾಂಗ್ರೆಸಿಗಿಂತ ಹೆಚ್ಚು ಮತಗಳು ಬಿದ್ದಿದ್ದವು. ಈಗ ಮತ್ತೆ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ, ಪುತ್ತಿಲ ಪರಿವಾರದ ಅಭ್ಯರ್ಥಿಗಳಿಗೇ ಹೆಚ್ಚು ಲಾಭ ಎನ್ನುವ ಲೆಕ್ಕಾಚಾರ ಇದೆ. ಬಿಜೆಪಿ, ಕಾಂಗ್ರೆಸ್, ಪುತ್ತಿಲ ಪರಿವಾರದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದಲ್ಲದೆ, ಈ ಹಿಂದೆ ಬಿಜೆಪಿ ಪರವಾಗಿದ್ದ ಕಾರ್ಯಕರ್ತರೆಲ್ಲ ಪುತ್ತಿಲ ಪರ ನಿಂತಿರುವುದು ಬಿಜೆಪಿಗೆ ದೊಡ್ಡ ಶಾಕ್ ಆಗಿದೆ.
ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಮುಖಂಡ ಡಾ.ಸುರೇಶ್ ಪುತ್ತೂರಾಯ ಕಾಣಿಸಿಕೊಂಡಿದ್ದು ಪರಿವಾರದಲ್ಲಿ ವಿಘಟನೆ ಆಗಿದೆಯೇ ಎನ್ನುವ ಪ್ರಶ್ನೆ ಎದುರಾಗಿತ್ತು. ಆದರೆ, ಆನಂತರ ಪುತ್ತೂರಾಯ ಸ್ವತಃ ವಿಡಿಯೋ ಬಿಡುಗಡೆಗೊಳಿಸಿ ತಾನು ಆ ಕಡೆಗೂ ಇಲ್ಲ, ಈ ಕಡೆಗೂ ಇಲ್ಲ. ಎರಡೂ ಕಡೆಯವರ ಜೊತೆಗೂ ನಾನಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು. ಇದೇ ವೇಳೆ, ಬಿಜೆಪಿ ಕಡೆಯಿಂದ ಒತ್ತಡ ಹೇರಿ ಅವರನ್ನು ಒತ್ತಾಯಪೂರ್ವಕ ಪುತ್ತಿಲ ಪರಿವಾರದಿಂದ ದೂರ ಮಾಡುವ ಪ್ರಯತ್ನ ನಡೆದಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಇದೇ ಕಾರಣಕ್ಕೆ ಪುತ್ತೂರಾಯ ಬಿಜೆಪಿ ಜೊತೆಗಿದ್ದೇನೆ ಎಂದು ತೋರಿಸಲು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬಿಜೆಪಿ ನಾಯಕರ ಜೊತೆಗೆ ಕಾಣಿಸಿಕೊಂಡಿದ್ದರು ಎನ್ನಲಾಗುತ್ತಿದೆ.
ಇದಲ್ಲದೆ, ಪುತ್ತಿಲ ಪರಿವಾರದ ಇನ್ನಿಬ್ಬರು ಪ್ರಭಾವಿ ಮುಖಂಡರನ್ನೂ ಇದೇ ರೀತಿ ಒತ್ತಡ ಹೇರಿ ಬಿಜೆಪಿ ಕಡೆಗೆ ಬರುವಂತೆ ಮಾಡಲಾಗುತ್ತಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಆದರೆ, ಪರಿವಾರದಲ್ಲಿ ಗುರುತಿಸಿಕೊಂಡಿದ್ದವರು ಬಿಜೆಪಿ ಕಡೆಗೆ ಬರುವುದಕ್ಕೆ ಕಾರ್ಯಕರ್ತರ ಕಡೆಯಿಂದ ಬೇರೆ ಬೇರೆ ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಸುರೇಶ್ ಪುತ್ತೂರಾಯ ಬಹಿರಂಗವಾಗಿ ಬಿಜೆಪಿ ಕಡೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಪುತ್ತಿಲ ಪರಿವಾರದ ಕಾರ್ಯಕರ್ತರು ಸಿಟ್ಟಾಗಿದ್ದು, ಮುಖಂಡರನ್ನು ಸೆಳೆಯಬಹುದು, ಕಾರ್ಯಕರ್ತರನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ನಾವು ಯಾವ ಧ್ಯೇಯ ಇಟ್ಟುಕೊಂಡು ಇಳಿದಿದ್ದೇವೋ ಅದು ಈಡೇರದ ಹೊರತು ಮತ್ತೆ ಬಿಜೆಪಿಗೆ ಬರಲ್ಲ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಎರಡೂ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಬ್ಯಾಟಿಂಗ್, ಫೀಲ್ಡಿಂಗ್ ಹೆಚ್ಚಿರುವುದು ಕಂಡುಬಂದಿದೆ.
ಸೊಸೈಟಿ ಚುನಾವಣೆಯಲ್ಲಿ ಒಳಒಪ್ಪಂದ
ಇತ್ತೀಚೆಗೆ ಸಹಕಾರಿ ಕ್ಷೇತ್ರದ ಸೊಸೈಟಿಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ ಪುತ್ತಿಲ ಪರಿವಾರದ ಕಡೆಗಿದ್ದ ಕಾರ್ಯಕರ್ತರೇ ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದರು. ಸ್ಥಳೀಯ ಮುಖಂಡರೇ ಮಾತುಕತೆ ನಡೆಸಿ, ಬಂಡಾಯ ಎದುರಾಗದಂತೆ ನೋಡಿಕೊಂಡು ಒಳ ಒಪ್ಪಂದದಲ್ಲಿ ಚುನಾವಣೆ ನಡೆಸಿದ್ದರು. ಪುತ್ತೂರಿನಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಡಿಸಿಸಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಈ ಕೆಲಸವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದರು. ಆದರೆ ಬಿಜೆಪಿ ಮುಖಂಡ ಮತ್ತು ಪುತ್ತಿಲ ಪರಿವಾರದ ಮುಖಂಡರ ಈ ಒಳ ಒಪ್ಪಂದಕ್ಕೆ ಕಾರ್ಯಕರ್ತರ ಕಡೆಯಿಂದ ವಿರೋಧಗಳಿದ್ದವು. ನಿಮಗೆ ಬೇಕಾದ ರೀತಿ ನೀವು ಒಟ್ಟಾಗುತ್ತೀರಿ, ನಾವಿಲ್ಲಿ ಸಾಯಬೇಕು ಎಂಬ ಮಾತುಗಳನ್ನು ಹೇಳಿಕೊಂಡಿದ್ದರು. ಈಗ ನಗರಸಭೆ ಚುನಾವಣೆಯಲ್ಲೂ ಒಂದು ಸೀಟನ್ನು ಪುತ್ತಿಲ ಪರಿವಾರಕ್ಕೆ ಕೊಟ್ಟು ಬಂಡಾಯ ಮುಚ್ಚಿ ಹಾಕುವ ತಂತ್ರ ನಡೆದಿತ್ತು. ಆದರೆ, ಕಾರ್ಯಕರ್ತರು ಸ್ಪರ್ಧೆ ಮಾಡೋದಾದ್ರೆ ಎರಡೂ ಕಡೆ ಆಗಬೇಕು, ಇಲ್ಲಾಂದ್ರೆ ಮಾಡಲೇಬಾರದು ಎನ್ನುವ ಷರತ್ತು ವಿಧಿಸಿದ್ದರಿಂದ ಕಣಕ್ಕಿಳಿಯಲೇಬೇಕಾಗಿ ಬಂದಿತ್ತು. ಇಂಥ ವೈರುಧ್ಯ, ಕಾರ್ಯಕರ್ತರೇ ಪ್ರಬಲ ಎನ್ನುವ ಕಾರಣಕ್ಕೆ ಪರಿವಾರದಲ್ಲಿ ಸುರೇಶ್ ಪುತ್ತೂರಾಯ ದೂರ ನಿಂತಿದ್ದಾರೆ ಎನ್ನಲಾಗುತ್ತಿದೆ.
ಶ್ರೀನಿವಾಸ ಕಲ್ಯಾಣೋತ್ಸವ ಪರಿವಾರಕ್ಕೆ ಉತ್ಸವ
ಇದೇ ಡಿ.27ಕ್ಕೆ ನಗರಸಭೆಯ ವಾರ್ಡ್ 1 ಮತ್ತು 11ರಲ್ಲಿ ಉಪ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ 24, 25ರಂದು ಪುತ್ತೂರಿನಲ್ಲಿ ಪುತ್ತಿಲ ಪರಿವಾರದಿಂದ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಲಾಗಿದೆ. ಭಾರೀ ಅದ್ದೂರಿಯಾಗಿ ನಡೆಸಲಾಗುತ್ತಿರುವ ಈ ಉತ್ಸವದಲ್ಲಿ ಪುತ್ತಿಲ ಪರಿವಾರದ ಶಕ್ತಿಯೂ ಪುತ್ತೂರಿನಲ್ಲಿ ತೋರಿಬರಲಿದೆ. ಒಂದೆಡೆ ಶ್ರೀನಿವಾಸನ ಉತ್ಸವ, ಮತ್ತೊಂದೆಡೆ ಜನತಾ ಜನಾರ್ದನ ಓಲೈಕೆಯ ಉತ್ಸವ ಜೊತೆ ಜೊತೆಯಾಗಿ ನಡೆಯಲಿದ್ದು, ಬಿಜೆಪಿ ಪಾಲಿಗೆ ಮತ್ತೊಂದು ಶಾಕ್ ನೀಡಲು ಕಾರ್ಯಕರ್ತರು ಸಜ್ಜಾಗಿದ್ದಾರೆ. ಈ ಉತ್ಸವದ ಬೆನ್ನಲ್ಲೇ ಪುತ್ತಿಲ ಪರಿವಾರವನ್ನು ಇಡೀ ಜಿಲ್ಲೆಯಲ್ಲಿ ಸಕ್ರಿಯಗೊಳಿಸಲು ಮುಖಂಡರು ಯೋಜನೆ ಹಾಕಿದ್ದಾರೆ.
Mangalore Bjp fails to convince Puttur Arun Puthila, tough fight between bat and BJP. Bjp leaders who tried to convince Arun Puthila to join back BJP party are disappointed as their efforts go in vain.
30-07-25 06:28 pm
Bangalore Correspondent
Dharmasthala Burial Site, Atm, Pan Card Found...
30-07-25 05:42 pm
Al Qaeda Arrest, Bangalore: ಕರ್ನಾಟಕ ರಾಜಧಾನಿಗೂ...
30-07-25 11:40 am
Durgaamba Bus Accident, Shivamogga: ಮಂಗಳೂರಿನಿ...
30-07-25 10:33 am
Kerala Nurse Nimisha Priya: ಕೇರಳ ನರ್ಸ್ ನಿಮಿಷ...
29-07-25 01:31 pm
30-07-25 09:06 am
HK News Desk
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
30-07-25 11:05 pm
Mangalore Correspondent
Dharmasthala Second Day of Exhumation, SIT: ಶ...
30-07-25 03:00 pm
Shirur Landslide, Malayalam Film: ಶಿರೂರು ಗುಡ್...
30-07-25 09:04 am
No Evidence, Dharmasthala Burial, SIT: ಹೆಣ ಹೂ...
29-07-25 09:56 pm
Dharmasthala case, SIT Begins Excavation, Upd...
29-07-25 02:20 pm
30-07-25 10:42 pm
Bangalore Correspondent
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm