ಬ್ರೇಕಿಂಗ್ ನ್ಯೂಸ್
19-12-23 11:13 am Mangalore Correspondent ಕರಾವಳಿ
ಉಳ್ಳಾಲ, ಡಿ.19: ಸೋಮೇಶ್ವರ ಕಡಲ ತೀರದಲ್ಲಿ ಇಂದು ಬೆಳಗ್ಗೆ ಮಹೇಶ್ ಟ್ರಾವೆಲ್ಸ್ ಬಸ್ ಚಾಲಕನ ಮೃತದೇಹ ಸಿಕ್ಕಿದ್ದು, ರುದ್ರಪಾದೆಯಿಂದ ಜಿಗಿದು ಆತ್ಮಹತ್ಯೆಗೈದಿರುವುದಾಗಿ ಶಂಕಿಸಲಾಗಿದೆ.
ಕೋಟೆಕಾರು ಪಟ್ಟಣದ ಕೊಂಡಾಣ, ವಿದ್ಯಾನಗರ ನಿವಾಸಿ ಜಗದೀಶ್ ಶೆಟ್ಟಿ(38)ಮೃತ ವ್ಯಕ್ತಿ. ಜಗದೀಶ್ ಅವರು 43 ರೂಟ್ ಸಂಖ್ಯೆಯ ಮಂಗಳೂರು- ತಲಪಾಡಿಯ ನಡುವೆ ಓಡಾಟ ನಡೆಸುತ್ತಿದ್ದ ಖಾಸಗಿ ಬಸ್ ಮಹೇಶ್ ಟ್ರಾವೆಲ್ಸ್ ನಲ್ಲಿ ಚಾಲಕರಾಗಿದ್ದರು. ಜಗದೀಶ್ ನಿನ್ನೆ ರಾತ್ರಿ ಮನೆಗೆ ತೆರಳದೆ ನಾಪತ್ತೆಯಾಗಿದ್ದರು.
ಇಂದು ಬೆಳಗ್ಗೆ ಜಗದೀಶ್ ಅವರ ಮೃತದೇಹ ಸೋಮೇಶ್ವರ ಕಡಲಲ್ಲಿ ತೇಲುತ್ತಿದ್ದು ಸ್ಥಳೀಯ ಮೀನುಗಾರರು ಅದನ್ನ ಎಳೆದು ದಡಕ್ಕೆ ಹಾಕಿದ್ದಾರೆ. ರುದ್ರಪಾದೆಯಲ್ಲಿ ಜಗದೀಶ್ ಅವರು ಧರಿಸಿದ್ದ ಚಪ್ಪಲ್, ಮೊಬೈಲ್, ಬೈಕ್ ಕೀ ಗೊಂಚಲು ದೊರಕಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮಹೇಶ್ ಟ್ರಾವೆಲ್ಸ್ ಬಸ್ಸು ಮಾಲಕ ಪ್ರಕಾಶ್ ಶೇಖ ಕೂಡ ಕೆಲ ತಿಂಗಳ ಹಿಂದಷ್ಟೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದರು. ಮಹೇಶ್ ಟ್ರಾವೆಲ್ಸಲ್ಲೇ ಕ್ಲೀನರ್, ನಿರ್ವಾಹಕ ವೃತ್ತಿ ಮಾಡಿ ಕಳೆದ ಹಲವು ವರುಷಗಳಿಂದ ಚಾಲಕರಾಗಿದ್ದ ಜಗದೀಶ್ ಆತ್ಮಹತ್ಯೆಗೈದಿರುವುದು ಅವರ ಮನೆ ಮಂದಿ, ಸ್ನೇಹಿತರನ್ನ ಆಘಾತಗೊಳಿಸಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜಗದೀಶ್ ತಂದೆ ವೆಂಕಪ್ಪ ಶೆಟ್ಟಿ ಅಸೌಖ್ಯದಿಂದ ಬಳಲುತ್ತಿದ್ದು ಮೂರು ದಿನಗಳ ಹಿಂದೆ ದೇರಳಕಟ್ಟೆಯ ಕೆ.ಎಸ್ .ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಅದೇ ಆಸ್ಪತ್ರೆಗೆ ಮಗನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಮೃತ ಜಗದೀಶ್ ಅವಿವಾಹಿತರಾಗಿದ್ದು ತಾಯಿ, ತಂದೆ ಇಬ್ಬರು ಅಣ್ಣಂದಿರನ್ನ ಅಗಲಿದ್ದಾರೆ.
Mahesh bus Travels driver commits suicide at Someshwar Beach in Mangalore. The deceased has been identifed as Jagadish Shetty (48). Ullal police are at the spot.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 05:01 pm
Mangaluru Staffer
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm