ಬ್ರೇಕಿಂಗ್ ನ್ಯೂಸ್
19-12-23 11:27 am Mangalore Correspondent ಕರಾವಳಿ
ಪುತ್ತೂರು, ಡಿ.19: ಸೊಸೈಟಿ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗಿಲ್ಲವೆಂದು ವಿಜಯೋತ್ಸವ ನಡೆಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ದಲಿತ ಯುವಕನ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ಚಾರ್ವಾಕ ಗ್ರಾಮದಲ್ಲಿ ನಡೆದಿದೆ.
ಚಾರ್ವಾಕ ಗ್ರಾಮದ ಕಡಬ ನಿವಾಸಿ ಮನೋಹರ ಬಿ (24) ಹಲ್ಲೆಗೀಡಾದವರು. ಡಿ.17ರಂದು ರಾತ್ರಿ ಮನೋಹರ್ ತನ್ನ ಮನೆಯಲ್ಲಿದ್ದಾಗ ಅಂಗಳಕ್ಕೆ ಬಂದ ಆರೋಪಿತರಾದ ಗಣೇಶ ಉದನಡ್ಕ, ರಾಧಾಕೃಷ್ಣ ಮುದ್ವ , ಅಖೀಲ್ ಬೊಮ್ಮಳಿಕೆ, ಉಮೇಶ್ ಬಿರೋಳಿಕೆ, ಯಶೋಧರ ಬಿರೋಳಿಕೆ ಹಾಗೂ ಇತರರು ಬಂದು ಜಾತಿನಿಂದನೆ ಮಾಡಿ ಅವಾಚ್ಯವಾಗಿ ಬೈದಿದ್ದಾರೆ. ಬಳಿಕ ಮನೋಹರ್ ಅವರ ಮೇಲೆ ಮರದ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ತಾಯಿ ಲಲಿತಾರವರು ರಕ್ತದದೊತ್ತಡ ಕಡಿಮೆಯಾಗಿ ಕುಸಿದು ಬಿದ್ದಿದ್ದಾರೆ.
ಈ ವೇಳೆ ನೆರೆಮನೆಯವರು ಬರುವುದನ್ನು ಕಂಡ ಆರೋಪಿಗಳು ಪಿರ್ಯಾದುದಾರರಿಗೆ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ 107/2023 ಕಲಂ: 143,147,447,504,323,324,506,149 ಹಾಗೂ SC & ST act 2015 u/s-3(1) (r) (s), 3 (2) (va)) ರಂತೆ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಖಿಲ್ ಎಂಬಾತನ ಬಂಧನವಾಗಿದ್ದು, ಉಳಿದವರು ತಲೆಮೆರೆಸಿಕೊಂಡಿದ್ದಾರೆ.
ಚಾರ್ವಾಕ ಸೇವಾ ಸಹಕಾರಿ ಸಂಘದ ಚುನಾವಣೆ ನಡೆದು ಅದರಲ್ಲಿ ಸಹಕಾರ ಭಾರತಿ ಬೆಂಬಲಿತ ಗಣೇಶ್ ಉದನಡ್ಕ ತಂಡ ಬಹುಮತ ಪಡೆದಿತ್ತು. ಆ ನಂತರ ನಡೆದ ವಿಜಯೋತ್ಸವದಲ್ಲಿ ವಿರೋಧವಾಗಿ ಸ್ಪರ್ಧಿಸಿದ ಮತ್ತು ಅವರಿಗೆ ಬೆಂಬಲಿಸಿದವರ ಮನೆ ಬಳಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಅದೇ ವೇಳೆ, ಮನೋಹರ್ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿದೆ. ಚುನಾವಣೆಯಲ್ಲಿ ಮನೋಹರ್ ಕಾಂಗ್ರೆಸ್ ಸದಸ್ಯರಿಗೆ ಬೆಂಬಲ ನೀಡಿದ್ದ ಎನ್ನಲಾಗುತ್ತಿದೆ.
ಆರೋಪಿ ಗಣೇಶ್ ಉದನಡ್ಕ ರೌಡಿ ಶೀಟರ್ ಆಗಿದ್ದು ಕೆಲವು ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ಸದಸ್ಯೆಗೆ ಹಲ್ಲೆ ನಡೆಸಿ ಜೈಲು ಪಾಲಾಗಿದ್ದ. ಇದೀಗ ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸುವ ಸಾಧ್ಯತೆಯಿದೆ.
Bjp workers barged into the house of a Dalit youth and attacked him at Charvaka village in Kadaba taluk when he was celebrating his victory for not campaigning in the society elections.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am