ಬ್ರೇಕಿಂಗ್ ನ್ಯೂಸ್
21-12-23 11:45 am Mangalore Correspondent ಕರಾವಳಿ
ಮಂಗಳೂರು, ಡಿ.21: ಡಯಾಲಿಸಿಸ್ ಕಾರಣಕ್ಕೆ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಸಾವಿಗೀಡಾಗಿದ್ದಾರೆಂದು ಆರೋಪ ಕೇಳಿಬಂದಿದೆ. ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಅರ್ಕುಡೇಲು ನಿವಾಸಿ ಸುಮಿತ್ರಾ (35) ಮೃತ ಮಹಿಳೆ.
ಸುಮಿತ್ರಾ ಅವರಿಗೆ ಕಳೆದ ಒಂದು ವರ್ಷದಿಂದ ಡಯಾಲಿಸಿಸ್ ಮಾಡುತ್ತಿದ್ದರು. ಕಣಚೂರು ಆಸ್ಪತ್ರೆಗೆ ಬಂದಿದ್ದ ಕುಟುಂಬ ವೆನ್ಲಾಕ್ ಆಸ್ಪತ್ರೆಯಲ್ಲಿ ಉಚಿತವಾಗಿ ಡಯಾಲಿಸಿಸ್ ಆಗುತ್ತೆಂದು ತಿಳಿದು ಬಂದಿದ್ದರು. ಮಂಗಳವಾರ ಸಂಜೆ 5 ಗಂಟೆಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಸುಮಿತ್ರಾ ಅವರನ್ನು ಅಡ್ಮಿಟ್ ಮಾಡಿದ್ದು ಬಿಟ್ಟರೆ ವೈದ್ಯರು ಯಾವುದೇ ಪ್ರಕ್ರಿಯೆ ನಡೆಸಿರಲಿಲ್ಲ.
ಡಯಾಲಿಸಿಸ್ ಮಾಡುವುದಕ್ಕೂ ಮುನ್ನ ಸಣ್ಣ ಪೈಪ್ ಬದಲಾವಣೆ ನಡೆಸಬೇಕಾಗಿತ್ತು. ಬುಧವಾರ ಸಂಜೆ 4 ಗಂಟೆಯ ವರೆಗೂ ಹುಷಾರಾಗಿಯೇ ಇದ್ದ ಮಹಿಳೆ 5 ಗಂಟೆಗೆ ಸಾವನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ರೋಗಿಯ ಸಂಬಂಧಿಕರು ಪ್ರಶ್ನೆ ಮಾಡಿದಾಗ, ಐಸಿಯು ಇರಲಿಲ್ಲ. ಅದರಿಂದ ಸಮಸ್ಯೆ ಆಯ್ತು ಎಂದು ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ಸಂಬಂಧಿಕರು ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಐಸಿಯು ಇಲ್ಲ ಎಂದು ಮೊದಲೇ ಹೇಳುತ್ತಿದ್ದರೆ, ನಾವು ಬೇರೆ ವ್ಯವಸ್ಥೆ ಮಾಡುತ್ತಿದ್ದೆವು. ನೀವು ಸರ್ಜರಿ, ಡಯಾಲಿಸಿಸ್ ಮಾಡುವ ಸಂದರ್ಭದಲ್ಲಿ ಏನೇನು ಅಗತ್ಯ ಇದೆ ಅನ್ನುವ ಬಗ್ಗೆ ಜಾಗ್ರತೆ ವಹಿಸಬೇಕಿತ್ತಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ರೋಗಿ ಸಾವನ್ನಪ್ಪಿದ್ದಾರೆಂದು ತಿಳಿಸಿದರೂ, ಸಂಜೆಯಿಂದ ರಾತ್ರಿಯ ವರೆಗೂ ಸಂಬಂಧಿಕರನ್ನು ಒಳಗೆ ಬಿಟ್ಟಿರಲಿಲ್ಲ. ಕರ್ತವ್ಯದಲ್ಲಿದ್ದ ಡಾಕ್ಟರ್ ರೋಶನ್ ಬಂದು ಸ್ಪಷ್ಟೀಕರಣ ನೀಡಬೇಕೆಂದು ಕೇಳಿದರೂ, ಅವರು ಹೊರಗೆ ಬರಲಿಲ್ಲ. ಕೆಎಂಸಿ ಆಸ್ಪತ್ರೆಯ ಡ್ಯೂಟಿ ಡಾಕ್ಟರ್, ಇತರ ನರ್ಸ್ ಗಳು ಸ್ಥಳದಲ್ಲಿ ಇದ್ದರೂ, ಯಾರಲ್ಲೂ ಸ್ಪಷ್ಟ ಉತ್ತರ ಇರಲಿಲ್ಲ. ರೋಗಿಯ ಸಂಬಂಧಿಕರು ಜೋರು ಮಾಡಿದ್ದಕ್ಕೆ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರನ್ನು ಕರೆಸಿದ್ದು, ಸಂಬಂಧಿಕರನ್ನು ಅರೆಸ್ಟ್ ಮಾಡುವಂತೆ ವೈದ್ಯರು ಹೇಳಿದ್ದಾರೆ. ಇದರಿಂದ ರಾತ್ರಿ 1 ಗಂಟೆ ವರೆಗೂ ಆಸ್ಪತ್ರೆ ಆವರಣದಲ್ಲಿ ರೋಗಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು ಎಂದು ಅಲ್ಲಿನ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಸುಮಿತ್ರಾ ಅವರಿಗೆ ಮದುವೆಯಾಗಿದ್ದು ಆರನೇ ಕ್ಲಾಸ್ ಓದುವ ಮಗ ಇದ್ದಾನೆ. ಒಂದು ವರ್ಷದ ಹಿಂದೆ ಎರಡನೇ ಹೆರಿಗೆಯ ಸಂದರ್ಭದಲ್ಲಿ ಬಿಪಿ ಹೆಚ್ಚಿದೆಯಂದು ಸಿಸೇರಿಯನ್ ಮಾಡಿದ್ದು ಅದೇ ಸಂದರ್ಭದಲ್ಲಿ ಎಡವಟ್ಟಾಗಿ ಕಿಡ್ನಿ ಫೈಲ್ಯೂರ್ ಆಗಿತ್ತು. ಅಂದಿನಿಂದ ಯೆನಪೋಯ, ಕಣಚೂರು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಕೊಂಡಿದ್ದರು. ಮಹಿಳೆ ಉಷಾರಾಗಿಯೇ ಇದ್ದರು. ಇದೀಗ ವೆನ್ಲಾಕ್ ನಲ್ಲಿ ಬಂದಿದ್ದಾಗ ಈ ರೀತಿ ಆಗಿದೆ. ನಾವು ಸರಕಾರಿ ಆಸ್ಪತ್ರೆಯನ್ನು ನಂಬಿ ಬಂದರೆ, ಈ ರೀತಿ ಮಾಡೋದಾ ಎಂದು ಮಹಿಳೆಯ ತಂಗಿ ಪ್ರಶ್ನೆ ಮಾಡಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಸುಸಜ್ಜಿತ ಡಯಾಲಿಸಿಸ್ ಸೆಂಟರ್ ಇದ್ದರೂ, ಅದನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ. ಸೂಕ್ತ ವೈದ್ಯರೂ ಇಲ್ಲದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪಗಳಿವೆ.
Doctors negligence, woman who came to dialysis patient dies at wenlock hospital in Mangalore. The decreased has been identified as Sumithra from Bantwal.
29-05-25 03:34 pm
HK News Desk
CM Siddaramaiah, B K Hariprasad, Mangalore Mu...
29-05-25 02:43 pm
COVID, African Swine Fever Bagalkote: ಕೊರೋನಾ...
29-05-25 02:19 pm
Ma Saleem, DG, IGP, Court: ಡಿಜಿ ಎಂ.ಎ.ಸಲೀಂ ಪ್ರ...
28-05-25 07:06 pm
ST Somasekhar: ಬಿಜೆಪಿಯ 10 ರಿಂದ 12 ಸ್ಥಾನ ಖಾಲಿ...
27-05-25 11:17 pm
26-05-25 11:34 pm
HK News Desk
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
Gujrath, ATS: ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ...
26-05-25 09:50 pm
ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ ಸೂಕ್ಷ್ಮ ಮಾಹಿತಿ...
26-05-25 08:33 pm
Trump, Europe: ಟ್ರಂಪ್ ತೆರಿಗೆಯ ‘ಕದನ ವಿರಾಮ’ ; ಅ...
26-05-25 06:14 pm
28-05-25 11:16 pm
Mangalore Correspondent
Mangalore Bantwal Murder, SDPI, Congress resi...
28-05-25 10:41 pm
Bantwal Abdul Raheem Murder Case, ADGP Hitend...
28-05-25 08:04 pm
Bantwal Rahiman Murder, Puttur, Ashraf Kalega...
28-05-25 07:44 pm
Krishaveni Mines and Geology, Arrest, Mangalo...
28-05-25 05:27 pm
29-05-25 07:59 pm
Mangalore Correspondent
Mangalore Bantwal Abdul Rehman Murder, Arrest...
29-05-25 06:38 pm
Uppinangady, Blackmail, Goat Purchase, Puttur...
29-05-25 02:16 pm
Karkala, Chikkamagaluru: ನವಜಾತ ಶಿಶುವನ್ನು ಕಾರ್...
29-05-25 01:13 pm
Garuda Gang, Mangalore crime, Karwar police:...
29-05-25 12:44 pm