ಬ್ರೇಕಿಂಗ್ ನ್ಯೂಸ್
23-12-23 10:18 pm Mangalore Correspondent ಕರಾವಳಿ
ಮಂಗಳೂರು, ಡಿ.23: ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿ 8.15ಕ್ಕೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ಕೊನೆಕ್ಷಣದಲ್ಲಿ ರದ್ದಾದ ಕಾರಣ ಪ್ರಯಾಣಿಕರು ಆಕ್ರೋಶಿತರಾಗಿ ಏರ್ಪೋರ್ಟ್ ಸಿಬಂದಿಯನ್ನು ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.
ಬಜ್ಪೆ ವಿಮಾನ ನಿಲ್ದಾಣದಿಂದ ರಾತ್ರಿ 8.15ಕ್ಕೆ ಏರ್ ಇಂಡಿಯಾ ವಿಮಾನ ನಿಗದಿಯಾಗಿತ್ತು. ಆದರೆ ವಿಮಾನ ಬಂದಿರಲಿಲ್ಲ. ಸಮಯ ಕಳೆದರೂ ವಿಮಾನ ಬಾರದೇ ಇದ್ದುದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದು ಏರ್ ಇಂಡಿಯಾ ಸಿಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಅಮೆರಿಕಕ್ಕೆ ಹೋಗಬೇಕು. ಬೆಂಗಳೂರಿಗೆ ಸಕಾಲಕ್ಕೆ ತಲುಪದೇ ಇದ್ದಲ್ಲಿ ವಿಮಾನ ಸಿಗಲ್ಲ. ನೀವು ಕೊನೆಯ ಕ್ಷಣದಲ್ಲಿ ವಿಮಾನ ಇಲ್ಲಾಂದ್ರೆ ಏನು ಮಾಡಬೇಕೆಂದು ಪ್ರಯಾಣಿಕರೊಬ್ಬರು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಇನ್ನು ಕೆಲವರು ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲು ಹೊರಟವರಿದ್ದರು. ವಿಮಾನ ಇಲ್ಲಾಂದ್ರೆ ಮೊದಲೇ ಹೇಳಬೇಕಲ್ಲ. ಹೀಗೆ ಮಾಡಿದರೆ ನಾವೇನು ಮಾಡಬೇಕು. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ.
ಕ್ರಿಸ್ಮಸ್ ಆಗಿದ್ದರಿಂದ ತುರ್ತು ಪ್ರಯಾಣಕ್ಕೆ ಹೊರಟವರೂ ಇದ್ದರು. ವಿಮಾನ ಇಲ್ಲದೆ ಕಂಗಾಲಾಗಿದ್ದರು. ಅರ್ಜೆಂಟ್ ಹೋಗಲೇಬೇಕು, ನೀವು ಪರ್ಯಾಯ ವ್ಯವಸ್ಥೆ ಮಾಡಿ. ಬೇರೆ ವಿಮಾನ ವ್ಯವಸ್ಥೆ ಮಾಡಿ. ಈಗ ರದ್ದಾಗಿದೆ ಎಂದರೆ ಆಗೋದಿಲ್ಲ ಎಂದು ಆಕ್ರೋಶ ತೋರಿದ್ದಾರೆ. ಸಿಬಂದಿ ಪ್ರಯಾಣಿಕರನ್ನು ಸಮಾಧಾನ ಮಾಡಲೆತ್ನಿಸಿದರೂ ಕೇಳಲಿಲ್ಲ. ಕೊನೆಗೆ, ಏರ್ ಇಂಡಿಯಾ ಸಿಬಂದಿ ವಿಮಾನವು ತಾಂತ್ರಿಕ ತೊಂದರೆಗೀಡಾಗಿದ್ದು ಬೆಂಗಳೂರಿನಲ್ಲಿ ಉಳಿದಿದೆ. ಪರ್ಯಾಯ ವ್ಯವಸ್ಥೆ ಮಾಡಿದ್ದು ರಾತ್ರಿ 2.15ಕ್ಕೆ ಬೇರೊಂದು ವಿಮಾನದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ. ಎಂಟು ಗಂಟೆಯ ವಿಮಾನಕ್ಕಾಗಿ ಬಂದಿದ್ದ ಪ್ರಯಾಣಿಕರು ಬದಲಿ ವ್ಯವಸ್ಥೆಗಾಗಿ ಕಾದು ಕುಳಿತಿದ್ದಾರೆ.
Mangalore Bangalore airindia flight of 8:10 cancelled at last moment, passengers go angry, fight, video viral.
15-01-25 09:17 pm
HK News Desk
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
Keonics, Priyank Kharge; ದಯಾಮರಣಕ್ಕಾಗಿ ರಾಷ್ಟ್ರ...
15-01-25 12:19 pm
16-01-25 04:24 pm
HK News Desk
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
16-01-25 03:54 pm
Mangalore Correspondent
Mangalore, MP Brijesh Chowta: ಪಾಕಿಸ್ತಾನಕ್ಕೆ ಜ...
16-01-25 12:58 pm
Udupi Yakshagana News, Police ಅನುಮತಿ ಇಲ್ಲದೆ ರ...
15-01-25 10:47 pm
Banner, Nalin Kumar Kateel, D V Sadananda Gow...
15-01-25 08:01 pm
Mangalore crime, Jail; ಮಂಗಳೂರಿನ ಜೈಲಿನಲ್ಲಿ ಕೈದ...
15-01-25 12:09 pm
16-01-25 03:10 pm
HK News Desk
Fake Stock Market scam, Mangalore, Police: ನಕ...
15-01-25 11:06 pm
Kerala rape News: ಇನ್ಸ್ಟಾಗ್ರಾಂನಲ್ಲಿ ಪರಿಚಯ, ರ...
14-01-25 10:40 pm
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm