MLA Dr Bharath shetty, Kalladka Prabhakar Bhat, Mangalore: ಮುಸ್ಲಿಂ ಹೆಣ್ಣು ಮಕ್ಕಳನ್ನ ಮುಂದಿಟ್ಟು ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸುಳ್ಳು ದೂರು ಕೊಡಿಸಿದ್ದಾರೆ ; ಶಾಸಕ ಭರತ್ ಶೆಟ್ಟಿ 

27-12-23 10:16 pm       Mangalore Correspondent   ಕರಾವಳಿ

ತಲಾಖ್ ನಿಷೇಧದಿಂದ ಮಹಿಳೆಯರಿಗೂ ಪ್ರಾತಿನಿಧ್ಯ ಸಿಗುತ್ತಿದ್ದು ಸಮಾಜದಲ್ಲಿ ಅವರು ಮುಂಚೂಣಿಗೆ ಬಂದಲ್ಲಿ ತಮಗೆ ಮರ್ಯಾದೆ ಸಿಗುವುದಿಲ್ಲ ಎಂಬ ಅಳುಕಿನಿಂದ ಮುಸ್ಲಿಂ ಹೆಣ್ಣು ಮಕ್ಕಳನ್ನ ಮುಂದಿಟ್ಟು ಬಲವಂತವಾಗಿ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಕೇಸು ದಾಖಲಿಸುವ ಷಡ್ಯಂತ್ರ ನಡೆಸಿದ್ದಾರೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರು, ಡಿ.27: ಮುಸ್ಲಿಂ ಸಮುದಾಯದಲ್ಲಿ ಪುರುಷರೇ ಬಲಾಡ್ಯರು. ಮಹಿಳೆಯರ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ. ತಲಾಖ್ ನಿಷೇಧದಿಂದ ಮಹಿಳೆಯರಿಗೂ ಪ್ರಾತಿನಿಧ್ಯ ಸಿಗುತ್ತಿದ್ದು ಸಮಾಜದಲ್ಲಿ ಅವರು ಮುಂಚೂಣಿಗೆ ಬಂದಲ್ಲಿ ತಮಗೆ ಮರ್ಯಾದೆ ಸಿಗುವುದಿಲ್ಲ ಎಂಬ ಅಳುಕಿನಿಂದ ಮುಸ್ಲಿಂ ಹೆಣ್ಣು ಮಕ್ಕಳನ್ನ ಮುಂದಿಟ್ಟು ಬಲವಂತವಾಗಿ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಕೇಸು ದಾಖಲಿಸುವ ಷಡ್ಯಂತ್ರ ನಡೆಸಿದ್ದಾರೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.

ಪ್ರಭಾಕರ್ ಭಟ್ ಅವರು ಮುಸ್ಲಿಂ ಹೆಣ್ಣು ಸಮಾಜಕ್ಕೆ ಸಿಕ್ಕಿರುವ ಗೌರವ, ತ್ರಿವಳಿ ತಲಾಕ್ ನಿಷೇಧ, ಪ್ರಧಾನಿ ಮೋದಿ ಅವರ ದೃಢ ಸಂಕಲ್ಪವನ್ನು ಹೇಳಿದ್ದಾರೆ ಹೊರತು ಇದರಲ್ಲಿ ಮುಸ್ಲಿಂ ಮಹಿಳಾ ಸಮಾಜಕ್ಕೆ ನೋವಾಗುವ ವಿಚಾರವಿಲ್ಲ ಎಂದು ಡಾ.ಪ್ರಭಾಕರ್ ಭಟ್ ಹೇಳಿಕೆಯನ್ನು ಭರತ್ ಶೆಟ್ಟಿ ಸಮರ್ಥಿಸಿಕೊಂಡಿದ್ದಾರೆ. ಖಟ್ಟರ್ ಹಿಂದುತ್ವ, ಆರ್ ಎಸ್ ಎಸ್ ನೇತಾರರಿಗೆ, ಹಿಂದೂ ವಿರೋಧಿ ಸರಕಾರ ಬಂದಾಗ ಹಿಂದೂಗಳ ವಿರುದ್ಧ ಕಾನೂನು ಕ್ರಮ ನಿರೀಕ್ಷಿತ. ಅದನ್ನು ಸಮರ್ಥವಾಗಿ ಎದುರಿಸಲಾಗುವುದು ಎಂದು ಹೇಳಿದ್ದಾರೆ.

FIR registered against Kalladka Prabhakar Bhat for “insulting women and  promoting religious enmity” - Mangalorean.com

ಮುಸ್ಲಿಂ ಸಮುದಾಯದಲ್ಲಿ ಪುರುಷ ಸಮಾಜ ಬಲಾಢ್ಯವಾಗಿದ್ದು ಹೆಣ್ಣು ಮಕ್ಕಳನ್ನು ಅಡಿಗೆ ಕೋಣೆಗೆ ಸೀಮಿತಗೊಳಿಸುವಂತಹ ಸಂಕುಚಿತ ಮನೋಭಾವವನ್ನು ಹೊಂದಿರುವವರ ಸಂಖ್ಯೆ ಈಗಲೂ ಹೆಚ್ಚಿದೆ ಎಂದು ಭರತ್ ಶೆಟ್ಟಿ ಟೀಕಿಸಿದ್ದು, ಮೋದಿ ಸರಕಾರ ನೊಂದ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಬಾಳಿನಲ್ಲಿ ಬೆಳಕು ತಂದ ಸರಕಾರ. ಇದನ್ನು ಕಾಂಗ್ರೆಸ್, ಎಡಪಕ್ಷಗಳು ಸಹಿಸದೆ ಇಂತಹ ಕುತಂತ್ರ ಹೆಣೆಯುತ್ತಿವೆ ಎಂದು ಭರತ್ ಶೆಟ್ಟಿ ಟೀಕಿಸಿದ್ದಾರೆ. 

Mangaluru: People need not pay their electricity bills - Nalin Kumar Kateel  - Daijiworld.com

ಕೇಸು ವಾಪಸ್ ಪಡೆಯಲು ಆಗ್ರಹ 

ಕಾಂಗ್ರೆಸ್ ಸರ್ಕಾರದ ಹಿಂದು ವಿರೋಧಿ ನೀತಿ ಮುಂದುವರಿಸಿದ್ದು ಇದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ಸಂಸದ ನಳಿನ್‌ ಕುಮಾರ್ ಕಟೀಲ್ ಹೇಳಿದ್ದಾರೆ. ಮುಸ್ಲಿಂ ಸಮಾಜದ ಮಹಿಳೆಯರಿಗೆ ಆದ ಅನ್ಯಾಯ ಹಾಗೂ ಮೋದಿ ಸರ್ಕಾರ ತ್ರಿವಳಿ ತಲಾಕ್ ನಿಷೇಧ ಮಾಡಿದ ಬಗ್ಗೆ ಡಾ.ಭಟ್ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಇದೇ ಹೇಳಿಕೆಯನ್ನು ತಿರುಚಿ ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ಕೇಸು ದಾಖಲಿಸಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಈ ಷಡ್ಯಂತ್ರವನ್ನು ಸಹಿಸಲು ಸಾಧ್ಯವಿಲ್ಲ. ಡಾ.ಪ್ರಭಾಕರ ಭಟ್ ವಿರುದ್ಧ ಹಾಕಿರುವ ಸುಳ್ಳು ಕೇಸನ್ನು ತಕ್ಷಣ ವಾಪಸು ಪಡೆಯಬೇಕೆಂದು ಸಂಸದರು ಆಗ್ರಹಿಸಿದ್ದಾರೆ.

Case against Kalladka Prabhakar Bhat, Muslims are using girls to file case says MLA Dr Bharath shetty.