ಬ್ರೇಕಿಂಗ್ ನ್ಯೂಸ್
28-12-23 10:30 pm Mangalore Correspondent ಕರಾವಳಿ
ಮಂಗಳೂರು, ಡಿ.28: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಆಪ್ತ ಕಾರ್ಯದರ್ಶಿ ಕೆ.ಎ. ಹಿದಾಯತುಲ್ಲಾ ಗುರುವಾರ ಮಂಗಳೂರಿಗೆ ಪ್ರವಾಸ ಬಂದಿದ್ದರು. ಅಧಿಕಾರಿಯ ಅಧಿಕೃತ ಪ್ರವಾಸ ಕಾರ್ಯಕ್ರಮದ ಬಗ್ಗೆ ಸಂಬಂಧಿತ ಇಲಾಖೆಗಳಿಗೆ ಮಾಹಿತಿ ರವಾನೆಯಾಗಿತ್ತು. ಆದರೆ ಪ್ರವಾಸ ಕಾರ್ಯಕ್ರಮ ನೋಡಿದರೆ, ಅಹವಾಲು ಸ್ವೀಕಾರ ನೆಪದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಸರಕಾರಿ ವೆಚ್ಚದಲ್ಲಿ ವಿಮಾನ ಪ್ರಯಾಣ, ಹೊಸ ವರ್ಷಾಚರಣೆಗೆ ಚಿಕ್ಕಮಗಳೂರಿನಲ್ಲಿ ರೆಸಾರ್ಟ್ ಬುಕ್ಕಿಂಗ್ ಮಾಡಿರುವಂತೆ ಕಂಡುಬಂದಿದೆ.
ಬುಧವಾರ ರಾತ್ರಿ ಹತ್ತು ಗಂಟೆ ವೇಳೆಗೆ ಬೆಂಗಳೂರಿನಿಂದ ಮಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಬಂದಿದ್ದು ಕದ್ರಿಯ ಅತಿಥಿ ಬಂಗಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಗುರುವಾರ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆ ವರೆಗೆ ಮಂಗಳೂರಿನ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿರುವ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡುವುದೆಂದು ನಿಗದಿಯಾಗಿತ್ತು. ಸಚಿವರ ಅನುಪಸ್ಥಿತಿಯಲ್ಲಿ ಕೆಎಎಸ್ ಅಧಿಕಾರಿ ಆಗಿರುವ ಆಪ್ತ ಕಾರ್ಯದರ್ಶಿ ಸಚಿವರ ಹೆಸರಲ್ಲಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಬಹುದು. ಆದರೆ, ದೂರು ಅರ್ಜಿಗಳ ಬಗ್ಗೆ ಸಚಿವರ ಗಮನಕ್ಕೆ ತರದೆ ತಾನಾಗಿಯೇ ಆದೇಶ ಮಾಡುವಂತಿಲ್ಲ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಂಗಳಿಗೊಮ್ಮೆ ಮಂಗಳೂರಿಗೆ ಭೇಟಿ ನೀಡುವುದರಿಂದ ಸಾರ್ವಜನಿಕರ ದೂರು ಆಲಿಸಲು ಲಭ್ಯರಿರುವುದಿಲ್ಲ. ಹೀಗಾಗಿ ಸಚಿವರ ಅನುಮತಿಯಲ್ಲಿ ಆಪ್ತ ಕಾರ್ಯದರ್ಶಿ ಬಂದು ಜನಸಾಮಾನ್ಯರ ಅಹವಾಲು ಆಲಿಸಬಹುದು. ಆದರೆ, ಆಪ್ತ ಕಾರ್ಯದರ್ಶಿ ಅಹವಾಲು ಸ್ವೀಕರಿಸುವ ಬಗ್ಗೆ ಯಾವುದೇ ಪೂರ್ವ ಪ್ರಕಟಣೆ ಇರಲಿಲ್ಲ. ಜಿಲ್ಲಾ ವಾರ್ತಾ ಇಲಾಖೆಗೂ ಮಾಹಿತಿ ಬಂದಿರಲಿಲ್ಲ. ಸಾರ್ವಜನಿಕರಿಗೆ ಮಾಹಿತಿಯನ್ನೇ ನೀಡದೆ ಆಪ್ತ ಕಾರ್ಯದರ್ಶಿ ಅಹವಾಲು ಸ್ವೀಕಾರ ಕಾರ್ಯಕ್ರಮ ಏರ್ಪಡಿಸುವುದಂದ್ರೆ ನಾಮ್ಕೇವಾಸ್ತೆ ಎನ್ನಬೇಕು. ಗುರುವಾರವೂ ನಾಮ್ಕೇವಾಸ್ತೆ ಎನ್ನುವ ರೀತಿ ಅಧಿಕಾರಿ ಕಚೇರಿಗೆ ಮಧ್ಯಾಹ್ನ ಹೊತ್ತಿಗೆ ಬಂದಿದ್ದು, ಸ್ವಲ್ಪ ಹೊತ್ತು ಇದ್ದು ತೆರಳಿದ್ದಾರೆ.
ಗುರುವಾರ ಸಂಜೆ ಬೆಳ್ತಂಗಡಿಗೆ ತೆರಳಿ ಅಲ್ಲಿನ ಐಬಿ ಬಂಗಲೆಯಲ್ಲಿ ವಾಸ್ತವ್ಯ. ಶುಕ್ರವಾರ ಬೆಳಗ್ಗೆ 10ರಿಂದ ಸಂಜೆಯ ವರೆಗೆ ಬೆಳ್ತಂಗಡಿಯ ಐಬಿ ಬಂಗಲೆಯಲ್ಲಿ ಅಹವಾಲು ಸ್ವೀಕಾರ ಎಂದು ಪ್ರವಾಸ ಕಾರ್ಯಕ್ರಮ ನಿಗದಿಯಾಗಿದೆ. ಆದರೆ, ಈ ಬಗ್ಗೆ ಮಂಗಳೂರಿನ ಕಾಂಗ್ರೆಸ್ ಕಚೇರಿಯ ಪ್ರಮುಖ ಕಾರ್ಯಕರ್ತರಿಗೇ ಮಾಹಿತಿ ಇಲ್ಲ. ಹೀಗಾಗಿ, ಆಪ್ತ ಕಾರ್ಯದರ್ಶಿ ಅಹವಾಲು ಸ್ವೀಕಾರಕ್ಕೆ ಬರೋದಾ, ಅದರ ಹೆಸರಲ್ಲಿ ಕರಾವಳಿಗೆ ತಿರುಗಾಟಕ್ಕೆ ಬರೋದಾ ಅನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಪೂರಕ ಎನ್ನುವಂತೆ ಇದೇ ಪ್ರವಾಸ ಕಾರ್ಯಕ್ರಮದಲ್ಲಿ ಡಿ.30 ಮತ್ತು 31ರ ವರ್ಷಾಂತ್ಯದ ರಜಾ ದಿನಗಳನ್ನು ಕಳೆಯಲು ಚಿಕ್ಕಮಗಳೂರಿನ ರೆಸಾರ್ಟ್ ಬುಕ್ ಮಾಡಿದ್ದನ್ನು ನಮೂದಿಸಲಾಗಿದೆ. ರೆಸಾರ್ಟಿನಲ್ಲಿ ಯಾವುದೇ ಸರಕಾರಿ ಕಾರ್ಯಕ್ರಮ ಇರಲಾರದು. ಆದರೆ, ಸಚಿವರ ಆಪ್ತ ಕಾರ್ಯದರ್ಶಿ ಹಿದಾಯತುಲ್ಲಾ ಮಾತ್ರ ತನ್ನ ಅಧಿಕೃತ ಸರ್ಕಾರಿ ಕಾರ್ಯಕ್ರಮದಲ್ಲಿ ರೆಸಾರ್ಟ್ ವಾಸ್ತವ್ಯವನ್ನೂ ಸೇರಿಸಿಕೊಂಡಿದ್ದಾರೆ.
ಎರಡು ರಜಾ ದಿನಗಳ ಕಾರ್ಯಕ್ರಮವನ್ನು ಕಾಯ್ದಿರಿಸಲಾಗಿದೆ ಎಂದು ಪ್ರವಾಸ ಕಾರ್ಯಕ್ರಮದಲ್ಲಿ ತೋರಿಸಿದ್ದು, ಜನವರಿ 1ರ ಸೋಮವಾರ ಬೆಳಗ್ಗೆ ರಸ್ತೆ ಮೂಲಕ ಬೆಂಗಳೂರು ತೆರಳಲಿದ್ದಾರೆ. ಅಲ್ಲಿಗೆ ನಾಲ್ಕು ದಿನಗಳ ಪ್ರವಾಸ ಕಾರ್ಯಕ್ರಮ ಪೂರ್ತಿಯಾಗುತ್ತದೆ. ಒಂದೆಡೆ ಗ್ಯಾರಂಟಿ ಯೋಜನೆಯಿಂದಾಗಿ ಬರ ಪೀಡಿತ ಜಿಲ್ಲೆಗಳ ರೈತರಿಗೆ ಕೊಡುವುದಕ್ಕೂ ಸರಕಾರದಲ್ಲಿ ಹಣ ಇಲ್ಲದ ಸ್ಥಿತಿಯಿದೆ. ಇಂಥದ್ರಲ್ಲಿ ಸಚಿವರಿಗೆ ಹೊಸ ಕಾರುಗಳನ್ನು ಖರೀದಿಸುತ್ತಾರೆ. ಮತ್ತೊಂದೆಡೆ, ಅಧಿಕಾರಿಗಳು ಸರಕಾರದ ಖರ್ಚಿನಲ್ಲೇ ಹೊಸ ವರ್ಷದ ಪಾರ್ಟಿ ಮಾಡುತ್ತಾರೋ ಅನ್ನುವ ಶಂಕೆ ಮೂಡಿಸುವಂತಿದೆ ಇವರ ಪ್ರವಾಸ ಕಾರ್ಯಕ್ರಮ. ಮಂಗಳೂರಿನಲ್ಲಿ ಅಹವಾಲು ಸ್ವೀಕಾರ ಎನ್ನುವ ನೆಪದಲ್ಲಿ ಕೆಎಎಸ್ ಅಧಿಕಾರಿಯ ಆಟಾಟೋಪ ಸರ್ಕಾರಿ ದುಡ್ಡಿನಲ್ಲೇ ಬಂದು ಹೋದ, ಉಂಡೂ ಹೋದ ಎನ್ನುವಂತಾಗಿದೆಯೇ ಎನ್ನುವ ಪ್ರಶ್ನೆ ಕೇಳಿಬರುತ್ತಿದೆ.
Health Minister Dinesh Gundurao PS Hidayatullah found misusing government money in Mangalore. Headline Karnataka exposes details of resort bookings and flight tickets.
01-08-25 02:55 pm
Bangalore Correspondent
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
ಕೆಆರ್ ಐಡಿಎಲ್ ನಿಗಮವನ್ನೇ ಗುಡಿಸಿ ಹಾಕಿದ ಗುಮಾಸ್ತ !...
01-08-25 11:47 am
ಪಾಕಿಸ್ತಾನದಿಂದಲೇ ಭಾರತವನ್ನು ಸ್ಫೋಟಿಸುತ್ತೇನೆ ! ಗೋ...
31-07-25 11:20 pm
Kolar woman blood group: ಕೋಲಾರದ ಮಹಿಳೆಯಲ್ಲಿ ವಿ...
31-07-25 10:20 am
01-08-25 11:44 am
HK News Desk
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
01-08-25 11:45 am
Mangalore Correspondent
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
01-08-25 02:31 pm
HK News Desk
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am