ಬ್ರೇಕಿಂಗ್ ನ್ಯೂಸ್
29-12-23 07:52 pm Mangalore Correspondent ಕರಾವಳಿ
ಮಂಗಳೂರು, ಡಿ.29: ಮಂಗಳೂರು - ಮಡ್ಗಾಂವ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಡಿ.30ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಶುಕ್ರವಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಸಂಸದರು, ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ನಡೆಸಿದರು.
ಶನಿವಾರ ಬೆಳಗ್ಗೆ 10 ಗಂಟೆಗೆ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಔಪಚಾರಿಕ ಸಮಾರಂಭ ನಡೆಯಲಿದೆ. 11 ಗಂಟೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಂದೇ ಭಾರತ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವರು. ಈ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳು, ಸ್ಪೀಕರ್ ಯುಟಿ ಖಾದರ್, ರೈಲ್ವೇ ಅಧಿಕಾರಿಗಳು ಹಾಜರಿರಲಿದ್ದಾರೆ. ಉದ್ಘಾಟನಾ ರೈಲು ಬೆಳಗ್ಗೆ 11 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮಧ್ಯಾಹ್ನ 12.25ಕ್ಕೆ ಉಡುಪಿ, 2.52ಕ್ಕೆ ಕಾರವಾರ, ಸಂಜೆ 4.40ಕ್ಕೆ ಮಡ್ಗಾಂವ್ ತಲುಪಲಿದೆ. ಡಿ.31ರಿಂದ ಮಂಗಳವಾರ ಹೊರತುಪಡಿಸಿ ಪ್ರತಿನಿತ್ಯ ಮಂಗಳೂರು-ಮಡ್ಗಾಂವ್ ನಡುವೆ ವಂದೇ ಭಾರತ್ ರೈಲು ಸಂಚರಿಸಲಿದೆ. ಮಂಗಳೂರಿನಿಂದ ಬೆಳಗ್ಗೆ 8.30ಕ್ಕೆ ರೈಲು ಹೊರಡಲಿದ್ದು ಮಧ್ಯಾಹ್ನ 1.15ಕ್ಕೆ ಗೋವಾ ತಲುಪಲಿದೆ.
ಕಾಸರಗೋಡು ರೈಲು ವಿಸ್ತರಣೆಗೆ ಮನವಿ
ತಿರುವನಂತಪುರ- ಕಾಸರಗೋಡು ವಂದೇ ಭಾರತ್ ರೈಲನ್ನು ಮಂಗಳೂರಿಗೆ ವಿಸ್ತರಿಸುವುದು ಅಥವಾ ಕೊಚ್ಚಿನ್- ಮಂಗಳೂರು ಮಧ್ಯೆ ಹೊಸತಾಗಿ ವಂದೇ ಭಾರತ್ ರೈಲಿಗೆ ಮನವಿ ಸಲ್ಲಿಸಲಾಗಿದೆ. ಮಂಗಳೂರು- ಬೆಂಗಳೂರು ನಡುವೆ ಮಾರ್ಚ್ ಬಳಿಕ ವಂದೇ ಭಾರತ್ ಸಂಚಾರ ಸಾಧ್ಯವಾಗಲಿದೆ. ಪ್ರಸಕ್ತ ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲು ಹಳಿ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದು, ಸಕಲೇಶಪುರ ವರೆಗೆ ಕಾಮಗಾರಿ ಮಾರ್ಚ್ ವೇಳೆಗೆ ಮುಕ್ತಾಯಗೊಳ್ಳಲಿದೆ
ಎಂದು ಇದೇ ವೇಳೆ ಸಂಸದ ನಳಿನ್ ಮಾಧ್ಯಮಕ್ಕೆ ತಿಳಿಸಿದರು.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಸುಮಾರು 350 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ದ.ಕ. ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದಿಂದ ರೈಲ್ವೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ 416.98 ಕೋಟಿ ರೂ. ಮಂಜೂರಾಗಿದೆ ಎಂದು ಹೇಳಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಡಲ ಬಿಜೆಪಿ ಅಧ್ಯಕ್ಷ
ವಿಜಯ ಕುಮಾರ್ ಶೆಟ್ಟಿ, ರೈಲ್ವೇ ಪಾಲಕ್ಕಾಡ್ ವಿಭಾಗೀಯ ಅಧಿಕಾರಿ ಅರುಣ್ ಚತುರ್ವೇದಿ, ಎಡಿಆರ್‌ಎಂ ಜಯಕೃಷ್ಣ ಮತ್ತಿತರರಿದ್ದರು.
ಮಡ್ಗಾಂವ್‌ನಿಂದ ಮುಂಬೈ ವಂದೇ ಭಾರತ್ ಸಂಪರ್ಕ
ಮಂಗಳೂರು- ಮಡ್ಗಾಂವ್ ವಂದೇ ಭಾರತ್ ರೈಲಿಗೆ ಮುಂಬೈ- ಮಡ್ಗಾಂವ್ ವಂದೇ ಭಾರತ್ ರೈಲಿನ ಸಂಪರ್ಕ ಕಲ್ಪಿಸಲಾಗಿದೆ. ಮಂಗಳೂರಿನಿಂದ ಬೆಳಗ್ಗೆ 8.30ಕ್ಕೆ ಹೊರಟು ಮಧ್ಯಾಹ್ನ 1.15 ಗಂಟೆಗೆ ಮಡ್ಗಾಂವ್‌ಗೆ ತಲುಪಲಿದೆ. ಅಲ್ಲಿಂದ ಮುಂಬೈಗೆ ವಂದೇ ಭಾರತ್ ರೈಲು ಸಂಪರ್ಕ ಸಿಗಲಿದೆ. ಹಾಗಾಗಿ ಮುಂಬೈಗೆ ಪ್ರಯಾಣಿಸುವವರು ಮಂಗಳೂರಿನಿಂದ ವಂದೇ ಭಾರತ್ ರೈಲಿನ ಮೂಲಕ ಕೇವಲ 10 ಗಂಟೆಯಲ್ಲಿ ತಲುಪಲು ಸಾಧ್ಯವಿದೆ.
Mangalore Goa Vande Bharat train to be flagged off on Dec 30 by PM Modi. Member of Parliament Nalin Kumar Kateel inspected the preparations at the Mangaluru Central Railway Station on December 29, reviewing the preparations for the launch of the Mangaluru-Madgaon Vande Bharat train. He also inspected the newly constructed 4-5th platforms and the Vande Bharat Express stationed at the pit line.
28-02-25 09:33 pm
HK News Desk
B Y Vijayendra, D K Shivakumar: ರಾಜ್ಯದಲ್ಲಿ ಕ್...
28-02-25 06:17 pm
ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಸಿಐಎಸ್ಎಫ್ ಭದ್ರತಾ ಸಿಬ...
28-02-25 05:52 pm
Mangalore Shiradi Ghat: ಶಿರಾಡಿ ಘಾಟ್ ಹೆದ್ದಾರಿಯ...
28-02-25 11:51 am
Honnavara Fire: ಹೊನ್ನಾವರದಲ್ಲಿ ಗುಜರಿ ಗೋಡೌನ್ಗೆ...
27-02-25 05:50 pm
28-02-25 08:11 pm
HK News Desk
ಪಾಕಿಸ್ತಾನ ಮದ್ರಸಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ;...
28-02-25 07:46 pm
Sudan Plane Crash: ಸುಡಾನಲ್ಲಿ ಹೆಚ್ಚುತ್ತಿರುವ ಅಂ...
26-02-25 05:38 pm
Corruption, Amit Shah, MK Stalin: ಕ್ಷೇತ್ರ ಪುನ...
26-02-25 05:11 pm
CBI raid, Gain Bitcoin: 6,600 ಕೋಟಿ ರೂ. ಕ್ರಿಸ್...
26-02-25 12:47 pm
28-02-25 10:15 pm
Mangalore Correspondent
Sharan Pumpwell, student missing, Farangipete...
28-02-25 06:13 pm
Mangalore Heat Wave: ಕರಾವಳಿಗೆ ಇನ್ನೂ ನಾಲ್ಕೈದು...
27-02-25 11:07 pm
Kotekar Robbey case, Bhaskar Belchada, Saheb...
27-02-25 10:48 pm
Talat Gang Mangalore, Ankola Robbery case: ಅಂ...
27-02-25 10:31 pm
28-02-25 02:37 pm
HK News Desk
Bidar Murder, Crime: ಬೀದರ್ ; ಕುಡಿದು ಬಂದು ಕಿರು...
26-02-25 10:48 pm
Sirsi Crime, stabbing: ಶಿವರಾತ್ರಿ ಹಬ್ಬಕ್ಕೆ ಮನೆ...
26-02-25 01:27 pm
Urwa Police, Mangalore Crime, online Fraud: ಕ...
25-02-25 08:10 pm
Mangalore, Kotekar bank robbery, Bhaskar Belc...
25-02-25 05:18 pm