ಬ್ರೇಕಿಂಗ್ ನ್ಯೂಸ್
19-11-20 04:59 pm Mangaluru Correspondent ಕರಾವಳಿ
ಮಂಗಳೂರು, ನವೆಂಬರ್ 19: ಐಎಂಎ ಜುವೆಲ್ಲರಿಯ ಮಾದರಿಯಲ್ಲೇ ಮಂಗಳೂರು ಮೂಲದ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಹೆಸರಲ್ಲಿ ಭಾರೀ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಮಂಗಳೂರು, ಉಡುಪಿ, ಮುಂಬೈನಲ್ಲಿ ಶಾಖೆಗಳನ್ನು ಹೊಂದಿರುವ ಸೊಸೈಟಿ ಸಾವಿರಾರು ಮಂದಿಗೆ ದೋಖಾ ಮಾಡಿದ್ದು, 350 ಕೋಟಿಗೂ ಹೆಚ್ಚು ವಂಚನೆ ಆಗಿರುವ ಬಗ್ಗೆ ಶಂಕೆ ಮೂಡಿದೆ.
ಮಲೈಕಾ ಹೆಸರಲ್ಲಿ 20 ವರ್ಷಗಳ ಹಿಂದೆ ಮಂಗಳೂರು, ಉಡುಪಿಯಲ್ಲಿ ಗೃಹೋಪಕರಣಗಳ ಮಳಿಗೆ ಆರಂಭಿಸಲಾಗಿತ್ತು. ಆನಂತರ ಇದರ ಶಾಖೆಗಳು ಮುಂಬೈ, ಗೋವಾ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದಂತೆ ಬೃಹತ್ ಕಂಪನಿಯಾಗಿ ಬೆಳೆದಿತ್ತು. ಈ ನಡುವೆ, ಹತ್ತು ವರ್ಷಗಳ ಹಿಂದೆ ಮಲೈಕಾ ಹೆಸರಲ್ಲಿ ಸೊಸೈಟಿ ಕೂಡ ಆರಂಭಿಸಲಾಗಿತ್ತು. ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಎಂಬ ಹೆಸರಲ್ಲಿ ಗ್ರಾಹಕರನ್ನು ಸೆಳೆಯುವ ಯತ್ನ ನಡೆದಿತ್ತು. ಹಿರಿಯ ನಾಗರಿಕರಿಗೆ ಆಕರ್ಷಕ ಬಡ್ಡಿ ದರ ನೀಡುತ್ತಿದ್ದುದರಿಂದ ಬಹುಬೇಗನೆ ಸಾವಿರಾರು ಗ್ರಾಹಕರು ಹಣ ಹೂಡಿಕೆ ಮಾಡಿದ್ದರು. ಬಹುತೇಕ ರಿಟೈರ್ ಆದವರು ತಮ್ಮ ಹಣವನ್ನು ಸೊಸೈಟಿಯಲ್ಲಿ ಬಡ್ಡಿ ಆಸೆಗೆ ಕೂಡಿಡುತ್ತಿದ್ದರು. 95 ಶೇಕಡಾ ಕೆಥೋಲಿಕ್ ಕ್ರೈಸ್ತರು ಇದರ ಗ್ರಾಹಕರಾಗಿದ್ದು, ತಮ್ಮ ಕೋಟ್ಯಂತರ ರೂಪಾಯಿ ಹಣವನ್ನು ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ತೊಕ್ಕೊಟ್ಟು, ಬಂಟ್ವಾಳ, ಪುತ್ತೂರು, ಸುಳ್ಯ, ವಿಟ್ಲ, ಮೂಡುಬಿದ್ರೆ ಹೀಗೆ ಎಲ್ಲೆಡೆ ಇಲೆಕ್ಟ್ರಾನಿಕ್ ಶಾಪ್ ಮತ್ತು ಕೋ ಆಪರೇಟಿವ್ ಸೊಸೈಟಿ ಶಾಖೆಗಳಿವೆ. ಉಡುಪಿ, ಗೋವಾ, ಮುಂಬೈನಲ್ಲಿಯೂ ಶಾಖೆಗಳನ್ನು ಹೊಂದಿದ್ದು, ಸಾವಿರಾರು ಗ್ರಾಹಕರು ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನ ಬೆಂದೂರು ವೆಲ್ ನಲ್ಲಿ ಸೊಸೈಟಿ ಪ್ರಧಾನ ಕಚೇರಿಯನ್ನು ಹೊಂದಿದ್ದು ದಕ್ಷಿಣ ಕನ್ನಡ ಜಿಲ್ಲೆ ಒಂದರಲ್ಲೇ 800ಕ್ಕೂ ಹೆಚ್ಚು ಗ್ರಾಹಕರಿದ್ದಾರೆ.
ಈ ನಡುವೆ, ಕಳೆದ ಮಾರ್ಚ್ ತಿಂಗಳಿನಿಂದ ಕೋ ಆಪರೇಟಿವ್ ಸೊಸೈಟಿಯ ಎಲ್ಲ ಕಚೇರಿಗಳಲ್ಲಿ ವ್ಯವಹಾರ ಸ್ಥಗಿತವಾಗಿತ್ತು. ಕೆಲವು ಗ್ರಾಹಕರು ಮಾರ್ಚ್ ನಲ್ಲಿಯೇ ಕಚೇರಿಗೆ ಬಂದು ಹೋಗುತ್ತಿದ್ದರು. ಡಿಪಾಸಿಟ್ ಇಟ್ಟಿದ್ದು ಮೆಚ್ಯುರಿಟಿ ಬಂದಿದ್ದ ಹಣವನ್ನೂ ಹಿಂತಿರುಗಿಸುತ್ತಿರಲಿಲ್ಲ. ಇದರಿಂದ ಗ್ರಾಹಕರು ಸೊಸೈಟಿ ಮೇಲೆ ನಂಬಿಕೆ ಕಳಕೊಂಡಿದ್ದರು. ಮುಂಬೈ ನಗರದ ಮೀರಾ ರೋಡ್ ನಲ್ಲಿದ್ದ ಶಾಖೆಯಲ್ಲಿ ಕೂಡ ಇದೇ ರೀತಿ ಆಗಿತ್ತು. ಒಬ್ಬರು ಗ್ರಾಹಕರು ಅಕ್ಟೋಬರ್ 2ರಂದು ಮೀರಾ ರೋಡ್ ಶಾಖೆಯ ವಿರುದ್ಧ ಪೊಲೀಸ್ ಮೆಟ್ಟಿಲೇರಿದ್ದರು. ಸೊಸೈಟಿ ವಿರುದ್ಧ ದಾಖಲಾದ ಮೊದಲ ಪ್ರಕರಣವದು. ಮುಂಬೈನಲ್ಲಿ 50ಕ್ಕೂ ಹೆಚ್ಚು ಮಂದಿ ದೂರು ದಾಖಲಿಸಿದ್ದಾರೆ.
ಮುಂಬೈನಲ್ಲಿ ಫ್ರಾಡ್ ಆಗಿರುವುದನ್ನು ವಿಚಾರ ತಿಳಿದ ಗ್ರಾಹಕರು, ಮಂಗಳೂರಿನಲ್ಲೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಂಗಳೂರಿನ ಪಾಂಡೇಶ್ವರದಲ್ಲಿರುವ ನಾರ್ಕೋಟಿಕ್ ಮತ್ತು ಆರ್ಥಿಕ ಅಪರಾಧಗಳ ಠಾಣೆಯಲ್ಲಿ 150ಕ್ಕೂ ಹೆಚ್ಚು ದೂರುಗಳು ಬಂದಿದ್ದು, ಮಲೈಕಾ ಸೊಸೈಟಿಯ ನಿರ್ದೇಶಕರು ಮತ್ತು ಅಧ್ಯಕ್ಷ ಗಿಲ್ಬರ್ಟ್ ಬ್ಯಾಪ್ಟಿಸ್ಟ್ ಸೇರಿ 12 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೇ ವೇಳೆ, ಮುಂಬೈನಲ್ಲಿ ತಲೆಮರೆಸಿಕೊಂಡ ಗಿಲ್ಬರ್ಟ್ ಬ್ಯಾಪ್ಟಿಸ್ಟ್ ಅಲ್ಲಿನ ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ಹಾಕಿದ್ದು, ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಸಂಸ್ಥೆಯ ಸ್ಥಾಪಕ ಗಿಲ್ಬರ್ಟ್ ಬ್ಯಾಪ್ಟಿಸ್ಟ್ ಮತ್ತು ಆತನ ಪತ್ನಿ ಮರ್ಸಿಲಿನ್ ಬ್ಯಾಪ್ಟಿಸ್ಟ್ ಮುಖ್ಯ ಆರೋಪಿಗಳಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಇದ್ದ ಮಲೈಕಾ ಶೋರೂಂ ಹಾಗೂ ಕೋ ಆಪರೇಟಿವ್ ಸೊಸೈಟಿಗಳು ಬಾಗಿಲು ಹಾಕ್ಕೊಂಡಿವೆ.
‘ಕಳೆದ ಮಾರ್ಚ್ ತಿಂಗಳಿನಿಂದ ಬೆಂದೂರ್ ವೆಲ್ ನಲ್ಲಿರುವ ಸೊಸೈಟಿ ಕಚೇರಿಗೆ ಠೇವಣಿ ಹಣ ಪಡೆಯಲು ಹೋಗಿದ್ದೆ. ನಾಲ್ಕು ವರ್ಷಗಳ ಹಿಂದೆ ಫಿಕ್ಸೆಡ್ ಇಟ್ಟಿದ್ದ ಹಣ ಒಟ್ಟು 8.5 ಲಕ್ಷ ನನಗೆ ಬರಬೇಕು. ಆದರೆ, ಕಚೇರಿಯಲ್ಲಿ ಅಧಿಕಾರಿಗಳು ಇರುತ್ತಿರಲಿಲ್ಲ. ಸೆಪ್ಟಂಬರ್ ತಿಂಗಳಿನಲ್ಲಿ ಕೊನೆಯ ಬಾರಿಗೆ ಕಚೇರಿ ಓಪನ್ ಇತ್ತು. ಆದರೆ, ಗುಮಾಸ್ತ ಸಿಬಂದಿ ಮಾತ್ರ ಇರುತ್ತಿದ್ದರು. ಬ್ಯಾಂಕಿಗೆ ಬಂದ ಗ್ರಾಹಕರು ಪೆಚ್ಚು ಮೋರೆ ಹಾಕ್ಕೊಂಡು ಹಿಂತಿರುಗುತ್ತಿದ್ದರು’ ಎಂದು ದೂರುದಾರ ವ್ಯಕ್ತಿಯೊಬ್ಬರು ಹೇಳುತ್ತಾರೆ. ಅಲ್ಲದೆ, ಮಂಗಳೂರಿನಲ್ಲಿ ಅಂದಾಜು 80 ಕೋಟಿಗೂ ಹೆಚ್ಚು ವಂಚನೆ ಆಗಿದೆ ಎಂದು ಹೇಳುತ್ತಾರೆ.
ಮಂಗಳೂರಿನಲ್ಲಿ ಕಳೆದ ಒಂದು ತಿಂಗಳಲ್ಲಿ 150ಕ್ಕೂ ಹೆಚ್ಚು ದೂರುಗಳು ದಾಖಲಾದರೂ, ಅದನ್ನು ಒಂದೇ ಎಫ್ಐಆರ್ ನಲ್ಲಿ ತಂದಿಟ್ಟು ಪೊಲೀಸರು ಕಾಲ ತಳ್ಳುತ್ತಿದ್ದಾರೆ. ಮಂಗಳೂರಿನ ಸೊಸೈಟಿ ಕಚೇರಿಯಲ್ಲಿದ್ದ ಇಬ್ಬರು ಲೇಡಿ ಮ್ಯಾನೇಜರ್ ಗಳು ಕೂಡ ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆ ಮಾಡುವ ಕೆಲಸವನ್ನೂ ಪೊಲೀಸರು ಮಾಡಿಲ್ಲ. ಪ್ರತಿ ದಿನವೂ ಸೊಸೈಟಿ ಗ್ರಾಹಕರು ಬರುತ್ತಿದ್ದು ದೂರು ನೀಡುತ್ತಿದ್ದಾರೆ. 90 ಶೇಕಡಾ ಗ್ರಾಹಕರು ಹಿರಿಯ ನಾಗರಿಕರೇ ಆಗಿರುವುದರಿಂದ ದೂರು ನೀಡುವುದಕ್ಕೂ ವಿಳಂಬವಾಗುತ್ತಿದೆ.
ಪ್ರಭಾವಿ ವ್ಯಕ್ತಿಯ ರಕ್ಷಣೆಗೆ ಯತ್ನ ?
ಮೂಲತಃ ಮಂಗಳೂರಿನವರೇ ಆಗಿರುವ ಗಿಲ್ಬರ್ಟ್ ಬ್ಯಾಪ್ಟಿಸ್ಟ್ ದಂಪತಿ ಮಂಗಳೂರಿನಲ್ಲಿ ಪ್ರಭಾವಿ ವ್ಯಕ್ತಿ. ಮುಂಬೈ, ಗೋವಾದಲ್ಲಿ ವ್ಯವಹಾರ ಇದ್ದರೂ, ಮಂಗಳೂರಿನಿಂದ ಪ್ರಕಟವಾಗುವ ಮಾಧ್ಯಮಗಳಿಗೆ ಜಾಹೀರಾತು ನೀಡುತ್ತಿದ್ದುದರಿಂದ ಆತನ ವಿರುದ್ಧ ಪ್ರಕರಣ ದಾಖಲಾಗಿ ತಿಂಗಳು ಕಳೆದರೂ ಸುದ್ದಿ ಪ್ರಕಟವಾಗಿಲ್ಲ ಎಂದು ನೋವು ತೋಡಿಕೊಳ್ಳುತ್ತಾರೆ ಗ್ರಾಹಕರು. ಅಲ್ಲದೆ, ಗಿಲ್ಬರ್ಟ್ ಬ್ಯಾಪ್ಟಿಸ್ಟ್ ಗೆ ರಾಜಕೀಯ ನಾಯಕರ ಬೆಂಬಲವೂ ಇದ್ದು, ನೂರಾರು ಮಂದಿಗೆ ಮೋಸ ಆಗಿ ಆರೋಪಿ ನಾಪತ್ತೆ ಆಗೋ ವರೆಗೂ ಕಾಲತಳ್ಳುತ್ತಾರೆಯೇ ಅನ್ನುವ ಅನುಮಾನ ಹುಟ್ಟಿದೆ. ಕಾಸರಗೋಡಿನಲ್ಲಿ ಫ್ಯಾಷನ್ ಗೋಲ್ಡ್ ಹೆಸರಲ್ಲಿ ಮಂಜೇಶ್ವರ ಶಾಸಕ ಕಮರುದ್ದೀನ್ ನೂರಾರು ಮಂದಿಗೆ ವಂಚನೆ ಎಸಗಿದ ಪ್ರಕರಣದಲ್ಲಿ 115ಕ್ಕೂ ಹೆಚ್ಚು ಮಂದಿ ದೂರು ದಾಖಲಿಸಿದ್ದಾರೆ. ವಿವಿಧ ಠಾಣೆಗಳಲ್ಲಿ ಕೇಸು ದಾಖಲಾಗಿದ್ದು ಇತ್ತೀಚೆಗೆ ಶಾಸಕನ ಬಂಧನ ಆಗಿತ್ತು. ಆದರೆ, ಮಂಗಳೂರಿನ ಪ್ರಕರಣದಲ್ಲಿ ಆಯಾ ಪ್ರದೇಶದಲ್ಲಿ ಕೇಸು ದಾಖಲಿಸಲು ಅವಕಾಶ ಇದ್ದರೂ, ಪುತ್ತೂರು, ಬಂಟ್ವಾಳದ ಮಂದಿ ಮಂಗಳೂರಿಗೇ ಬರಬೇಕೆಂದು ಹೇಳುತ್ತಾರಂತೆ ಪೊಲೀಸರು !
Video:
Malaika Home Appliances which also runs Malika Cooperative society in Mangalore has slapped with a Cheating case of 350 crores in Mumbai, Mangalore and Udupi. The owner Gilbert Baptist and wife Marceline Baptist are said to be absconding.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm