Mangalore Rain; ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ; ಕರಾವಳಿ, ಮಲೆನಾಡಿನಲ್ಲಿ ನಾಲ್ಕು ದಿನ ಮಳೆ ಮುನ್ಸೂಚನೆ, ದ.ಕ.ಕ್ಕೆ ಯೆಲ್ಲೋ ಎಲರ್ಟ್  

04-01-24 02:21 pm       Mangaluru Correspondent   ಕರಾವಳಿ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ಚಂಡಮಾರುತ ಮಾದರಿಯ ವಾತಾವರಣ ಉಂಟಾಗಿದ್ದು, ಇದರ ಪರಿಣಾಮ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಇನ್ನೂ ನಾಲ್ಕೈದು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮಂಗಳೂರು, ಜ.4: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ಚಂಡಮಾರುತ ಮಾದರಿಯ ವಾತಾವರಣ ಉಂಟಾಗಿದ್ದು, ಇದರ ಪರಿಣಾಮ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಇನ್ನೂ ನಾಲ್ಕೈದು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಅರಬ್ಬೀ ಸಮುದ್ರ ಮತ್ತು ಉತ್ತರ ಕೇರಳ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದಾಗಿ ಜನವರಿ 4ರ ಬೆಳಗ್ಗೆ 8.30ರಿಂದ ಐದು ದಿನಗಳ ವರೆಗೆ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ಚಾಮರಾಜನಗರ, ಶಿವಮೊಗ್ಗ, ಮೈಸೂರು, ಮಂಡ್ಯ ಜಿಲ್ಲೆಯ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇದರತೆ, ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ಜನವರಿ 5 ಮತ್ತು 6ರಂದು ಯೆಲ್ಲೋ ಎಲರ್ಟ್ ನೀಡಲಾಗಿದೆ.

ರಾಜ್ಯದ ಇತರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾರಣ ಇರಲಿದ್ದು, ಆಸುಪಾಸಿನ ಕೆಲವೆಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕೇರಳದ ಕಾಸರಗೋಡು, ಕಣ್ಣೂರು ಜಿಲ್ಲೆಯಲ್ಲೂ ಮಳೆಯಾಗುವ ಸಾಧ್ಯತೆಯಿದೆ. ಜನವರಿ 4ರ ಗುರುವಾರ ಬೆಳಗ್ಗಿನಿಂದ ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಬುಧವಾರ ಬೆಳ್ತಂಗಡಿ, ಮೂಡುಬಿದ್ರೆ ಭಾಗದಲ್ಲಿ ಮಳೆಯಾಗಿತ್ತು. ಜಿಟಿ ಜಿಟಿ ಮಳೆಯಿಂದಾಗಿ ಕರಾವಳಿ ಭಾಗದಲ್ಲಿ ವಾತಾವರಣ ಕೂಲ್ ಆಗಿದ್ದು, ಬಿಸಿಲಿನ ಬೇಗೆ ಮರೆಯಾಗಿದೆ.

Dakshina Kannada, Udupi and Uttara Kannada districts recorded an average 5.5 mm rainfall in the last 24 hours ending at 8.30 a.m. on January 4, against the normal average rainfall of 0.1 mm for the period