ಬ್ರೇಕಿಂಗ್ ನ್ಯೂಸ್
06-01-24 10:46 am Mangalore Correspondent ಕರಾವಳಿ
ಉಳ್ಳಾಲ, ಜ.6: ಕನ್ನಡ ಮತ್ತು ತುಳು ಭಾಷೆಯಲ್ಲಿ ಪ್ರಖರ ಪಾಂಡಿತ್ಯ, ಜನಪದ ಸಂಶೋಧನೆಗಾಗಿ ತನ್ನನ್ನು ಸಮರ್ಪಿಸಿಕೊಂಡಿದ್ದ ಕರಾವಳಿ ಕಂಡ ಮೇರು ಸಾಹಿತಿ, ಹಿರಿಯ ವಿದ್ವಾಂಸ, ಯಕ್ಷಗಾನ, ಜಾನಪದ, ಭೂತಾರಾಧನೆ ಕ್ಷೇತ್ರದಲ್ಲಿ ಅಗಾಧ ಸಂಶೋಧನಾ ಸಾಹಿತ್ಯಗಳ ಜನಕ, ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕೃತಿಗಳನ್ನು ಹೊರತಂದು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಅನನ್ಯ ಸಾಧಕ ಪ್ರೊ. ಅಮೃತ ಸೋಮೇಶ್ವರ(88) ಇನ್ನಿಲ್ಲ. ವಯೋಸಹಜ ಅಸೌಖ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಉಳ್ಳಾಲದ ಸೋಮೇಶ್ವರದ ನಿವಾಸ "ಒಲುಮೆ"ಯಲ್ಲಿ ನಿಧನ ಹೊಂದಿದ್ದಾರೆ.
ಪ್ರಖ್ಯಾತ ವಿಮರ್ಶಕ, ಜ್ಞಾನಪೀಠ ಪ್ರಶಸ್ತಿಗೆ ಅರ್ಹವಾಗಿದ್ದ ಸಾಹಿತಿ, ನಿಷ್ಠುರವಾದಿಯಾಗಿದ್ದ ಅಮೃತರು
ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಸಾಹಿತ್ಯ, ಕವನ, ಸಣ್ಣ ಕಥೆ, ಕಾದಂಬರಿ, ನಾಟಕ, ವ್ಯಕ್ತಿ ಚಿತ್ರಣ, ಜನಾಂಗದ ಪರಿಚಯ, ಸಾಹಿತ್ಯ ಪರಿಚಯ, ರೇಡಿಯೋ ರೂಪಕ, ನೃತ್ಯರೂಪಕ, ಸ್ವತಂತ್ರ ಗಾದೆ, ಶಬ್ಧ ಕೋಶ, ಸಂಸ್ಕೃತಿ ಚಿಂತನ, ವಚನ ಸಾಹಿತ್ಯ, ಕುಚೋದ್ಯ ಕೋಶ, ಅಂಕಣ ಲೇಖನ, ನವಸಾಕ್ಷರರಿಗೆ ಸಾಹಿತ್ಯ, ಯಕ್ಷಗಾನ ವಿಚಾರ ವಿಮರ್ಶೆ, ಸಂಪಾದನೆ, ಹೀಗೆ ಹತ್ತು ಹಲವು ಪ್ರಕಾರದಲ್ಲಿ ಕೃತಿಗಳನ್ನು ಹೊರತಂದಿದ್ದರು. ತುಳುವಿನಲ್ಲಿ ಕವನ ಸಂಗ್ರಹ, ಪಾಡ್ದನ ಸಂಗ್ರಹ, ನಾಟಕ, ಅನುವಾದಿತ ಕಾವ್ಯ, ನೃತ್ಯ ರೂಪಕ, ರೇಡಿಯೋ ರೂಪಕ, ಅನುವಾದಿತ ನಾಟಕ, ತುಳು ಜಾನಪದ ಕುರಿತಾದ ಸಂಶೋಧನೆ, ಸ್ವತಂತ್ರ ಗಾದೆ, ಭಕ್ತಿಗೀತೆ, ಭಾವಗೀತೆಗಳ ಕೃತಿಗಳನ್ನು ಹೊರತಂದಿದ್ದಾರೆ.
ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರು ತೊಡಗಿಸಿಕೊಂಡಿದ್ದ ಸಾಹಿತ್ಯ, ಸಂಸ್ಕೃತಿ, ಕಲೆ, ವಿಜ್ಞಾನ ಹೀಗೆ ಹಲವು ವಿಭಾಗದ ವೈವಿಧ್ಯಮಯ ಚಟುವಟಿಕೆ ಮತ್ತು ಕೃತಿ ರಚನಾಕಾರ್ಯದ ಉತ್ತರಾಧಿಕಾರಿ ಎಂಬಂತೆ ಸಾಹಿತ್ಯ ಕೃಷಿ ಮಾಡಿದ ಅಮೃತ ಸೋಮೇಶ್ವರರು ಸಾವಿರಾರು ಶಿಷ್ಯ ಸಮುದಾಯದ ಮೆಚ್ಚುಗೆ ಪಡೆದ ಶಿಸ್ತಿನ ಪ್ರಾಧ್ಯಾಪಕರು. ನೂರಾರು ಮಂದಿ ಕಲೆ, ಸಾಹಿತ್ಯ, ಸಂಶೋಧನಾಸಕ್ತರಿಗೆ ಸದಾ ಕಾಲ ಪ್ರೇರಕರು, ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದರು. ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಸುದೀರ್ಘ ಕಾಲ ಸಾಹಿತ್ಯ ಕೃಷಿ ಮಾಡಿ ನಾಡಿನ ಕೀರ್ತಿ ಹೆಚ್ಚಿಸಿದ ಅಮೃತರನ್ನು ಮಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೨೦ ನೇ ಸಾಲಿನ "ಗೌರವಶ್ರೀ" ಪ್ರಶಸ್ತಿ, ಮಣಿಪಾಲ ಅಕಾಡೆಮಿಯ ಮಾಹೆ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಯಿಂದ ಸಂಘ ಸಂಸ್ಥೆಗಳ ಸನ್ಮಾನದಿಂದ ಪುರಸ್ಕೃತರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೨೦ ನೇ ಸಾಲಿನ "ಗೌರವಶ್ರೀ" ಪ್ರಶಸ್ತಿಯನ್ನು ಅವರ 86ನೇ ಹುಟ್ಟುದಿನದಂದು ಅವರ ಮನೆಯಲ್ಲಿಯೇ ಪ್ರದಾನ ಮಾಡಲಾಗಿತ್ತು.
ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ರಚನೆಯ "ಮಾನವತೆ ಗೆದ್ದಾಗ" ಎಂಬ ಕೃತಿಗೆ ನಿದರ್ಶನವಾಗಿರುವ ಅವರು ಸುದೀರ್ಘ ಸಾಹಿತ್ಯದ ಜೀವನದಲ್ಲಿ ಅಮೃತತ್ವವನ್ನು ಪ್ರಾಪ್ತಿಸಿದ ಅವರ ಜೀವನ ಶೈಲಿ ಎಲ್ಲರಿಗೂ ಮಾದರಿಯಾಗಿತ್ತು.
ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅಕಾಡೆಮಿ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅವರ ಮನೆಯಲ್ಲೇ ನಡೆಯುತ್ತಿತ್ತು.
ಪ್ರತಿಯೊಂದು ಪ್ರಶಸ್ತಿ ಸಿಕ್ಕಾಗಲೂ ನನ್ನ ಪಾಡಿಗೆ ನಾನು ಸಾಹಿತ್ಯ ಸೇವೆ ಮಾಡಿಕೊಂಡು ಬಂದಿದ್ದೇನೆ. ಆಶೆ ,ಆಕಾಂಕ್ಷೆ ಇಲ್ಲದೆ ನನ್ನ ಇತಿ, ಮಿತಿಯಲ್ಲಿ ಕೆಲಸ ಮಾಡಿದ್ದೇನೆ ಎಂದು ಪ್ರೊ. ಅಮೃತರು ಹೇಳುತ್ತಿದ್ದರು. ಏಳು ತುಳು ನಾಟಕಗಳನ್ನು ಬರೆದಿರುವ ಸೋಮೇಶ್ವರ್ ಅವರ 'ತಂಬಿಲಾ' ಮತ್ತು 'ರಂಗಿತಾ' ಪ್ರಮುಖ ಕಾವ್ಯ ಸಂಕಲನಗಳು. ಮನೆ ಭಾಷೆ ಮಲಯಾಳಂ ಆಗಿದ್ದರೂ ಕನ್ನಡ, ತುಳು ಸಾಹಿತ್ಯದಲ್ಲಿ ಕೃಷಿ ಮಾಡಿದ್ದಲ್ಲದೆ, ಕನ್ನಡದ ಪ್ರಾಧ್ಯಾಪಕರಾಗಿ ಆಗಿ ಸೇವೆ ಸಲ್ಲಿಸಿದ್ದರು.
ಅಮೃತ ಸೋಮೇಶ್ವರರು ಪತ್ನಿ ನರ್ಮದಾ, ಮಕ್ಕಳಾದ ಚೇತನ್ ಸೋಮೇಶ್ವರ, ಜೀವನ್ ಸೋಮೇಶ್ವರ, ಸೊಸೆಯಂದಿರಾದ ರಾಜೇಶ್ವರಿ, ಸತ್ಯ ಜೀವನ್, ಮೊಮ್ಮಕ್ಕಳಾದ ಸೃಜನ್ ಸೋಮೇಶ್ವರ ಹಾಗೂ ಸೃಷ್ಟಿ ಸೋಮೇಶ್ವರ ಸೇರಿ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ. ಸೋಮೇಶ್ವರ ಪುರಸಭೆ ಕಚೇರಿ ಬಳಿಯ ಅವರ ಸ್ವಗೃಹದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ನಾಳೆ ಅಂತ್ಯ ಕ್ರಿಯೆ ನಡೆಯಲಿದೆ.
renowned Kannada Tulu litterateur Prof. Amruth Someshwar passes away at 88 due to illness at his residence in Someshwar.
16-01-25 05:30 pm
HK News Desk
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
16-01-25 09:01 pm
HK News Desk
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
16-01-25 10:12 pm
Mangalore Correspondent
Mangalore News, Shaheen death: ಶಟ್ಲ್ ಆಡುತ್ತಿದ...
16-01-25 03:54 pm
Mangalore, MP Brijesh Chowta: ಪಾಕಿಸ್ತಾನಕ್ಕೆ ಜ...
16-01-25 12:58 pm
Udupi Yakshagana News, Police ಅನುಮತಿ ಇಲ್ಲದೆ ರ...
15-01-25 10:47 pm
Banner, Nalin Kumar Kateel, D V Sadananda Gow...
15-01-25 08:01 pm
16-01-25 03:10 pm
HK News Desk
Fake Stock Market scam, Mangalore, Police: ನಕ...
15-01-25 11:06 pm
Kerala rape News: ಇನ್ಸ್ಟಾಗ್ರಾಂನಲ್ಲಿ ಪರಿಚಯ, ರ...
14-01-25 10:40 pm
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm