ಬ್ರೇಕಿಂಗ್ ನ್ಯೂಸ್
07-01-24 05:34 pm Giridhar Shetty, Mangaluru ಕರಾವಳಿ
ಮಂಗಳೂರು, ಜ.7 ರಾಜ್ಯದಲ್ಲಿ ಈ ಬಾರಿ ಕನಿಷ್ಠ ಹತ್ತು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ಪಣ ತೊಟ್ಟಿದೆ. ಇದಕ್ಕಾಗಿ ಪಕ್ಷ ಮತ್ತು ಕಾರ್ಯಕರ್ತರನ್ನು ರೆಡಿಯಾಗಿಸಲು ನಾನಾ ರೀತಿಯ ಕಸರತ್ತು ನಡೆಸಿದೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 33 ವರ್ಷಗಳಿಂದ ಲೋಕಸಭೆ ಸ್ಥಾನ ಗೆಲ್ಲದ ಕಾಂಗ್ರೆಸ್ ಈ ಬಾರಿ ಚುನಾವಣೆಗೂ ಮೊದಲೇ ಜಾತಿ ಸಮೀಕರಣಕ್ಕೆ ಮುಂದಾಗಿದೆ. ಅತಿ ಹೆಚ್ಚು ಮತಗಳಿರುವ ಬಿಲ್ಲವರನ್ನು ಲೋಕಸಭೆ ಅಭ್ಯರ್ಥಿಯಾಗಿಸಿ, ಬಂಟ ಸಮುದಾಯದ ವ್ಯಕ್ತಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಕೊಡಿಸುವ ಚಿಂತನೆಯಲ್ಲಿದೆ.
ಹೈಕಮಾಂಡ್ ಮಟ್ಟದ ನಾಯಕರು ಈ ರೀತಿಯ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು ಇದು ಚಾಲ್ತಿಗೆ ಬಂದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಏರಲಿದ್ದಾರೆ ಎಂದು ಹೇಳಲಾಗುತ್ತಿದ್ದ ವಿನಯ ಕುಮಾರ್ ಸೊರಕೆ ಬಿಲ್ಲವ ಕೋಟಾದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲಿದ್ದಾರೆ. ಇದಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸಿಗೆ ಗೌಡ ಜನಾಂಗದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿಸಿ ಅವರ ಮತಗಳನ್ನು ಕ್ರೋಡೀಕರಿಸುವ ಆಲೋಚನೆಯಲ್ಲಿ ನಾಯಕರಿದ್ದಾರೆ. ಈ ಲೆಕ್ಕಾಚಾರದಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭರತ್ ಮುಂಡೋಡಿ, ಧನಂಜಯ ಅಡ್ಪಂಗಾಯ ಹೆಸರು ಕೇಳಿಬರುತ್ತಿದೆ. ಮಹಿಳಾ ಕೋಟಾದಲ್ಲಿ ಜಿಪಂ ಸದಸ್ಯೆ ಮಮತಾ ಗಟ್ಟಿ ಹೆಸರೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದೆ.
ಇತ್ತೀಚೆಗೆ ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಸಚಿವ ಮಧು ಬಂಗಾರಪ್ಪ ಮಂಗಳೂರಿನಲ್ಲಿ ಸಭೆ ನಡೆಸಿದ್ದಾಗ ರಮಾನಾಥ ರೈ ಅವರನ್ನೇ ಕಣಕ್ಕಿಳಿಸಬೇಕೆಂದು ಕಾರ್ಯಕರ್ತರ ಕಡೆಯಿಂದ ಆಗ್ರಹ ಬಂದಿತ್ತು. ಹಾಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪದ್ಮರಾಜ್ ರಾಮಯ್ಯ ಹೆಸರೂ ಮುನ್ನೆಲೆಗೆ ಬಂದಿತ್ತು. ಆದರೆ ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಸಿಎಂ ಸಿದ್ದರಾಮಯ್ಯ ಮೂಲಕ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ ಎನ್ನುವ ಮಾತುಗಳಿದ್ದವು. ಸದ್ಯದ ಬೆಳವಣಿಗೆ ನೋಡಿದರೆ, ರಮಾನಾಥ ರೈ ಅವರನ್ನು ಪಕ್ಷದಲ್ಲಿ ಕಾರ್ಯಾಧ್ಯಕ್ಷ ಸ್ಥಾನ ನೀಡಿ ಸುಮ್ಮನಾಗಿಸುವ ಯತ್ನ ನಡೆದಿದೆ. ಬಿಲ್ಲವ ಅಭ್ಯರ್ಥಿಯಾಗಿ ಸೊರಕೆ ಅವರಿಗೆ ಕೊನೆಯ ಚಾನ್ಸ್ ನೀಡಲು ಹೈಕಮಾಂಡ್ ಮಟ್ಟದ ನಾಯಕರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ನಾಲ್ಕು ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಕಂಡಿದ್ದ ಜನಾರ್ದನ ಪೂಜಾರಿಯವರು ಬಿಲ್ಲವರೇ ಆಗಿದ್ದರು ಅನ್ನುವ ಕಾರಣಕ್ಕೆ ಅದೇ ಸಮುದಾಯಕ್ಕೆ ಮನ್ನಣೆ ನೀಡಬೇಕು ಎನ್ನುವುದು ಕೆಲವರ ವಾದ.
ಉಡುಪಿಗೆ ಅಂಶುಮಂತ್ ಗೌಡ ಹೊಸಮುಖ
ಹೊಸ ಬೆಳವಣಿಗೆಯಲ್ಲಿ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಡಾ.ಅಂಶುಮಂತ್ ಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಅಂಶುಮಂತ್ ಗೌಡ ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದು, ಪ್ರಭಾವಿ ಮುಖಂಡರಾಗಿ ಬೆಳೆದಿದ್ದಾರೆ. ಬಿಜೆಪಿ ಪ್ರಾಬಲ್ಯದ ಚಿಕ್ಕಮಗಳೂರಿನಲ್ಲಿ ಅಂಶುಮಂತ್ ಗೌಡ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಪ್ರಭಾವ ಹೆಚ್ಚಿದೆ. ಈ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ಜಿಲ್ಲೆಯ ಐದೂ ಸ್ಥಾನಗಳನ್ನೂ ಕಾಂಗ್ರೆಸ್ ಗೆದ್ದಿರುವುದು ಇವರ ಪ್ಲಸ್ ಪಾಯಿಂಟ್. ಈ ಪೈಕಿ ಕಡೂರು ಹೊರತುಪಡಿಸಿ ಚಿಕ್ಕಮಗಳೂರಿನ ನಾಲ್ಕು ಕ್ಷೇತ್ರಗಳು ಹಾಗೂ ಉಡುಪಿ ಜಿಲ್ಲೆಯಲ್ಲಿ ಬೈಂದೂರು ಹೊರತುಪಡಿಸಿ ಉಳಿದ ನಾಲ್ಕು ಅಸೆಂಬ್ಲಿ ಕ್ಷೇತ್ರಗಳು ಲೋಕಸಭೆ ವ್ಯಾಪ್ತಿಗೆ ಬರುತ್ತವೆ. ಬಿಜೆಪಿಯಿಂದ ಗೌಡ ಸಮುದಾಯದ ಶೋಭಾ ಕರಂದ್ಲಾಜೆ ಅಭ್ಯರ್ಥಿಯಾದರೆ, ಹೊಸ ಮುಖ ಅಂಶುಮಂತ್ ಗೌಡರನ್ನು ಕಣಕ್ಕಿಳಿಸಿ ಕೌಂಟರ್ ಕೊಡಬೇಕೆಂದು ಕೆಲವು ಕಾಂಗ್ರೆಸಿಗರ ವಾದ ಇದೆ.
ಮಾಜಿ ಸಚಿವ ರಮಾನಾಥ ರೈ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಟ್ಟಿಗೆ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಅವರನ್ನು ಕಾರ್ಯಾಧ್ಯಕ್ಷ ಮಾಡಿ, ಎರಡೂ ಜಿಲ್ಲೆಯಲ್ಲಿ ಬಂಟ ಸಮುದಾಯದ ಮತಗಳನ್ನು ಕ್ರೋಡೀಕರಿಸಬಹುದು ಅನ್ನುವ ಯೋಚನೆ ಕೆಲವರದ್ದು. ಆದರೆ, ಉಡುಪಿಯ ಮಟ್ಟಿಗೆ ವ್ಯಕ್ತಿಗತವಾಗಿ ವರ್ಚಸ್ಸು ಬೆಳೆಸಿಕೊಂಡಿರುವುದು ಜಯಪ್ರಕಾಶ್ ಹೆಗ್ಡೆ ಮಾತ್ರ. ಯಾವ ಪಕ್ಷದಲ್ಲಿ ನಿಂತರೂ ಮತದಾರರು ಪಕ್ಷ ನೋಡದೆ ಮತ ಚಲಾಯಿಸುತ್ತಾರೆ ಎನ್ನುವಷ್ಟರ ಮಟ್ಟಿಗೆ ಖದರ್ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸಿಗರ ಒಂದು ಬಣ ಹೆಗ್ಡೆ ಪರ ಬ್ಯಾಟಿಂಗ್ ಮಾಡುತ್ತಿದ್ದರೆ, ಚಿಕ್ಕಮಗಳೂರು ಮತ್ತು ಉಡುಪಿಯ ಕೆಲವು ಕಾಂಗ್ರೆಸಿಗರು ಹೊಸಮುಖ ಅಂಶುಮಂತ್ ಗೌಡರ ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ.
Ramanath rai likely to be appointed as KPCC Secretary, Vinay Kumar Sorake for MP Candidate, new MP face from Udupi to be Amshumanth Gowda
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 03:19 pm
Mangalore Correspondent
Ullal, Mangalore: ಸಮುದ್ರ ಮಧ್ಯದಲ್ಲೇ ಪೋರ್ಚುಗೀಸರ...
17-09-25 01:34 pm
Dharmasthala, Lakshmish Tolpadi, Mangalore: ಧ...
16-09-25 07:48 pm
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
17-09-25 06:04 pm
Mangalore Correspondent
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm