ಬ್ರೇಕಿಂಗ್ ನ್ಯೂಸ್
09-01-24 03:57 pm Mangalore Correspondent ಕರಾವಳಿ
ಮಂಗಳೂರು, ಜ.9: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರು ಯಕ್ಷಗಾನ ಮೇಳಗಳಲ್ಲಿ ಜನವರಿ 14ರ ಸಂಕ್ರಮಣದ ಬಳಿಕ ರಾತ್ರಿಯಿಡೀ ಯಕ್ಷಗಾನ ನಡೆಸಲು ನಿರ್ಧರಿಸಲಾಗಿದೆ. ಹೈಕೋರ್ಟ್ ಸೂಚನೆ ಮತ್ತು ಕಟೀಲು ದೇವಸ್ಥಾನದ ಭಕ್ತರ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಕಮಿಟಿ ಆಡಳಿತ ಮೊಕ್ತೇಸರ ಸನತ್ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಈ ಹಿಂದೆ ರಾತ್ರಿ ಪೂರ್ತಿ ಇರುತ್ತಿದ್ದ ಯಕ್ಷಗಾನಕ್ಕೆ 2020ರಲ್ಲಿ ಕೊರೊನಾ ಕಾರಣದಿಂದ ಬ್ರೇಕ್ ಬಿದ್ದಿತ್ತು. ಆನಂತರ, ಅಧಿಕೃತ ಕಾಲಮಿತಿಯ ಯಕ್ಷಗಾನಗಳು ಚಾಲ್ತಿಗೆ ಬಂದಿದ್ದವು. ಎರಡು ವರ್ಷಗಳ ಹಿಂದೆ ಬಿಜೆಪಿ ಸರಕಾರ ಇದ್ದಾಗ ಧ್ವನಿವರ್ಧಕ ನಿಷೇಧ ಕುರಿತು ರಾಜ್ಯದಲ್ಲಿ ಅಭಿಯಾನ ನಡೆದಿತ್ತು. ನಸುಕಿನ ವೇಳೆಗೆ ಮಸೀದಿಯಲ್ಲಿ ಕೂಗುವ ಆಜಾನ್ ನಿಷೇಧಿಸಬೇಕೆಂಬ ಒತ್ತಾಯದ ನೆಪದಲ್ಲಿ ರಾತ್ರಿ ವೇಳೆ ಧ್ವನಿವರ್ಧಕ ಬಳಸಬಾರದೆಂದು ಕೂಗು ಎಬ್ಬಿಸಲಾಗಿತ್ತು. ಇದರಿಂದ ಆಜಾನ್ ಕೂಗಿನ ನಿಯಂತ್ರಣ ಆಗದೇ ಇದ್ದರೂ, ಯಕ್ಷಗಾನ ಆಟಗಳಿಗೆ ನೇರ ಪರಿಣಾಮ ಬಿದ್ದಿತ್ತು. ರಾತ್ರಿ ವೇಳೆ ಧ್ವನಿವರ್ಧಕ ನಿಷೇಧ ಹೆಸರಲ್ಲಿ ಕಟೀಲು ಮೇಳಗಳು ಕಾಲಮಿತಿಯ ಯಕ್ಷಗಾನಗಳಿಗೆ ಜೋತು ಬಿದ್ದಿದ್ದವು.
ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಡಿಮೆಯಾಗಿದ್ದರೂ, ಧ್ವನಿವರ್ಧಕದ ಶಬ್ದ ಮಿತಿ ಕಡಿಮೆಗೊಳಿಸುವ ಜಿಲ್ಲಾಡಳಿತದ ಸೂಚನೆಯಂತೆ ಸಂಜೆ 6 ಗಂಟೆಯಿಂದ ರಾತ್ರಿ 12ರ ವರೆಗೆ ಕಾಲಮಿತಿಯ ಯಕ್ಷಗಾನವೇ ಹೆಚ್ಚು ಪ್ರಚಲಿತವಾಗಿತ್ತು. ಸಂಜೆ ಹೊತ್ತಿಗಾದರೆ ಜನ ಹೆಚ್ಚು ಸೇರುತ್ತಾರೆಂಬ ಭಾವನೆಯೂ ಇದರ ಹಿಂದಿತ್ತು. ಇದರಿಂದ ಹಗಲಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಕಲಾವಿದರಿಗೂ ಒಳಿತಾಗಿತ್ತು. ಇತ್ತೀಚೆಗೆ ಕರಾವಳಿಯ ಇತರೇ ಯಕ್ಷಗಾನ ಮೇಳಗಳು ಭಕ್ತರ ಅಪೇಕ್ಷೆಯಂತೆ ರಾತ್ರಿ ಪೂರ್ತಿ ಅಥವಾ ಕಾಲಮಿತಿ ಎರಡಕ್ಕೂ ಪ್ರತ್ಯೇಕ ವೀಳ್ಯದೊಂದಿಗೆ ಆಟ ಆಡಿಸುತ್ತಿದ್ದರೆ, ಕಟೀಲು ಮೇಳಗಳಲ್ಲಿ ಮಾತ್ರ ಆ ರೀತಿಯ ಒಗ್ಗಿಕೊಳ್ಳುವ ಸಾಧ್ಯತೆಗೆ ಮೇಳಗಳ ಆಡಳಿತ ಮುಂದಾಗಿರಲಿಲ್ಲ.
ಇದೇ ವೇಳೆ, ಹಿಂದಿನಿಂದ ಬಂದ ಯಕ್ಷಗಾನ ಪರಂಪರೆಗೆ ಕಾಲಮಿತಿಯಿಂದ ಪೆಟ್ಟು ಬಿದ್ದಿದೆ, ರಾತ್ರಿ ಪೂರ್ತಿ ಇದ್ದರಷ್ಟೇ ಯಕ್ಷಗಾನಕ್ಕೆ ಸೊಬಗು, ಹಳೆಯ ರೀತಿಯಲ್ಲೇ ಯಕ್ಷಗಾನ ಇರಬೇಕು ಎನ್ನುವ ವಾದ ಮುಂದಿಟ್ಟು ಕಟೀಲಿನ ಭಕ್ತರ ಒಂದು ತಂಡ ಹೈಕೋರ್ಟ್ ಕದ ತಟ್ಟಿತ್ತು. ಕೋರ್ಟಿನಲ್ಲಿ ರಾತ್ರಿ ಪೂರ್ತಿ ಯಕ್ಷಗಾನ ನಡೆಸುವುದಕ್ಕೆ ನಮ್ಮ ಅಭ್ಯಂತರ ಇಲ್ಲ, ಅದನ್ನು ದೇವಸ್ಥಾನ ಆಡಳಿತವೇ ತೀರ್ಮಾನ ಮಾಡಬೇಕು ಎಂದು ಹೇಳಿತ್ತು. ಕೋರ್ಟ್ ಸೂಚನೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಮುಂದಿಟ್ಟು ಕಾಲಮಿತಿಯ ಯಕ್ಷಗಾನಕ್ಕೆ ಬ್ರೇಕ್ ಕೊಡಬೇಕೆಂಬ ಒತ್ತಾಯ ಮುಂದಿಡಲಾಗಿತ್ತು.
ಕಟೀಲು ದೇವಸ್ಥಾನದ ಆಡಳಿತ ಕಮಿಟಿಯ ಆಸ್ರಣ್ಣರಿಗೆ ಮತ್ತು ಕಟೀಲು ಮೇಳಗಳ ಕಲಾವಿದರಲ್ಲಿ ಎಲ್ಲರಿಗೂ ಸಮ್ಮತಿ ಇಲ್ಲದೇ ಇದ್ದರೂ, ಸದ್ಯಕ್ಕೆ ರಾತ್ರಿ ಪೂತ್ರಿ ಯಕ್ಷಗಾನ ನಡೆಸುವುದಕ್ಕೆ ಒಪ್ಪಿಗೆ ನೀಡಲಾಗಿದೆ. 2022-23ನೇ ಸಾಲಿನ ಕಟೀಲಿನ ಆರು ಮೇಳಗಳ ಪೂರ್ತಿ ಯಕ್ಷಗಾನ ತಿರುಗಾಟ ಕಾಲಮಿತಿಯಲ್ಲೇ ನಡೆದಿತ್ತು. ಈ ಸಾಲಿನಲ್ಲಿ ಡಿಸೆಂಬರ್ 8ರಿಂದ ತೊಡಗಿ ಜನವರಿ 13ರ ವರೆಗಿನ ಯಕ್ಷಗಾನ ಕಾಲಮಿತಿಯಲ್ಲೇ ನಡೆಯುತ್ತದೆ. ಆದರೆ, ಇದೇ ಸಂಕ್ರಾಂತಿ ಬಳಿಕ ಕಟೀಲು ಮೇಳಗಳ ಆಟಗಳು ರಾತ್ರಿಯಿಂದ ಬೆಳಗ್ಗಿನ ವರೆಗೂ ಆಗಲಿದ್ದು, ರಾತ್ರಿ ಪೂರ್ತಿ ಚೆಂಡೆಯ ಅಬ್ಬರ ಮಾರ್ದನಿಸಲಿದೆ. ಕಾಲಮಿತಿಯ ಯಕ್ಷಗಾನವೇ ಬೇಕು ಎನ್ನುವವರಿಗೂ ಇದರಿಂದ ವಿನಾಯ್ತಿ ಇರಲ್ಲ. ಈ ರೀತಿಯ ನಿಯಮದ ಕಟ್ಟುಪಾಡು ಹಾಕುವುದಕ್ಕಿಂತ ಒಂದೆರಡು ಮೇಳಗಳನ್ನು ಕಾಲಮಿತಿಗೂ ಇಳಿಸುವ ಚಿಂತನೆಯನ್ನು ಮಾಡಬಹುದು ಎಂಬುದು ಕಲಾವಿದರ ವಾದ ಇದೆ. ಈ ಬಗ್ಗೆ ಕಟೀಲಿನ ಆಸ್ರಣ್ಣರಿಗೂ ಕೆಲವು ಕಲಾವಿದರು ಕಿವಿಯೂದಿದ್ದಾರೆ ಎನ್ನುವ ಮಾಹಿತಿಗಳಿವೆ.
The six Yakshagana melas of Kateel Sri Durgaparameshwari Temple will be held overnight after the transition on January 14. The decision was taken on the directions of the High Court and on the request of devotees of Kateel temple, temple committee managing director Sanath Kumar Shetty said.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
06-11-25 10:22 pm
HK News Desk
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
06-11-25 10:50 pm
Mangalore Correspondent
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm