ರಾಮ ಮಂದಿರ ಉದ್ಘಾಟನೆಗೆ ಕರೆದ್ರೆ ಹೋಗ್ತೀರಾ ಎಂಬ ಪ್ರಶ್ನೆಗೆ ಜಾರಿಕೊಳ್ಳುತ್ತಲೇ ‘ತಪ್ಪಿಲ್ಲ’ ಎಂದ ಖಾದರ್

09-01-24 10:19 pm       Mangalore Correspondent   ಕರಾವಳಿ

ಸ್ಪೀಕರ್ ಯುಟಿ ಖಾದರ್ ಅವರಲ್ಲಿ ರಾಮ ಮಂದಿರ ಉದ್ಘಾಟನೆಗೆ ಹೋಗುತ್ತೀರಾ ಎಂದು ಪತ್ರಕರ್ತರು ಪ್ರಶ್ನೆ ಹಾಕಿದ್ದರು. ಬಹಳ ಜಾಣ್ಮೆಯಿಂದ ಉತ್ತರಿಸಲು ಮುಂದಾದ ಖಾದರ್ ಸಮಯ, ಸಂದರ್ಭ ಸಿಕ್ಕರೆ ಹೋಗುವುದರಲ್ಲಿ ತಪ್ಪಿಲ್ಲ ಎಂದು ಹೇಳಿಕೆ ಕೊಟ್ಟು ಜಾರಿಕೊಂಡಿದ್ದಾರೆ.

ಮಂಗಳೂರು, ಜ.9: ಸ್ಪೀಕರ್ ಯುಟಿ ಖಾದರ್ ಅವರಲ್ಲಿ ರಾಮ ಮಂದಿರ ಉದ್ಘಾಟನೆಗೆ ಹೋಗುತ್ತೀರಾ ಎಂದು ಪತ್ರಕರ್ತರು ಪ್ರಶ್ನೆ ಹಾಕಿದ್ದರು. ಬಹಳ ಜಾಣ್ಮೆಯಿಂದ ಉತ್ತರಿಸಲು ಮುಂದಾದ ಖಾದರ್ ಸಮಯ, ಸಂದರ್ಭ ಸಿಕ್ಕರೆ ಹೋಗುವುದರಲ್ಲಿ ತಪ್ಪಿಲ್ಲ ಎಂದು ಹೇಳಿಕೆ ಕೊಟ್ಟು ಜಾರಿಕೊಂಡಿದ್ದಾರೆ.

ರಾಮ ಮಂದಿರ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಸ್ಪೀಕರ್ ಇದ್ದೇನೆ, ಹಾಗೆಲ್ಲ ಧರ್ಮ ಸೂಕ್ಷ್ಮಗಳ ಬಗ್ಗೆ ಮಾತಾಡಲ್ಲ ಎಂದ್ರು. ಮಂದಿರ ಉದ್ಘಾಟನೆ ಬಗ್ಗೆ ಎಂದು ಕೇಳಿದ್ದಕ್ಕೆ, ಸೌಹಾರ್ದತೆ ಪ್ರೀತಿ ವಿಶ್ವಾಸ ನೆಲೆಗೊಳಿಸುವ ಕಾರ್ಯಕ್ರಮ. ಎಲ್ಲರಿಗೂ ಪ್ರೇರಣೆ ಆಗುವ ಕೆಲಸ ಆಗುತ್ತಿದೆ. ಶುಭ ಹಾರೈಸುತ್ತೇನೆ ಎಂದರು.

ನೀವು ಕಾರ್ಯಕ್ರಮಕ್ಕೆ ಕರೆದರೆ ಹೋಗುತ್ತೀರಾ ಎಂದು ಕೇಳಿದ್ದಕ್ಕೆ, ನಮಗೆ ಸಮಯವಾಕಾಶ ಇದ್ದರೆ, ಅಂತಹ ಅವಕಾಶ, ಸಂದರ್ಭ ಬಂದಲ್ಲಿ ಹೋಗುವುದರಲ್ಲಿ ತಪ್ಪಿಲ್ಲ. ನಮ್ಮ ಪ್ರೋಗ್ರಾಮ್ ನೋಡಿಕೊಂಡು ಹೋಗಬೇಕಷ್ಟೆ. ಪ್ರತಿಯೊಂದು ಕೂಡ ಎಲ್ಲರನ್ನು ಒಗ್ಗೂಡಿಸುವ, ಸೌಹಾರ್ದತೆಯ ಕಾರ್ಯಕ್ರಮ ಆಗಬೇಕೆಂದು ಬಯಸುತ್ತೇನೆ ಎಂದು ಹೇಳಿದರು.

ಮಕ್ಕಳು ಶೌಚಾಲಯ ತೊಳೆಯುವ ಕುರಿತ ತಮ್ಮ ಮಾತಿನ ಬಗ್ಗೆ ಕೇಳಿದ್ದಕ್ಕೆ, ನಾವು ಸಣ್ಣದಿರುವಾಗ ನಮ್ಮ ಟಾಯ್ಲೆಟನ್ನು ನಾವೇ ತೊಳೆದಿದ್ದೇವೆ. ಹಾಗಂತ ಒತ್ತಾಯ ಮಾಡುವುದು ಸರಿಯಲ್ಲ. ಮಕ್ಕಳು ತಾವು ಬಳಸುವ ಟಾಯ್ಲೆಟನ್ನು ಕ್ಲೀನ್ ಮಾಡುವುದರಲ್ಲಿ ತಪ್ಪೇನಿದೆ. ತಾವಾಗಿಯೇ ಅಂತಹ ಕೆಲಸ ಮಾಡಿದರೆ, ಅರಿವು ಬರುತ್ತದೆ. ಹಾಗೆಂದು ನನ್ನ ಅಭಿಪ್ರಾಯ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಇತ್ತೀಚೆಗೆ ಮೂಡುಬಿದ್ರೆಯಲ್ಲಿ ಖಾದರ್ ಮಕ್ಕಳು ಟಾಯ್ಲೆಟ್ ತೊಳೆದರೆ ತಪ್ಪೇನು ಎಂದು ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

A journalist asked Speaker UT Khader if he would go for the inauguration of ram temple. Khader, who tried to reply very tactfully, slipped away by saying that there was nothing wrong in going if the time and opportunity arose.