Surathkal Toll: ಸುರತ್ಕಲ್ ಟೋಲ್ ಗೇಟ್ ಅವಶೇಷ ತೆರವಿಗೆ ಮುಂದಾದ ಹೆದ್ದಾರಿ ಇಲಾಖೆ, ಕಡೆಗೂ ತಪ್ಪಿದ  ಪ್ರಯಾಣಿಕರ ಕಿರಿ ಕಿರಿ 

11-01-24 10:52 pm       Mangalore Correspondent   ಕರಾವಳಿ

ಕಡೆಗೂ ವಿವಾದಿತ ಸುರತ್ಕಲ್ ಟೋಲ್ ಗೇಟ್ ಅವಶೇಷಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಗುರುವಾರ ಸಂಜೆ ಜೆಸಿಬಿ ಮೂಲಕ ಅಲ್ಲಿನ ಕಟ್ಟಡ, ಗೇಟ್, ಶೆಡ್ ಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ. 

ಮಂಗಳೂರು, ಜ.11: ಕಡೆಗೂ ವಿವಾದಿತ ಸುರತ್ಕಲ್ ಟೋಲ್ ಗೇಟ್ ಅವಶೇಷಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಗುರುವಾರ ಸಂಜೆ ಜೆಸಿಬಿ ಮೂಲಕ ಅಲ್ಲಿನ ಕಟ್ಟಡ, ಗೇಟ್, ಶೆಡ್ ಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ. 

ಏಳು ವರ್ಷಗಳ ನಿರಂತರ ಹೋರಾಟದಿಂದಾಗಿ ಕಳೆದ ಅಸೆಂಬ್ಲಿ ಚುನಾವಣೆಗೆ ನಾಲ್ಕು ತಿಂಗಳು ಇರುವಾಗ ಟೋಲ್ ಗೇಟ್ ಸ್ಥಗಿತವಾಗಿತ್ತು. ಆನಂತರ ಮತ್ತೆ ಶುರುವಾಗುತ್ತೆ ಎಂದು ಹೇಳಲಾಗಿದ್ದರೂ, ಲೋಕಸಭೆ ಚುನಾವಣೆ ವೇಳೆಗೆ ಜನವಿರೋಧ ಬರುವ ಸಾಧ್ಯತೆ ಇದ್ದುದರಿಂದ ಟೋಲ್ ಗೇಟ್ ಪುನರ್ ಆರಂಭ ಆಗಿರಲಿಲ್ಲ. ಇತ್ತೀಚೆಗೆ ಟೋಲ್ ಗೇಟ್ ರದ್ದಾದ ದಿನವನ್ನು ಅದೇ ಜಾಗದಲ್ಲಿ ಆಚರಿಸಲಾಗಿತ್ತು. 

ಈಗ ಹೆದ್ದಾರಿ ಸವಾರರಿಗೆ ತೊಂದರೆಯಾಗಿದ್ದ ಟೋಲ್ ಗೇಟ್ ಅವಶೇಷಗಳನ್ನು ತೆರವುಗೊಳಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಜೆಸಿಬಿ ಮೂಲಕ ಕಂಬಗಳನ್ನು, ಕಾಂಕ್ರೀಟ್ ಕಟ್ಟಡ, ಗೋಡೆಗಳನ್ನು ತೆರವುಗೊಳಿಸಿದೆ‌. ಇದರಿಂದಾಗಿ ಟೋಲ್ ಗೇಟ್ ವಿರುದ್ಧ ಹೋರಾಟ ನಡೆಸಿದ್ದವರು ನಿಟ್ಟುಸಿರು ಬಿಟ್ಟಿದ್ದಾರೆ. ಹಲವು ಬಾರಿ ಇಲ್ಲಿನ ಅವಶೇಷ ರಾತ್ರಿ ಸಾಗುವ ವಾಹನಗಳಿಗೆ ತಿಳಿಯದೆ ಅಪಘಾತಕ್ಕೆ ಕಾರಣವಾಗಿದ್ದೂ ಇದೆ.

Mangalore Surathkal toll structure fully removed by Highway officials.