ಬ್ರೇಕಿಂಗ್ ನ್ಯೂಸ್
13-01-24 12:06 pm Mangalore Correspondent ಕರಾವಳಿ
ಉಳ್ಳಾಲ, ಜ.13: ಕರಾವಳಿಯ ಆರಾಧ್ಯ ಕೊರಗಜ್ಜ ದೈವದ ಕಥೆಯಾಧರಿತ ತ್ರಿವಿಕ್ರಮ ಸಪಲ್ಯ ನಿರ್ಮಾಣದ ಬಹು ಬಜೆಟ್ ಚಿತ್ರ "ಕೊರಗಜ್ಜ" ಸಿನೆಮಾ ಚಿತ್ರೀಕರಣ ಪೂರ್ತಿಗೊಳಿಸಿದೆ. ಚಿತ್ರ ತಂಡವು ಶುಕ್ರವಾರ ಕಲ್ಲಾಪುವಿನ ಬುರ್ದುಗೋಳಿ ಶ್ರೀ ಗುಳಿಗ ಕೊರಗಜ್ಜ ಉದ್ಭವ ಶಿಲೆ ಆದಿಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ಕೋಲವನ್ನ ಸಮರ್ಪಿಸಿದ್ದು ಸ್ಯಾಂಡಲ್ ವುಡ್ ಹಿರಿಯ ನಟಿಯರಾದ ಶೃತಿ ಮತ್ತು ಭವ್ಯ ಗುಳಿಗ, ಕೊರಗಜ್ಜನ ಕೋಲ ವೀಕ್ಷಿಸಿದರು.
ನಟಿ ಭವ್ಯಾ ಮಾತನಾಡಿ ಕಳೆದ ಬಾರಿ ಹುಟ್ಟುಹಬ್ಬದ ಸಂದರ್ಭದಲ್ಲೂ ಬುರ್ದುಗೋಳಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೆ. ಈ ಬಾರಿಯೂ ದೈವ ಇಚ್ಛೆಯಂತೆ ಹುಟ್ಟು ದಿನದಂದೇ ಭೇಟಿ ನೀಡಿದ್ದೇನೆ. ಕೊರಗಜ್ಜನ ಆಶೀರ್ವಾದ ಮತ್ತು ಪವಾಡದಿಂದ ಇದು ಸಾಧ್ಯವಾಗಿದೆ, ಕೊರಗಜ್ಜ ಚಿತ್ರದಲ್ಲಿ ಪಂಜಂದಾಯ ದೈವದ ಪಾತ್ರವನ್ನ ನಿರ್ವಹಿಸಿದ್ದೇನೆ. "ಕೊರಗಜ್ಜ" ಅದ್ಭುತ ಕಲಾವಿದರನ್ನು ಒಳಗೊಂಡ ಯಶಸ್ಸಿನ ಚಿತ್ರವಾಗಿ ಹೊರಹೊಮ್ಮಲಿದೆ ಎಂದರು.
ನಟಿ ಶೃತಿ ಮಾತನಾಡಿ ಹಣ ಇದ್ದವರೆಲ್ಲ ಸಿನೆಮಾ ಮಾಡಲು ಸಾಧ್ಯವಿಲ್ಲ. ದೇವರ ಅನುಗ್ರಹದಿಂದಷ್ಟೇ ಕೊರಗಜ್ಜ ಸಿನಿಮಾ ಮಾಡಿರುವುದು ನನ್ನ ಅನುಭವದಲ್ಲಿ ಕಂಡುಬಂದ ಸತ್ಯ. ಚಿತ್ರದ ಶೂಟಿಂಗ್ ಉದ್ದಕ್ಕೂ ಒಳ್ಳೆ ವಿಚಾರಗಳೇ ತುಂಬಿರುವುದು ದೈವದ ಅನುಗ್ರಹ. 2023ರಲ್ಲಿ ತುಂಬಾ ನಿರೀಕ್ಷೆಯಲ್ಲಿರುವ ಸಿನೆಮಾಗಳಲ್ಲಿ ಕೊರಗಜ್ಜನ ಚಿತ್ರವೂ ಸೇರಿದೆ ಎಂದರು.
ನಿರ್ದೇಶಕ ಸುಧೀರ್ ರಾಜ್ ಅತ್ತಾವರ ಮಾತನಾಡಿ, ನಂಬಿಕೆಗಳಿಗೆ ಧಕ್ಕೆಯಾಗದಂತೆ ವೇಷ ಭೂಷಣಗಳನ್ನು ಆಭಾಸ ರೀತಿಯಲ್ಲಿ ಮಾಡುವುದು ತಪ್ಪು. ಚಿತ್ರದ ಶೂಟಿಂಗ್ ಸಂದರ್ಭ ತೊಂದರೆಗಳಾಗದಂತೆ ಗುಳಿಗ, ಕಲ್ಲುರ್ಟಿಗೆ ಗುಡಿ ಕಟ್ಟಿಯೇ ಮುಂದುವರಿದಿದ್ದೇವೆ. ವಿದ್ಯೆ ತಿಳಿದವರಲ್ಲಿ ಕೇಳಿಕೊಂಡು ಶೂಟಿಂಗ್ ನಡೆಸಲಾಗಿದೆ. ಮಾರ್ಚ್ ಕೊನೆಗೆ ಚಿತ್ರ ತೆರೆಕಾಣಲಿದೆ. ಪ್ಯಾನ್ ಇಂಡಿಯಾ ರೀತಿಯಲ್ಲಿ ಸಿನೆಮಾ ತಯಾರಾಗುತ್ತಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ತುಳು ಭಾಷೆಯಲ್ಲಿಯೂ ಚಿತ್ರ ತೆರೆಕಾಣಲಿದೆ. ತಾಂತ್ರಿಕವಾಗಿ ಪುಷ್ಪದಂತಹ ದೊಡ್ಡ ಸಿನಿಮಾ ನಿರ್ವಹಿಸಿದ ಬಿಪಿನ್ ದೇವ್ ಸೌಂಡ್ ಡಿಸೈನ್ ಮಾಡುತ್ತಿದ್ದು, ಮಲಯಾಳಂನ ಬಹುದೊಡ್ಡ ಎಡಿಟರ್ ಗೀತ್ ಜೋಷಿ ಎಡಿಟಿಂಗ್ ತಂಡದ ನೇತೃತ್ವ ವಹಿಸಿದ್ದಾರೆ. ಒ.ಬಿ ಸುಂದರ್ ಸಂಗೀತ ನಿರ್ದೇಶನ ಹಾಗೂ ಹಿನ್ನೆಲೆ ಸಂಗೀತವನ್ನು ನೀಡುತ್ತಿದ್ದಾರೆ. ಕೊಚ್ಚಿ, ಮುಂಬೈನಲ್ಲಿ ಪೋಸ್ಟ್ ಪ್ರಾಡಕ್ಷನ್ ನಡೆಯುತ್ತಿದೆ.
ತ್ರಿವಿಕ್ರಮ್ ಸಪಲ್ಯ ಅನ್ನುವ ನಿರ್ಮಾಪಕರಿಂದಾಗಿ ಐದು ಕ್ಯಾಮರಾ ಬಳಸಿ ಶೂಟಿಂಗ್ ನಡೆಸಲು ಸಾಧ್ಯವಾಗಿದೆ. ಭರತ್ ಕೊರಗತನಿಯ ಪಾತ್ರ ನಿರ್ವಹಿಸುತ್ತಿದ್ದು, ಕೃತಿಕಾ ಅನ್ನುವ ಅದ್ಭುತ ಪ್ರತಿಭೆ ಕೊರಗಜ್ಜನ ತಾಯಿ ಕೊರೊಪೊಳು ಪಾತ್ರ ಮಾಡುತ್ತಿದ್ದಾರೆ. ಚಿತ್ರಕ್ಕೆ `ಕೊರಗಜ್ಜ' ಎಂದು ಹೆಸರಿಡಲಾಗಿದ್ದು, ಕೊರ್ರೆ ಕೊಡ್ತಾರ್ ಕೊರಗ ತನಿಯ ಎಂದು ಕೊರಗ ಭಾಷೆಯಲ್ಲಿ ಟ್ಯಾಗ್ ಲೈನ್ ನೀಡಲಾಗಿದೆ. 800 ವರ್ಷಗಳಿಂದ ಗೌಪ್ಯವಾಗಿಟ್ಟಂತಹ ಕತೆಯನ್ನು ಸಮುದಾಯದವರು ಎಲೆ ಹಾರಿಸಿ ನಂತರ ಸಿಕ್ಕ ಸಮ್ಮತಿಯಂತೆ ಕತೆ ಹೇಳಿದ್ದಾರೆ. ಚಿತ್ರಕ್ಕೆ ತಪ್ಪು ಕಲ್ಪನೆಗಳಿಂದ ವಿರೋಧಗಳಿತ್ತು. ಕಳಸದಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭ ತಡೆಯೊಡ್ಡಿದ ಪರಿಣಾಮ 35 ಲಕ್ಷ ನಷ್ಟ ಉಂಟಾಯಿತು. ತೆರೆಮರೆಯ ವ್ಯಕ್ತಿಯೊಬ್ಬರು ಚಿತ್ರೀಕರಣ ತಡೆಹಿಡಿಯಲು ನೋಡುತ್ತಿದ್ದಾರೆ. ಕಾಂತಾರ-2 ಕ್ಕೂ ಅದೇ ರೀತಿಯ ಅಡ್ಡಿಗಳನ್ನು ಮಾಡಲಾಗುತ್ತಿದೆ. ನಮ್ಮ ನೆಲದ ದೈವೀಶಕ್ತಿಯ ಸಿನೆಮಾ ಮಾಡಿದಾಗ ತಡೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.
ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ನಟಿ ಭವ್ಯ ಪುತ್ರಿ ಅದಿತಿ, ನಟಿ ಶ್ರುತಿ ಮಗಳು ಗೌರಿ, ನಾಯಕ ನಟ ಭರತ್ ಸೂರ್ಯ, ನಾಯಕ ನಟಿ ರಿತಿಕ ಮೊದಲಾದವರು ಇದ್ದರು. ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ನಾಯಕ್, ಉಪಾಧ್ಯಕ್ಷ ದೇವದಾಸ್ ಗಟ್ಟಿ ಕಾಯಂಗಳ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ವಕೀಲ ಗಂಗಾಧರ್ ಉಳ್ಳಾಲ್, ಪುರುಷೋತ್ತಮ್ ಕಲ್ಲಾಪು ಉಪಸ್ಥಿತರಿದ್ದರು.
Koragajja movie shooting complete, cast along with actress Shruti comes to visit Kola at Ullal in Mangalore.
19-02-25 10:34 pm
HK News Desk
Bird flu Karnataka, Bidar: ಆಂಧ್ರ, ಮಹಾರಾಷ್ಟ್ರದ...
19-02-25 10:19 pm
Koppal, Tungabhadra river, Hyderabad: 20 ಅಡಿ...
19-02-25 07:59 pm
CM MUDA case: ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ...
19-02-25 07:47 pm
Bangalore, Doctor SMS, Pills: ನಮ್ಮ ಅತ್ತೆಗೆ ವಯ...
19-02-25 04:43 pm
19-02-25 11:00 pm
HK News Desk
ಬಾಲಕನಿದ್ದಾಗ ನುಂಗಿದ್ದ ಪೆನ್ ಕ್ಯಾಪ್ ; 21 ವರ್ಷ ಕಳ...
19-02-25 06:41 pm
Maha Kumbh river, NGT Board: ಕುಂಭಮೇಳ ನದಿ ನೀರು...
19-02-25 01:54 pm
ಇಬ್ಬರು ಹೆಂಡಿರ ಮುದ್ದಿನ ಗಂಡ ; ವಾರದ 3 ದಿನ ಅಲ್ಲಿ....
18-02-25 10:49 pm
Hindu idols Bishop House, Pala diocese, Kera...
18-02-25 10:45 pm
19-02-25 01:56 pm
Mangalore Correspondent
Satish Jarkiholi, Mangalore: ಕೆಪಿಸಿಸಿ ಅಧ್ಯಕ್ಷ...
18-02-25 12:36 pm
Dinesh Gundurao, Munner katipalla, Sand Mafia...
17-02-25 10:56 pm
Sterlite Power, Protest, 400kv Power, Mangalo...
17-02-25 09:20 pm
Mangalore, Dinesh Gundurao, Mines Krishnaveni...
17-02-25 09:14 pm
19-02-25 09:26 pm
Mangalore Correspondent
Mangalore CCB police, 119 kg ganja, Crime: ಮೀ...
18-02-25 07:19 pm
Madikeri police, Fake Scheme, Mangalore crime...
18-02-25 06:04 pm
Mangalore Crime, Surathkal, Car: ಮದುವೆ ಸಮಾರಂಭ...
18-02-25 12:11 pm
Mysuru family suicide, Crime: ಮೈಸೂರು ; ಅಪಾರ್ಟ...
17-02-25 12:49 pm