ಬ್ರೇಕಿಂಗ್ ನ್ಯೂಸ್
15-01-24 08:55 pm Mangalore Correspondent ಕರಾವಳಿ
ಮಂಗಳೂರು, ಜ.15: ಸದ್ಯ ಎಲ್ಲರ ಚಿತ್ತ ರಾಮ ಜನ್ಮಭೂಮಿ ಅಯೋಧ್ಯೆಯತ್ತ ನೆಟ್ಟಿದೆ. ಜ.22ರಂದು ನಡೆಯುವ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆ ಬಗ್ಗೆಯೇ ಎಲ್ಲರ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ರಾಮನೂರು ಜಗಮಗಿಸುವಂತೆ ವಿದ್ಯುತ್ ದೀಪಾಲಂಕಾರವನ್ನೂ ಮಾಡಲಾಗುತ್ತಿದೆ. ಇದೇ ವೇಳೆ, ಅಯೋಧ್ಯೆಯಲ್ಲಿ ನವೀಕರಣಗೊಂಡಿರುವ ಅಯೋಧ್ಯಾ ಧಾಮ್ ಜಂಕ್ಷನ್ ಹೆಸರಿನ ರೈಲ್ವೇ ನಿಲ್ಧಾಣವನ್ನೂ ಕಣ್ಣು ಕೋರೈಸುವಂತೆ ಮಾಡಲಾಗಿದ್ದು ಈ ಬೆಳಕಿನ ವ್ಯವಸ್ಥೆಯನ್ನು ಮಾಡಿದವರು ನಮ್ಮ ಮಂಗಳೂರಿನ ಯುವಕರು.
ಮೂಡಬಿದಿರೆ ಮೂಲದ ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಅಯೋಧ್ಯೆ ರೈಲು ನಿಲ್ದಾಣದಲ್ಲಿ ಅದ್ಭುತವಾಗಿ ದೀಪಾಲಂಕಾರ ಮಾಡಲಾಗಿದೆ. ಅಯೋಧ್ಯೆಯ ರೈಲ್ವೇ ನಿಲ್ದಾಣದಲ್ಲಿ 300ಕ್ಕೂ ಅಧಿಕ RGBW ಕಲರ್ ಲೈಟ್ ಗಳನ್ನು ಅಳವಡಿಸಿದ್ದು ದೇಶ- ವಿದೇಶದಲ್ಲಿ ಜನಾಕರ್ಷಣೆಗೆ ಪಾತ್ರವಾಗಿದೆ. ರೈಲು ನಿಲ್ದಾಣಕ್ಕೆ ಕಣ್ಣು ಕೋರೈಸುವ ರೀತಿ ಬೆಳಕಿನ ವಿನ್ಯಾಸವನ್ನು ಮಾಡಲಾಗಿದ್ದು ಪ್ರಯಾಣಿಕರು, ಪ್ರವಾಸಿಗರ ಕಣ್ಮನ ಸೆಳೆಯುವಂತೆ ಮಾಡಿದೆ.
ಲೆಕ್ಸಾ ಲೈಟಿಂಗ್ ಸಿಸ್ಟಮ್ ನಲ್ಲಿ ಕೆಲಸ ಮಾಡುತ್ತಿರುವ ಮಂಗಳೂರು ಆಸುಪಾಸಿನ 25 ರಿಂದ 30 ಮಂದಿ ಯುವಕರು ಅಯೋಧ್ಯಾ ಧಾಮ ರೈಲ್ವೇ ನಿಲ್ದಾಣದಲ್ಲಿ ಲೈಟಿಂಗ್ ಮಾಡುವುದಕ್ಕಾಗಿ ಒಂದು ತಿಂಗಳ ಕಾಲ ವಿನ್ಯಾಸ ಮಾಡಿದ್ದಾರೆ. ಅನೇಕ ಮಲ್ಟಿ ನ್ಯಾಷನಲ್ ಬ್ರ್ಯಾಂಡ್ ಕಂಪೆನಿಗಳ ಮಧ್ಯೆ ಮೂಡುಬಿದಿರೆ ಮೂಲದ ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಸಂಸ್ಥೆ ಟೆಂಡರ್ ಪಡೆದು ಆಕರ್ಷಕ ರೀತಿಯಲ್ಲಿ ಬೆಳಕಿನ ವಿನ್ಯಾಸ ಮಾಡಿರುವುದು ಎಲ್ಲರ ಹುಬ್ಬೇರಿಸಿದೆ. ಲೆಕ್ಸಾ ಲೈಟಿಂಗ್ ಸಂಸ್ಥೆಯ ಹೆಸರನ್ನೂ ದೇಶದೆತ್ತರಕ್ಕೆ ಪ್ರಸಿದ್ಧಿ ಪಡೆಯುವಂತೆ ಮಾಡಿದೆ.
ಲೆಕ್ಸಾ ಲೈಟಿಂಗ್ ಸಂಸ್ಥೆ ಈ ಹಿಂದೆ ಬಳ್ಳಾರಿ ಪೋರ್ಟ್, ಬೆಳಗಾವಿಯ ಸುವರ್ಣ ಸೌಧ, ಒಡಿಸ್ಸಾದ ಪುರಿ ಜಗನ್ನಾಥ ದೇವಾಲಯ, ಗೋವಾದ ಬಿರ್ಲಾ ಟೆಂಪಲ್ ಗಳಿಗೂ ವಿಶೇಷ ಮಾದರಿಯ ಬೆಳಕಿನ ವ್ಯವಸ್ಥೆ ಮಾಡಿರುವುದು ಗಮನ ಸೆಳೆದಿತ್ತು. ಅಯೋಧ್ಯೆ ರಾಮಮಂದಿರದಿಂದ 12 ಕಿಮೀ ದೂರವಿರುವ ಈ ರೈಲು ನಿಲ್ದಾಣ ವಿದ್ಯುತ್ ದೀಪಗಳ ಆಕರ್ಷಣೆಯಿಂದಾಗಿ ಪ್ರವಾಸಿಗರನ್ನು ಆಕರ್ಷಿಸಿದೆ. ದೇಶದ ಮೂಲೆ ಮೂಲೆಯಿಂದ ಅಯೋಧ್ಯೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು ರೈಲಿನಿಂದ ಬಂದವರೆಲ್ಲರಿಗೂ ಇಲ್ಲಿನ ಲೈಟಿಂಗ್ ಆಕರ್ಷಿಸಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೆಕ್ಸಾ ಲೈಟಿಂಗ್ ಸಂಸ್ಥೆಯ ಪ್ರವರ್ತಕ ರೊನಾಲ್ಡ್ ಸಿಲ್ವನ್ ಡಿಸೋಜ, ನಾವು ದೇಶಾದ್ಯಂತ ಈ ರೀತಿ ಸ್ಪೆಷಲೈಸ್ಟ್ ಲೈಟಿಂಗ್ ವ್ಯವಸ್ಥೆಯನ್ನು 400 ಕ್ಕೂ ಹೆಚ್ಚು ಕಡೆ ಮಾಡಿದ್ದೇವೆ. ಈಗ ಅಯೋಧ್ಯೆ ರೈಲು ನಿಲ್ದಾಣದ ಲೈಟಿಂಗ್ ಮಾಡಲು ಕಾಂಟ್ರಾಕ್ಟ್ ಸಿಕ್ಕಿರುವುದು ನಮ್ಮ ಭಾಗ್ಯ. ಇದಕ್ಕಾಗಿ ನಮ್ಮಲ್ಲಿಯೇ ತಯಾರಿಸಿರುವ ವಿಶೇಷ ಮಾದರಿಯ 300ಕ್ಕೂ ಹೆಚ್ಚು ಆರ್ ಜಿಡಬ್ಲ್ಯೂ ಕಲರ್ ಲೈಟ್ ಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಯೂನಿಟ್ ಮಾಡಿದ್ದು ಪ್ರತಿ ಕ್ಷಣ ಬಣ್ಣಗಳ ಚಿತ್ತಾರ ಬದಲಾಗುತ್ತದೆ. ನೋಡುವವರಿಗೆ ಇದೊಂದು ವಿಶೇಷ ಅನುಭವ ನೀಡುತ್ತದೆ. ಮಂಗಳೂರಿನ ಯುವಕರು ಇದಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನವೀಕೃತ ಅಯೋಧ್ಯಾ ಧಾಮ ರೈಲ್ವೇ ನಿಲ್ದಾಣವನ್ನು ಪ್ರಧಾನಿ ಮೋದಿ ಡಿಸೆಂಬರ್ 30ರಂದು ಲೋಕಾರ್ಪಣೆ ಮಾಡಿದ್ದರು. ಅಂದಿನಿಂದಲೇ ವಿದ್ಯುತ್ ದೀಪಗಳ ಝಗಮಗ ಪ್ರವಾಸಿಗರ ಕಣ್ಣು ಕೋರೈಸತೊಡಗಿದೆ.
Leksa Lighting Technologies Private Limited, a prominent player in specialized lighting based in the town, has adorned the Ayodhya railway station with more than 300 RGBW colour lights. These dynamic lights showcase an array of countless colours, captivating tourists and enhancing the station's visual appeal.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 03:51 pm
Mangaluru Correspondent
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
Forensic Expert Dr Mahabala Shetty, Dharmasth...
01-08-25 10:02 pm
02-08-25 04:43 pm
Mangaluru Correspondent
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm