Mangalore Surathkal CM Siddaramaiah, Dk Shivakumar: ರೇಶನ್ ಕಾರ್ಡ್ ಸಿಗದ ಆಕ್ರೋಶ ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಬಗ್ಗೆ ಅವಾಚ್ಯ ನಿಂದಿಸಿ ವಿಡಿಯೋ, ಆರೋಪಿ ಸುರತ್ಕಲ್ ಪೊಲೀಸರ ಬಲೆಗೆ

16-01-24 09:36 pm       Mangalore Correspondent   ಕರಾವಳಿ

ರೇಶನ್ ಕಾರ್ಡ್ ಸಿಕ್ಕಿಲ್ಲವೆಂದು ಆಕ್ರೋಶಗೊಂಡ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅವಹೇಳನಕಾರಿ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟ ಘಟನೆ ನಡೆದಿದೆ.

ಮಂಗಳೂರು, ಜ.16: ರೇಶನ್ ಕಾರ್ಡ್ ಸಿಕ್ಕಿಲ್ಲವೆಂದು ಆಕ್ರೋಶಗೊಂಡ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅವಹೇಳನಕಾರಿ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟ ಘಟನೆ ನಡೆದಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿಯನ್ನು ಅವಾಚ್ಯವಾಗಿ ನಿಂದಿಸಿ ವಿಡಿಯೋ ಮಾಡಲಾಗಿತ್ತು. ರೇಶನ್ ಕಾರ್ಡ್ ಸಿಗುತ್ತಿಲ್ಲ. ಬಿಪಿಎಲ್ ರೇಶನ್ ಕಾರ್ಡ್ ಪಡೆಯಲು ವ್ಯವಸ್ಥೆ ಮಾಡಿ. ನಿಮ್ಮ ಹತ್ತು ಕೇಜಿ ಉಚಿತ ಅಕ್ಕಿ ಬೇಕಾಗಿಲ್ಲ. ನಮಗೆ ದುಡಿದು ತಿನ್ನಲು ಶರೀರ ಗಟ್ಟಿಯಿದೆ. ರೇಶನ್ ಕಾರ್ಡ್ ವ್ಯವಸ್ಥೆ ಮಾಡಲಾಗದ ನಿಮ್ಮ ಸರ್ಕಾರವೆಂದು ಇಬ್ಬರನ್ನೂ ಅವಾಚ್ಯವಾಗಿ ನಿಂದಿಸಿ ವಿಡಿಯೋ ಮಾಡಿದ್ದ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎನ್ಎಸ್ ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.

ಸುರತ್ಕಲ್ ಠಾಣೆಯಲ್ಲಿ ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಅನಿಲ್ ಕುಮಾರ್ (34)ನನ್ನು ಬಂಧಿಸಿದ್ದಾರೆ. ಅನಿಲ್ ಮೂಲತಃ ಶಿರಸಿ ನಿವಾಸಿಯಾಗಿದ್ದು, 12 ವರ್ಷಗಳಿಂದ ಸುರತ್ಕಲ್ ಬಳಿ ಬಾಡಿಗೆ ಮನೆಯೊಂದರಲ್ಲಿ ಕುಟುಂಬದ ಜೊತೆಗೆ ವಾಸವಿದ್ದಾನೆ. ಸರ್ಕಾರಿ ಸೌಲಭ್ಯ ಪಡೆಯಲು ರೇಶನ್ ಕಾರ್ಡ್ ಪಡೆಯುವುದಕ್ಕಾಗಿ ಅಲೆದಾಡಿದ್ದ. ಸರ್ವರ್ ಸಮಸ್ಯೆಯಿಂದ ರೇಶನ್ ಕಾರ್ಡ್ ಸಿಗದೆ ಹತಾಶೆಗೊಂಡು ವಿಡಿಯೋ ಮಾಡಿದ್ದ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿ ವಿರುದ್ಧ 153ಎ, 505, 504 ಸೆಕ್ಷನ್ ಅಡಿ ಕೇಸು ದಾಖಲು ಮಾಡಲಾಗಿದೆ.

Mangalore Surathkal man arrested for talking derogatory words against cm Siddaramaiah and Dk Shivakumar. The arrested has been identified as Anil Kumar. The arrest was made after Suhan Alva from congress filed a police complaint.