ಬ್ರೇಕಿಂಗ್ ನ್ಯೂಸ್
17-01-24 03:00 pm Giridhar Shetty, Mangalore Correspondent ಕರಾವಳಿ
ಮಂಗಳೂರು, ಜ.16: ಸುಯೆಜ್ ಕಾಲುವೆ ಮತ್ತು ಕೆಂಪು ಸಮುದ್ರದಲ್ಲಿ ಸಂಚರಿಸುವ ಹಡಗುಗಳ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸುತ್ತಿರುವುದರಿಂದ ಆಮದು- ರಫ್ತನ್ನೇ ನಂಬಿಕೊಂಡ ಮಂಗಳೂರಿನ ಗೋಡಂಬಿ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಆಫ್ರಿಕಾ, ಯುರೋಪ್ ಮತ್ತು ಅಮೆರಿಕಾಗೆ ಭಾರತದಿಂದ ಗೋಡಂಬಿ ರಫ್ತು ಮತ್ತು ಆಮದು ವಹಿವಾಟು ಹೆಚ್ಚಾಗಿ ಹಡಗುಗಳ ಮೂಲಕವೇ ನಡೆಯತ್ತಿರುವುದರಿಂದ ಸದ್ಯಕ್ಕೆ ಹಡಗಿನ ಸಂಚಾರದಲ್ಲಿ ವ್ಯತ್ಯಯ ಆಗಿರುವುದು ವ್ಯಾಪಾರಕ್ಕೆ ತೊಡಕಾಗಿದೆ.
ಮಂಗಳೂರು ಸೇರಿದಂತೆ ಕರಾವಳಿಯ ಬಹುತೇಕ ಗೋಡಂಬಿ ಫ್ಯಾಕ್ಟರಿಗಳಿಗೆ ಕಚ್ಚಾ ಗೋಡಂಬಿ ಆಫ್ರಿಕಾ ದೇಶಗಳಿಂದ ಪೂರೈಕೆ ಆಗುತ್ತದೆ. ಅದನ್ನು ಸಂಸ್ಕರಿಸಿ ಮತ್ತೆ ಗಲ್ಫ್ ದೇಶಗಳಿಗೆ ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಸದ್ಯಕ್ಕೆ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಸಾಗುವ ಹಡಗುಗಳನ್ನು ಟಾರ್ಗೆಟ್ ಮಾಡಿರುವುದರಿಂದ ಆ ದಾರಿಯಲ್ಲಿ ಕಂಟೇನರ್ ಹಡಗು ಸಂಚರಿಸಲು ಹಿಂದೇಟು ಹಾಕಿವೆ. ಯುರೋಪ್ ಅಥವಾ ಅಮೆರಿಕಾ ಕಡೆಗೆ ಸಾಗಲು ಆಫ್ರಿಕಾ ಖಂಡವನ್ನು ಸತ್ತು ಬಳಸಿ ಹೋಗಬೇಕಾಗಿದೆ. ಯುರೋಪ್ ತಲುಪಲು ಕೆಂಪು ಸಮುದ್ರ ಅಥವಾ ಸೂಯೆಜ್ ಕಾಲುವೆ ಹತ್ತಿರದ ದಾರಿಯಾಗಿದ್ದರೆ, ಸೌತ್ ಆಫ್ರಿಕಾದ (ಕೇಪ್ ಆಫ್ ಗುಡ್ ಹೋಪ್) ಸುತ್ತು ಬಳಸಿ ಸಾಗಿದರೆ ಹೆಚ್ಚಿನ ದೂರವನ್ನು ಕ್ರಮಿಸಬೇಕಾಗುತ್ತದೆ. ಇದರಿಂದ 6300 ಮೈಲ್ ಹೆಚ್ಚುವರಿ ದೂರ ಮತ್ತು 15 ದಿನಗಳ ಸಂಚಾರ ಅಗತ್ಯವಾಗುತ್ತದೆ. ಇದರಿಂದ ಪ್ರತಿ ಕಂಟೇನರ್ ಹಡಗಿನಲ್ಲಿ ಸುಮಾರು ಎರಡು ಸಾವಿರ ಡಾಲರ್ ನಷ್ಟು ನಷ್ಟವಾಗುತ್ತಿದ್ದು, ಇದರಿಂದ ರಫ್ತು ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.
ಹೌತಿ ಬಂಡುಕೋರರ ದಾಳಿ ಭಯದಿಂದಾಗಿ ಪ್ರಸಕ್ತ ಸುಮಾರು 19 ಸಾವಿರ ಹಡಗು ಮತ್ತಿತರ ವೆಸಲ್ಸ್ ಗಳು ಸಮುದ್ರ ಮಧ್ಯೆ ಸಿಲುಕಿಕೊಂಡಿದ್ದು ನಿಗದಿ ಜಾಗ ತಲುಪಲು ವಿಳಂಬಗೊಂಡು ನಷ್ಟಕ್ಕೀಡಾಗಿವೆ. ಒಂದೆಡೆ ರಫ್ತು ಮತ್ತು ಆಮದು ವಹಿವಾಟಿಗೆ ಇದರಿಂದ ಹೊಡೆತ ಬಿದ್ದಿದ್ದರೆ, ಮತ್ತೊಂದೆಡೆ ಬಂದರುಗಳಲ್ಲಿ ಕಂಟೇನರ್ ನಿಲ್ಲಿಸಲು ಸಾಧ್ಯವಾಗದೆ ಸಂಕಷ್ಟ ಉಂಟಾಗಿದೆ. ಪೂರ್ವ ಮತ್ತು ಪಶ್ಚಿಮ ಆಫ್ರಿಕಾ ದೇಶಗಳಿಂದಲೇ ಹೆಚ್ಚಾಗಿ ಭಾರತಕ್ಕೆ ಕಚ್ಚಾ ಗೋಡಂಬಿ ಪೂರೈಕೆಯಾಗುತ್ತಿದೆ. ಇವುಗಳಿಗೆ ಕೆಂಪು ಸಮುದ್ರ ಮಾರ್ಗ ಅನಿವಾರ್ಯ ಅಲ್ಲದಿದ್ದರೂ, ಕಂಟೇನರ್ ಹಡಗು ಸಂಚಾರ ಕಷ್ಟವಾಗಿರುವುದು, ರಫ್ತು ವಹಿವಾಟಿಗೆ ಪೆಟ್ಟು ಬಿದ್ದಿರುವುದರಿಂದ ಒಟ್ಟಾರೆಯಾಗಿ ಗೋಡಂಬಿ ಉದ್ಯಮಕ್ಕೆ ಹೊಡೆತ ಬಿದ್ದಂತಾಗಿದೆ.
ಸದ್ಯ ಭಾರತಕ್ಕೆ ಬೇಕಾಗುವ 13 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಗೋಡಂಬಿ ವಿದೇಶಗಳಿಂದಲೇ ಪೂರೈಕೆಯಾಗುತ್ತದೆ. ಕರ್ನಾಟಕ, ಕೇರಳ ಕರಾವಳಿಯ ಹೆಚ್ಚಿನ ಗೇರು ಬೀಜ ಫ್ಯಾಕ್ಟರಿಗಳು ಆಫ್ರಿಕಾದ ಗೋಡಂಬಿಯನ್ನೇ ನಂಬಿಕೊಂಡಿವೆ. ಕಚ್ಚಾ ಗೋಡಂಬಿ ಸಕಾಲದಲ್ಲಿ ಪೂರೈಕೆಯಾಗದೇ ಇದ್ದರೆ, ಇತ್ತ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಗೆ ಕೆಲಸ ಇಲ್ಲದಾಗುತ್ತದೆ. ಫ್ಯಾಕ್ಟರಿ ಮಾಲೀಕರು ಕಾರ್ಮಿಕರಿಗೆ ಸುಮ್ಮನೆ ಕೂಲಿ ಕೊಡಲು ತಯಾರಿಲ್ಲದೆ, ಗೋಡಂಬಿ ಪೂರೈಕೆ ಇಲ್ಲವೆಂದು ಫ್ಯಾಕ್ಟರಿ ಬಂದ್ ಮಾಡಲು ಮುಂದಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಚ್ಚಾ ಗೋಡಂಬಿ ಕೊರತೆ ಹೀಗೇ ಮುಂದುವರಿದರೆ ಫ್ಯಾಕ್ಟರಿಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಗುತ್ತದೆ ಎಂದು ಗೋಡಂಬಿ ಉದ್ಯಮಿಗಳು ಹೇಳುತ್ತಿದ್ದಾರೆ.
ಇಸ್ರೇಲ್ ಹಮಾಸ್ ಉಗ್ರರ ಮೇಲೆ ದಾಳಿ ಮುಂದುವರಿಸಿದ್ದರಿಂದ ಪ್ರತಿಯಾಗಿ ಯೆಮನ್ ದೇಶದ ಹೌತಿ ಬಂಡುಕೋರರು ಹಮಾಸ್ ಉಗ್ರರ ಪರವಾಗಿ ಇಸ್ರೇಲ್ ಪರ ನಿಂತಿರುವ ದೇಶಗಳ ಹಡಗುಗಳನ್ನು ಟಾರ್ಗೆಟ್ ಮಾಡಿದ್ದಾರೆ. ಯೆಮನ್ ಕರಾವಳಿಯಿಂದ ಸಾಗುವ ಕೆಂಪು ಸಮುದ್ರದಲ್ಲಿ ಸಾಗುವ ಹಡಗುಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕದಿಂದ ಡ್ರೋಣ್ ದಾಳಿ ಮತ್ತು ಹಡುಗಗಳಿಗೆ ಭದ್ರತೆ ಒದಗಿಸಿದ್ದರೂ ಕದ್ದು ಮುಚ್ಚಿ ಟ್ಯಾಂಕರ್ ಮೇಲೆ ಹೌತಿಗಳು ದಾಳಿ ನಡೆಸುತ್ತಿರುವುದರಿಂದ ಬೃಹತ್ ಕಂಟೇನರ್ ಹಡಗುಗಳು ಆ ದಾರಿಯಲ್ಲಿ ಹೋಗದೆ ಸುರಕ್ಷಿತವಾಗಿರುವ ಸೌತ್ ಆಫ್ರಿಕಾ ಸುತ್ತು ಹಾಕ್ಕೊಂಡು ಸಾಗುತ್ತಿವೆ. ಇದರಿಂದ ಭಾರತದ ವಿದೇಶಿ ವಹಿವಾಟಿಗೆ ಪೆಟ್ಟು ಬಿದ್ದಿದ್ದು ರಫ್ತು ಮತ್ತು ಆಮದು ಕ್ಷೇತ್ರದಲ್ಲಿ ದರ ಹೆಚ್ಚಳಕ್ಕೆ ಕಾರಣವಾಗಿದೆ.
Merchant ship en route to Mangalore hit by drone, Cashew factories in big time trouble in import and export. A commercial tanker, MV Chem Pluto transiting through the Arabian Sea on Saturday reported an explosion and caught fire when it was hit by a drone, prompting the Indian Coast Guard and Indian Navy to deploy their ships and aircraft to investigate the incident on the high seas.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 03:51 pm
Mangaluru Correspondent
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
Forensic Expert Dr Mahabala Shetty, Dharmasth...
01-08-25 10:02 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm