ಬ್ರೇಕಿಂಗ್ ನ್ಯೂಸ್
17-01-24 10:03 pm Mangalore Correspondent ಕರಾವಳಿ
ಮಂಗಳೂರು, ಜ.17: ಈ ಬಾರಿಯ ಮಂಗಳೂರು ಲಿಟ್ ಫೆಸ್ಟ್ ಮೂರು ದಿನಗಳ ಕಾಲ ನಡೆಯಲಿದ್ದು, ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರಿನಲ್ಲಿ ಜ.19, 20 ಮತ್ತು 21ರಂದು ನಡೆಯಲಿದೆ.
ಮಹಾನಗರಗಳಲ್ಲಿ ಸೀಮಿತವಾಗಿದ್ದ ಲಿಟರೇಚರ್ ಫೆಸ್ಟ್ ಅನ್ನು ಭಾರತ್ ಫೌಂಡೇಶನ್ ವತಿಯಿಂದ 2018ರಿಂದ ಮಂಗಳೂರಿನಲ್ಲಿ ನಡೆಸಲಾಗುತ್ತಿದ್ದು, ಈ ಬಾರಿ ಆರನೇ ವರ್ಷದ ಆವೃತ್ತಿಯನ್ನು ಇನ್ನಷ್ಟು ವಿಭಿನ್ನವಾಗಿ ನಡೆಸಲು ಆಯೋಜಕರು ತೀರ್ಮಾನಿಸಿದ್ದಾರೆ. ಮೂರು ದಿನಗಳಲ್ಲಿ ಒಟ್ಟು 29 ಅವಧಿ ಇರಲಿದ್ದು ಕನ್ನಡ, ಇಂಗ್ಲಿಷ್, ತುಳು ಭಾಷೆಯಲ್ಲಿ ವೈವಿಧ್ಯಮಯ ಸಾಹಿತ್ಯ ಪ್ರಕಾರಗಳ ವಿಮರ್ಶೆ, ಹರಟೆಕಟ್ಟೆ, ಪ್ರಚಲಿತ – ಅಂತರಾಷ್ಟ್ರೀಯ ವಿದ್ಯಮಾನಗಳ ಚರ್ಚೆ ನಡೆಯಲಿದೆ. 60ಕ್ಕೂ ಅಧಿಕ ಸಾಹಿತ್ಯ ದಿಗ್ಗಜರು ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಭಾರತ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಲಕರ್ಣಿ ತಿಳಿಸಿದ್ದಾರೆ.
ಪ್ರತಿವರ್ಷ ಮಂಗಳೂರು ಲಿಟ್ ಫೆಸ್ಟ್ ‘’ದಿ ಐಡಿಯಾ ಆಫ್ ಭಾರತ್’’ ಹೆಸರಲ್ಲಿ ಚಿಂತನ- ಮಂಥನ ನಡೆಯುತ್ತಿದೆ. ಈ ಬಾರಿಯ ಲಿಟ್ ಫೆಸ್ಟ್ ಗೌರವಕ್ಕೆ ಧಾರವಾಡದ ವನಿತಾ ಸೇವಾ ಸಮಾಜ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಜ.19ರಂದು ಸಂಜೆ 5 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ, ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಸಂಸ್ಥೆ ಸದಸ್ಯ ಕಾರ್ಯದರ್ಶಿ ಡಾ.ಧನಂಜಯ ಸಿಂಗ್, ರಕ್ಷಣಾ ಸಚಿವರ ಸಲಹೆಗಾರ ಲೆ.ಜ.ವಿನೋದ್ ಖಂಡಾರೆ, ಹೆಸರಾಂತ ಕಲಾವಿದೆ ರಾಧೇ ಜಗ್ಗಿ, ನಿಟ್ಟೆ ವಿವಿಯ ಡೀನ್ ಡಾ.ವಿನಯ್ ಹೆಗ್ಡೆ, ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ರವಿ ಮತ್ತು ವನಿತಾ ಸೇವಾ ಸಮಾಜ ಧಾರವಾಡ ಇದರ ಕಾರ್ಯದರ್ಶಿ ಮಧುರಾ ಹೆಗಡೆ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ಹೆಸರಾಂತ ಭರತನಾಟ್ಯ ಕಲಾವಿದೆ ರಾಧೇ ಜಗ್ಗಿ ಅವರಿಂದ ಭರತನಾಟ್ಯ ಕಾರ್ಯಕ್ರಮ ಇರಲಿದೆ.
ಐಡಿಯಾ ಆಫ್ ಭಾರತ್ ಪರಿಕಲ್ಪನೆಯಡಿ ದೇಶ- ವಿದೇಶದ ಹೆಸರಾಂತ 13 ಜನ ಲೇಖಕರು ಬರೆದಿರುವ ಪುಸ್ತಕವನ್ನು ಉದ್ಘಾಟನೆ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು. ಈ ಬಾರಿ ಸೇನಾಪಡೆಯಲ್ಲಿ ಮಹಿಳೆಯರ ಸ್ಥಾನ ಕುರಿತಾಗಿ ಮಹಿಳಾ ಸೇನಾಧಿಕಾರಿಗಳೇ ಪಾಲ್ಗೊಂಡು ಮಾತನಾಡಲಿದ್ದಾರೆ. ಕ್ಯಾ.ಸಜಿತಾ ನಾಯರ್, ಮೇಜರ್ ರಮಾ ಶರ್ಮಾ, ಲೆ.ಕರ್ನಲ್ ಅಂಕಿತಾ ಶ್ರೀವಾಸ್ತವ ಪ್ರತ್ಯೇಕ ಗೋಷ್ಟಿ ಇರಲಿದೆ. ಭಾರತ ಯಾತ್ರೆ- ಒಂದು ಮಥನ ಕುರಿತಾಗಿ ಲಕ್ಷೀಶ ತೋಳ್ಪಾಡಿ ಅವರ ಗೋಷ್ಠಿ ಇದೆ. ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವುದು ಹೇಗೆ ಎನ್ನುವ ಬಗ್ಗೆ ಚಿಣ್ಣರ ಅಂಗಳ ಎನ್ನುವ ಗೋಷ್ಟಿಯನ್ನು ವಂದನಾ ರೈ ನಡೆಸಿಕೊಡಲಿದ್ದಾರೆ ಎಂದು ಲಿಟ್ ಫೆಸ್ಟ್ ಕಾರ್ಯಕ್ರಮಗಳ ಬಗ್ಗೆ ಇನ್ನೊಬ್ಬ ಟ್ರಸ್ಟಿ ಶ್ರೀರಾಜ್ ಗುಡಿ ವಿವರ ನೀಡಿದರು.
ದೃಶ್ಯ ಮಾಧ್ಯಮ- ಸಾಧನೆ, ಸವಾಲುಗಳು ಕುರಿತಾಗಿ ಪ್ರಕಾಶ್ ಬೆಳವಾಡಿ, ನಟಿ ಸುಧಾರಾಣಿ, ಝೀ ಟಿವಿಯ ಪರಮೇಶ್ವರ್ ಗುಂಡ್ಕಲ್ ಅವರನ್ನೊಳಗೊಂಡ ಗೋಷ್ಟಿ ಇದೆ. ಕಥೆಗಳ ಬಗ್ಗೆ ಹೆಸರಾಂತ ಕತೆಗಾರ ಜೋಗಿ ಮತ್ತು ಶ್ರೀಧರ್ ಬಳೆಗಾರ ಮಾತನಾಡಲಿದ್ದಾರೆ. ತುಳು ಜನಪದ, ಸಿರಿ ವೈಭವ ಕುರಿತಾಗಿ ಡಾ.ರವೀಶ ಪಡುಮಲೆ, ಡಾ.ಗಾಯತ್ರಿ ನಾವಡ, ಡಾ.ರೋಹಿಣಾಕ್ಷಿ ಶಿರ್ಲಾಲು ಸಂವಾದ ಇದೆ. ಆಧುನಿಕ ತಂತ್ರಜ್ಞಾನ- ಎಐ ಮತ್ತು ಲಿಟರೇಟರ್ ಕುರಿತಾಗಿ ಸುರೇಶ್ ನರಸಿಂಹಯ್ಯ, ಬೇಳೂರು ಸುದರ್ಶನ್ ಗೋಷ್ಟಿ ನಡೆಸಲಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಈಶ್ವರ್ ಪ್ರಸಾದ್ ಶೆಟ್ಟಿ, ಸುಜಿತ್ ಪ್ರತಾಪ್, ದಿಶಾ ಶೆಟ್ಟಿ, ದುರ್ಗಾಪ್ರಸಾದ್ ಕಟೀಲು ಇದ್ದರು.
The three-day sixth edition of Mangaluru Lit Fest, 2024, packed with 29 sessions on different topics, will kickstart on Friday evening at the T.M.A. Pai Convention Hall on M.G. Road and conclude on January 21.
21-02-25 10:47 pm
Bangalore Correspondent
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
Siddaramaiah, MUDA case, Vijayendra: ಮುಡಾ ಹಗರ...
20-02-25 10:06 pm
22-02-25 09:48 pm
HK News Desk
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
Kasargod News, Crime: ಉಕ್ಕಿನಡ್ಕ ; ಕೆರೆಗೆ ಬಿದ್...
22-02-25 01:31 pm
Donald Trump, Modi, India: ಭಾರತದಲ್ಲಿ ಮೋದಿಯನ್ನ...
21-02-25 01:23 pm
22-02-25 05:21 pm
Mangalore Correspondent
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
Mangalore, Ullal, B R Rao, Kannada literary c...
21-02-25 07:21 pm
Mangalore Congress, Satish Jarkiholi; ಗಾಂಧಿ-...
21-02-25 12:40 am
22-02-25 10:36 pm
Bangalore Correspondent
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm
Madikeri police, Fake Scheme, Mangalore crime...
18-02-25 06:04 pm