ಬ್ರೇಕಿಂಗ್ ನ್ಯೂಸ್
18-01-24 05:28 pm Mangalore Correspondent ಕರಾವಳಿ
ಮಂಗಳೂರು, ಜ.18: ಮೋದಿಯನ್ನು ಮತ್ತೆ ಪ್ರಧಾನಿ ಮಾಡುವುದಕ್ಕಾಗಿ ಮಂಗಳೂರಿನಲ್ಲಿ ಮತ್ತೊಂದು ಮೋದಿ ಬ್ರಿಗೇಡ್ ಆರಂಭಗೊಂಡಿದೆ. ಹಿಂದು ಸಂಘಟನೆಯಲ್ಲಿದ್ದವರೇ ಒಂದಷ್ಟು ಮಂದಿ ಸೇರಿ ಹೊಸ ಬ್ರಿಗೇಡ್ ಮಾಡಿಕೊಂಡಿದ್ದಾರೆ. ಜನವರಿ 21ರಂದು ನಗರದ ಟಿವಿ ರಮಣ್ ಪೈ ಸಭಾಂಗಣದಲ್ಲಿ ಮೋದಿ ಬ್ರಿಗೇಡ್ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ನಮೋ ಬ್ರಿಗೇಡ್ ಇರುವಾಗ ಮೋದಿ ಬ್ರಿಗೇಡ್ ಅಗತ್ಯ ಏನಿದೆ ಎಂದು ಕೇಳಿದಾಗ, ನಮಗೆ ಅಗತ್ಯ ಇದೆ. ಮೋದಿಯನ್ನು ಮತ್ತೆ ಪ್ರಧಾನಿ ಮಾಡುವುದಕ್ಕಾಗಿ ಅಭಿಯಾನ ನಡೆಸುತ್ತೇವೆ ಎಂದರು. ಅದಕ್ಕೆ ಬಿಜೆಪಿಯವರು ಇದ್ದಾರಲ್ಲಾ, ನೀವು ಯಾಕೆ ಮಾಡೋದು ಎಂದು ಕೇಳಿದ್ದಕ್ಕೆ, ನಾವು ಕೂಡ ಪ್ರತ್ಯೇಕವಾಗಿ ಮಾಡುತ್ತೇವೆ ಎಂದರು. ಬಿಜೆಪಿಯಲ್ಲಿ ಲೈಟ್ ಕಂಬ ನಿಲ್ಲಿಸಿದರೂ ಗೆಲ್ಲುತ್ತಾರೆ ಎನ್ನುವ ಭಾವನೆ ಇದೆಯಲ್ಲಾ, ನೀವೇನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ, ನಾವು ಅಭ್ಯರ್ಥಿ ಯಾರಾದ್ರೂ ಗೆಲ್ಲಿಸಲು ಶ್ರಮಿಸುತ್ತೇವೆ, ಯಾವ ಲೈಟ್ ಕಂಬ ನಿಲ್ಲಿಸಿದರೂ ನಾವು ಮತ ಕೇಳುತ್ತೇವೆ ಎಂದರು.
ಅಭ್ಯರ್ಥಿ ಬದಲಾವಣೆ ಬಗ್ಗೆ ಬಿಜೆಪಿಯಲ್ಲೇ ಅಭಿಯಾನ ನಡೆಸುತ್ತಿದ್ದಾರಲ್ಲಾ ಎಂದು ಕೇಳಿದ್ದಕ್ಕೆ, ನಾವು ಬಿಜೆಪಿ ಕೇಂದ್ರ ಸಮಿತಿ ಯಾರನ್ನು ಅಭ್ಯರ್ಥಿ ಮಾಡುತ್ತದೋ ಅವರಿಗೆ ಬೆಂಬಲ ನೀಡುತ್ತೇವೆ ಎಂದರು. ನೀವು ಬಿಜೆಪಿಯಲ್ಲಿದ್ದೀರಾ ಎಂಬ ಪ್ರಶ್ನೆಗೆ, ನಾವು ಯಾರೂ ಬಿಜೆಪಿಯಲ್ಲಿ ಪ್ರತಿನಿಧಿಗಳಾದವರು ಇಲ್ಲ. ಬಜರಂಗದಳ, ಹಿಂದು ಜಾಗರಣಾ ವೇದಿಕೆಯಲ್ಲಿದ್ದೇವೆ ಎಂದರು. ಚುನಾವಣೆ ಕಾರಣಕ್ಕೆ ಮೋದಿ ಬ್ರಿಗೇಡ್ ಮಾಡುತ್ತಿದ್ದೀರಾ, ನೀವು ಮೋದಿಯ ಯಾವ ವಿಚಾರವನ್ನು ಹೆಚ್ಚು ಲೈಕ್ ಮಾಡುತ್ತೀರಿ ಎಂದು ಕೇಳಿದ್ದಕ್ಕೆ, ಮೋದಿಯ ಯೋಜನೆಗಳನ್ನು ಲೈಕ್ ಮಾಡುತ್ತೇವೆ, ಜನಧನ್ ಖಾತೆಗಳನ್ನು ಮಾಡಿ ಎಲ್ಲರಿಗೂ ಬ್ಯಾಂಕ್ ಖಾತೆ ಮಾಡಿಸಿದ್ದಾರೆ ಎಂದಾಗ, ಜನಧನ್ ಖಾತೆಯಲ್ಲಿ ಸ್ಕ್ಯಾಮ್ ಆಗಿದೆಯೆಂಬ ಆರೋಪ ಇದೆಯಲ್ಲ ಎಂದು ಮರು ಪ್ರಶ್ನೆ ಹಾಕಿದರು.
ನೀವು ಇಲ್ಲಿನ ಸಂಸದರ ಕೆಲಸವನ್ನೇ ಹೇಳಬೇಕಲ್ಲಾ ಎಂದು ಹೇಳಿದಾಗ, ಹೌದು.. ಸಂಸದರು ಒಳ್ಳೆಯ ಕೆಲಸ ಮಾಡಿದ್ದಾರೆ, ಅದನ್ನು ಹೇಳುತ್ತೇವೆ ಎಂದರು. ಪತ್ರಕರ್ತರ ಉಲ್ಟಾ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಎಡವಿದ್ದೂ ಆಯಿತು. ಸುದ್ದಿಗೋಷ್ಟಿಯಲ್ಲಿ ಟಿಕ್ಕಿ ರವಿ, ಶಿವಪ್ರಸಾದ್, ಪದ್ಮನಾಭ, ದಿನೇಶ್ ಕೆ. ಮತ್ತಿತರರು ಇದ್ದರು.
Another Modi Brigade to be inaugurated in Mangalore, says we will make modi win for sure.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm