ಬ್ರೇಕಿಂಗ್ ನ್ಯೂಸ್
21-11-20 06:43 pm Mangalore Correspondent - Special Report ಕರಾವಳಿ
ಮಂಗಳೂರು, ನವೆಂಬರ್ 21: ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಬೇಕೆಂದು ಕಾಂಗ್ರೆಸಿನವರು ಹೋರಾಟ ಆರಂಭಿಸಿದ್ದಾರೆ. ಅದಾನಿ ಕಂಪನಿಯವರು ಗುತ್ತಿಗೆ ಪಡೆದ ಬಳಿಕ ಹೆಸರನ್ನೇ ಬದಲಾಯಿಸಿದ್ರು ಎನ್ನುವ ಆರೋಪವನ್ನೂ ಮಾಡುತ್ತಿದ್ದಾರೆ. ನಿಜಕ್ಕಾದರೆ, ಈ ಹೋರಾಟ, ಹಾರಾಟದಿಂದ ಲಾಭ ಏನಾದ್ರೂ ಇದೆಯೇ ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.
ಯಾವುದೇ ವಿಮಾನ ನಿಲ್ದಾಣದ ಹೆಸರು ಬದಲಿಸಬೇಕಿದ್ದರೆ ಕೇಂದ್ರ ಸರಕಾರದ ವಿಮಾನ ಯಾನ ಸಚಿವಾಲಯವೇ ಮಾಡಬೇಕು. ಈ ಹಿಂದೆ, ವಾಜಪೇಯಿ ಸರಕಾರ ಇದ್ದಾಗ ಕೊಚ್ಚಿನ್ ಏರ್ಪೋರ್ಟ್ ಅನ್ನು ಶಂಕರಾಚಾರ್ಯ ಏರ್ಪೋರ್ಟ್ ಎಂಬುದಾಗಿ ಹೆಸರಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಜನರು ಈ ಬೇಡಿಕೆ ಮುಂದಿಟ್ಟರೂ, ರಾಜ್ಯ ಸರಕಾರದಿಂದ ಅಂಥ ಪ್ರಸ್ತಾವನೆ ಹೋಗಲೇ ಇಲ್ಲ. ಆಗಿನ ವಾಜಪೇಯಿ ಸರಕಾರಕ್ಕೆ ಇಚ್ಛೆ ಇತ್ತಾದರೂ, ರಾಜ್ಯ ಸರಕಾರದಿಂದ ಶಿಫಾರಸು ಬಂದಿಲ್ಲವೆಂದು ಕೈಬಿಡಲಾಗಿತ್ತು ಎಂದು ನೆನಪಿಸುತ್ತಾರೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಹಿಂದೆ ನಿರ್ದೇಶಕರಾಗಿದ್ದ ಎಂ.ಆರ್.ವಾಸುದೇವ್.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಂತಲೇ ಹೆಸರು ಇರುವುದು. ಅದಾನಿ ಕಂಪನಿಯವರು ನಿರ್ವಹಣೆ ಗುತ್ತಿಗೆ ಪಡೆದಿದ್ದು ಮಾತ್ರ. ಎಂಐಎ ಹೆಸರಿನ ಜೊತೆಗೆ ಅದಾನಿ ಏರ್ಪೋರ್ಟ್ಸ್ ಅನ್ನುವ ಸಿಂಬಲ್ ಮಾತ್ರ ಹೆಚ್ಚುವರಿ ಬಂದಿದೆ. ಅದಾನಿ ಕಂಪನಿಯವರು ಆರು ಕಡೆ ಏರ್ಪೋರ್ಟ್ ಉಸ್ತುವಾರಿ ಪಡೆದಿದ್ದಾರೆ. ಎಲ್ಲ ಕಡೆಯೂ ತಮ್ಮ ಸಿಂಬಲ್ ಹಾಕಿದ್ದಾರೆ. ಇಷ್ಟಕ್ಕೇ ಏನಾಗುತ್ತದೆ ಎನ್ನುತ್ತಾರೆ ವಾಸುದೇವ್.
2004ರಲ್ಲಿ ವರ್ಷಕ್ಕೆ ಎರಡು ಲಕ್ಷ ಪ್ಯಾಸೆಂಜರ್ ಹೋಗುವುದು, ಬರುವುದಿತ್ತು. ಈಗ ಪ್ಯಾಸೆಂಜರ್ ಸಂಖ್ಯೆ ವರ್ಷಕ್ಕೆ 25 ಲಕ್ಷಕ್ಕೆ ಹೋಗಿದೆ. ಅದಾನಿ ಕಂಪನಿಯವರು ಪ್ರತಿ ಪ್ಯಾಸೆಂಜರ್ ಮೇಲೆ ಕೇಂದ್ರ ಸರಕಾರಕ್ಕೆ 115 ರೂಪಾಯಿ ನೀಡುವ ಕಂಟ್ರಾಕ್ಟ್ ಪಡೆದಿದೆ. ಉಳಿದಂತೆ, ನಿಲ್ದಾಣದ ಭದ್ರತೆ ವಿಭಾಗದ ಸಿಐಎಸ್ಎಫ್, ಕಸ್ಟಮ್ಸ್ ಕೇಂದ್ರ ಸರಕಾರದ ಅಡಿಯಲ್ಲೇ ಬರುತ್ತದೆ. ನಿರ್ವಹಣೆಯ ತಲೆಬಿಸಿಯೇ ಇಲ್ಲದೆ, ವಿಮಾನ ಯಾನ ಸಚಿವಾಲಯಕ್ಕೆ 115 ರೂ.ನಂತೆ ಎಷ್ಟು ಹಣ ಕ್ರೋಡೀಕರಣ ಆಗಲ್ಲ ಎಂದು ಪ್ರಶ್ನೆ ಮಾಡುತ್ತಾರೆ.
ಬರೀಯ ಹೆಸರಿನಿಂದ ಏನೂ ಬದಲಾಗಲ್ಲ. ಖಾಸಗೀಕರಣ ಈಗ ಹೊಸತೂ ಅಲ್ಲ. ಮುಂಬೈ, ದೆಹಲಿ ಏರ್ಪೋರ್ಟನ್ನು 1995ರಲ್ಲಿಯೇ ಖಾಸಗಿಯವರಿಗೆ ನೀಡಲಾಗಿತ್ತು. ದೇಶದ ಅಷ್ಟೂ ವಿಮಾನ ನಿಲ್ದಾಣಗಳ ಪೈಕಿ 40 ಶೇಕಡಾದಷ್ಟು ರೆವಿನ್ಯೂ ಬರುವುದು ಮುಂಬೈ ಮತ್ತು ದೆಹಲಿ ಏರ್ಪೋರ್ಟ್ ನಲ್ಲಿ. ಬೆಂಗಳೂರು, ಕಣ್ಣೂರು, ಕೊಚ್ಚಿ ಹೀಗೆ ಬಹುತೇಕ ಎಲ್ಲವನ್ನೂ ಖಾಸಗಿಯವರಿಗೆ ನೀಡಲಾಗಿದೆ. ಈಗ ಉಳಿದಿರುವುದು ದೊಡ್ಡ ಏರ್ಪೋರ್ಟ್ ಗಳ ಪೈಕಿ ಚೆನ್ನೈ ಮತ್ತು ಕಲ್ಕತ್ತಾ ಮಾತ್ರ. ಅದನ್ನು ಖಾಸಗಿಯವರಿಗೆ ಕೊಡುವುದಕ್ಕೆ ಅಲ್ಲಿನ ಜನ ವಿರೋಧಿಸಿ ಪ್ರತಿಭಟಿಸಿದ್ದರಿಂದ ಉಳಿದಿದೆ.
ರನ್ ವೇ ವಿಸ್ತರಣೆ ಆಗಲು ಆಗ್ರಹಿಸಿ
ಮಂಗಳೂರಿನಲ್ಲಿ ರನ್ ವೇ ವಿಸ್ತರಣೆ ಆಗಬೇಕು ಎನ್ನುವುದು ಹಿಂದಿನಿಂದಲೂ ಕೇಳಿಬರುತ್ತಿದ್ದ ಕೂಗು. ಈಗ 2.45 ಕಿಮೀ ಉದ್ದದ ರನ್ ವೇ ಇರುವುದು. ಏಕ್ಚುವಲೀ 3.1 ಕಿಮೀ ಉದ್ದ ಇರಬೇಕು. ಬಜ್ಪೆ ಕಡೆಯಿಂದ ಹೋದರೆ, ಏರ್ಪೋರ್ಟಿನದ್ದೇ ಜಾಗವೂ ಇದೆ. ಸಿದ್ದಾರ್ಥ ನಗರ, ಮೂಡಾ ಜಂಕ್ಷನ್ ವರೆಗೂ ಏರ್ಪೋರ್ಟ್ ಜಮೀನಿದೆ. ಅಲ್ಲಿವರೆಗೂ ವಿಸ್ತರಣೆಯಾದರೆ ಅಲ್ಲಿರುವ 8 -10 ಮನೆಗಳನ್ನು ತೆರವುಗೊಳಿಸಿ ಪರಿಹಾರ ನೀಡಿದರೆ ಸಾಕು. ಜಮೀನು ತೆಗೆಸಿಕೊಡಲು ರಾಜ್ಯ ಸರಕಾರವೂ ಸಿದ್ಧವಿತ್ತು. ಆದರೆ, ಕೇಂದ್ರ ವಿಮಾನಯಾನ ಸಚಿವಾಲಯ ಇಚ್ಛಾಶಕ್ತಿ ತೋರಿಸದೆ ಉಳಿದುಬಿಟ್ಟಿತ್ತು. ರನ್ ವೇ ವಿಸ್ತರಣೆಯಾದರೆ, ವಿಮಾನ ಬಂದು ನಿಲ್ಲುವುದಕ್ಕೆ ಜಾಗ ಸಿಗುತ್ತದೆ. ಈಗ ನಿಲ್ಲುವುದಕ್ಕೆ ಜಾಗವಿಲ್ಲ. ಹಾಗೆ ಬಂದು ಹೀಗೆ ಹೋಗಬೇಕಾಗುತ್ತದೆ. ಇದರಿಂದಾಗಿ ವಿಮಾನಗಳು ಕೆಲವೊಮ್ಮೆ ಮುಂಬೈ, ಕೊಚ್ಚಿಗೆ ಖಾಲಿಯಾಗೇ ಹೋಗುವ ಪ್ರಮೇಯವೂ ಇರುತ್ತದೆ.
ಊಟ, ತಿಂಡಿಗೆ ನಗರಕ್ಕೆ ಓಡಬೇಕು !
ಖಾಸಗಿಯವರಿಗೆ ಆದಕೂಡಲೇ ದರವನ್ನು ಏರಿಸುತ್ತಾರೆ ಎನ್ನುವುದು ತಪ್ಪು. ಈಗ ಕಣ್ಣೂರು ಏರ್ಪೋರ್ಟ್ ಆದಮೇಲೆ ಜನ ಅಲ್ಲಿಗೆ ಹೋಗುತ್ತಾರೆ. ಹಾಗೆ ರೇಟ್ ಜಾಸ್ತಿ ಮಾಡಿದರೆ ಹೆಚ್ಚು ಮಂದಿ ಅತ್ತ ಕಡೆಗೇ ಹೋಗಬಹುದು. ದರ ನಿಗದಿಪಡಿಸಲು ಏರ್ಪೋರ್ಟ್ ಎಕಾನಮಿಕಲ್ ರೆಗ್ಯುಲೆಶನ್ ಅಥಾರಿಟಿ ಎಂಬ ಸಂಸ್ಥೆಯಿದೆ. ಒಟ್ಟಾರೆ ಏರಿಸುವಂತೆಯೂ ಇಲ್ಲ. ಖಾಸಗಿ ಆಪರೇಶನ್ ಶುರುವಾದ ಬಳಿಕ ಕಾಂಪಿಟಿಷನ್ ಇರುತ್ತದೆ, ಸೌಲಭ್ಯವೂ ಜಾಸ್ತಿ ಮಾಡಬೇಕಾಗುತ್ತದೆ. ಬೆಂಗಳೂರಿನಲ್ಲಿ ಇರುವಂತೆ ಲಾಂಜ್ ವ್ಯವಸ್ಥೆಯೂ ಆಗಬೇಕು. ಈಗೆಲ್ಲಾ ಒಂದು ವಿಮಾನ ರದ್ದುಗೊಂಡರೆ ಉಳಿದುಕೊಳ್ಳಲು ನಗರಕ್ಕೇ ಬರಬೇಕಾಗುತ್ತದೆ, ಊಟ, ತಿಂಡಿಗೂ ವ್ಯವಸ್ಥೆ ಇಲ್ಲ. ಬೆಂಗಳೂರು, ಮುಂಬೈನಲ್ಲಿರುವಂತೆ ಸೌಲಭ್ಯ ಬರಬೇಕು ಎನ್ನುತ್ತಾರೆ, ಎಂ.ಆರ್. ವಾಸುದೇವ್.
ಜನರ ಹೋರಾಟ ದರ ಮತ್ತು ಅಲ್ಲಿನ ವ್ಯವಸ್ಥೆಯ ಬಗೆಗೆ ಆಗಬೇಕು. ಮಂಗಳೂರಿನಿಂದ ದೆಹಲಿಗೆ ಪ್ರಯಾಣಿಸಲು ಹೆಚ್ಚು ದರ ಇದೆ. ಅದೇ ಏರ್ ಇಂಡಿಯಾದಲ್ಲಿ ಕಣ್ಣೂರು, ಕೊಚ್ಚಿನ್ ನಿಂದ ದೆಹಲಿ ಪ್ರಯಾಣಿಸಲು ಕಡಿಮೆ ದರ ಇದೆ. ಯಾಕೆ ಹೀಗೆ ಎಂದು ಜನ ಪ್ರಶ್ನೆ ಮಾಡಲ್ಲ. ಏರ್ಪೋರ್ಟ್ ಅಂದರೆ ದೊಡ್ಡವರಿಗೆ ಇರುವ ವ್ಯವಸ್ಥೆ ಎನ್ನುವ ಭ್ರಮೆಯನ್ನು ಜನ ಬಿಡಬೇಕು ಎಂದು ಸಲಹೆ ನೀಡುತ್ತಾರೆ ಎಂಆರ್.
Is it feasible to rename Mangalore International Airport? Former Director of Airport Authority M R Vasudev speaks to Headline Karnataka about it's consequences.
05-03-25 01:58 pm
Bangalore Correspondent
BJP MLAs Assembly adjourned: ಸದನ ಕಲಾಪ ನೇರ ಪ್ರ...
05-03-25 01:47 pm
DK Shivakumar, Mangalore Night life, Cabinet:...
04-03-25 07:20 pm
Kasaragod, Manjeshwar Accident: ಮಂಜೇಶ್ವರ ; ಹೆ...
04-03-25 01:37 pm
Bird Flu, Eggs: ಹಕ್ಕಿಜ್ವರ ಪೀಡಿತ ಕೋಳಿ, ಮೊಟ್ಟೆ...
04-03-25 12:14 pm
05-03-25 05:38 pm
HK News Desk
14ನೇ ಮಗುವಿಗೆ ತಂದೆಯಾದ ಉದ್ಯಮಿ ಎಲಾನ್ ಮಸ್ಕ್ ! ನಾಲ...
01-03-25 10:39 pm
Trump Vs Zelenskyy, Talk fight: ಶ್ವೇತ ಭವನದಲ್ಲ...
01-03-25 05:35 pm
Pope Francis: ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗ...
01-03-25 01:20 pm
ಟ್ರಂಪ್ ಸುಂಕ ಬರೆಗೆ ನಲುಗಿದ ಷೇರುಪೇಟೆ ; NIFTY ಇತಿ...
28-02-25 08:11 pm
05-03-25 10:58 pm
Mangalore Correspondent
Diganth Missing case, Assembly: ಸದನದಲ್ಲಿ ಪ್ರತ...
05-03-25 09:30 pm
Mangalore Jail, Food Poisoning: ಮಂಗಳೂರಿನ ಜೈಲಿ...
05-03-25 07:44 pm
Mangalore Director Vijay Kumar Kodialbail, Sh...
05-03-25 03:05 pm
Vitla blast, Mangalore, SP: ವಿಟ್ಲ ಬಳಿಯ ಕಲ್ಲಿನ...
04-03-25 10:58 pm
05-03-25 10:24 am
HK News Desk
ಆನ್ಲೈನ್ ಗೇಮ್ ಚಟ ; ಆಡದಂತೆ ವಿರೋಧಿಸಿದ್ದಕ್ಕೆ ತಂದ...
04-03-25 03:12 pm
ಹರ್ಯಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಕೊಲೆಗೈದು ಸೂಟ...
03-03-25 01:51 pm
Bangalore Falcon Ponzi scheme, Fraud: ಇನ್ ವಾಯ...
02-03-25 06:37 pm
Bangalore KR Puram Police, Bike Robbery, Crim...
01-03-25 05:54 pm