ಬ್ರೇಕಿಂಗ್ ನ್ಯೂಸ್

AVBP protest, Mangalore University: ಏಕಾಏಕಿ ಶುಲ್ಕ ಏರಿಕೆ ; ಮಂಗಳೂರು ವಿವಿ ಆಡಳಿತ ಸೌಧಕ್ಕೆ ಮುತ್ತಿಗೆ- ಗಾಜಿನ ಬಾಗಿಲು ಪುಡಿ, ಸರ್ಕಾರದ ಹಣ ಬರ್ತಾ ಇಲ್ಲ, ಏನ್ಮಾಡ್ಲಿ ಎಂದ ಕುಲಪತಿಗೆ ವಿದ್ಯಾರ್ಥಿಗಳ ತರಾಟೆ, ನಿಮ್ಮ ಹೊರೆಯನ್ನು ವಿದ್ಯಾರ್ಥಿಗಳಿಗೆ ಹಾಕ್ತೀರಾ ಎಂದು ಆಕ್ರೋಶ    |    ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ್, ಡೀಸೆಲ್ ಬಿಡಿ, ಇಂಧನವೇ ಇಲ್ಲದೆ ಓಡಲಿದೆ ರೈಲು ! ಬರೀ ನೀರು ಬಳಸ್ಕೊಂಡೇ ಹೈಡ್ರೋಜನ್ ರೈಲು, ಅತಿ ಕಡಿಮೆ ವೆಚ್ಚ, ಪರಿಸರ ಸ್ನೇಹಿ !    |    Waqf row, Mangalore, CM Siddaramaiah; ವಕ್ಫ್ ಆಸ್ತಿ ಹೆಸರಲ್ಲಿ ಭೂ ಕಬಳಿಕೆಗೆ ಮುಖ್ಯ ಕಾರ್ಯದರ್ಶಿಯಿಂದ್ಲೇ ಆದೇಶ ; ಖಬರಸ್ತಾನಕ್ಕೂ ಸಾವಿರಾರು ಎಕ್ರೆ ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಗ್ರೀನ್ ಸಿಗ್ನಲ್, ‘ಗೊತ್ತಿಲ್ಲ, ನೋಟೀಸ್ ನೀಡಿಲ್ಲ’ ಎನ್ನುತ್ತಿದ್ದವರಿಗಿಲ್ಲಿದೆ ಸಾಕ್ಷ್ಯ!!    |   

Mangalore Peruvai Narayana Shetty yakshagana: ಹೆಸರಾಂತ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ನಿಧನ 

24-01-24 01:53 pm       Mangalore Correspondent   ಕರಾವಳಿ

ಹೆಸರಾಂತ ಯಕ್ಷಗಾನ ಕಲಾವಿದ, ಕಂಚಿನ ಕಂಠದ ಮಾತುಗಾರಿಕೆಯಿಂದ ಹೆಸರುವಾಸಿಯಾಗಿದ್ದ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ(82) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಬಂಟ್ವಾಳ, ಜ.24: ಹೆಸರಾಂತ ಯಕ್ಷಗಾನ ಕಲಾವಿದ, ಕಂಚಿನ ಕಂಠದ ಮಾತುಗಾರಿಕೆಯಿಂದ ಹೆಸರುವಾಸಿಯಾಗಿದ್ದ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ(82) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. 

ತೆಂಕುತಿಟ್ಟಿನ ಯಕ್ಷರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದ ನಾರಾಯಣ ಶೆಟ್ಟಿ ಕನ್ನಡ, ತುಳು ಭಾಷೆಯ ಪ್ರಸಂಗಗಳಲ್ಲಿ ಮಿಂಚು ಹರಿಸಿದ್ದರು. ಕಂಚಿನ ಕಂಠದ ಧ್ವನಿ, ಶ್ರುತಿಬದ್ಧ ಮಾತು ಹಾಗೂ ಅರ್ಥಪೂರ್ಣ ಸಂಭಾಷಣೆಯಿಂದಾಗಿ ಪೆರುವಾಯಿ ಶೈಲಿಯೆಂದೇ ಹೆಸರಾಗಿದ್ದರು. 

ಕಟೀಲು ಮೇಳದಲ್ಲಿ ಸುದೀರ್ಘ ಕಾಲ ಕಲಾವಿದರಾಗಿದ್ದ ಅವರು ರಕ್ತಬೀಜ, ಹಿರಣ್ಯಕಶಿಪು, ಕಂಸ, ಸುಂದರರಾವಣ, ಋತುಪರ್ಣ, ಹನುಮಂತ, ಜಾಬಾಲಿ, ಅರುಣಾಸುರ, ಹಿರಣ್ಯಾಕ್ಷ, ಶಿಶುಪಾಲ ಹೀಗೆ ಹೆಚ್ಚು ರಾಕ್ಷಸ ಪಾತ್ರಗಳನ್ನು ಮಾಡಿ ರಂಗದಲ್ಲಿ ಮಿಂಚಿದ್ದರು. ಕುಂಡಾವು ಮೇಳದ ಮೂಲಕ ರಂಗ ಪ್ರವೇಶ ಮಾಡಿದ್ದ ಅವರು, ಕರ್ನಾಟಕ ಮೇಳ, ಧರ್ಮಸ್ಥಳ, ಪೊಳಲಿ, ಕದ್ರಿ, ಕುಂಬಳೆ ಮೇಳಗಳಲ್ಲಿ ತಿರುಗಾಟ ಮಾಡಿದ್ದರು. 1942ರಲ್ಲಿ ಬಂಟ್ವಾಳ ತಾಲೂಕಿನ ಪೆರುವಾಯಿ ಎಂಬಲ್ಲಿ ಜನಿಸಿದ್ದ ನಾರಾಯಣ ಶೆಟ್ಟಿ ಸುದೀರ್ಘ 50 ವರ್ಷಗಳ ಕಾಲ ಯಕ್ಷಗಾನ ಸೇವೆ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯ ಕಾರಣದಿಂದ ತಿರುಗಾಟ ನಿಲ್ಲಿಸಿದ್ದರು. ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ‌

ತುಳು ಪ್ರಸಂಗಗಳಲ್ಲಿ ಕೋಟಿ, ದೇವುಪೂಂಜ ಮುಂತಾದ ಪಾತ್ರಗಳಿಗೆ ಪ್ರಸಿದ್ಧಿ ಪಡೆದಿದ್ದರು. 2016ನೇ ಸಾಲಿನ ಚೊಚ್ಚಲ “ಯಕ್ಷಧ್ರುವ ಪಟ್ಲ ಪ್ರಶಸ್ತಿ” ಸೇರಿದಂತೆ ಹಲವು ಸನ್ಮಾನ ಇವರಿಗೆ ಸಂದಿದೆ.

Mangalore Peruvia Narayana Shetty yakshagana artist dies at 82.