ಸಶಸ್ತ್ರ ಮೀಸಲು ಪಡೆಯ 3064 ಹುದ್ದೆಗಳಿಗೆ ಮೂಡುಬಿದ್ರೆಯಲ್ಲಿ ಲಿಖಿತ ಪರೀಕ್ಷೆ ; ಆಭರಣ, ಜೀನ್ಸ್ ಪ್ಯಾಂಟ್, ಶೂ ಧರಿಸುವಂತಿಲ್ಲ ! ಕಾಲರ್ ಇಲ್ಲದ ಅರ್ಧ ತೋಳಿನ ಶರ್ಟ್ ಹಾಕ್ಕೊಂಡು ಬನ್ನಿ 

24-01-24 06:03 pm       Mangalore Correspondent   ಕರಾವಳಿ

ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಎಆರ್/ಡಿಎಆರ್) ಖಾಲಿ ಇರುವ (ಪುರುಷ & ತೃತೀಯ ಲಿಂಗ ಪುರುಷ)-3064 ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ಇದೇ ಜ. 28ರಂದು ಭಾನುವಾರ ಬೆಳಗ್ಗೆ 11ರಿಂದ 12:30 ಗಂಟೆಯ ವರೆಗೆ ನಡೆಸಲಾಗುತ್ತಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂಡಬಿದ್ರೆಯಲ್ಲಿ 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿರುತ್ತವೆ.

ಮಂಗಳೂರು, ಜ.24: ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಎಆರ್/ಡಿಎಆರ್) ಖಾಲಿ ಇರುವ (ಪುರುಷ & ತೃತೀಯ ಲಿಂಗ ಪುರುಷ)-3064 ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ಇದೇ ಜ. 28ರಂದು ಭಾನುವಾರ ಬೆಳಗ್ಗೆ 11ರಿಂದ 12:30 ಗಂಟೆಯ ವರೆಗೆ ನಡೆಸಲಾಗುತ್ತಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂಡಬಿದ್ರೆಯಲ್ಲಿ 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿರುತ್ತವೆ. ಪರೀಕ್ಷೆಗೆ ಸುಮಾರು 17000 ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆ ಇರುತ್ತದೆ. 

ಅಭ್ಯರ್ಥಿಗಳಿಗೆ ಸಾಮಾನ್ಯ ಸೂಚನೆಗಳು: 

1.    ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಕನಿಷ್ಟ 120 ನಿಮಿಷಗಳ ಮುಂಚೆ ಅಂದರೆ ಬೆಳಗ್ಗೆ 9 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರತಕ್ಕದ್ದು. 

2.    ಅಭ್ಯರ್ಥಿಗಳು ಯಾವುದೇ ಇಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್ ಫೋನ್ಗಳು, ಬ್ಲೂಟೂತ್ ಉಪಕರಣಗಳು, ಪೇಪರ್ ತುಂಡು, ಪುಸ್ತಕಗಳು, ನೋಟ್ಗಳು ಇತ್ಯಾದಿ ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗತಕ್ಕದ್ದಲ್ಲ.

3.    ಅಭ್ಯರ್ಥಿಗಳನ್ನು ಅವರವರ ಪ್ರವೇಶ ಪತ್ರದೊಂದಿಗೆ ಯಾವುದಾದರೂ ಗುರುತಿನ ಚೀಟಿ ಉದಾ: ಚಾಲನಾ ಅನುಜ್ಞಾ ಪತ್ರ, ಪಾಸ್ಪೋಟ್/ಆಧಾರ್ ಕಾರ್ಡ್/ಪಾನ್ ಕಾರ್ಡ್/ಓಟರ್ ಐಡಿ(EPIC) ಗಳನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುವುದು. 

4.    ಸದರಿ ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಪುರುಷ ಮತ್ತು ತೃತಿಯ ಲಿಂಗ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್ಗಳನ್ನು ಧರಿಸುವುದು, ಜಿಪ್ ಪ್ಯಾಕೆಟ್ಗಳು, ದೊಡ್ಡ ಬಟನ್ಸ್ಗಳು ಇರುವ ಶರ್ಟ್ಗಳನ್ನು ಧರಿಸತಕ್ಕದ್ದಲ್ಲ.

5.    ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್ಗಳನ್ನು ಧರಿಸತಕ್ಕದ್ದಲ್ಲ.

6.    ಪರೀಕ್ಷಾ ಕೇಂದ್ರದೊಳಗೆ ಷೂಗಳನ್ನು ನಿಷೇಧಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಭಾಗವಿರುವ ಪಾದರಕ್ಷೆಗಳನ್ನು (ಚಪ್ಪಲಿ) ಧರಿಸುವುದು.

7.    ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗಗಳನ್ನು ಧರಿಸುವುದು ನಿಷೇದಿಸಿದೆ. ಇಂತಹ ಬೆಲೆಬಾಳುವ ವಸ್ತುಗಳ ಭದ್ರತೆ ವ್ಯವಸ್ಥೆ ಪರೀಕ್ಷಾ ಕೇಂದ್ರದಲ್ಲಿ ಇರುವುದಿಲ್ಲ. ಆದುದರಿಂದ ಅಭ್ಯರ್ಥಿಗಳು ತಮ್ಮ ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿಯೇ ಬಿಟ್ಟುಬರಲು ಸೂಚಿಸಿದೆ.

The written examination for 3064 vacancies (male & third gender male) in the Armed Reserve Police Force (CAR/DAR) will be conducted on Sunday, January 28 from 11 am to 12.30 am and will be held at eight examination centres at Moodabidri under Mangaluru City Police Commissionerate. Around 17000 candidates are expected to appear for the exam.