ಬ್ರೇಕಿಂಗ್ ನ್ಯೂಸ್
22-11-20 01:07 pm Udupi Correspondent ಕರಾವಳಿ
ಉಡುಪಿ, ನ.22: ಅಮೆರಿಕದ ನೂತನ ಅಧ್ಯಕ್ಷರಾಗಿರುವ ಜೋ ಬೈಡೆನ್ ಅವರ ಪತ್ನಿ ಜಿಲ್ ಬೈಡನ್ ತನ್ನ ನೀತಿ ನಿರ್ದೇಶಕರಾಗಿ ಭಾರತೀಯ ಮೂಲದ ಮಾಲಾ ಅಡಿಗ ಅವರನ್ನು ನಿಯೋಜನೆ ಮಾಡಿದ್ದಾರೆ.
ಮಾಲಾ ಅಡಿಗ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ದ ಕಕ್ಕುಂಜೆಯ ಅಡಿಗ ಕುಟುಂಬದ ಕುಡಿ ಎಂಬುದು ವಿಶೇಷ. ಇದೇ ಜಿಲ್ಲೆಯಲ್ಲಿ ಜನ್ಮ ತಾಳಿದ್ದ ಕರ್ಣಾಟಕ ಬ್ಯಾಂಕಿನ ಸ್ಥಾಪಕ ಕೆ.ಸೂರ್ಯನಾರಾಯಣ ಅಡಿಗ ಕೂಡ ಇದೇ ಕುಟುಂಬದ ಹಿರಿಯ ತಲೆ.
ಅಮೆರಿಕದಲ್ಲಿ ವಕೀಲಿ ವೃತ್ತಿಯಲ್ಲಿರುವ ಮಾಲಾ ಅಡಿಗ (47) ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಅಮೆರಿಕದಲ್ಲೇ. ಚುನಾವಣೆಗೂ ಮೊದಲೇ ಅಧ್ಯಕ್ಷ ಸ್ಪರ್ಧಿಯ ಬೈಡೆನ್ ಪತ್ನಿ, ಜಿಲ್ ಬೈಡನ್ ಜೊತೆಗೆ ಹಿರಿಯ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ, ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರ ಪ್ರಚಾರ ಅಭಿಯಾನದ ಸಲಹೆಗಾರರಾಗಿದ್ದರು. ಇದೀಗ ಅವರು ಮುಂದಿನ ಜನವರಿ ತಿಂಗಳಲ್ಲಿ ರಾಷ್ಟ್ರದ ಪ್ರಥಮ ಮಹಿಳೆ ಎನಿಸಿಕೊಳ್ಳುವ ಜಿಲ್ ಬೈಡನ್ ಅವರ ನೀತಿ ನಿರ್ದೇಶಕಿಯಾಗಿ ನಿಯುಕ್ತಿಗೊಂಡಿದ್ದಾರೆ.
ಮಾಲಾ ಅಡಿಗರ ತಂದೆ ಕಕ್ಕುಂಜೆ ರಮೇಶ್ ಅಡಿಗ (84) ವೈದ್ಯರಾಗಿದ್ದರು. ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ರಮೇಶ್ ಅಡಿಗ, ತಮ್ಮ 24ರ ಹರೆಯದಲ್ಲೇ ಅಮೆರಿಕಕ್ಕೆ ತೆರಳಿದ್ದರು. ಕಳೆದ ಆರು ದಶಕಗಳಿಂದ ಅಮೆರಿಕದಲ್ಲಿ ವಾಸವಾಗಿರುವ ಇವರು ಅಮೆರಿಕನ್ ಪೌರತ್ವ ಪಡೆದಿದ್ದಾರೆ. ಇವರ ಪತ್ನಿಯೂ ವೈದ್ಯೆಯಾಗಿದ್ದು, ಕಳೆದ ವರ್ಷ ತೀರಿಕೊಂಡಿದ್ದಾರೆ.
ಮಾಲಾ ಅಡಿಗ, ರಮೇಶ್ ಅಡಿಗರ ಹಿರಿಯ ಮಗಳು. ಇವರಿಗೆ ಅವಳಿ- ಜವಳಿ ಸಹೋದರರಿದ್ದಾರೆ. ಇಂಜಿನಿಯರ್ ಹಾಗೂ ವಕೀಲ ವೃತ್ತಿಯಲ್ಲಿರುವ ಇವರು ಕ್ಯಾಲಿಫೋರ್ನಿಯ ಹಾಗೂ ಚಿಕಾಗೋಗಳಲ್ಲಿದ್ದಾರೆ. ಮಾಲಾ ಅಡಿಗರ ಪತಿ ಚಾರ್ಲ್ಸ್ ಬೀರೋ ಸಹ ವಕೀಲರಾಗಿದ್ದು, ಇವರಿಗೆ 15 ವರ್ಷ ಪ್ರಾಯದ ಆಶಾ ಎಂಬ ಮಗಳಿದ್ದಾಳೆ.
ಕುಂದಾಪುರದಲ್ಲಿದ್ದಾರೆ ಬಂಧುಗಳು
ಮಾಲಾ ಅಡಿಗರ ತಂದೆಯ ಸಂಬಂಧಿಕರು ಕುಂದಾಪುರದ ಕಕ್ಕುಂಜೆಯಲ್ಲಿದ್ದಾರೆ. ಮಾಲಾ ತಂದೆ ರಮೇಶ್ ಅಡಿಗರ ತಂದೆ ಚಂದ್ರಶೇಖರ ಅಡಿಗ ಹಾಗೂ ಕರ್ಣಾಟಕ ಬ್ಯಾಂಕಿನ ಸೂರ್ಯನಾರಾಯಣ ಅಡಿಗ (ಕೆ.ಎಸ್.ಎನ್. ಅಡಿಗ) ಅಣ್ಣ- ತಮ್ಮನ ಮಕ್ಕಳು. ಚಂದ್ರಶೇಖರ ಅಡಿಗರ ಹಿರಿಯ ಮಗಳು ನಿರ್ಮಲಾ ಉಪಾಧ್ಯಾಯರ ಕುಟುಂಬ ಕುಂದಾಪುರದಲ್ಲಿದೆ. ರಮೇಶ್ ಅಡಿಗರ ತಂಗಿ ಮನೋರಮಾ ಮಣಿಪಾಲದಲ್ಲಿ ನೆಲೆಸಿದ್ದಾರೆ. ಇವರ ಹಲವು ಬಂಧುಗಳು ಕಕ್ಕುಂಜೆ ಹಾಗೂ ಇತರ ಕಡೆಗಳಲ್ಲಿದ್ದಾರೆ.
ತಮ್ಮ ಕುಟುಂಬದ ಕುಡಿ, ಮಾಲಾ ಅಡಿಗ ಉನ್ನತ ಹುದ್ದೆಗೇರಿದ್ದು ಸೋದರತ್ತೆ ನಿರ್ಮಲಾ ಉಪಾಧ್ಯಾಯ ಸಂತಸಗೊಂಡಿದ್ದಾರೆ. ಮಗಳು ಸುಜಾತ ಹಾಗೂ ಅಳಿಯ ಸೀತಾರಾಮ ನಕ್ಕಿತ್ತಾಯರ ಜೊತೆಗಿರುವ ನಿರ್ಮಲಾ, ಏಳು ವರ್ಷಗಳ ಹಿಂದೆ ತಮ್ಮ ರಮೇಶ್ ಅಡಿಗ ಕುಂದಾಪುರಕ್ಕೆ ಬಂದಿದ್ದನ್ನು ನೆನಪಿಸಿಕೊಂಡರು.
ಏಳು ವರ್ಷಗಳ ಹಿಂದೆ ರಮೇಶ ಅಡಿಗ, ಮಾಲಾ ಮತ್ತು ಅವರ ಪತಿ ಚಾರ್ಲ್ಸ್, ಮಗಳು ಸೇರಿ ಇಡೀ ಕುಟುಂಬ ಕೊನೆಯ ಬಾರಿ ಊರಿಗೆ ಬಂದಿದ್ದರು. ಕಕ್ಕುಂಜೆಗೆ ತೆರಳಿ, ದೇವಸ್ಥಾನ, ಕುಂದಾಪುರ ಆಸುಪಾಸಿನ ಬೀಚ್ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ತಮ್ಮ ಊರಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿದ್ದರು ಎಂದು ನೆನಪಿಸಿದರು.
ಮಾಲಾ ತುಂಬಾ ಸೌಮ್ಯ ಸ್ವಭಾವದ ಒಳ್ಳೆಯ ಹುಡುಗಿ. ಎಲ್ಲರೊಂದಿಗೂ ಸರಳವಾಗಿ ಬೆರೆಯುತಿದ್ದರು. ಇಡೀ ಕುಟುಂಬಕ್ಕೆ ನಮ್ಮ ಸ್ಥಳೀಯ ಊಟ- ತಿಂಡಿ ತುಂಬಾ ಹಿಡಿಸಿತ್ತು. ಈಗಲೂ ಫೋನ್ ಮಾಡಿ, ಕಷ್ಟ-ಸುಖ ವಿಚಾರಿಸುತ್ತಾರೆ ಎಂದು ನಿರ್ಮಲಾ ಹೇಳಿದರು.
US President-elect Joe Biden on Friday appointed an Indian-American, Mala Adiga, the policy director of his wife Jill Biden, who will be the First Lady. Mala Adiga hails from Kundupura, Udupi, Karnataka.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm