ಬೀಚ್ ಕ್ಲೀನ್ ಮಾಡಿದ್ದ ಬೈಂದೂರಿನ ದಂಪತಿ, ಕುಂದಾಪುರದ ಚಮ್ಮಾರನಿಗೂ ದೆಹಲಿ ಗಣರಾಜ್ಯೋತ್ಸವ ಆಹ್ವಾನ 

25-01-24 08:45 pm       Udupi Correspondent   ಕರಾವಳಿ

ಮದುವೆಯಾಗಿ ಹನಿಮೂನ್ ಹೋಗುವ ಬದಲು ಸಮುದ್ರ ತೀರದಲ್ಲಿ ಬೀಚ್ ಕ್ಲೀನ್ ಮಾಡಿದ್ದ ನವ ದಂಪತಿಗೆ ದೆಹಲಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಕಾರ್ಯಾಲಯದಿಂದ ಆಮಂತ್ರಣ ಬಂದಿದೆ. 

ಉಡುಪಿ, ಜ.25: ಮದುವೆಯಾಗಿ ಹನಿಮೂನ್ ಹೋಗುವ ಬದಲು ಸಮುದ್ರ ತೀರದಲ್ಲಿ ಬೀಚ್ ಕ್ಲೀನ್ ಮಾಡಿದ್ದ ನವ ದಂಪತಿಗೆ ದೆಹಲಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಕಾರ್ಯಾಲಯದಿಂದ ಆಮಂತ್ರಣ ಬಂದಿದೆ. 

2020ರ ನವೆಂಬರ್‌ನಲ್ಲಿ ಬೈಂದೂರಿನ ಅನುದೀಪ್ ಮತ್ತು ಮಿನುಷಾ ಅವರ ವಿವಾಹ ನಡೆದಿತ್ತು, ಎಲ್ಲರಂತೆ ದೂರದ ಪ್ರವಾಸಿ ತಾಣಗಳಿಗೆ ತೆರಳಿ ಮಧುಚಂದ್ರ ಆಚರಿಸುವ ಬದಲು ಬೈಂದೂರಿನ ಸೋಮೇಶ್ವರ ಬೀಚ್‌ ಸ್ವಚ್ಛತೆ ನಡೆಸಿದ್ದು ಜಾಲತಾಣದಲ್ಲಿ ಮೆಚ್ಚುಗೆಗೆ ಕಾರಣವಾಗಿತ್ತು. ಈ ವಿಚಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೂ ಬಂದು ಅವರದನ್ನು ತಮ್ಮ ಮನ್‌ ಕೀ ಬಾತ್‌ನಲ್ಲಿ ಉಲ್ಲೇಖ ಮಾಡಿದ್ದರು. ಇದೀಗ ಅವರನ್ನು ಗುರುತಿಸಿ ದೆಹಲಿ ರಿಪಬ್ಲಿಕ್ ಡೇ ಪರೇಡ್ ಗೆ ಬರಲು ಆಹ್ವಾನಿಸಿದ್ದು ದಂಪತಿ ದೆಹಲಿಗೆ ತೆರಳಿದ್ದಾರೆ. 

ಕುಂದಾಪುರದಲ್ಲಿ ಚಪ್ಪಲಿ ರಿಪೇರಿ ಮಾಡುವ ಮಣಿಕಂಠ ಎಂಬವರಿಗೂ ಗಣರಾಜ್ಯ ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಭದ್ರಾವತಿ ಮೂಲದ ಮಣಿಕಂಠ ಅವರು ಪ್ರಧಾನ ಮಂತ್ರಿ ಸ್ವನಿಧಿ ಸಾಲ ಯೋಜನೆಯಡಿ ಕುಂದಾಪುರ ಶಾಸ್ತ್ರಿ ಸರ್ಕಲ್ ನಲ್ಲಿ ಅಂಗಡಿ ಮಾಡಿದ್ದು ಹಲವು ವರ್ಷಗಳಿಂದ ಜೀವನ ಮಾಡುತ್ತಿದ್ದಾರೆ. ಸಣ್ಣ ಅಂಗಡಿಯಾದರೂ ಕ್ಲಪ್ತವಾಗಿ ಸಾಲ ತೀರಿಸಿದ್ದು ಪ್ರಧಾನಿ ಕಣ್ಣಿಗೆ ಬಿದ್ದಿತ್ತು. ಇದೀಗ ಅವರನ್ನೂ ಸರ್ಕಾರದ ಖರ್ಚಿನಲ್ಲಿ ದೆಹಲಿಗೆ ಕರೆಯಲಾಗಿದೆ.

In a heartening gesture, a young couple, Anudeep and Minusha from Byndoor, who opted to clean the surroundings of Someshwara beach instead of embarking on a traditional honeymoon, has been invited to participate in the Republic Day parade by the Prime Minister’s Office (PMO). The couple has already departed for Delhi.