Mangalore, vintage classic bike car carnival: ನೂರು ವರ್ಷಕ್ಕೂ ಹಳೆಯ ರೋಲ್ಸ್ ರಾಯ್ಸ್ ಸೇರಿ ಐಷಾರಾಮಿ ವಿಂಟೇಜ್ ಕಾರುಗಳ ಪ್ರದರ್ಶನ

26-01-24 04:40 pm       Mangalore Correspondent   ಕರಾವಳಿ

ಮಂಗಳೂರು ಮೋಟರ್ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ನಗರದ ನೆಹರು ಮೈದಾನದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರುಗಳ ಪ್ರದರ್ಶನ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಚಾಲನೆ ನೀಡಿದರು.

ಮಂಗಳೂರು, ಜ.26: ಮಂಗಳೂರು ಮೋಟರ್ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ನಗರದ ನೆಹರು ಮೈದಾನದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರುಗಳ ಪ್ರದರ್ಶನ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಚಾಲನೆ ನೀಡಿದರು.
 
ಪ್ರದರ್ಶನದಲ್ಲಿ ನೂರು ವರ್ಷಗಳ ಹಳೆಯ ಐಷಾರಾಮಿ ಕಾರುಗಳಿದ್ದವು. 1925ರ ಕಾಲದ ಇಂಗ್ಲೆಂಡ್ ಮೂಲದ ರೋಲ್ಸ್ ರಾಯ್ಸ್, ಅಮೆರಿಕದಲ್ಲಿ ನಿರ್ಮಿತ ಅತ್ಯಾಕರ್ಷಕ ಕಾರುಗಳಿದ್ದವು. ಹಳೆ ಮಾದರಿಯ ಅಂಬಾಸಿಡರ್, ಫಿಯೇಟ್ ಕಾರುಗಳೂ ಇದ್ದವು. ಸ್ವಾತಂತ್ರ್ಯಕ್ಕೂ ಹಿಂದೆ ತಯಾರಾದ, ತೀರಾ ಹಳೆಯದಾಗಿದ್ದರೂ, ಅವನ್ನು ಮಾಲೀಕರು ತುಂಬ ಜತನದಿಂದ ಕಾಯ್ದುಕೊಂಡಿದ್ದರು.


 
ಕಾರುಗಳ ಬಣ್ಣ ಮಾಸದಂತೆ, ತುಕ್ಕು ಹಿಡಿಯದಂತೆ ನೋಡಿಕೊಂಡಿದ್ದಾರೆ. ಅದೇ ರೀತಿ ಇಟಲಿ ನಿರ್ಮಿತ ಲ್ಯಾಂಬಿ ಸ್ಕೂಟರ್ ಗಳೂ ಪ್ರದರ್ಶನಕ್ಕೆ ಬಂದಿದ್ದವು. ಬುಲೆಟ್ ಬೈಕ್, ಹಳೆ ಮಾದರಿಯ ಬೈಕುಗಳು ಇದ್ದವು. ಇಂಗ್ಲೆಂಡ್ ನಲ್ಲಿ ತಯಾರಾಗಿದ್ದ ಹಳೆ ಕಾಲದ ಬೈಕುಗಳೂ ಆಕರ್ಷಕವಾಗಿದ್ದವು. ಎಲ್ಲ ಕಾರುಗಳ ಹೆಸರು ಮತ್ತು ಅದು ತಯಾರಾದ ಇಸವಿಯನ್ನು ಬೋರ್ಡ್ ಹಾಕಲಾಗಿತ್ತು. ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ವಿಂಟೇಜ್ ಕಾರು ಪ್ರದರ್ಶನ ಏರ್ಪಡಿಸಲಾಗಿತ್ತು. ಸಚಿವ ದಿನೇಶ್ ಗುಂಡೂರಾವ್ ಜೊತೆಗೆ ಮಿಥುನ್ ರೈ ಕೂಡ ರೋಲ್ಸ್ ರಾಯ್ಸ್ ಕಾರಿನಲ್ಲಿ ಮೈದಾನದಲ್ಲಿ ಸುತ್ತು ಹಾಕಿದರು.

Mangalore motor sports association conducts vintage classic bike car carnival. Cars of 1925 were brought to exhibition. In charge Minister Dinesh Gundurao flagged off the event.