Daiva Nartaka, heart attack, Mangalore, Ashok Bangera: ದೈವ ನರ್ತನ ಮಾಡುತ್ತಿದ್ದಾಗಲೇ ಹೃದಯಾಘಾತ ; ಮಂಗಳೂರಿನ ಪ್ರಸಿದ್ಧ ದೈವ ನರ್ತಕ ಅಶೋಕ್ ಬಂಗೇರ ಸಾವು 

27-01-24 07:01 pm       Mangalore Correspondent   ಕರಾವಳಿ

ದೈವ ನರ್ತನ ಮಾಡುತ್ತಿದ್ದಾಗಲೇ ಎದೆನೋವು ಕಾಣಿಸಿಕೊಂಡಿದ್ದ ಮಂಗಳೂರಿನ ಪ್ರಸಿದ್ಧ ದೈವ ನರ್ತಕರೊಬ್ಬರು ಆಸ್ಪತ್ರೆಗೆ ತೆರಳುವಷ್ಟರಲ್ಲಿ ಮೃತಪಟ್ಟ ಘಟನೆ ನಡೆದಿದೆ. ಪದವಿನಂಗಡಿ ಗಂಧಕಾಡು ನಿವಾಸಿ ಅಶೋಕ್ ಬಂಗೇರ(47) ಸಾವನ್ನಪ್ಪಿದವರು.  

ಮಂಗಳೂರು, ಜ.27: ದೈವ ನರ್ತನ ಮಾಡುತ್ತಿದ್ದಾಗಲೇ ಎದೆನೋವು ಕಾಣಿಸಿಕೊಂಡಿದ್ದ ಮಂಗಳೂರಿನ ಪ್ರಸಿದ್ಧ ದೈವ ನರ್ತಕರೊಬ್ಬರು ಆಸ್ಪತ್ರೆಗೆ ತೆರಳುವಷ್ಟರಲ್ಲಿ ಮೃತಪಟ್ಟ ಘಟನೆ ನಡೆದಿದೆ. ಪದವಿನಂಗಡಿ ಗಂಧಕಾಡು ನಿವಾಸಿ ಅಶೋಕ್ ಬಂಗೇರ(47) ಸಾವನ್ನಪ್ಪಿದವರು.  

ನಿನ್ನೆ ರಾತ್ರಿ ಹಳೆಯಂಗಡಿ ಸಮೀಪ ರಕ್ತೇಶ್ವರಿ ದೈವದ ವಾರ್ಷಿಕ ಉತ್ಸವದಲ್ಲಿ ದೈವಕ್ಕೆ ಕಟ್ಟಿದ್ದ ಅಶೋಕ್ ಬಂಗೇರ ಅವರಿಗೆ ರಾತ್ರಿ  10.30ರ ವೇಳೆಗೆ ಸಣ್ಣಮಟ್ಟಿನ ಎದೆನೋವು ಕಾಣಿಸಿಕೊಂಡಿತ್ತು. ಹಾಗಾಗಿ, ದೈವದ ವೇಷ ಕಳಚಿಟ್ಟು ಅರ್ಧದಲ್ಲೇ ನಿಲ್ಲಿಸಿದ್ದರು. ‌ನೇಮ ಕೊನೆಯ ಘಟ್ಟದಲ್ಲಿದ್ದಾಗ ಸುಸ್ತು ಉಂಟಾಗಿದ್ದರಿಂದ ಉತ್ಸವದ ಕೊನೆಯ ಘಟ್ಟವನ್ನು ತಮ್ಮ ನಿರ್ವಹಿಸುತ್ತಾನೆಂದು ಹೇಳಿ ತುರ್ತಾಗಿ ಅಶೋಕ್ ಬಂಗೇರ ಅಲ್ಲಿಂದ ತೆರಳಿದ್ದರು. ನೇರವಾಗಿ ಆಸ್ಪತ್ರೆಗೆ ತೆರಳುವ ಬದಲು ಬಂಗೇರ ಅವರು ಪದವಿನಂಗಡಿಯ ಮನೆಗೆ ಆಗಮಿಸಿ ರಾತ್ರಿ ಮಲಗಿದ್ದರು. ಶನಿವಾರ ಬೆಳಗ್ಗೆ ಐದು ಗಂಟೆಯ ವೇಳೆಗೆ ಮತ್ತೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 

ಹಳೆಯಂಗಡಿ ಕೊಳುವೈಲು ರೆಂಜದಡಿ ಕುಟುಂಬಸ್ಥರ ದೈವಸ್ಥಾನದಲ್ಲಿ ನಿನ್ನೆ ರಾತ್ರಿ ರಕ್ತೇಶ್ವರಿ ದೈವದ ವಾರ್ಷಿಕ ಉತ್ಸವ ನಡೆದಿತ್ತು. ಅರ್ಧಕ್ಕೆ ನಿಲ್ಲಿಸಿದ್ದರಿಂದ ದೈವದ ಕೋಲವನ್ನು ಅಶೋಕ್ ಬಂಗೇರ ಅವರ ತಮ್ಮ ಪೂರ್ಣಗೊಳಿಸಿದ್ದರು.‌ ಅಶೋಕ್ ಬಂಗೇರ ಅವರು ರಾಜನ್ ದೈವಗಳಿಗೆ ಕಟ್ಟುವವರಾಗಿದ್ದು ಮಂಗಳೂರಿನಲ್ಲಿ ಪ್ರಸಿದ್ಧಿ ಹೊಂದಿದ್ದಾರೆ. ಅಶೋಕ್ ಬಂಗೇರ ಅವರು ಪದವಿನಂಗಡಿ ಕೊರಗಜ್ಜ ಕ್ಷೇತ್ರದ ಪಾತ್ರಿಯಾಗಿದ್ದರು. ಇವರ ಸೋದರ ಭಾಸ್ಕರ ಬಂಗೇರ ಗಂಧಕಾಡುವಿನಲ್ಲಿ ಕೊರಗಜ್ಜ ಕ್ಷೇತ್ರ ನಡೆಸುತ್ತಿದ್ದಾರೆ.

Daiva Nartaka Ashok Bangera Dies While Performing due to heart attack at Kola Haleyangadi in Mangalore.