ಬ್ರೇಕಿಂಗ್ ನ್ಯೂಸ್
22-11-20 06:35 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 22: ಅರಬ್ಬೀ ಸಮುದ್ರದಲ್ಲಿ ವಿಚಿತ್ರ ವಿದ್ಯಮಾನ ಕಂಡುಬಂದಿದೆ. ಕಳೆದೆರಡು ದಿನಗಳಿಂದ ರಾತ್ರಿ ವೇಳೆ, ಸಮುದ್ರ ಕಡು ನೀಲಿ ಬಣ್ಣದ ಬೆಳಕಿನಿಂದ ಕೋರೈಸುತ್ತಿದ್ದು, ಜನರನ್ನು ಆಕರ್ಷಿಸುತ್ತಿದೆ. ಮಂಗಳೂರಿನ ಪಣಂಬೂರು, ಸಸಿಹಿತ್ಲು, ಸುರತ್ಕಲ್ ಬೀಚ್ ಗಳಲ್ಲಿ ಈ ವಿದ್ಯಮಾನ ಕಂಡುಬಂದಿದೆ.
ಸಾಮಾನ್ಯವಾಗಿ ರಾತ್ರಿ ವೇಳೆಗೆ ಸಮುದ್ರದ ನೀರು ಕಪ್ಪಾಗಿ ಕಾಣುತ್ತದೆ. ಚಂದ್ರನ ಬೆಳಕು ಇದ್ದಲ್ಲಿ ಹತ್ತಿರದಿಂದ ನೋಡಿದರೆ ನೀಲಿ ಬಣ್ಣದಿಂದ ಕಂಡುಬರುವುದು ಸಹಜ. ಆದರೆ, ಈಗ ಸಮುದ್ರದಲ್ಲಿ ಕಣ್ಣು ಕೋರೈಸುವ ರೀತಿ ನೀಲಿ ಬೆಳಕು ಕಂಡುಬರುತ್ತಿದ್ದು ಜನರು ಕುತೂಹಲಕ್ಕೀಡಾಗಿದ್ದಾರೆ. ನಿನ್ನೆ ರಾತ್ರಿ ಈ ವಿದ್ಯಮಾನ ಕಂಡ ಕಡಲ ತೀರದ ನಿವಾಸಿಗಳು ವಿಚಿತ್ರ ಬೆಳಕನ್ನು ನೋಡಿ ಸ್ನೇಹಿತರಿಗೆ ತಿಳಿಸಿದ್ದಾರೆ. ನಡುರಾತ್ರಿಯಲ್ಲಿ ಏನೋ ಆಗಬಾರದ್ದು ಆಗಿದೆ ಎಂದು ಮಲಗಿದಲ್ಲಿಂದ ಬೀಚ್ ಕಡೆಗೆ ಓಡಿ ಹೊಸ ವಿದ್ಯಮಾನವನ್ನು ಕಣ್ತುಂಬಿಕೊಂಡಿದ್ದಾರೆ.
ಈ ವಿದ್ಯಮಾನದ ಬಗ್ಗೆ ಕೆಲವು ತಜ್ಞರಲ್ಲಿ ಕೇಳಿದರೆ, ಬೇರೆ ಬೇರೆ ರೀತಿಯ ಅಭಿಪ್ರಾಯ ಮುಂದಿಡುತ್ತಾರೆ. ಸಮುದ್ರದ ಅಡಿಭಾಗದಲ್ಲಿರುವ ಪಾಚಿ ರೀತಿಯ ಸಸ್ಯಗಳು ಮೇಲ್ಭಾಗಕ್ಕೆ ಬಂದಿದ್ದು ಅವು ಚಂದ್ರನ ಬೆಳಕಿಗೆ ಪ್ರತಿಫಲನಗೊಳ್ಳುತ್ತಿದೆ. ಈ ಕಾರಣದಿಂದ ನೀಲಿ ಬಣ್ಣದಿಂದ ಕಂಡುಬರುತ್ತದೆ ಎನ್ನುತ್ತಾರೆ.
ಮೀನುಗಾರರ ಬಳಿ ಕೇಳಿದಾಗ, ನಮ್ಮ ಕರಾವಳಿಯಲ್ಲಿ ಇಂಥ ವಿದ್ಯಮಾನ ಮೊದಲ ಬಾರಿಗೆ ನೋಡುತ್ತಿದ್ದೇವೆ. ಏನೆಂದು ಸರಿಯಾಗಿ ಹೇಳಲು ಬರುವುದಿಲ್ಲ. ಪಾಚಿಗಳು ಬಂದಿದ್ದರಿಂದ ಸಮುದ್ರ ಹಸಿರು ಬಣ್ಣದಿಂದ ಕಾಣುವುದು ಗೊತ್ತು. ಆದರೆ, ಹೀಗೆ ಪ್ರಖರವಾಗಿ ಕಾಣುವುದು ಗೊತ್ತಿಲ್ಲ ಎನ್ನುತ್ತಾರೆ. ಇನ್ನೊಬ್ಬ ಮೀನುಗಾರರು ಬೇರೆಯದ್ದೇ ಅಭಿಪ್ರಾಯ ನೀಡಿದ್ದಾರೆ. ರಾತ್ರಿ ಮೀನುಗಾರಿಕೆ ಹೋಗುವವರು ಲೈಟ್ ಫಿಶಿಂಗ್ ನಡೆಸುತ್ತಾರೆ. ಹೊಸತಾಗಿ ಬಲೆಗಳಿಗೆ ಹೆಲೋಜನ್ ಲೈಟ್ ಸಿಕ್ಕಿಸಿ, ಮೀನುಗಳನ್ನು ಮೇಲೆ ಬರುವಂತೆ ಮಾಡುತ್ತಾರೆ. ಹೀಗೆ ಪ್ರಖರ ಲೈಟ್ ಹಾಕುತ್ತಿರುವುದೇ ಹೀಗೆ ನೀಲಿ ಬಣ್ಣ ಕಾಣುವುದಕ್ಕೆ ಕಾರಣ ಆಗಿರಬಹುದು ಎಂದು ಹೇಳುತ್ತಾರೆ.
ಈ ವಿದ್ಯಮಾನದ ಬಗ್ಗೆ ಗೂಗಲ್ ಸರ್ಚ್ ಮಾಡಿದರೆ, ಅಮೆರಿಕದ ಸಮುದ್ರ ತೀರದಲ್ಲಿ ಇದೇ ರೀತಿಯ ನೀಲಿ ಬಣ್ಣದ ಬೆಳಕು ಬೇಸಗೆ ದಿನಗಳಲ್ಲಿ ಕಾಣಿಸುವುದಂತೆ. ಇದು ಗ್ಲೋಬಲ್ ವಾರ್ಮಿಂಗ್ ಪರಿಣಾಮದ ಮುನ್ಸೂಚನೆ ಎನ್ನಲಾಗುತ್ತಿದೆ. ಪ್ರಖರ ಬಿಸಿಲು ಇರುವ ದಿನಗಳಲ್ಲಿ ಹುಣ್ಣಿಮೆ ಚಂದ್ರನ ಬೆಳಕು ಇರುವಾಗ ಕೆಲವೊಮ್ಮೆ ನೀಲಿ ಬಣ್ಣದ ಬೆಳಕು ಕಾಣಿಸುತ್ತದೆ. ಇದಕ್ಕೆ ಸಮುದ್ರ ಪಾಚಿ, ಅದೇ ರೀತಿ ಕೆಲವು ತೆರನಾದ ಮೀನುಗಳು ಕೂಡ ಕಾರಣವಾಗುತ್ತದೆ. ಜೆಲ್ಲಿ ಫಿಶ್, ಬೊಂಡಾಸ್ ರೀತಿಯ ಮೀನುಗಳು, ಬೆಳಕು ಬಿದ್ದಾಗ ಪ್ರತಿಫಲನಗೊಳ್ಳುವ (Hatchetfish, Dragon fish, and Angler fish) ಕೆಲವು ಜಾತಿಯ ಮೀನುಗಳು ಸಮುದ್ರದ ಮೇಲ್ಭಾಗಕ್ಕೆ ಬಂದಾಗ ಚಂದ್ರನ ಬೆಳಕಿನ ಕಾರಣದಿಂದಾಗಿ ನೀಲಿಯಾಗಿ ಕಾಣುತ್ತದೆ ಎನ್ನಲಾಗುತ್ತದೆ.
ಮತ್ತೊಬ್ಬರು ಮೆರೈನ್ ತಜ್ಞರು ಹೇಳುವ ಪ್ರಕಾರ, ವಾತಾವರಣದಲ್ಲಿ ತಾಪಮಾನ ಏರಿಕೆಯಾಗಿ ಇಂಥ ವಿದ್ಯಮಾನ ಕಂಡುಬರುತ್ತಿದೆ. ಪ್ರಖರ ಬಿಸಿಲಿನ ದಿನಗಳಲ್ಲಿ ಸಮುದ್ರದಡಿಯ ಪಾಚಿಗಳು ಮೇಲೆ ಬರುತ್ತಿದ್ದು, ತಾಪಮಾನದ ಕಾರಣ ಸಾಮಾನ್ಯವಾಗಿ ಹಸರು ಮತ್ತು ಕೆಂಪು ಬಣ್ಣದಲ್ಲಿರುವ ಈ ಸಸ್ಯಗಳು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದು ಉತ್ತಮ ಮುನ್ಸೂಚನೆಯಲ್ಲ. ವಾತಾವರಣ ಹದಗೆಡುತ್ತಿರುವುದರ ಸೂಚನೆ. ಈ ಸಂದರ್ಭದಲ್ಲಿ ನೀರನ್ನು ಮುಟ್ಟಬಾರದು ಎಂದು ಹೇಳುತ್ತಾರೆ.
ಸಸಿಹಿತ್ಲಿನ ಜನರು ಕೂಡ, ಇದೇ ರೀತಿಯ ಅಭಿಪ್ರಾಯ ಹೇಳುತ್ತಾರೆ. ನೀರನ್ನು ಮುಟ್ಟಿದರೆ ತುರಿಸುತ್ತದೆ. ಏನೋ ಬದಲಾವಣೆ ಕಾಣುತ್ತಿದೆ ಎಂದು ಹೇಳುತ್ತಿದ್ದಾರೆ. ವಿಶೇಷ ಅಂದರೆ, ಹೀಗೆ ನೀರು ನೀಲಿಯಾಗಿ ಕೋರೈಸುವುದು ಸಮುದ್ರದ ನಡುವೆ ಅಲ್ಲ. ದಡಕ್ಕೆ ಅಪ್ಪಳಿಸುವ ಹೆದ್ದೆರೆಗಳೇ ಹೀಗೆ ಕಾಣುತ್ತಿದೆ. ನೊರೆಯಾಗಿ ಬರುವ ಅಲೆಗಳೇ ನೀಲಿ ಬಣ್ಣದಿಂದ ಕೋರೈಸಿದ ರೀತಿ ಕಾಣುತ್ತಿದೆ. ಕಾರವಾರ, ಗೋಕರ್ಣದ ಕಡಲ ತೀರದಲ್ಲೂ ಇದೇ ರೀತಿಯ ವಿದ್ಯಮಾನ ಕಂಡುಬಂದಿದೆ.
Video:
A magical blue glow on the Sasihithlu beach in Mangalore became a treat to the eyes for visitors. This phenomenon is commonly known as sea tinkle. The blue glow is known as bioluminescence and is a phenomenon caused by Noctiluca Scintillans, according to marine experts.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm