ಬ್ರೇಕಿಂಗ್ ನ್ಯೂಸ್
02-02-24 05:38 pm Mangalore Correspondent ಕರಾವಳಿ
ಪುತ್ತೂರು, ಫೆ.2: ಲೋಕಸಭೆ ಚುನಾವಣೆಗೆ ಹತ್ತಿರವಾಗುತ್ತಿದ್ದಂತೆ ಪುತ್ತೂರಿನಲ್ಲಿ ಪುತ್ತಿಲ ಪರಿವಾರ ಮತ್ತೆ ಸೆಟೆದುಕೊಳ್ಳುವ ಸೂಚನೆ ಲಭಿಸಿದೆ. ಅಸೆಂಬ್ಲಿ ಚುನಾವಣೆ ಬಳಿಕ ಬಿಜೆಪಿ ನಾಯಕರ ಜೊತೆಗೆ ಹಲವು ಸುತ್ತಿನ ಮಾತುಕತೆ ನಡೆದರೂ ಫಲಪ್ರದ ಆಗದಿರುವುದರಿಂದ ಲೋಕಸಭೆಯಲ್ಲಿ ಪವರ್ ತೋರಿಸಬೇಕು ಎನ್ನುವ ನಿಲುವಿನಲ್ಲಿ ಪರಿವಾರದ ಕಾರ್ಯಕರ್ತರಿದ್ದಾರೆ. ಹೀಗಾಗಿ ಫೆ.5ರಂದು ಕೊಟೆಚಾ ಹಾಲ್ ನಲ್ಲಿ ಪುತ್ತಿಲ ಪರಿವಾರದ ಕಾರ್ಯಕರ್ತರ ಸಭೆ ಕರೆಯಲಾಗಿದೆ.
ಇದಕ್ಕೂ ಮೊದಲು ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ವದಂತಿಗಳು ಜೋರಾಗಿದ್ದವು. ಎರಡು ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಂಗಳೂರಿಗೆ ಬಂದಾಗ ಪುತ್ತಿಲ ಪಕ್ಷ ಸೇರಲಿದ್ದಾರೆ ಎನ್ನುವ ಮಾತೂ ಕೇಳಿಬಂದಿತ್ತು. ಆದರೆ, ಅದ್ಯಾವುದೂ ಸಾಕಾರ ಆಗದೇ ಇರುವುದು ಮತ್ತು ಲೋಕಸಭೆ ಚುನಾವಣೆ ಹತ್ತಿರ ಬಂದರೂ ಗೊಂದಲ ಬಗೆಹರಿಯದೇ ಇರುವುದರಿಂದ ಮುಂದಿನ ನಡೆಯೇನು ಎನ್ನುವ ಬಗ್ಗೆ ಚರ್ಚಿಸಲು ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆಯಲು ಪರಿವಾರದ ಮುಖಂಡರು ಮುಂದಾಗಿದ್ದಾರೆ.
ಕಳೆದ ವಾರ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆವಿ ಅವರು ಪುತ್ತೂರಿನಲ್ಲಿ ಬಿಜೆಪಿ ನಾಯಕರ ಜೊತೆಗೆ ಸಭೆಯನ್ನು ನಡೆಸಿದ್ದರು. ಅರುಣ್ ಪುತ್ತಿಲ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಕುರಿತಾಗಿ ಬಿಜೆಪಿ ನಾಯಕರ ಅಭಿಪ್ರಾಯಗಳನ್ನು ಆಲಿಸಿದ್ದಾರೆ. ಸಭೆಯಲ್ಲಿ ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಪುತ್ತೂರು ಬಿಜೆಪಿಯ ಹಲವು ನಾಯಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ಯಾವುದೇ ಜವಾಬ್ದಾರಿ ಬಯಸದೆ ಪಕ್ಷ ಸೇರಿಕೊಳ್ಳಲು ಅಭ್ಯಂತರ ಇಲ್ಲವೆಂಬ ಮಾತುಗಳು ಕೇಳಿಬಂದಿದ್ದವು. ಆದರೆ ಪುತ್ತೂರು ಮತ್ತು ಮಂಗಳೂರು ಭಾಗದ ಆರೆಸ್ಸೆಸ್ ಪ್ರಮುಖರು ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ವಿರೋಧ ಸೂಚಿಸಿರುವುದರಿಂದ ರಾಜ್ಯ ನಾಯಕರು ಈ ಬಗ್ಗೆ ಅಳೆದು ತೂಗಿ ನಿರ್ಧಾರಕ್ಕೆ ಬರಲು ಮುಂದಾಗಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಭಾರೀ ಜನಬೆಂಬಲ ಸಿಕ್ಕಿದ್ದರಿಂದ ಅರುಣ್ ಪುತ್ತಿಲ ಲೋಕಸಭೆಗೂ ಬಂಡಾಯ ನಿಲ್ಲಲ್ಲಿದ್ದಾರೆ ಎಂದು ಪರಿವಾರದ ಕಾರ್ಯಕರ್ತರು ಫೋಕಸ್ ಮಾಡಿದ್ದರೂ, ಆನಂತರದ ಬೆಳವಣಿಗೆಯಲ್ಲಿ ಪುತ್ತಿಲ ಲೋಕಸಭೆ ಕಣಕ್ಕಿಳಿಯುವ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಪುತ್ತಿಲ ಪರಿವಾರವೂ ಅಧಿಕೃತವಾಗಿ ಹೇಳಿಕೊಂಡಿದ್ದಿಲ್ಲ. ಆದರೆ, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೆ ಕಣಕ್ಕಿಳಿದರೆ, ಅರುಣ್ ಪುತ್ತಿಲ ಬಂಡಾಯ ನಿಲ್ಲಲಿದ್ದಾರೆ ಎನ್ನುವ ಮಾತುಗಳಂತೂ ಪುತ್ತೂರಿನಲ್ಲಿ ಕೇಳಿಬಂದಿತ್ತು. ಯಾಕಂದ್ರೆ, ಪುತ್ತೂರಿನಲ್ಲಿ ಅರುಣ್ ಪುತ್ತಿಲ ಹೊರಗೆ ಕಾಣುವ ಮುಖವಾಗಿದ್ದರೂ, ಆ ಪರಿವಾರದ ಒಳಗಿನ ಮುಖ ನಳಿನ್ ವಿರೋಧಿ ಕಾರ್ಯಕರ್ತರ ಬಂಡಾಯವೇ ಆಗಿತ್ತು. ಹೀಗಾಗಿ ನಳಿನ್ ಕುಮಾರ್ ಮತ್ತು ಬಿಜೆಪಿಗೆ ಅರುಣ್ ಪುತ್ತಿಲರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಮತ್ತು ಪುತ್ತಿಲ ಪರಿವಾರದ ಕತೆ ಮುಗಿಸುವುದು ಅನಿವಾರ್ಯ ಆಗಿತ್ತು. ಇದೇ ಕಾರಣಕ್ಕೆ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಪ್ರಮುಖರು ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ ಈವರೆಗೆ ಫಲ ನೀಡಿಲ್ಲ. ಇದೇ ವೇಳೆ, ಗ್ರಾಪಂ ಮತ್ತು ನಗರಸಭೆ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಕಾರ್ಯಕರ್ತರು ತಮ್ಮ ಖದರು ತೋರಿಸಿ ಬಿಜೆಪಿ ನಾಯಕರಿಗೆ ಮತ್ತೆ ಸಂದೇಶ ರವಾನಿಸಿದ್ದಾರೆ.
ಒಂದು ಮಾಹಿತಿಯ ಪ್ರಕಾರ, ಅರುಣ್ ಪುತ್ತಿಲರಿಗೆ ರಾಜ್ಯ ಘಟಕದಿಂದ ಪಕ್ಷ ಸೇರಿಕೊಳ್ಳಲು ಸೂಚನೆ ಬಂದಿದೆ ಎನ್ನಲಾಗುತ್ತಿದೆ. ಆದರೆ ಪುತ್ತಿಲ ಪರಿವಾರ ಸಂಘಟನೆಯನ್ನು ಬರ್ಖಾಸ್ತುಗೊಳಿಸಿ ಪಕ್ಷಕ್ಕೆ ಬರಬೇಕು ಎನ್ನುವ ಷರತ್ತು ವಿಧಿಸಿರುವುದು ಕಾರ್ಯಕರ್ತರನ್ನು ಚಿಂತೆಗೀಡು ಮಾಡಿದೆ. ನಿಶ್ಚಿತ ಜವಾಬ್ದಾರಿ ಇಲ್ಲದೆ, ಪಕ್ಷ ಸೇರಿಕೊಂಡರೆ ಮತ್ತೆ ಬದಿಗೆ ಸರಿಸುವ ಪ್ರಯತ್ನ ಆಗುತ್ತದೆ, ಹಿಂದೆಯೂ ಅದೇ ರೀತಿಯಾಗಿತ್ತು. ಭರವಸೆ ಕೊಟ್ಟು ಕೈಬಿಡುತ್ತಾರೆ ಎಂಬ ಅಸಮಾಧಾನ ಕಾರ್ಯಕರ್ತರಲ್ಲಿದೆ. ಅಲ್ಲದೆ, ಸಂಘಟನೆ ಬರ್ಖಾಸ್ತು ಮಾಡಿದರೆ ತಮಗೆ ಅಸ್ತಿತ್ವ ಇರುವುದಿಲ್ಲ ಎನ್ನುವ ನೋವಿನಲ್ಲಿ ಕಾರ್ಯಕರ್ತರಿದ್ದಾರೆ. ಇದೇ ಕಾರಣಕ್ಕೆ ಪರಿವಾರದ ಕಾರ್ಯಕರ್ತರ ಸಭೆ ಕರೆದಿದ್ದು, ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ. ಒಂದೋ ಲೋಕಸಭೆಗೂ ಬಂಡಾಯ, ಇಲ್ಲವೇ ಪರಿವಾರ ಬರ್ಖಾಸ್ತು ಎನ್ನುವುದು ಫೆ.5ರಂದು ತೀರ್ಮಾನ ಆಗಲಿದೆಯೇ ಎನ್ನುವ ಕುತೂಹಲ ಪುತ್ತೂರಿನಲ್ಲಿದೆ.
Puttur Arun Puthila next move meeting for master plan on Assembly meeting to be held on Feb 5th.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm