Mangalore, railway property, officials stop work:ರೈಲ್ವೇ ಜಮೀನಿನಲ್ಲಿ ಕಾಂಕ್ರೀಟ್ ರಸ್ತೆ ಯತ್ನ, ಕಾಮಗಾರಿಗೆ ರೈಲ್ವೇ ಅಧಿಕಾರಿಗಳ ತಡೆ ; ನಗರೋತ್ಥಾನ ಹೆಸರಲ್ಲಿ ಸ್ಥಳೀಯರಿಗೆ ತಡೆಬೇಲಿ ! 

03-02-24 06:53 pm       Mangalore Correspondent   ಕರಾವಳಿ

ರೈಲ್ವೇ ಇಲಾಖೆ ಸುಪರ್ದಿಗೆ ಒಳಪಟ್ಟ ಜಮೀನಿನಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಿಸಲಾಗುತ್ತಿದ್ದ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ರೈಲ್ವೇ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತಡೆ ಹಿಡಿದಿದ್ದಾರೆ.

ಉಳ್ಳಾಲ, ಫೆ.3 ರೈಲ್ವೇ ಇಲಾಖೆ ಸುಪರ್ದಿಗೆ ಒಳಪಟ್ಟ ಜಮೀನಿನಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಿಸಲಾಗುತ್ತಿದ್ದ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ರೈಲ್ವೇ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತಡೆ ಹಿಡಿದಿದ್ದಾರೆ.

ಸೋಮೇಶ್ವರ ಉಚ್ಚಿಲ ರೈಲ್ವೇ ಗೇಟ್ ಬಳಿಯ ಅಂಚಿಕಟ್ಟೆ ಎಂಬಲ್ಲಿ ಹಳಿಯ ಪಕ್ಕದ ಕಚ್ಚಾ ರಸ್ತೆಗೆ ಶನಿವಾರ ಬೆಳಗ್ಗೆ ಕಾಂಕ್ರೀಟೀಕರಣ ಕಾಮಗಾರಿ ಆರಂಭಿಸಲಾಗಿತ್ತು. ಈ ಬಗ್ಗೆ ರೈಲ್ವೇ ಅಧಿಕಾರಿಗಳಿಗೆ ದೂರು ಹೋದ ಹಿನ್ನಲೆಯಲ್ಲಿ ಪೊಲೀಸರೊಂದಿಗೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ಕಾಮಗಾರಿ ತಡೆದಿದ್ದಾರೆ. ಅಲ್ಲದೆ, ಕಚ್ಚಾ ರಸ್ತೆಗೆ ವಾಹನಗಳೇ ಪ್ರವೇಶಿಸದಂತೆ ಕಬ್ಬಿಣದ ತಡೆಬೇಲಿಗಳನ್ನ ಅಳವಡಿಸಿದ್ದಾರೆ. 

ರೈಲ್ವೇ ಇಲಾಖೆಗೆ ಸಂಬಂಧಿಸಿದ ಜಾಗವೆಂದು ಗೊತ್ತಿದ್ದರೂ ಕಾಂಕ್ರೀಟ್ ರಸ್ತೆ ನಿರ್ಮಿಸಲು ಮುಂದಾದ ನಗರೋತ್ಥಾನ ಯೋಜನೆಯ ಅಧಿಕಾರಿಗಳಿಗೆ ಏನೆನ್ನಬೇಕೋ. ಕನಿಷ್ಠ ವಾಹಗಳನ್ನದಾರೂ ರಸ್ತೆಯಲ್ಲಿ ಓಡಿಸುತ್ತಿದ್ದೆವು. ಅದಕ್ಕೂ ತಡೆಬೇಲಿ ಬೀಳಿಸಿದ ಅಧಿಕಾರಿಗಳಿಗೆ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ.

Concrete road in railway property, officials stop work at Uchila in Mangalore.