ಬ್ರೇಕಿಂಗ್ ನ್ಯೂಸ್
03-02-24 08:38 pm Mangalore Correspondent ಕರಾವಳಿ
ಮಂಗಳೂರು, ಫೆ.3: ಮಳಲಿ ಮಸೀದಿ ವಿಚಾರದಲ್ಲಿ ಗೊಂದಲ ಎದ್ದಿರುವಾಗಲೇ ವಕ್ಫ್ ಕಮಿಟಿ ಎಂಟ್ರಿಯಾಗಿದ್ದು, ಮುಂದಿನ ಕೋರ್ಟ್ ಜಟಾಪಟಿಯನ್ನು ನಾವೂ ಜೊತೆಯಾಗಿದ್ದುಕೊಂಡು ಮಾಡುತ್ತೇವೆ ಎಂದು ವಕ್ಫ್ ಬೋರ್ಡ್ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಎ. ನಾಸೀರ್ ಅಲಿ ಲಕ್ಕಿ ಸ್ಟಾರ್ ಹೇಳಿದ್ದಾರೆ.
ಮಳಲಿಯಲ್ಲಿ ಹಳೆಕಾಲದಿಂದಲೂ ಮಸೀದಿ ಇತ್ತು. ಹಿಂದಿನ ಕಾಲದಲ್ಲಿ ಆಣೆ ರೂಪದಲ್ಲಿ ತಸ್ತೀಕು ಬರುತ್ತಿತ್ತು. ಈಗಲೂ ಸರಕಾರದಿಂದ ಅನುದಾನ ನೀಡಲಾಗುತ್ತಿದೆ. 2011ರಲ್ಲಿ ಮಸೀದಿ ಆಸ್ತಿಯೆಂದು ಸರಕಾರಿ ಗಜೆಟ್ ನೋಟಿಫಿಕೇಶನ್ ಆಗಿದೆ. ಒಂದು ವರ್ಷದ ಹಿಂದೆ ಮಸೀದಿ ನವೀಕರಣ ಮಾಡುತ್ತಿದ್ದಾಗ, ಅಲ್ಲಿನ ಚಿತ್ರಣಗಳನ್ನು ನೋಡಿ ಗೊಂದಲ ಮಾಡಿಕೊಂಡಿದ್ದಾರೆ. ಹಿಂದೆ ಕೇರಳದಿಂದ ಬಂದ ವಾಸ್ತುಶಿಲ್ಪಿಗಳು ದೇವಸ್ಥಾನ, ಮಸೀದಿಯನ್ನು ನಿರ್ಮಿಸುತ್ತಿದ್ದುದರಿಂದ ಒಂದೇ ರೀತಿಯಾಗಿ ಕಂಡಿದೆ. ಹಾಗಿದ್ದರೂ, ಮಳಲಿಯಲ್ಲಿ ಹಿಂದು- ಮುಸ್ಲಿಮರು ಸಾಮರಸ್ಯದಲ್ಲಿದ್ದಾರೆ. ಹೊರಗಿನಿಂದ ಬಂದವರು ವಿವಾದ ಎಬ್ಬಿಸಿದ್ದಾರೆ.
ಮಂಗಳೂರಿನ ಕೋರ್ಟಿನಲ್ಲಿ ಒಂದಿಬ್ಬರು ದಾವೆ ಹೂಡಿದಾಗ, ಅದು ವಕ್ಫ್ ಆಸ್ತಿಯಾಗಿದ್ದು, ವಕ್ಫ್ ಬೋರ್ಡ್ ಟ್ರಿಬ್ಯುನಲ್ ನಲ್ಲಿಯೇ ತೀರ್ಮಾನ ಆಗಬೇಕು ಎಂದು ಪ್ರಶ್ನೆ ಮಾಡಲಾಗಿತ್ತು. ಮಂಗಳೂರಿನ ಕೋರ್ಟ್ ಇಲ್ಲಿಯೇ ತೀರ್ಮಾನ ಮಾಡಬಹುದು ಎಂದಿದ್ದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದೆವು. ಒಂದು ವರ್ಷದ ಕಾಲದ ವಾದ ನಡೆದು ಮೊನ್ನೆ ಜ.31ರಂದು ತೀರ್ಪು ಕೊಟ್ಟಿದೆ. ಮಂಗಳೂರಿನ ಕೋರ್ಟಿನಲ್ಲಿಯೇ ಇತ್ಯರ್ಥ ಮಾಡಿಕೊಳ್ಳಿ ಎಂದಿದೆ ವಿನಾ ಸಾಮಾಜಿಕ ಜಾಲತಾಣದಲ್ಲಿ ಬಂದ ರೀತಿ ಏನೂ ಆಗಿಲ್ಲ. ಅದರಿಂದ ಯಾರಿಗೂ ಜಯ ಆಗಿಲ್ಲ. ಮಸೀದಿ ಅನ್ನುವುದಕ್ಕೆ ನಮ್ಮಲ್ಲಿ ಎಲ್ಲ ದಾಖಲೆಯೂ ಇದೆ. ಸರ್ವೆ ಮಾಡಿದ್ದೂ ಇದೆ.
ನಾವು ಇನ್ನು ಮಸೀದಿ ಕಮಿಟಿಯ ಜೊತೆಗೆ ವಕ್ಫ್ ಬೋರ್ಡ್ ನಿಂದಲೇ ಕಾನೂನು ಹೋರಾಟ ಮಾಡುತ್ತೇವೆ. ಈಗಲೂ ಅಲ್ಲಿ ನವೀಕರಣ ಮಾಡುವುದು ಬೇಡ ಅಂದಿದ್ದು ಹೊರತು ನಮಾಜ್ ಮಾಡಬೇಡಿ ಎಂದಿಲ್ಲ. ನಾವು ಐದು ಹೊತ್ತು ನಮಾಜ್ ಮಾಡುತ್ತಿದ್ದೇವೆ. ಕಾನೂನಿನ ಪ್ರಕಾರ, ಕೋರ್ಟಿಗೆ ದಾಖಲೆಗಳನ್ನು ಕೊಟ್ಟು ಮಸೀದಿಯನ್ನು ನವೀಕರಣ ಮಾಡುತ್ತೇವೆ ಎಂದು ನಾಸೀರ್ ಅಲಿ ಸುದ್ದಿಗೋಷ್ಟಿ ಕರೆದು ಹೇಳಿದ್ದಾರೆ. ಅಮೃತ ಸೋಮೇಶ್ವರ ಬರೆದ ಪುಸ್ತಕದಲ್ಲಿ ಮಳಲಿ ಮಸೀದಿ ಕುರಿತು ಉಲ್ಲಖ ಇದ್ದು, ರಾಣಿ ಅಬ್ಬಕ್ಕ ಅಲ್ಲಿಗೆ ಬಂದಿರುವ ವಿಚಾರ ಇದೆ. ಹಾಗಾದಲ್ಲಿ ಅಬ್ಬಕ್ಕ ಇದ್ದಾಗಲೂ ಅಲ್ಲಿ ಮಸೀದಿ ಇತ್ತೆಂದು ಆಗುತ್ತದೆ ಎಂದವರು ಹೇಳಿದ್ದಾರೆ.
Mangalore Wakf board addresses Malali Mosque controversy, clarifies on misinformation. A Nasir, the district president of Wakf board, Dakshina Kannada, conducted a press conference in the city regarding the Malali mosque controversy.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm