Mangalore Ullal Cricket, bees attack: ಹೆಜ್ಜೇನು ಗೂಡಿಗೆ ಬಡಿದ ಚೆಂಡು !ಜೇನು ನೊಣಗಳ ದಾಳಿಗೆ ದಿಕ್ಕಾಪಾಲು ಓಡಿದ ಕ್ರಿಕೆಟ್ ಆಟಗಾರರು 

05-02-24 04:20 pm       Mangalore Correspondent   ಕರಾವಳಿ

ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದಾಗ ಬ್ಯಾಟ್ಸ್‌ಮನ್ ಹೊಡೆದ ಚೆಂಡು ತೆಂಗಿನ ಮರದಲ್ಲಿದ್ದ ಹೆಜ್ಜೇನು ಗೂಡಿಗೆ ಬಡಿದ ಪರಿಣಾಮ ಜೇನು ಹುಳಗಳು ಗುಂಪಾಗಿ ದಾಳಿಯಿಟ್ಟ ಘಟನೆ ಉಳ್ಳಾಲ ಒಂಭತ್ತುಕೆರೆಯಲ್ಲಿ ನಡೆದಿದ್ದು ನೊಣಗಳ ದಾಳಿಯಿಂದ ತಪ್ಪಿಸಲು ಕ್ರಿಕೆಟ್ ಆಟಗಾರರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ. 

ಉಳ್ಳಾಲ, ಫೆ.5: ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದಾಗ ಬ್ಯಾಟ್ಸ್‌ಮನ್ ಹೊಡೆದ ಚೆಂಡು ತೆಂಗಿನ ಮರದಲ್ಲಿದ್ದ ಹೆಜ್ಜೇನು ಗೂಡಿಗೆ ಬಡಿದ ಪರಿಣಾಮ ಜೇನು ಹುಳಗಳು ಗುಂಪಾಗಿ ದಾಳಿಯಿಟ್ಟ ಘಟನೆ ಉಳ್ಳಾಲ ಒಂಭತ್ತುಕೆರೆಯಲ್ಲಿ ನಡೆದಿದ್ದು ನೊಣಗಳ ದಾಳಿಯಿಂದ ತಪ್ಪಿಸಲು ಕ್ರಿಕೆಟ್ ಆಟಗಾರರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ. 

ಆದಿತ್ಯವಾರ ಒಂಬತ್ತುಕೆರೆಯ ಅನಿಲ ಕಂಪೌಂಡ್ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದ ಸಂದರ್ಭ ಎಸ್.ಆರ್ .ಜಿ.ಟಿ ತಂಡದ ಮಹೇಶ್ ಎಂಬವರು ಹೊಡೆದ ಚೆಂಡು ನೇರವಾಗಿ ಹೆಜ್ಜೇನು ಗೂಡು ಕಟ್ಟಿದ್ದ ತೆಂಗಿನ ಮರಕ್ಕೆ ಬಿದ್ದಿದೆ. ನೊಣಗಳು ಮುತ್ತಿಕೊಂಡಿದ್ದು ದಾಳಿಯಿಂದ ರಕ್ಷಿಸಿಕೊಳ್ಳಲು ಮಹೇಶ್ ಅವರು ಮೈದಾನವಿಡೀ ಓಡಿದ್ದಾರೆ. ಉಳಿದ ಆಟಗಾರರನ್ನೂ ಹುಳುಗಳು ಬೆನ್ನಟ್ಟಿದ್ದು ಕ್ರಿಕೆಟ್ ಟೂರ್ನಿಯೇ ರದ್ದುಗೊಂಡಿದೆ. ಆಟಗಾರರು ಯಾರೋ ಬೆನ್ನತ್ತಿಕೊಂಡು ಬಂದ ರೀತಿ ಒಂದೆಡೆಯಿಂದ ಇನ್ನೊಂದೆಡೆಗೆ ಓಡಿದ್ದು ಬಳಿಕ ಜಾಗವನ್ನೇ ಖಾಲಿ ಮಾಡಿದ್ದಾರೆ. 

ಘಟನೆಯಿಂದ ಕುತ್ತಾರು ನಿವಾಸಿ ಮಹೇಶ್ ಗಾಯಗೊಂಡಿದ್ದು ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Mangalore Ullal Cricket ball touches honey bee nest, bees attack cricket players, video goes viral.