ಮಕ್ಕಳ ತಜ್ಞ, ಕಾಸರಗೋಡು ಮೂಲದ ಡಾ.ರಮಾನಂದ ಕಾಮತ್ ಗೆ ಆಸ್ಟ್ರೇಲಿಯಾದ ಅತ್ಯುನ್ನತ ಗೌರವ 

06-02-24 05:48 pm       Mangalore Correspondent   ಕರಾವಳಿ

ಕಾಸರಗೋಡು ಮೂಲದ ಡಾ| ಕೆ. ರಮಾನಂದ ಕಾಮತ್‌ ಅವರು ಆಸ್ಟ್ರೇಲಿಯಾ ದೇಶದ ಅತ್ಯುನ್ನತ ಪುರಸ್ಕಾರ “ಮೆಡಲ್‌ ಆಫ್ ದಿ ಆರ್ಡರ್‌ ಆಫ್ ಆಸ್ಟ್ರೇಲಿಯಾ’ ಗೌರವಕ್ಕೆ ಪಾತ್ರರಾಗಿದ್ದಾರೆ. 

ಮಂಗಳೂರು, ಫೆ.6: ಕಾಸರಗೋಡು ಮೂಲದ ಡಾ| ಕೆ. ರಮಾನಂದ ಕಾಮತ್‌ ಅವರು ಆಸ್ಟ್ರೇಲಿಯಾ ದೇಶದ ಅತ್ಯುನ್ನತ ಪುರಸ್ಕಾರ “ಮೆಡಲ್‌ ಆಫ್ ದಿ ಆರ್ಡರ್‌ ಆಫ್ ಆಸ್ಟ್ರೇಲಿಯಾ’ ಗೌರವಕ್ಕೆ ಪಾತ್ರರಾಗಿದ್ದಾರೆ. 

87ರ ಹರೆಯದ ಡಾ| ಕಾಮತ್‌ ಅವರು ಮಕ್ಕಳ ಗ್ಯಾಸ್ಟ್ರೊ ಎಂಟರಾಲಜಿ ವಿಭಾಗದಲ್ಲಿ ಆಳವಾದ ಅಧ್ಯಯನ ನಡೆಸಿದವರು. ಸಿಡ್ನಿಯ ಮಕ್ಕಳ ಆಸ್ಪತ್ರೆಯಲ್ಲಿ ಆರಂಭಿಸಿದ ಈ ವಿಶೇಷ ವಿಭಾಗ ಆಸ್ಟ್ರೇಲಿಯಾದಲ್ಲಿ ಮೊದಲನೆಯದ್ದು. ಈಗ ಈ ಆಸ್ಪತ್ರೆಯನ್ನು ವೆಸ್ಟ್‌ ಮೆಡ್‌ ಚಿಲ್ಡ್ರನ್ಸ್‌ ಹಾಸ್ಪಿಟಲ್‌ ಎಂದು ಕರೆಯಲಾಗುತ್ತದೆ. 

ಆಸ್ಟ್ರೇಲಿಯಾದಲ್ಲಿ ಮಕ್ಕಳ ಲಿವರ್‌ ಟ್ರಾನ್ಸ್‌ ಪ್ಲಾಂಟ್‌ ಅನ್ನು ಮೊದಲು ನಿರ್ವಹಿಸಿದ ಕೀರ್ತಿಯೂ ಡಾ. ಕಾಮತ್‌ ಅವರದು. 2003ರಲ್ಲಿ ನಿವೃತ್ತರಾದರೂ ಈ ಕ್ಷೇತ್ರದ ನವೀನ ಬೆಳವಣಿಗೆಗಳ ಬಗ್ಗೆ ನಿರಂತರ ಅಧ್ಯಯನ ನಡೆಸುತ್ತಿದ್ದಾರೆ. ಮದ್ರಾಸ್‌ ವಿ.ವಿ.ಯಲ್ಲಿ ಎಂಬಿಬಿಎಸ್‌, ವೆಲ್ಲೂರು ಸಿಎಂಸಿಯಲ್ಲಿ ಎಂಡಿ, ಡಿಸಿಎಚ್‌ ಅಧ್ಯಯನ ನಡೆಸಿ ವೆಲ್ಲೂರಿನಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಲಂಡನ್‌, ಮಲೇಶ್ಯಾದಲ್ಲಿ ಕಾರ್ಯ ನಿರ್ವಹಿಸಿ ಆಸ್ಟ್ರೇಲಿಯಾದಲ್ಲಿ ಸೇವೆ ಸಲ್ಲಿಸಿದ್ದರು. ಆರಂಭದಲ್ಲಿ ಮಣಿಪಾಲ ಕೆಎಂಸಿಯಲ್ಲೂ ಪ್ರಾಧ್ಯಾಪಕರಾಗಿದ್ದರು.

“ನಾನ್‌ ಆಲ್ಕೊಹಾಲಿಕ್‌ ಫ್ಯಾಟಿ ಲಿವರ್‌ ಡಿಸೀಸ್‌/ ಮೆಟಬಾಲಿಕ್‌ ಅಸೋಸಿಯೇಟೆಡ್‌ ಫ್ಯಾಟಿ ಲಿವರ್‌ ಡಿಸೀಸ್‌’ಗೆ ಸಂಬಂಧಿಸಿ ಹಿಂದೆ ಸರ್ವಿಸಿನಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನೂ ಕಂಡಿರಲಿಲ್ಲ. ಈಗ ಪ್ರತೀ ನಾಲ್ವರು ಆಸ್ಟ್ರೇಲಿಯಾದ ಯುವಕರು/ಮಕ್ಕಳಲ್ಲಿ ಒಬ್ಬರಲ್ಲಿ ಇಂಥ ರೋಗ ಕಂಡುಬರುತ್ತಿದೆ. ಬೊಜ್ಜು ಕಂಡುಬರುವುದಕ್ಕೆ ತಪ್ಪಾದ ಆಹಾರ ಕ್ರಮ, ಕಳಪೆ ಜೀವನಶೈಲಿ ಕಾರಣವಾಗಿದೆ. ಆರಂಭದಲ್ಲಿಯೇ ಇಂತಹ ಸಮಸ್ಯೆಯನ್ನು ಪತ್ತೆಹಚ್ಚಿದರೆ ನಿಯಂತ್ರಿಸಬಹುದು ಎನ್ನುತ್ತಾರೆ ಡಾ| ಕಾಮತ್‌.

Kasargod-based Dr. K. Ramananda Kamath has been awarded the Medal of the Order of Australia, Australia's highest civilian award.  The 87-year-old Kamath has done an in-depth study in the department of paediatric gastroenterology. This special department, started at the Children's Hospital in Sydney, is the first in Australia. The hospital is now known as West Med Children's Hospital.