ಬ್ರೇಕಿಂಗ್ ನ್ಯೂಸ್
06-02-24 08:29 pm Mangalore Correspondent ಕರಾವಳಿ
ಮಂಗಳೂರು, ಫೆ.6: ಮಂಗಳೂರು ಸೆಂಟ್ರಲ್- ಮಡಗಾಂವ್ ಮಧ್ಯೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಆರಂಭಗೊಂಡು ಒಂದು ತಿಂಗಳು ಕಳೆಯುತ್ತಿದ್ದು, ಅರ್ಧದಷ್ಟೂ ಪ್ರಯಾಣಿಕರು ತುಂಬುತ್ತಿಲ್ಲ ಎನ್ನುವ ಮಾಹಿತಿ ಕೊಂಕಣ ರೈಲ್ವೇಯಿಂದ ತಿಳಿದುಬಂದಿದೆ. ಎಂಟು ಬೋಗಿಗಳ ವಂದೇ ಭಾರತ್ ರೈಲು ಡಿಸೆಂಬರ್ 30ರಂದು ಆರಂಭಗೊಂಡಿತ್ತು. ಈ ರೈಲಿಗೆ ತಿಂಗಳು ತುಂಬುವಷ್ಟರಲ್ಲಿ ಪ್ರಯಾಣಿಕರ ಸಂಖ್ಯೆ ತೀವ್ರ ಇಳಿಮುಖವಾಗಿದೆ. ಹೀಗಾಗಿ ಮಂಗಳೂರು – ಗೋವಾ ರೈಲನ್ನು ಮುಂಬೈಗೆ ವಿಸ್ತರಣೆ ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.
ಡಿಸೆಂಬರ್ 30ರಿಂದ ಜನವರಿ 26ರ ವರೆಗಿನ ಕೊಂಕಣ ರೈಲ್ವೇ ಮಾಹಿತಿ ಪ್ರಕಾರ, ಮಂಗಳೂರಿನಿಂದ ಗೋವಾಕ್ಕೆ ಈ ರೈಲಿನಲ್ಲಿ 37 ಶೇಕಡಾ ಜನರು ತೆರಳಿದ್ದಾರೆ. ಇದೇ ವೇಳೆ, ಮಡಗಾಂವ್ ನಿಂದ ಮಂಗಳೂರಿಗೆ 43 ಶೇಕಡಾ ಪ್ರಯಾಣಿಕರು ಆಗಮಿಸಿದ್ದಾರೆ. ಈ 27 ದಿನಗಳಲ್ಲಿ ವಂದೇ ಭಾರತ್ ರೈಲು 23 ಟ್ರಿಪ್ ಹೊಡೆದಿತ್ತು. 1196 ಎಕ್ಸಿಕ್ಯುಟಿವ್ ಕ್ಲಾಸ್ ಸೇರಿ ಆಗಮನ- ನಿರ್ಗಮನ ಒಳಗೊಂಡು 12,190 ಸೀಟುಗಳಾಗಿದ್ದು, ಈ ಪೈಕಿ ಮಂಗಳೂರಿನಿಂದ ಗೋವಾಕ್ಕೆ 4355 ಮಂದಿ ಪ್ರಯಾಣಿಸಿದ್ದರೆ, ಗೋವಾದಿಂದ ಮಂಗಳೂರಿಗೆ 5194 ಮಂದಿ ಆಗಮಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಮುಂಬೈ- ಮಡಗಾಂವ್ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲಿನಲ್ಲಿ 95 ಶೇಕಡಾ ಸೀಟು ಭರ್ತಿಯಾಗುತ್ತದೆ. ರೈಲು ಆರಂಭಗೊಂಡ ಬಳಿಕ ಈ ಮಾರ್ಗದಲ್ಲಿ 128 ಟ್ರಿಪ್ ಮಾಡಿದ್ದು, ಬಹುತೇಕ ಎಲ್ಲ ಸಂದರ್ಭದಲ್ಲೂ ಹೌಸ್ ಫುಲ್ ಆಗಿಯೇ ಚಲಿಸಿದೆ. ಇದೇ ಕಾರಣಕ್ಕೆ ಈ ರೈಲನ್ನು ಮಂಗಳೂರಿಗೆ ವಿಸ್ತರಣೆ ಮಾಡಬೇಕೆಂಬ ಬೇಡಿಕೆ ಹೆಚ್ಚಿದೆ. ಸದ್ಯಕ್ಕೆ ಮುಂಬೈನಿಂದ ಉಡುಪಿ, ಮಂಗಳೂರಿಗೆ ಬರುವವರು ಗೋವಾಕ್ಕೆ ಬಂದು ಅಲ್ಲಿಂದ ಇಲ್ಲಿನ ರೈಲು ಸಂಪರ್ಕಿಸಬೇಕಿದೆ. ಮಂಗಳೂರು – ಗೋವಾ ರೈಲನ್ನು ಮುಂಬೈಗೆ ವಿಸ್ತರಣೆ ಮಾಡದೇ ವಂದೇ ಭಾರತ್ ಯಶಸ್ಸು ಕಾಣಲ್ಲ ಎಂದು ರೈಲು ಪ್ರಯಾಣಿಕರ ಅಸೋಸಿಯೇಶನ್ ಪದಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ, ರೈಲ್ವೇ ಇಲಾಖೆಗೆ ಪತ್ರ ಬರೆದು ಮುಂಬೈ – ಗೋವಾ ವಂದೇ ಭಾರತ್ ರೈಲನ್ನು ಮಂಗಳೂರಿಗೆ ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ.
ರಾಜ್ಯ ರಾಜಧಾನಿ ಅಥವಾ ಬೇರಾವುದೇ ವಾಣಿಜ್ಯ ನಗರಕ್ಕೆ ರೈಲು ಸಂಪರ್ಕಿಸಿದರೆ ಮಾತ್ರ ಲಾಭದಾಯಕ. ಮಂಗಳೂರು- ಮಡಗಾಂವ್ ನಡುವಿನ ರೈಲು ಇದ್ಯಾವುದನ್ನೂ ಸಂಪರ್ಕಿಸುವುದಿಲ್ಲ. ಹೀಗಾಗಿ ವಾರದ ಕೊನೆಯ ದಿನ ಬಿಟ್ಟು ಉಳಿದ ಸಮಯದಲ್ಲಿ ಖಾಲಿಯಾಗಿಯೇ ಸಂಚರಿಸುವ ಸ್ಥಿತಿಯಾಗಿದೆ ಎಂದು ಕುಂದಾಪುರದ ಗೌತಮ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ. ಹನುಮಂತ ಕಾಮತ್ ರೈಲ್ವೇ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಮಂಗಳೂರು- ಮುಂಬೈ ಮಧ್ಯೆ ಹಗಲು ರೈಲು ಆರಂಭಿಸಬೇಕೆಂಬುದು ಬಹುಕಾಲದ ಬೇಡಿಕೆಯಾಗಿದ್ದು, ವಂದೇ ಭಾರತ್ ಎಕ್ಸ್ ಪ್ರೆಸ್ ವಿಸ್ತರಣೆಯಾದರೆ ನಮ್ಮ ನಿರೀಕ್ಷೆ ಈಡೇರಿದಂತಾಗುತ್ತದೆ ಎಂದಿದ್ದಾರೆ.
ಪ್ರಸಕ್ತ ಮುಂಬೈನಿಂದ ಮಡಗಾಂವ್ ವಂದೇ ಭಾರತ್ ರೈಲು ಮಧ್ಯಾಹ್ನ 1.10ಕ್ಕೆ ತಲುಪುತ್ತಿದ್ದು, ಅಲ್ಲಿಂದ ಮಂಗಳೂರಿಗೆ ಬರಲು ಸಂಜೆ 6.10ರ ವರೆಗೆ ಅಲ್ಲಿ ಕಾಯಬೇಕಾದ ಸ್ಥಿತಿಯಿದೆ. ಮಂಗಳೂರು- ಮಡಂಗಾವ್ ಮತ್ತು ಮುಂಬೈನ ರೈಲನ್ನು ಜೊತೆಗೆ ಸೇರಿಸಿದರೆ, ಪ್ರಯಾಣಿಕರಿಗೆ ಲಾಭ ಆಗುತ್ತದೆ. ಅಲ್ಲದೇ, ಸಮಯದ ಉಳಿತಾಯವೂ ಆಗುತ್ತದೆ. ಮುಂಬೈನಿಂದ ಬೆಳಗ್ಗೆ ಹೊರಟವರು ಸಂಜೆಗೆ ಮಂಗಳೂರು ತಲುಪಬಹುದು. ಈ ರೈಲಿನ ಬೋಗಿ ಸಂಖ್ಯೆಯನ್ನು ಈಗ ಇರುವ ಎಂಟಕ್ಕಿಂತ 16ಕ್ಕೆ ಏರಿಸಬೇಕು ಎಂದು ಹನುಮಂತ ಕಾಮತ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉಡುಪಿಯಿಂದ ಮುಂಬೈಗೆ ಬಸ್ಸಿನಲ್ಲಾದರೆ 18 ಗಂಟೆಯ ಸಮಯ ಬೇಕಾಗುತ್ತದೆ. ವಂದೇ ಭಾರತ್ ರೈಲು ಆರಂಭಗೊಂಡರೆ, 13 ಗಂಟೆಯಲ್ಲಿ ತಲುಪುವುದರಿಂದ ಬಸ್ಸಿನ ಬದಲು ರೈಲು ಪರ್ಯಾಯ ಆಗುತ್ತದೆ. ಉತ್ತಮ ಫೆಸಿಲಿಟಿ, ಟಾಯ್ಲೆಟ್ ಎಲ್ಲ ಇರುವುದರಿಂದ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಮುಂಬೈ- ಮಡಗಾಂವ್ ರೈಲನ್ನು ಆರು ತಿಂಗಳ ಕಾಲ ಮಂಗಳೂರಿಗೆ ವಿಸ್ತರಿಸಿ, ಟ್ರಯಲ್ ನೋಡಿಕೊಂಡು ಆನಂತರ ಪರ್ಮನೆಂಟ್ ಸೇವೆಯಾಗಿ ಮಾಡಿಕೊಳ್ಳಬಹುದು ಎಂದು ಉಡುಪಿಯ ರೈಲ್ವೇ ಪ್ರಯಾಣಿಕ ಅಚ್ಯುತ ಕುಮಾರ್ ಹೇಳಿದ್ದಾರೆ. ಮಂಗಳೂರು- ಗೋವಾ ವಂದೇ ಭಾರತ್ ರೈಲಿನಲ್ಲಿ ದರ ಹೆಚ್ಚಿರುವುದು ಮತ್ತು ಸಾಮಾನ್ಯ ರೈಲಿನ ವೇಳೆಯಲ್ಲೇ ಗೋವಾ ತಲುಪುವುದರಿಂದ ಮಂಗಳೂರಿನ ಪ್ರಯಾಣಿಕರು ಹೆಚ್ಚು ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ.
Vande Bharat train from Mangalore to Goa is running empty with little passengers. Prime Minister Narendra Modi flagged off 6 Vande Bharat trains, 2 Amrit Bharat trains, and inaugurated the redeveloped Ayodhya Dham railway station on December 30.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm