ಬ್ರೇಕಿಂಗ್ ನ್ಯೂಸ್
07-02-24 03:15 pm Mangalore Correspondent ಕರಾವಳಿ
ಮಂಗಳೂರು, ಫೆ.7: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಸದಸ್ಯರ ಹುದ್ದೆ ಮಾರಾಟವಾಗುತ್ತಿದೆಯಾ? ಈ ರೀತಿಯ ನಡೆ ರಾಜಕಾರಣಿಗಳ ಹಿಂಬಾಲಕರಿಂದ ನಡೆಯುತ್ತಿದೆಯೇ ಎಂಬ ಪ್ರಶ್ನೆ ಕೇಳಿಬಂದಿರುವಾಗಲೇ ಸಾಮಾಜಿಕ ಹೋರಾಟಗಾರ ಆಲ್ವಿನ್ ಮೆಂಡೋನ್ಸಾ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಉದ್ಯಮಿ, ರಾಜಕಾರಣಿಗಳಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ ನೀಡದಂತೆ ಒತ್ತಾಯಿಸಿದ್ದಾರೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಗಾದಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ನೇಮಕ ಮಾಡುವ ಪ್ರಯತ್ನ ರಾಜಕೀಯ ನಾಯಕರಿಂದ ನಡೆಯುತ್ತಿದೆ. ಸಾಹಿತ್ಯ ಕ್ಷೇತ್ರಕ್ಕೆ ಶಕ್ತಿ ತುಂಬುವ ಅಕಾಡೆಮಿಗೆ ಸಾರಸ್ವತ ಕ್ಷೇತ್ರಗಳ ಪ್ರಮುಖರನ್ನೇ ನೇಮಕ ಮಾಡಬೇಕೆಂದು ಒತ್ತಾಯಿಸಿ ಪತ್ರಕರ್ತರೂ ಆದ ಆಲ್ವಿನ್ ಮೆಂಡೋನ್ಸಾ ಅವರು ಮುಖ್ಯಮಂತ್ರಿ ಹಾಗೂ ಕನ್ನಡ ಸಂಸ್ಕೃತಿ ಸಚಿವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ವಿವಿಧ ಭಾಷಾ ಅಕಾಡೆಮಿಗಳ ರೀತಿಯಲ್ಲೇ, ಕರಾವಳಿ ಮಲೆನಾಡು ಸಹಿತ ರಾಜ್ಯದ ಕೊಂಕಣಿ ಭಾಷಾ ಸಾಹಿತ್ಯಾಸಕ್ತರ ಆಕಾಂಕ್ಷೆಗೆ ತಕ್ಕಂತೆ ರಾಜ್ಯ ಕೊಂಕಣಿ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. ಆದರೆ ಅಕಾಡೆಮಿಗೆ ಸಮರ್ಥ ಅಧ್ಯಕ್ಷರ ನೇಮಕ ಆಗದಿರುವುದರಿಂದ ಕೊಂಕಣಿ ಅಕಾಡೆಮಿ ತನ್ನ ಆಶೋತ್ತರಗಳನ್ನು ಈಡೇರಿಸಲು ಶಕ್ತವಾಗಿಲ್ಲ ಎಂದವರು ಸರ್ಕಾರದ ಗಮನಸೆಳೆದಿದ್ದಾರೆ.
ಅಕಾಡೆಮಿಗೆ ಆಯಾ ಭಾಷೆಗಳ ಸಾಹಿತಿ, ಲೇಖಕರನ್ನು, ಪತ್ರಕರ್ತರು, ಶಿಕ್ಷಕರನ್ನು ನೇಮಕ ಮಾಡಿದರೆ ಮಾತ್ರ ಭಾಷಾ ಅಕಾಡೆಮಿಗಳ ಸ್ಥಾಪನೆಯ ಉದ್ದೇಶ ಈಡೇರುತ್ತದೆ ಎಂಬುದು ಸರಳ ಸತ್ಯ. ಆದರೆ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಕಳೆದ ಹಲವು ಅವಧಿಗಳಲ್ಲಿ ಸಾಹಿತ್ಯ, ಶಿಕ್ಷಣದ ಗಂಧಗಾಳಿ ತಿಳಿಯದವರನ್ನು ನೇಮಕ ಮಾಡಲಾಗಿರುತ್ತದೆ. ಕೊಂಕಣಿ ಭಾಷೆಯ ಒಂದಕ್ಷರವನ್ನೂ ಬರೆಯಲು ಅಶಕ್ತರಾಗಿರುವ, ಸರಳವಾಗಿ ಕೊಂಕಣಿ ಓದಲೂ ಬಾರದ ಉದ್ಯಮಿಗಳನ್ನು, ಗುತ್ತಿಗೆದಾರರನ್ನು ಅಕಾಡೆಮಿಯ ಅಧ್ಯಕ್ಷರಾಗಿ ನೇಮಕ ಮಾಡಿರುವುದರಿಂದ ಕೊಂಕಣಿ ಭಾಷಾ ಕ್ಷೇತ್ರಕ್ಕೆ ನ್ಯಾಯ ಸಿಕ್ಕಿಲ್ಲ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಂಕಣಿಗೆ ಭಾಷೆಗೆ ತನ್ನದೇ ಆದ ಲಿಪಿ ಇಲ್ಲದ ಕಾರಣ ಕನ್ನಡ, ದೇವನಾಗರಿ, ರೋಮಿ, ಮಲಯಾಳಂ ಮತ್ತು ಅರಬ್ಬಿ ಲಿಪಿಗಳಲ್ಲಿ ಸಾಹಿತ್ಯ ರಚಿಸಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಬೆಳವಣಿಗೆಗೆ ಅಕಾಡೆಮಿ ಮೂಲಕ ಸಾಹಿತ್ಯ, ಸಂಗೀತ, ನಾಟಕ, ಜಾನಪದ ಕಾರ್ಯಾಗಾರ, ಉತ್ಸವಗಳನ್ನು ಏರ್ಪಡಿಸಿ, ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಾಗುತ್ತದೆ. ಪುಸ್ತಕ, ಪತ್ರಿಕೆ ಪ್ರಕಾಶನ ಮಾಡಬೇಕಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೊಂಕಣಿ ಅಕಾಡೆಮಿಗೆ ಸಾಹಿತ್ಯದ ಅರಿವೇ ಇಲ್ಲದ ಉದ್ಯಮಿಗಳನ್ನು, ರಾಜಕೀಯ ನಾಯಕರ ಹಿಂಬಾಲಕರನ್ನು ನೇಮಕ ಮಾಡಲಾಗುತ್ತಿದೆ. ಈ ಹಿಂದೆ ಮಂಗಳೂರಿನ ಮಾಂಡ್ ಸೊಭಾಣ್ ಸಂಸ್ಥೆಯ ಪದಾಧಿಕಾರಿಗಳನ್ನೇ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಹಿಂದಿನ ಅಧ್ಯಕ್ಷರ ಪಟ್ಟಿಯನ್ನು ಗಮನಿಸಿದರೆ, ಎರಿಕ್ ಒಝೇರಿಯೊ, ನಾರಾಯಣ ಖಾರ್ವಿ, ರೊಯ್ ಕ್ಯಾಸ್ತಲೀನೊ ಹೀಗೆ ಮಾಂಡ್ ಸೊಭಾಣ್ ಸಂಸ್ಥೆಯಲ್ಲಿದ್ದವರನ್ನೇ ನೇಮಿಸಲಾಗಿದೆ. ಈ ಬಾರಿಯೂ ಅದೇ ಸಂಘಟನೆಯಲ್ಲಿರುವ ವ್ಯಕ್ತಿಯನ್ನೇ ನೇಮಕ ಮಾಡುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿಬರುತ್ತಿದೆ. ಕೊಂಕಣಿ ಸಾಹಿತ್ಯದ ಬಗ್ಗೆ ಏನೂ ತಿಳಿಯದ ವ್ಯಕ್ತಿಯ ಪರವಾಗಿ ರಾಜಕೀಯ ನಾಯಕರು ಲಾಬಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು ಅಚ್ಚರಿಗೆ ಕಾರಣವಾಗಿದೆ. ಕೊಂಕಣಿ ಜನಾಂಗಕ್ಕೆ ಶಕ್ತಿ ತುಂಬುವುದಕ್ಕಾಗಿ ಅಕಾಡೆಮಿಗೆ ಕೊಂಕಣಿ ಓದು, ಬರಹ ಗೊತ್ತಿರುವ ಸಾರಸ್ವತ ಕ್ಷೇತ್ರದವರನ್ನು ಮಾತ್ರ ಅಧ್ಯಕ್ಷ, ಸದಸ್ಯ ಸ್ಥಾನಗಳಿಗೆ ನೇಮಕ ಮಾಡಬೇಕು. ರಾಜಕಾರಣಿಗಳ ಹಿಂಬಾಲಕರಿಗೆ ಅಕಾಡೆಮಿ ಅಧ್ಯಕ್ಷ ಸ್ಥಾನ ಮಾರಾಟವಾಗುತ್ತಿದೆ ಎಂಬ ಅಪವಾದದಿಂದ ಸರ್ಕಾರ ಹೊರಬರಬೇಕು ಎಂದು ಆಲ್ವಿನ್ ಮೆಂಡೋನ್ಸಾ ಅವರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
Mangalore Social Activist Alvin Mendonca writes letter to Cm Siddaramaiah on Konkani Sahitya academy. Don't sell Konkani Sahitya Academy posts, hire qualified ones; Keep businessmen, politicians away, demand in letter to Chief Minister. Social activist Alvin Mendonsa has written a letter to CM Siddaramaiah asking him not to give the post of president of Konkani Sahitya Akademi to businessmen and politicians while the question has been asked whether this kind of move is being done by the followers of politicians
05-01-25 10:56 pm
Bangalore Correspondent
ವಿಧಾನಸೌಧ ಒಳಗಡೆಯೇ ಸಚಿವರು ಲಂಚ ಪಡೀತಿದ್ದಾರೆ, ಕಾಂಗ...
05-01-25 07:36 pm
Private Buses, Bangalore: ಸರ್ಕಾರಿ ಬಸ್ ದರ ಏರಿಸ...
04-01-25 06:49 pm
Gadag Car accident; ಹೈಸ್ಕೂಲ್ ವಿದ್ಯಾರ್ಥಿಗಳು ಚಲ...
04-01-25 01:28 pm
BJP MLC Dhananjaya Sarji: ಹೊಸ ವರ್ಷಕ್ಕೆ ಬಿಜೆಪಿ...
03-01-25 10:47 pm
05-01-25 09:41 pm
HK News Desk
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
05-01-25 10:51 pm
Mangalore Correspondent
Dr Na DSouza passes, Death, Mangalore: ಖ್ಯಾತ...
05-01-25 10:16 pm
Mangalore MP Brijesh Chowta, Rajnath Singh: ರ...
05-01-25 02:13 pm
Mangalore MCC Anand CL, Abdul Rauf: ಮಹಾನಗರ ಪಾ...
04-01-25 09:49 pm
Travel agency fraud, Muhammadiya, Haj, Mangal...
04-01-25 08:57 pm
04-01-25 11:31 am
Mangalore Correspondent
Madhugiri DySP Ramachandrappa Arrest, Video:...
03-01-25 11:02 pm
Sri Bhagavathi Co Operative Bank fraud, Manga...
03-01-25 09:26 pm
Belagavi Murder, Crime; ಕುಡಿಯಲು ಹಣಕ್ಕಾಗಿ ಪೀಡಿ...
02-01-25 11:00 pm
Mangalore crime, Kankandy Police: ಹಾಡಹಗಲೇ ಚೂರ...
02-01-25 10:12 pm