ಬ್ರೇಕಿಂಗ್ ನ್ಯೂಸ್
10-02-24 10:51 pm Richard, Mangaluru Correspondent ಕರಾವಳಿ
ಮಂಗಳೂರು, ಫೆ.10: ಬ್ಲೂಫ್ಯಾಗ್ ಬೀಚ್ ಆಗುವತ್ತ ದಾಪುಗಾಲಿಡುತ್ತಿರುವ ಮಂಗಳೂರಿನ ತಣ್ಣೀರುಬಾವಿ ಬೀಚ್ ನಲ್ಲೀಗ ಬಾನು ತುಂಬ ಗಾಳಿಪಟಗಳದ್ದೇ ಪಟಪಟ. ಫೆ.10 ಮತ್ತು 11ರಂದು ಎರಡು ದಿನ ಸಂಜೆಯ ವೇಳೆಗೆ ಟೀಮ್ ಮಂಗಳೂರು ತಂಡ ಜಿಲ್ಲಾಡಳಿತದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಏರ್ಪಡಿಸಿದ್ದು, ನಾನಾ ಮಾದರಿಯ ಬಾನಾಡಿಗಳ ರೀತಿ ಗಾಳಿಪಟಗಳು ಹಾರಾಡಿದ್ದು ನೋಡುಗರ ಮನಸೂರೆಗೊಂಡವು.
ಕರಾವಳಿಯ ಯಕ್ಷಗಾನ, ಕಥಕ್ಕಳಿ ಕಲೆಯನ್ನು ಬಿಂಬಿಸುವಂತಹ ಮಂಗಳೂರಿನ ಗಾಳಿಪಟ ಎಲ್ಲರ ಆಕರ್ಷಣೆಯಾಗಿತ್ತು. ಭಾರತದ ಅತಿದೊಡ್ಡ ಗಾಳಿಪಟ ಎಂದು ಹೆಸರಾಗಿರುವ ಮಂಗಳೂರಿನ ತಂಡದ ಕಥಕ್ಕಳಿ ಗಾಳಿಪಟವು 2005ರಲ್ಲಿಯೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿದೆ. ಆ ದಾಖಲೆಯನ್ನೂ ಇನ್ನೂ ಯಾರು ಮುರಿದಿಲ್ಲ. ಅಷ್ಟರ ಮಟ್ಟಿಗೆ ದೊಡ್ಡದು ಮತ್ತು ಆಕರ್ಷಕ ಎನಿಸಿದೆ ಕಥಕ್ಕಳಿ ಕಲೆಯನ್ನು ತೋರಿಸುವ ಈ ಗಾಳಿಪಟ. ಅದು ಒಂದೇ ಪ್ರಕಾರದ ಪಟವಲ್ಲ. ಕಥಕ್ಕಳಿಯ ಮುಖಬಣ್ಣವನ್ನು ಹೋಲುವ ಹತ್ತಕ್ಕೂ ಹೆಚ್ಚು ಪಟಗಳ ಸರಮಾಲೆಯನ್ನೇ ಒಂದೇ ತಂತಿಯಲ್ಲಿ ಪೋಣಿಸಲಾಗಿತ್ತು. ಅದನ್ನು ಒಂದೇ ನೂಲಿನಲ್ಲಿ ಗಾಳಿಯ ರಭಸಕ್ಕೆ ಮೇಲೇರಿಸುವುದೇ ಒಂದು ಸಾಹಸ. ಸರ್ವೇಶ್ ರಾವ್, ದಿನೇಶ್ ಹೊಳ್ಳ ನೇತೃತ್ವದ ಟೀಮ್ ಮಂಗಳೂರು ತಂಡದ ಈ ಸಾಧನೆ ಸೋಜಿಗ ಹುಟ್ಟಿಸುವಂತಿದೆ.
ಈ ಬಾರಿ ಕೇರಳ, ತೆಲಂಗಾಣ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳ ಮತ್ತು ಇಂಡೋನೇಶ್ಯಾ, ಸ್ವೀಡನ್, ಯುರೋಪ್ ಸೇರಿ ನಾನಾ ದೇಶಗಳ ಗಾಳಿಪಟ ತಂಡಗಳು ಪಾಲ್ಗೊಂಡಿವೆ. ಇಟೆಲಿ ಮೂಲದವರೂ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ಒಟ್ಟು 32 ಗಾಳಿಪಟ ಹಾರಿಸುವ ಪಟುಗಳು ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಉತ್ಸವ ನೋಡಲು ಭಾರೀ ಸಂಖ್ಯೆಯಲ್ಲಿ ಜನರೂ ಸೇರಿದ್ದರು. ಗರುಡನ ಮಾದರಿಯ ವಿಶೇಷ ರೀತಿಯ ಗಾಳಿಪಟ ಈ ಸಲದ ಆಕರ್ಷಣೆಗಳಲ್ಲೊಂದು. ಉಳಿದಂತೆ ಹುಲಿ, ಚಿರತೆ, ಮಿಲಿಟರಿ ಯೋಧ, ಜೀಪು, ಕಾರಿನ ಮಾದರಿಯ ಚಿತ್ರಗಳಿದ್ದು, ನಾನಾ ನಮೂನೆಯ ಪಟಗಳು ಗಾಳಿಯಲ್ಲಿ ತೇಲಾಡುತ್ತಿವೆ. ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯ ವರೆಗೂ ಪಟಗಳ ದರ್ಶನ ಆಗಲಿದೆ.
ಪ್ರತಿವರ್ಷ ಗಾಳಿಪಟ ಉತ್ಸವ ಮಾಡಿಸ್ತೇನೆ
ಗಾಳಿಪಟ ಉತ್ಸವ ನೋಡಿ ಖುಷಿಯಾಯ್ತು. ಇಂಥ ಉತ್ಸವ ಪ್ರತಿ ವರ್ಷ ನಿರ್ದಿಷ್ಟ ದಿನದಂದು ಆಗ್ತಾ ಇರಬೇಕು. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗತ್ತೆ. ಜಿಲ್ಲಾಡಳಿತದಿಂದಲೇ ಇಂಥ ಉತ್ಸವ ಪ್ರತಿ ಬಾರಿ ಆಯೋಜನೆ ಆಗುವಂತೆ ಮಾಡಿಸುತ್ತೇನೆ. ಜಿಲ್ಲಾಧಿಕಾರಿಗಳಿಗೆ ಹೇಳುತ್ತೇನೆ ಎಂದು ಗಾಳಿಪಟ ಉತ್ಸವ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ರಕ್ಷಿತ್ ಶಿವರಾಂ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕಮಿಷನರ್ ಅನುಪಮ್ ಅಗರ್ವಾಲ್ ಜೊತೆಗಿದ್ದರು.
ಒಳ್ಳೆ ವೆದರ್, ಮೀನು ಊಟ ಸೂಪರ್
ಬೇರೆ ಬೇರೆ ದೇಶಗಳಿಂದ ಬಂದಿದ್ದ ವಿದೇಶಿಯರು ಮಂಗಳೂರಿನ ವಾತಾವರಣ, ಮೀನು ಊಟದ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಇಂಡೋನೇಶ್ಯಾದಿಂದ ಬಂದಿದ್ದ ಸಾರಿ ಎಂಬ ಮಹಿಳೆ ಮಂಗಳೂರಿನ ಆತಿಥ್ಯದ ಬಗ್ಗೆ ಹೇಳಿಕೊಂಡರು. ಮೊದಲ ಬಾರಿಗೆ ಮಂಗಳೂರು ಬಂದಿದ್ದೇನೆ. ಇಲ್ಲಿ ಒಳ್ಳೆ ಗಾಳಿ ಇದೆ, ಗಾಳಿಪಟ ಹಾರಿಸಲು ತುಂಬ ಖುಷಿಯಾಗ್ತಿದೆ. ಹಿಂದೆ ಮುಂಬೈ, ಗೋವಾ, ಬೆಳಗಾವಿಗೆ ಗಾಳಿಪಟ ಉತ್ಸವಕ್ಕೆ ಹೋಗಿದ್ದೇನೆ. ಮಂಗಳೂರು ಬಂದಿದ್ದು ಇದೇ ಮೊದಲು. ಇಲ್ಲಿನ ಮೀನು ಊಟ ತುಂಬ ಇಷ್ಟವಾಯ್ತು ಅಂತ ಸಾರಿ ಹೇಳಿದರು. ಆಕೆಯ ಗಾಳಿಪಟ ಕೋಳಿಯಾಗಿತ್ತು.
ಮಂಗ್ಳೂರು ತುಂಬ ಲೈಕ್ ಆಗಿದೆ
ಮೂಲತಃ ಸ್ವೀಡನ್ ನಿವಾಸಿ, ಈಗ ಇಂಡೋನೇಶ್ಯಾದಲ್ಲಿ ನೆಲೆಸಿರುವ ಆಂಡ್ರಿ ಎಂಬವರಿದ್ದರು. ಅವರದ್ದು ಕೈಟ್ ಸ್ವೀಡನಿಂದ ಕಳಿಸಿಕೊಟ್ಟಿದ್ದು ಇಲ್ಲಿ ತಲುಪಿಲ್ಲವಂತೆ. ಹಾಗಾಗಿ ಸ್ವಲ್ಪ ನಿರಾಸೆಗೊಂಡಿದ್ದರು. ಯುರೋಪ್ ಖಂಡದ ಈಸ್ಟೋನಿಯಾ ಎಂಬ ಸಣ್ಣ ದೇಶದಿಂದ ಜಾನಾ ಎಂಬ ಮಹಿಳೆ ಮತ್ತು ಆಕೆಯ ಬಾಯ್ ಫ್ರೆಂಡ್ ಸೂಮ್ ಎಂಬ ಜೋಡಿ ಗಾಳಿಪಟದ ಜೊತೆಗೆ ಬಂದಿದ್ದರು. ಮಂಗಳೂರು ತುಂಬ ಲೈಕ್ ಆಗಿದೆ, ಇಲ್ಲಿನ ವೆದರ್ ಸೂಪರ್ ಇದೆ. ಜನರ ಆತಿಥ್ಯವೂ ಒಳ್ಳೆದಿದ್ದು, ಊಟ, ತಿಂಡಿ ಖುಷಿ ಕೊಟ್ಟಿದೆ. ಜನರು ಪ್ರೀತಿ ತೋರಿಸಿದ್ದಾರೆ ಎಂದರು. ಅವರ ಗಾಳಿಪಟ ಟೆಡ್ಡಿ ಬೇರ್ ಆಗಿತ್ತು. ಪ್ರತಿ ವರ್ಷ ಇಂಥ ಉತ್ಸವ ಆಗೋದಿದ್ದರೆ, ಪ್ರತಿ ಬಾರಿಯೂ ಇಲ್ಲಿಗೆ ಬರುತ್ತೇವೆ ಎಂದಿದ್ದಾರೆ.
Tannirbhavi kite festival attracts large crowd in Mangalore 2024. Dinesh Gundu Rao promised of organising Kite Festival every year from here after. About 13 flyers from eight countries - Thailand, Ukraine, Indonesia, Vietnam, Malaysia, Estonia, Greece and Sweden participated in the ONGC-MRPL International Kite Festival-2024 held on Feb 10 and 11 at Tannirbhavi Beach.
16-11-24 04:25 pm
HK News Desk
ಮುನಿರತ್ನ ಹನಿಟ್ರ್ಯಾಪ್, ಏಡ್ಸ್ ಚುಚ್ಚುಮದ್ದು ಪ್ರಕರ...
15-11-24 03:45 pm
ಕೋವಿಡ್ ಅಕ್ರಮ ತನಿಖೆಗೆ ಎಸ್ಐಟಿ ; ಯಡಿಯೂರಪ್ಪ, ಶ್ರೀ...
15-11-24 03:12 pm
ಅಬಕಾರಿ ಸಚಿವನಿಗೆ ಮಂಗಳಾರತಿ ; ಲಂಚ ಹಿಂದೆಯೂ ಇತ್ತು,...
14-11-24 10:08 pm
Cm Siddaramaiah, Mysuru, BJP; ಬಿಜೆಪಿಗೆ ಆಪರೇಶನ...
14-11-24 02:09 pm
14-11-24 11:11 pm
HK News Desk
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
ಬಾಂಗ್ಲಾ ಅಲ್ ಖೈದಾ ಟೆರರ್ ಫಂಡಿಂಗ್ ; ಕರ್ನಾಟಕ, ಬಿ...
12-11-24 12:35 pm
ಬಾಬಾ ಸಿದ್ದಿಕಿಯನ್ನು ಕೊಲೆಗೈದು ತಲೆಮರೆಸಿದ್ದ ಬಿಷ್ಣ...
11-11-24 05:19 pm
16-11-24 08:41 pm
Mangalore Correspondent
Mangalore excise raid, Liquor, Crime: ಮನೆಯಲ್ಲ...
16-11-24 06:55 pm
Mangalore Dinesh Gundu Rao,: ಆರಗ ಜ್ಞಾನೇಂದ್ರಗೆ...
16-11-24 03:54 pm
Zameer Ahmed, Mangalore, CP Yogeshwar: ಚನ್ನಪಟ...
16-11-24 02:23 pm
Malali mosque row, VHP, Waqf: ಮಳಲಿ ಮಸೀದಿ ವಕ್ಫ...
16-11-24 12:03 pm
16-11-24 08:05 pm
Bangalore Correspondent
Mangalore cyber crime, Fraud: ಸಿಬಿಐ ಅಧಿಕಾರಿ ಸ...
16-11-24 12:58 pm
Bangalore Police, Blackmail, Crime, Basavanag...
14-11-24 04:32 pm
Mangalore crime, Mulki case: ಪಕ್ಷಿಕೆರೆ ದುರಂತ...
12-11-24 07:02 pm
Mangalore crime, Bajarang Dal, Ullal News: ಉಳ...
12-11-24 11:41 am