ಬ್ರೇಕಿಂಗ್ ನ್ಯೂಸ್
14-02-24 12:12 pm Mangalore Correspondent ಕರಾವಳಿ
ಮಂಗಳೂರು, ಫೆ.14: ಶಿವಮೊಗ್ಗದ ಬಾಂಬ್ ಟ್ರಯಲ್ ಮತ್ತು ಮಂಗಳೂರಿನ ಕುಕ್ಕರ್ ಬಾಂಬ್ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು ಮತ್ತಷ್ಟು ಮಾಹಿತಿಗಳನ್ನು ಪತ್ತೆಹಚ್ಚಿದ್ದಾರೆ. ಕರ್ನಾಟಕದಲ್ಲಿ ಐಸಿಸ್ ನೆಟ್ವರ್ಕ್ ಬಲಪಡಿಸಲು ವಿದೇಶದಿಂದ ಉಗ್ರರು ನೇರವಾಗಿ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ನೆರವು ನೀಡುತ್ತಿದ್ದರು. ಅದನ್ನು ಬಳಸಿಕೊಂಡು ಮಾಜ್ ಮುನೀರ್ ಮತ್ತು ಮೊಹಮ್ಮದ್ ಶಾರೀಕ್ ಐಸಿಸ್ ನೆಟ್ವರ್ಕ್ ಮತ್ತು ಉಗ್ರವಾದಿ ಕೃತ್ಯಗಳನ್ನು ನಡೆಸುತ್ತಿದ್ದರು ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಹಾಗೂ ಪಾರ್ಟ್ ಟೈಮ್ ಆಗಿ ಡೆಲಿವರ್ ಬಾಯ್ ಕೆಲಸ ಮಾಡುತ್ತಿದ್ದ ತೀರ್ಥಹಳ್ಳಿ ಮೂಲದ ಮಾಜ್ ಮುನೀರ್ ಜೊತೆಗೆ ಕರ್ನಲ್ ಎಂಬ ಹೆಸರುಳ್ಳ ಉಗ್ರನೊಬ್ಬ ನೇರ ಸಂಪರ್ಕದಲ್ಲಿದ್ದ. ಯುವಕರನ್ನು ಬ್ರೇನ್ ವಾಷ್ ಮಾಡಿ ಉಗ್ರವಾದಿ ಸಂಘಟನೆಗೆ ಸೇರಿಸಿಕೊಳ್ಳಲು ಮಾಝ್ ಗೆ ವಿದೇಶದಿಂದಲೇ ಕ್ರಿಪ್ಟೋ ಕರೆನ್ಸಿಯ ಮೂಲಕ 2.5 ಲಕ್ಷ ರೂಪಾಯಿಗೂ ಹೆಚ್ಚು ಹಣದ ನೆರವು ನೀಡಿದ್ದ ಎಂಬುದನ್ನು ದಾಖಲೆ ಸಹಿತ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಮಾಜ್ ಮುನೀರ್ ಮತ್ತು ಮೊಹಮ್ಮದ್ ಶಾರೀಕ್ ತಮ್ಮ ಸ್ನೇಹಿತರ ಹೆಸರಲ್ಲಿ ಕ್ರಿಪ್ಟೋ ವ್ಯಾಲೆಟ್ಸ್ ಮಾಡಿಕೊಂಡಿದ್ದರು. ಆ ವಿಳಾಸವನ್ನು ವಿದೇಶದಲ್ಲಿದ್ದ ಉಗ್ರನಿಗೆ ನೀಡಿದ್ದು, ಆ ವ್ಯಾಲೆಟ್ ಗಳಿಗೆ ಯುಎಸ್ ಡಾಲರ್, ಬಿಟ್ ಫಿನಾನ್ಸ್, ಎಕ್ಸ್ ಎಂಆರ್, ಜೆಎಎಸ್ಎಂವೈ, ಟಿಆರ್ ಎಕ್ಸ್ ಸೇರಿ ವಿವಿಧ ಮಾದರಿಯ ಕ್ರಿಪ್ಟೋ ಕರೆನ್ಸಿಯನ್ನು ವರ್ಗಾಯಿಸಲಾಗಿತ್ತು. ಅದನ್ನು ಪುನಃ ಭಾರತೀಯ ಕರೆನ್ಸಿಯಾಗಿ ಪರಿವರ್ತಿಸಿ ಭಯೋತ್ಪಾದಕ ಕೃತ್ಯಗಳಿಗೆ ಬಳಸುತ್ತಿದ್ದರು.

ಶಿವಮೊಗ್ಗ ಬಾಂಬ್ ಟ್ರಯಲ್ ಆರೋಪಿ ಸೈಯದ್ ಯಾಸಿನ್ ಗೆ ಸೇರಿದ ಕ್ರಿಪ್ಟೋ ವ್ಯಾಲೆಟ್ ಗೂ 1 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಹಣದ ನೆರವು ಬಂದಿತ್ತು. ಬೇರೆ ಬೇರೆ ವ್ಯಕ್ತಿಗಳ ವ್ಯಾಲೆಟ್ ಗಳಿಗೆ ಬರುತ್ತಿದ್ದ ಕ್ರಿಪ್ಟೋ ಕರೆನ್ಸಿಯನ್ನು ಮಾಜ್ ಮತ್ತು ಶಾರೀಕ್ ಪಡೆದುಕೊಳ್ಳುತ್ತಿದ್ದರು ಎಂಬುದರ ಬಗ್ಗೆ ಅಧಿಕಾರಿಗಳು ದಾಖಲೆ ಸಂಗ್ರಹಿಸಿದ್ದಾರೆ. ಈ ಹಣದಿಂದಲೇ ಮಾಜ್ ಮತ್ತು ಮೊಹಮ್ಮದ್ ಶಾರೀಕ್ ಸುಧಾರಿತ ಸ್ಫೋಟಕ ತಯಾರಿಸಲು ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಅಲ್ಲದೆ, ಇಂತಹ ಕೃತ್ಯಕ್ಕೆ ಬಳಸಿಕೊಳ್ಳುವುದಕ್ಕಾಗಿಯೇ ಮಂಗಳೂರಿನಲ್ಲಿ 48,500 ರೂ.ಗೆ ಆಕ್ಟಿವಾ ಹೊಂಡಾ ವಾಹನ ಖರೀದಿಸಿದ್ದರು. 27,998 ರೂ. ಮೌಲ್ಯದ ಮೊಬೈಲ್ ಮತ್ತು ಸಿಮ್ ಖರೀದಿ ಮಾಡಿದ್ದರು.
ಬೆಂಗಳೂರಿನಲ್ಲಿ ಬಾಡಿಗೆ ಮನೆ
ರಾಜಧಾನಿ ಬೆಂಗಳೂರಿನಲ್ಲಿ ಐಸಿಸ್ ನೆಟ್ವರ್ಕ್ ಬೆಳೆಸುವುದಕ್ಕಾಗಿ ಆರ್ ಟಿ ನಗರದಲ್ಲಿ ಮಸೀದಿಯೊಂದರ ಸಮೀಪ ವನ್ ಬಿಎಚ್ ಕೆ ಮನೆಯನ್ನು ಬಾಡಿಗೆ ಪಡೆದಿದ್ದರು. ತಿಂಗಳ ಬಾಡಿಗೆ ಏಳು ಸಾವಿರ ರೂ. ಮತ್ತು ಮುಂಗಡವಾಗಿ 70 ಸಾವಿರ ರೂ. ಕೊಡಲಾಗಿತ್ತು. ಅದನ್ನು ಹುಜೈನ್ ಫರ್ಹಾನ್ ಬೇಗ್ ಎಂಬಾತನ ಹೆಸರಲ್ಲಿ ಬಾಡಿಗೆ ಪಡೆಯಲಾಗಿತ್ತು. ಈ ಮೊತ್ತವನ್ನು ಕ್ರಿಪ್ಟೋ ಕರೆನ್ಸಿಯ ಮೂಲಕ ವಿದೇಶದಿಂದಲೇ ಪೂರೈಕೆ ಮಾಡಲಾಗಿತ್ತು ಎಂದು ಎನ್ಐಎ ಮೂಲಗಳು ಹೇಳಿವೆ.

ವಾರಣಾಸಿ ಮಹಿಳೆ ಹೆಸರಲ್ಲಿ ಬ್ಯಾಂಕ್ ಖಾತೆ
ಮಾಜ್ ಮುನೀರ್ ಮಂಗಳೂರು ಕೇಂದ್ರೀಕರಿಸಿ ಬೆಂಗಳೂರು, ಮೈಸೂರು, ಶಿವಮೊಗ್ಗದಲ್ಲಿ ಓಡಾಟ ನಡೆಸುತ್ತಿದ್ದರೂ ಸ್ವಂತ ಬ್ಯಾಂಕ್ ಖಾತೆ ಹೊಂದಿರಲಿಲ್ಲ. ಬೇರೆಯವರ ಹೆಸರಿನಲ್ಲಿದ್ದ ಬೇನಾಮಿ ಬ್ಯಾಂಕ್ ಖಾತೆಯನ್ನು ಮಾಜ್ ನಿರ್ವಹಿಸುತ್ತಿದ್ದು, ಅದೇ ಹೆಸರಲ್ಲಿ ತನ್ನೆಲ್ಲ ಬ್ಯಾಂಕ್ ವಹಿವಾಟು ನಡೆಸುತ್ತಿದ್ದ. ತನಿಖೆ ಸಂದರ್ಭದಲ್ಲಿ ಈ ಖಾತೆ ಉತ್ತರ ಪ್ರದೇಶದ ವಾರಣಾಸಿಯ ಮಹಿಳೆಯ ಹೆಸರಿನಲ್ಲಿರುವುದು ಪತ್ತೆಯಾಗಿದೆ. ವಿದೇಶದಲ್ಲಿದ್ದ ಉಗ್ರನ ಸೂಚನೆಯಂತೆ ಮಂಗಳೂರಿನಲ್ಲಿ ಮಾಜ್ ವಾಸವಿದ್ದ ಮನೆಗೆ ಈ ಬ್ಯಾಂಕ್ ಖಾತೆಯ ರೂಪೇ ಕಾರ್ಡ್, ಎಟಿಎಂ ಕಾರ್ಡ್, ಬ್ಯಾಂಕ್ ಪುಸ್ತಕ, ಸಿಮ್ ಒಂದನ್ನು ಸೇರಿ ಕೊರಿಯರ್ ಮೂಲಕ ಕಳುಹಿಸಲಾಗಿತ್ತು. ಈ ಡೆಬಿಟ್ ಕಾರ್ಡ್ ಹಾಗೂ ಸಿಮ್ ಗಳನ್ನು ಮಾಜ್ ಮುನೀರ್ ಮಂಗಳೂರಿನ ಕೋರ್ಟ್ ಆವರಣದಲ್ಲಿ ಮೊಹಮ್ಮದ್ ಶಾಕೀರ್ ಗೆ ತಲುಪಿಸಿದ್ದ.
ಆರೋಪಿಗಳು ಕ್ರಿಪ್ಟೋ ವ್ಯವಹಾರಕ್ಕೆ ಬಳಸಿಕೊಂಡಿರುವ ಮಧ್ಯವರ್ತಿಗಳನ್ನು ಪ್ರಕರಣದಲ್ಲಿ ಸಾಕ್ಷಿದಾರರನ್ನಾಗಿ ಪರಿಗಣಿಸಲಾಗಿದೆ. ಆರೋಪಿಗಳು ಬಳಸಿದ್ದ ಬ್ಯಾಂಕ್ ಖಾತೆ ವಿವರ, ಎಟಿಎಂಗಳಲ್ಲಿ ಹಣ ಡ್ರಾ ಮಾಡಿರುವ ಮಾಹಿತಿ, ಜತೆಗೆ ನಕಲಿ ಬ್ಯಾಂಕ್ ಖಾತೆಗಳ ಬಗ್ಗೆಯೂ ಸಾಕ್ಷಿಗಳನ್ನು ಸಂಗ್ರಹಿಸಿ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
Mangalore terror cooker Auto Blast, crypto currency used to develope ISIS in Karnataka, account of Varanasi Women has been exposed.Bomber Shariq and Muneer were getting financial support from abroad reveals investigation.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm