ಬ್ರೇಕಿಂಗ್ ನ್ಯೂಸ್
15-02-24 06:04 pm Mangalore Correspondent ಕರಾವಳಿ
ಮಂಗಳೂರು, ಫೆ.15: ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದು ದೇವರನ್ನು ನಿಂದಿಸಿದ್ದಾರೆಂದು ದೂರು ಕೊಟ್ಟರೂ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ. ಆದರೆ, ಶಾಸಕರು ಅಲ್ಲಿನ ಮಕ್ಕಳ ಪೋಷಕರ ಜೊತೆಗೆ ನಿಂತು ಜೈಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಎಫ್ಐಆರ್ ದಾಖಲು ಮಾಡಿದ್ದಾರೆ. ಇದು ಕಾಂಗ್ರೆಸ್ ಸರಕಾರದ ಹಿಂದು ವಿರೋಧಿ ನೀತಿಯನ್ನು ಸೂಚಿಸುತ್ತದೆ. ಜೆರೋಸಾ ಶಾಲೆಯ ಘಟನೆ ಮತ್ತು ಶಾಸಕರು ಮತ್ತು ಶರಣ್ ಪಂಪ್ವೆಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದನ್ನು ಖಂಡಿಸಿ ಫೆ.19ರಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹರತಾಳ ನಡೆಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಹೇಳಿದ್ದಾರೆ.
ಕದ್ರಿಯ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಜೈಶ್ರೀರಾಮ್ ಘೋಷಣೆ ಕೂಗಿದ್ದು ರಾಜಕೀಯ ಘೋಷಣೆ ಅಲ್ಲ. ಅದು ಹಿಂದುಗಳು ಆರಾಧಿಸುವ ದೇವರ ಹೆಸರು. ಕೋಟ್ಯಂತರ ಭಕ್ತರ ಆರಾಧ್ಯ ದೇವರು, ಶ್ರೀರಾಮ ಈ ದೇಶದ ಅಸ್ಮಿತೆ. ಶಾಲೆಯ ಮಕ್ಕಳು ಪೋಷಕರ ಜೊತೆ ಸೇರಿ ಘೋಷಣೆ ಕೂಗಿದ್ದಾರೆ. ಅದರಲ್ಲಿ ರಾಜಕೀಯ ಅಥವಾ ಕೋಮು ದ್ವೇಷ ಎಲ್ಲಿ ಬರುತ್ತದೆ ಎಂದು ಪ್ರಶ್ನಿಸಿದರು.
ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೆ ಅವಹೇಳನ ಮಾಡಿದ್ದಲ್ಲದೆ, ನಾಗದೇವರು, ಗಣಪತಿ ದೇವರನ್ನು ನಿಂದಿಸಿರುವ ಶಿಕ್ಷಕಿ ಸಿಸ್ಟರ್ ಪ್ರಭಾ ಅವರ ವಿರುದ್ಧ ಪೊಲೀಸರು ಕೇಸು ದಾಖಲಿಸಬೇಕು ಎಂದು ಆಗ್ರಹಿಸಿ ನಾವು ಮಂಗಳೂರಿನ ಎಲ್ಲ ಠಾಣೆಗಳ ಮುಂದೆ ಜೈಶ್ರೀರಾಮ್ ಘೋಷಣೆ ಕೂಗುತ್ತೇವೆ. ಹಿಂದು ದೇವರ ಅವಹೇಳನ ವಿಚಾರದಲ್ಲಿ ಪೋಷಕರು ಕೊಟ್ಟ ದೂರನ್ನು ಪೊಲೀಸರು ಸ್ವೀಕರಿಸಿಲ್ಲ. ಕಾಂಗ್ರೆಸ್ ಸರಕಾರದ ಒತ್ತಡದ ಕಾರಣದಿಂದಲೇ ಆ ದೂರನ್ನು ಪರಿಗಣಿಸಿಲ್ಲ ಎಂಬ ಮಾಹಿತಿ ಇದೆ. ಇದನ್ನು ಹಿಂದು ಸಮಾಜ ಸಹಿಸುವುದಿಲ್ಲ. ತಕ್ಷಣ ಸಿಸ್ಟರ್ ಪ್ರಭಾ ವಿರುದ್ಧ ಕೇಸು ದಾಖಲಿಸಿ ಬಂಧಿಸಬೇಕು. ಜೊತೆಗೆ, ನಮ್ಮ ನಾಯಕರ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು ಎಂದವರು ಆಗ್ರಹಿಸಿದರು.
ವಿಎಚ್ ಪಿ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್ ಮಾತನಾಡಿ, ಪೊಲೀಸರು ಕಾಂಗ್ರೆಸ್ ಮುಖಂಡರ ಕುಮ್ಮಕ್ಕಿನಿಂದ ಕೇಸು ಹಾಕಿದ್ದಾರೆ. ಹಾಗಾದ್ರೆ ಪೊಲೀಸರು ಶರಣ್ ಪಂಪ್ವೆಲ್ ಸೇರಿ ಯಾರನ್ನಾದರೂ ಬಂಧಿಸಿ ನೋಡಲಿ. ಆಗ ನಾವು ನೋಡಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು.
Mangalore Vhp to hold protest near Police stations over filing case against Sharan Pumpwell in Gerosa School controversy. Even though we have filed case against the school no action has been taken but the Congress governmemt has made police register FIR against Sharan and MLA Vedavyas, Bharath Shetty intentionally arrangeintentionally alleged VHP.
01-10-26 10:50 pm
HK News Staffer
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
02-10-26 05:28 pm
HK News Staffer
ಇಸ್ರೇಲ್ ತೆರಳುತ್ತಿದ್ದ ವಿಮಾನ ಹೈಜಾಕ್ ಯತ್ನ ? ಒಮಾ...
02-10-26 10:23 am
ವಿಮಾನ ಅಪಘಾತದ ತನಿಖಾ ವರದಿಗಳೇ ನೆರವಾಯ್ತು..! ದುಬೈ...
01-10-26 11:46 am
ಯುಪಿಐ ನೆಪದಲ್ಲಿ ವ್ಯಾಪಾರಸ್ಥರಿಗೆ ಶುಲ್ಕ ; ಸಚಿವೆ ನ...
01-10-26 11:20 am
Smith Machar, Indian pilot: ದುಬೈನಲ್ಲಿ ವಿಮಾನ ಪ...
01-10-26 11:05 am
02-10-26 05:20 pm
HK News Staffer
Sowjanya case, Lokesh Jagalsar: ಸೌಜನ್ಯ ಪ್ರಕರಣ...
02-10-26 10:25 am
Madoor Yusuf Murder Case: ಜೈಲಿನಲ್ಲಿ ಮಾಡೂರು ಯೂ...
01-10-26 10:45 pm
ಏಶ್ಯನ್ ಗೇಮ್ಸ್ ನಲ್ಲಿ ಪೂವಮ್ಮಗೆ ಚಿನ್ನ ; ರಾಜ್ಯ ಸರ...
01-10-26 08:10 pm
Manish Karkada, MRPL: ಎಂಆರ್ ಪಿಎಲ್ ಅಗ್ನಿ ಅವಘಡ...
01-10-26 06:19 pm
02-10-26 10:19 pm
HK News Staffer
ಕೊಲ್ಲೂರು ; ಬೀಡಾಡಿ ದನವನ್ನು ಕಾರಿನಲ್ಲಿ ತುಂಬಿಸಿಕೊ...
02-10-26 05:24 pm
113 ಕೆಜಿ ಚಿನ್ನ ಕಳ್ಳಸಾಗಣೆ ಕೇಸ್ ; ರನ್ಯಾ ರಾವ್ಗೆ...
01-10-26 02:31 pm
Mangalore Police News: ಪೊಲೀಸ್ ಕಾನ್ಸ್ ಟೇಬಲ್ ನೇ...
01-10-26 11:10 am
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ದು...
30-09-26 08:59 pm