Mangalore, Congress Meeting: ಅಡ್ಯಾರಿನಲ್ಲಿ ಕಾಂಗ್ರೆಸ್ ಸಮಾವೇಶ ; ಹೆದ್ದಾರಿಯಲ್ಲಿ ಘನ ವಾಹನ ಸಂಚಾರ ನಿಷೇಧ, ಬದಲಿ ವ್ಯವಸ್ಥೆ 

16-02-24 11:03 pm       Mangalore Correspondent   ಕರಾವಳಿ

ರಾಷ್ಟ್ರೀಯ ಹೆದ್ದಾರಿ 73ರ ಅಡ್ಯಾರ್ ನಲ್ಲಿ ಕಾಂಗ್ರೆಸ್ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಂಡಿರುವುದರಿಂದ ಫೆ.17ರಂದು ಬೆಳಗ್ಗಿನಿಂದ ಸಂಜೆಯ ವರೆಗೆ ಬಿಸಿ ರೋಡ್ ನಿಂದ ಪಡೀಲ್ ನಡುವೆ ಘನ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಹೀಗಾಗಿ ಬಸ್, ಲಾರಿ ಇನ್ನಿತರ ಘನ ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.

ಮಂಗಳೂರು, ಫೆ.16: ರಾಷ್ಟ್ರೀಯ ಹೆದ್ದಾರಿ 73ರ ಅಡ್ಯಾರ್ ನಲ್ಲಿ ಕಾಂಗ್ರೆಸ್ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಂಡಿರುವುದರಿಂದ ಫೆ.17ರಂದು ಬೆಳಗ್ಗಿನಿಂದ ಸಂಜೆಯ ವರೆಗೆ ಬಿಸಿ ರೋಡ್ ನಿಂದ ಪಡೀಲ್ ನಡುವೆ ಘನ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಹೀಗಾಗಿ ಬಸ್, ಲಾರಿ ಇನ್ನಿತರ ಘನ ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.

ಉಡುಪಿ, ಮಂಗಳೂರು ಕಡೆಯಿಂದ ಬಿಸಿ ರೋಡ್ ಕಡೆಗೆ ತೆರಳುವ ಘನ ವಾಹನಗಳು ನಂತೂರು- ಪಂಪ್ವೆಲ್- ತೊಕ್ಕೊಟ್ಟು- ಮುಡಿಪು- ಮೆಲ್ಕಾರ್ ಮೂಲಕ ಸಂಚರಿಸುವುದು. ಅದೇ ರೀತಿ ಬೆಂಗಳೂರು- ಬಿಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಆಗಮಿಸುವ ಘನ ವಾಹನಗಳು ಮೆಲ್ಕಾರ್- ಮುಡಿಪು- ತೊಕ್ಕೊಟ್ಟು- ಪಂಪ್ವೆಲ್ ಮೂಲಕ ತೆರಳುವುದು, ಈ ತಾತ್ಕಾಲಿಕ ಸಂಚಾರ ಬದಲಾವಣೆ ಬೆಳಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಮುಗಿಯುವ ವರೆಗೆ ಊರ್ಜಿತದಲ್ಲಿರುತ್ತದೆ ಎಂದು ಪೊಲೀಸ್ ಕಮಿಷನರ್ ಪ್ರಕಟಣೆ ತಿಳಿಸಿದೆ.

ವಾಹನ ಪಾರ್ಕಿಂಗ್ ವಿವರ

ಬಂಟ್ವಾಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ವಿಐಪಿ ವಾಹನಗಳನ್ನು ಕಾಮತ್ ಮೈದಾನದಲ್ಲಿ ಪಾರ್ಕ್ ಮಾಡುವುದು, ಬಂಟ್ವಾಳ ಕಡೆಯಿಂದ ಬರುವ ಸಾರ್ವಜನಿಕರ ವಾಹನಗಳನ್ನು ಅಡ್ಯಾರ್ ಕರ್ಮಾರ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು. ಬಂಟ್ವಾಳದಿಂದ ಬರುವ ಬಸ್ಸುಗಳು ಕಣ್ಣೂರಿನಲ್ಲಿ ಯೂ ಟರ್ನ್ ಮಾಡಿ ಮೋತಿ ಶ್ಯಾಮ್ ಮೈದಾನದಲ್ಲಿ ಪಾರ್ಕ್ ಮಾಡುವುದು.

ಮಂಗಳೂರು ಕಡೆಯಿಂದ ಬರುವ ವಾಹನಗಳು ಅಡ್ಯಾರ್ ಗಾರ್ಡನಲ್ಲಿ ಪಾರ್ಕಿಂಗ್ ಮಾಡುವುದು. ಕಾರ್ಯಕರ್ಕರನ್ನು ಕರೆತರುವ ವಾಹನಗಳು ಜನರನ್ನು ಇಳಿಸಿ ಕಣ್ಣೂರು ಮಸೀದಿ ಬಳಿಯ ಮೈದಾನದಲ್ಲಿ ಪಾರ್ಕ್ ಮಾಡುವುದು. ಅಡ್ಯಾರ್ ಕಟ್ಟೆಯ ಜಯಶೀಲ ಅಡ್ಯಂತಾಯರ ಮೈದಾನದಲ್ಲಿಯೂ ಪಾರ್ಕಿಂಗ್ ಅವಕಾಶ ಇದೆ.

The movement of heavy vehicles between BC Road and Padil will be disrupted from morning to evening on February 17 as the Congress is holding a state-level convention at Adyar on NH-73. Hence, alternative arrangements have been made for the movement of buses, lorries and other heavy vehicles.